Check out the new design

د قرآن کریم د معناګانو ژباړه - کنادي ژباړه - حمزه بتور * - د ژباړو فهرست (لړلیک)

PDF XML CSV Excel API
Please review the Terms and Policies

د معناګانو ژباړه سورت: بقره   آیت:
وَقَالُوْا كُوْنُوْا هُوْدًا اَوْ نَصٰرٰی تَهْتَدُوْا ؕ— قُلْ بَلْ مِلَّةَ اِبْرٰهٖمَ حَنِیْفًا ؕ— وَمَا كَانَ مِنَ الْمُشْرِكِیْنَ ۟
ಅವರು ಹೇಳಿದರು: “ನೀವು ಯಹೂದಿಗಳು ಅಥವಾ ಕ್ರೈಸ್ತರಾಗಿರಿ; ನೀವು ಸನ್ಮಾರ್ಗ ಪಡೆಯುವಿರಿ.” ಹೇಳಿರಿ: “ಅಲ್ಲ; (ವಾಸ್ತವವಾಗಿ ಸನ್ಮಾರ್ಗದಲ್ಲಿರುವವರು) ಇಬ್ರಾಹೀಮರ ಮಾರ್ಗವನ್ನು ಹಿಂಬಾಲಿಸುವವರು. ಅವರು (ಇಬ್ರಾಹೀಮ್) ಏಕನಿಷ್ಠರಾಗಿದ್ದರು.[1] ಅವರು ಬಹುದೇವಾರಾಧಕರಲ್ಲಿ ಸೇರಿದವರಾಗಿರಲಿಲ್ಲ.”
[1] ಏಕನಿಷ್ಠ ಎಂದರೆ ಒಬ್ಬನೇ ದೇವನ ಆರಾಧಕ ಮತ್ತು ಇತರೆಲ್ಲಾ ದೇವರುಗಳನ್ನು ಬಿಟ್ಟು ಏಕೈಕ ದೇವನನ್ನು ಮಾತ್ರ ಆರಾಧಿಸುವವನು.
عربي تفسیرونه:
قُوْلُوْۤا اٰمَنَّا بِاللّٰهِ وَمَاۤ اُنْزِلَ اِلَیْنَا وَمَاۤ اُنْزِلَ اِلٰۤی اِبْرٰهٖمَ وَاِسْمٰعِیْلَ وَاِسْحٰقَ وَیَعْقُوْبَ وَالْاَسْبَاطِ وَمَاۤ اُوْتِیَ مُوْسٰی وَعِیْسٰی وَمَاۤ اُوْتِیَ النَّبِیُّوْنَ مِنْ رَّبِّهِمْ ۚ— لَا نُفَرِّقُ بَیْنَ اَحَدٍ مِّنْهُمْ ؗ— وَنَحْنُ لَهٗ مُسْلِمُوْنَ ۟
ಹೇಳಿರಿ: “ನಾವು ಅಲ್ಲಾಹನಲ್ಲಿ, ನಮಗೆ ಅವತೀರ್ಣವಾಗಿರುವುದರಲ್ಲಿ, ಇಬ್ರಾಹೀಮರಿಗೆ, ಇಸ್ಮಾಈಲರಿಗೆ, ಇಸ್‍ಹಾಕರಿಗೆ, ಯಾಕೂಬರಿಗೆ ಮತ್ತು ಯಾಕೂಬರ ಸಂತಾನಕ್ಕೆ ಅವತೀರ್ಣವಾಗಿರುವುದರಲ್ಲಿ, ಮೂಸಾ ಮತ್ತು ಈಸಾರಿಗೆ ನೀಡಲಾಗಿರುವುದರಲ್ಲಿ, ಎಲ್ಲಾ ಪ್ರವಾದಿಗಳಿಗೂ ಅವರ ಪರಿಪಾಲಕನ (ಅಲ್ಲಾಹನ) ಕಡೆಯಿಂದ ನೀಡಲಾಗಿರುವುದರಲ್ಲಿ ವಿಶ್ವಾಸವಿಟ್ಟಿದ್ದೇವೆ. ಅವರಲ್ಲಿ ಯಾರ ನಡುವೆಯೂ ನಾವು ಬೇಧ ಮಾಡುವುದಿಲ್ಲ. ನಾವು ಅವನಿಗೆ ಶರಣಾಗಿ ಬದುಕುತ್ತೇವೆ.”
عربي تفسیرونه:
فَاِنْ اٰمَنُوْا بِمِثْلِ مَاۤ اٰمَنْتُمْ بِهٖ فَقَدِ اهْتَدَوْا ۚ— وَاِنْ تَوَلَّوْا فَاِنَّمَا هُمْ فِیْ شِقَاقٍ ۚ— فَسَیَكْفِیْكَهُمُ اللّٰهُ ۚ— وَهُوَ السَّمِیْعُ الْعَلِیْمُ ۟ؕ
ನೀವು ವಿಶ್ವಾಸವಿಟ್ಟಂತೆಯೇ ಅವರೂ ವಿಶ್ವಾಸವಿಟ್ಟರೆ ಅವರು ಸನ್ಮಾರ್ಗ ಪಡೆಯುವರು. ಆದರೆ ಅವರು ವಿಮುಖರಾಗುವುದಾದರೆ ಅವರು ಸ್ಪಷ್ಟ ಭಿನ್ನಮತದಲ್ಲಿದ್ದಾರೆ. ಅವರ ವಿರುದ್ಧ ನಿಮಗೆ ಅಲ್ಲಾಹು ಸಾಕಾಗುವನು. ಅವನು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.[1]
[1] ಅಂದರೆ ನೀವು ವಿಶ್ವಾಸವಿಟ್ಟಂತೆ ವಿಶ್ವಾಸವಿಡದೆ ಅವರು ನಿಮ್ಮ ವಿರುದ್ಧ ಕುತಂತ್ರಗಳನ್ನು ಮುಂದುವರಿಸಿದರೆ ನೀವೇನೂ ಹೆದರಬೇಕಾಗಿಲ್ಲ. ಏಕೆಂದರೆ, ಅಲ್ಲಾಹು ನಿಮ್ಮ ಜೊತೆಗಿದ್ದಾನೆ. ಅವನು ನಿಮ್ಮನ್ನು ಅವರ ಕುತಂತ್ರಗಳಿಂದ ರಕ್ಷಿಸುತ್ತಾನೆ. ಈ ಭವಿಷ್ಯವು ಕೆಲವೇ ವರ್ಷಗಳಲ್ಲಿ ನೆರವೇರಿತು. ಯಹೂದಿಗಳ ಬನೂ ಕೈನುಕಾ ಮತ್ತು ಬನೂ ನದೀರ್ ಗೋತ್ರಗಳನ್ನು ಗಡೀಪಾರು ಮಾಡಲಾಯಿತು ಮತ್ತು ಬನೂ ಕುರೈಝ ಗೋತ್ರವನ್ನು ಸಂಹಾರ ಮಾಡಲಾಯಿತು.
عربي تفسیرونه:
صِبْغَةَ اللّٰهِ ۚ— وَمَنْ اَحْسَنُ مِنَ اللّٰهِ صِبْغَةً ؗ— وَّنَحْنُ لَهٗ عٰبِدُوْنَ ۟
ಅಲ್ಲಾಹನ ಬಣ್ಣವನ್ನು ಸ್ವೀಕರಿಸಿರಿ.[1] ಅಲ್ಲಾಹನಿಗಿಂತಲೂ ಉತ್ತಮ ಬಣ್ಣವನ್ನು ನೀಡುವವನು ಯಾರು? ನಾವಂತೂ ಅವನನ್ನು ಮಾತ್ರ ಆರಾಧಿಸುತ್ತೇವೆ.
[1] ಕ್ರೈಸ್ತರು ಹಳದಿ ಬಣ್ಣದ ನೀರನ್ನು ಮೀಸಲಿಟ್ಟಿದ್ದರು. ಅದನ್ನು ಎಲ್ಲಾ ಕ್ರೈಸ್ತ ಮಕ್ಕಳಿಗೆ ಮತ್ತು ಕ್ರೈಸ್ತ ಧರ್ಮ ಸ್ವೀಕರಿಸುವವರಿಗೆ ನೀಡುತ್ತಿದ್ದರು. ಬಾಪ್ಟಿಸಂ ಎಂದು ಕರೆಯುವ ಈ ಸಂಪ್ರದಾಯವು ಕ್ರಿಶ್ಚಿಯನ್ ಧರ್ಮದಲ್ಲಿ ಬಹಳ ಮುಖ್ಯವಾಗಿದೆ. ಇಲ್ಲಿ ಅಲ್ಲಾಹನ ಬಣ್ಣ ಎಂದರೆ ಮನುಷ್ಯನ ಸಹಜ ಮನೋಧರ್ಮವಾದ ಇಸ್ಲಾಂ ಧರ್ಮ. ಎಲ್ಲಾ ಪ್ರವಾದಿಗಳು ಈ ಧರ್ಮವನ್ನೇ ಬೋಧಿಸಿದ್ದರು.
عربي تفسیرونه:
قُلْ اَتُحَآجُّوْنَنَا فِی اللّٰهِ وَهُوَ رَبُّنَا وَرَبُّكُمْ ۚ— وَلَنَاۤ اَعْمَالُنَا وَلَكُمْ اَعْمَالُكُمْ ۚ— وَنَحْنُ لَهٗ مُخْلِصُوْنَ ۟ۙ
(ಓ ಪ್ರವಾದಿಯವರೇ!) ಹೇಳಿರಿ: “ನೀವು ನಮ್ಮ ಮತ್ತು ನಿಮ್ಮ ಪರಿಪಾಲಕನಾದ ಅಲ್ಲಾಹನ ವಿಷಯದಲ್ಲಿ ನಮ್ಮೊಡನೆ ತರ್ಕಿಸುತ್ತೀರಾ? ನಮ್ಮ ಕರ್ಮಗಳು ನಮಗೆ ಮತ್ತು ನಿಮ್ಮ ಕರ್ಮಗಳು ನಿಮಗೆ. ನಾವಂತೂ ಅವನಿಗೆ ಸಂಪೂರ್ಣ ನಿಷ್ಕಳಂಕರಾಗಿದ್ದೇವೆ.”
عربي تفسیرونه:
اَمْ تَقُوْلُوْنَ اِنَّ اِبْرٰهٖمَ وَاِسْمٰعِیْلَ وَاِسْحٰقَ وَیَعْقُوْبَ وَالْاَسْبَاطَ كَانُوْا هُوْدًا اَوْ نَصٰرٰی ؕ— قُلْ ءَاَنْتُمْ اَعْلَمُ اَمِ اللّٰهُ ؕ— وَمَنْ اَظْلَمُ مِمَّنْ كَتَمَ شَهَادَةً عِنْدَهٗ مِنَ اللّٰهِ ؕ— وَمَا اللّٰهُ بِغَافِلٍ عَمَّا تَعْمَلُوْنَ ۟
ಇಬ್ರಾಹೀಮ್, ಇಸ್ಮಾಈಲ್, ಇಸ್‍ಹಾಕ್, ಯಾಕೂಬ್ ಮತ್ತು ಯಾಕೂಬರ ಸಂತಾನಗಳು ಯಹೂದಿಗಳು ಅಥವಾ ಕ್ರೈಸ್ತರಾಗಿದ್ದರೆಂದು ನೀವು ಹೇಳುತ್ತೀರಾ? ಹೇಳಿರಿ: “ಹೆಚ್ಚು ತಿಳಿದವರು ನೀವೋ ಅಥವಾ ಅಲ್ಲಾಹನೋ?” ಅಲ್ಲಾಹನ ಬಳಿ ಸಾಕ್ಷಿಯನ್ನು ಅಡಗಿಸುವವನಿಗಿಂತಲೂ ದೊಡ್ಡ ಅಕ್ರಮಿ ಯಾರು? ನೀವು ಮಾಡುತ್ತಿರುವ ಕರ್ಮಗಳ ಕುರಿತು ಅಲ್ಲಾಹು ತಿಳಿಯದವನಲ್ಲ.
عربي تفسیرونه:
تِلْكَ اُمَّةٌ قَدْ خَلَتْ ۚ— لَهَا مَا كَسَبَتْ وَلَكُمْ مَّا كَسَبْتُمْ ۚ— وَلَا تُسْـَٔلُوْنَ عَمَّا كَانُوْا یَعْمَلُوْنَ ۟۠
ಆ ಸಮುದಾಯವು ಕಳೆದುಹೋಗಿದೆ. ಅವರು ಮಾಡಿದ್ದು ಅವರಿಗೆ ಮತ್ತು ನೀವು ಮಾಡಿದ್ದು ನಿಮಗೆ. ಅವರು ಮಾಡಿದ ಕರ್ಮಗಳ ಬಗ್ಗೆ ನಿಮ್ಮೊಂದಿಗೆ ಪ್ರಶ್ನಿಸಲಾಗುವುದಿಲ್ಲ.
عربي تفسیرونه:
 
د معناګانو ژباړه سورت: بقره
د سورتونو فهرست (لړلیک) د مخ نمبر
 
د قرآن کریم د معناګانو ژباړه - کنادي ژباړه - حمزه بتور - د ژباړو فهرست (لړلیک)

محمد حمزه بتور ژباړلی دی. د رواد الترجمة مرکز تر څارنې لاندې انکشاف ورکړل شوی.

بندول