Check out the new design

വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി * - വിവർത്തനങ്ങളുടെ സൂചിക


പരിഭാഷ അദ്ധ്യായം: അഅ്റാഫ്   ആയത്ത്:
قَالَ ادْخُلُوْا فِیْۤ اُمَمٍ قَدْ خَلَتْ مِنْ قَبْلِكُمْ مِّنَ الْجِنِّ وَالْاِنْسِ فِی النَّارِ ؕ— كُلَّمَا دَخَلَتْ اُمَّةٌ لَّعَنَتْ اُخْتَهَا ؕ— حَتّٰۤی اِذَا ادَّارَكُوْا فِیْهَا جَمِیْعًا ۙ— قَالَتْ اُخْرٰىهُمْ لِاُوْلٰىهُمْ رَبَّنَا هٰۤؤُلَآءِ اَضَلُّوْنَا فَاٰتِهِمْ عَذَابًا ضِعْفًا مِّنَ النَّارِ ؕ۬— قَالَ لِكُلٍّ ضِعْفٌ وَّلٰكِنْ لَّا تَعْلَمُوْنَ ۟
ಅಲ್ಲಾಹನು ಹೇಳುವನು: ನಿಮಗಿಂತ ಮುಂಚೆ ಗತಿಸಿದ ಯಕ್ಷ ಮತ್ತು ಮನುಷ್ಯ ಸತ್ಯನಿಷೇಧಿ ಸಮುದಾಯದೊಂದಿಗೆ ನೀವು ನರಕವನ್ನು ಪ್ರವೇಶಿಸಿರಿ. ಪ್ರತಿಯೊಂದು ಸಮುದಾಯವು ನರಕವನ್ನು ಪ್ರವೇಶಿಸುವಾಗ ತನಗಿಂತ ಮುಂಚೆ ಬಂದ ಇನ್ನೊಂದು ಸಮುದಾಯವನ್ನು ಶಪಿಸುವುದು ಅವರೆಲ್ಲರನ್ನು ಅಲ್ಲಿ ಒಟ್ಟು ಸೇರಿಸಲಾದಾಗ ಅವರ ಪೈಕಿ ನಂತರ ಬಂದವರು ತಮಗಿಂತ ಮೊದಲು ಬಂದವರ ಕುರಿತು ಹೇಳುವರು: ಓ ನಮ್ಮ ಪ್ರಭು, ನಮ್ಮನ್ನು ದಾರಿಗೆಡಿಸಿದವರು ಇವರೇ. ಆದ್ದರಿಂದ ನೀನು ಅವರಿಗೆ ನರಕದ ಇಮ್ಮಡಿ ಶಿಕ್ಷೆಯನ್ನು ನೀಡು. ಅಲ್ಲಾಹನು ಹೇಳುವನು: ಪ್ರತಿಯೊಬ್ಬರಿಗೂ ಇಮ್ಮಡಿ ಶಿಕ್ಷೆಯಿದೆ. ಆದರೆ ನಿಮಗೆ ಅರಿವಿಲ್ಲ.
അറബി തഫ്സീറുകൾ:
وَقَالَتْ اُوْلٰىهُمْ لِاُخْرٰىهُمْ فَمَا كَانَ لَكُمْ عَلَیْنَا مِنْ فَضْلٍ فَذُوْقُوا الْعَذَابَ بِمَا كُنْتُمْ تَكْسِبُوْنَ ۟۠
ಅವರ ಪೈಕಿ ಮೊದಲಿನವರು ನಂತರ ಬಂದವರೊಡನೆ ಹೇಳುವರು: ಇನ್ನು ನಿಮಗೆ ನಮ್ಮ ಮೇಲೆ ಯಾವುದೇ ಶ್ರೇಷ್ಠತೆಯಿಲ್ಲ. ಆದ್ದರಿಂದ ನೀವು ನಿಮ್ಮ ಗಳಿಕೆಯ ಫಲವಾಗಿ ಶಿಕ್ಷೆಯನ್ನು ಸವಿಯಿರಿ.
അറബി തഫ്സീറുകൾ:
اِنَّ الَّذِیْنَ كَذَّبُوْا بِاٰیٰتِنَا وَاسْتَكْبَرُوْا عَنْهَا لَا تُفَتَّحُ لَهُمْ اَبْوَابُ السَّمَآءِ وَلَا یَدْخُلُوْنَ الْجَنَّةَ حَتّٰی یَلِجَ الْجَمَلُ فِیْ سَمِّ الْخِیَاطِ ؕ— وَكَذٰلِكَ نَجْزِی الْمُجْرِمِیْنَ ۟
ಯಾರು ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದರೊ ಮತ್ತು ಅವುಗಳ ವಿರುದ್ಧ ಅಹಂಕಾರ ತೋರಿದರೋ ಅವರಿಗಾಗಿ ಆಕಾಶದ ದ್ವಾರಗಳನ್ನು ತೆರೆಯಲಾಗದು. ಮತ್ತು ಸೂಜಿ ರಂಧ್ರದೊಳಗೆ ಒಂಟೆಯು ಪ್ರವೇಶಿಸುವವರೆಗೆ ಅವರು ಸ್ವರ್ಗವನ್ನು ಪ್ರವೇಶಿಸಲಾರರು. ಮತ್ತು ಅಪರಾಧಿಗಳಿಗೆ ನಾವು ಇದೇ ರೀತಿ ಪ್ರತಿಫಲ ನೀಡುತ್ತೇವೆ.
അറബി തഫ്സീറുകൾ:
لَهُمْ مِّنْ جَهَنَّمَ مِهَادٌ وَّمِنْ فَوْقِهِمْ غَوَاشٍ ؕ— وَكَذٰلِكَ نَجْزِی الظّٰلِمِیْنَ ۟
ಅವರಿಗೆ ನರಕಾಗ್ನಿಯ ಹಾಸಿಗೆಯಿದೆ. ಅವರ ಮೇಲೆ ಅದರದ್ದೇ ಹೊದಿಕೆಗಳೂ ಇರುವುವು. ಅಕ್ರಮಿಗಳಿಗೆ ನಾವು ಇದೇ ರೀತಿ ಪ್ರತಿಫಲ ನೀಡುತ್ತೇವೆ.
അറബി തഫ്സീറുകൾ:
وَالَّذِیْنَ اٰمَنُوْا وَعَمِلُوا الصّٰلِحٰتِ لَا نُكَلِّفُ نَفْسًا اِلَّا وُسْعَهَاۤ ؗ— اُولٰٓىِٕكَ اَصْحٰبُ الْجَنَّةِ ۚ— هُمْ فِیْهَا خٰلِدُوْنَ ۟
ಯಾರು ಸತ್ಯವಿಶ್ವಾಸವಿಟ್ಟು ಸತ್ಕರ್ಮ ಮಾಡಿದರೋ ತಿಳಿದುಕೊಳ್ಳಿರಿ ನಾವು ಯಾವ ವ್ಯಕ್ತಿಗೂ ಅವನ ಸಾಮರ್ಥ್ಯಕ್ಕೆ ಮಿಗಿಲಾಗಿ ಹೊಣೆಯನ್ನು ವಹಿಸಿ ಕೊಡುವುದಿಲ್ಲ. ಅವರೇ ಸ್ವರ್ಗವಾಸಿಗಳಾಗಿದ್ದಾರೆ ಮತ್ತು ಅವರು ಅದರಲ್ಲಿ ಶಾಶ್ವತವಾಗಿರುವರು.
അറബി തഫ്സീറുകൾ:
وَنَزَعْنَا مَا فِیْ صُدُوْرِهِمْ مِّنْ غِلٍّ تَجْرِیْ مِنْ تَحْتِهِمُ الْاَنْهٰرُ ۚ— وَقَالُوا الْحَمْدُ لِلّٰهِ الَّذِیْ هَدٰىنَا لِهٰذَا ۫— وَمَا كُنَّا لِنَهْتَدِیَ لَوْلَاۤ اَنْ هَدٰىنَا اللّٰهُ ۚ— لَقَدْ جَآءَتْ رُسُلُ رَبِّنَا بِالْحَقِّ ؕ— وَنُوْدُوْۤا اَنْ تِلْكُمُ الْجَنَّةُ اُوْرِثْتُمُوْهَا بِمَا كُنْتُمْ تَعْمَلُوْنَ ۟
ಮತ್ತು ಅವರ ಹೃದಯಗಳಲ್ಲಿದ್ದ ದ್ವೇಷವನ್ನು ನಾವು ನೀಗಿಸುವೆವು. ಅವರ ತಳಭಾಗದಿಂದ ಕಾಲುವೆಗಳು ಹರಿಯುತ್ತಿರುವುವು ಮತ್ತು ಅವರು ಹೇಳುವರು: ನಮ್ಮನ್ನು ಈ ಸ್ಥಾನಕ್ಕೆ ತಲುಪಿಸಿದ ಅಲ್ಲಾಹನಿಗೆ ಸರ್ವಸ್ತುತಿ. ಅಲ್ಲಾಹನು ನಮ್ಮನ್ನು ಮಾರ್ಗದರ್ಶನ ಮಾಡದಿರುತ್ತಿದ್ದರೆ ನಾವು ಸನ್ಮಾರ್ಗವನ್ನು ಪಡೆಯುತ್ತಿರಲಿಲ್ಲ. ವಾಸ್ತವದಲ್ಲಿ ನಮ್ಮ ಪ್ರಭುವಿನ ಸಂದೇಶವಾಹಕರು ಸತ್ಯವನ್ನು ತಂದಿದ್ದರು ಮತ್ತು ಅವರೊಂದಿಗೆ ಕರೆದು ಹೇಳಲಾಗುವುದು: 'ನಿಮ್ಮ ಕರ್ಮಗಳ ಪ್ರತಿಫಲವಾಗಿ ನಿಮ್ಮನ್ನು ಈ ಸ್ವರ್ಗದ ಹಕ್ಕುದಾರರನ್ನಾಗಿ ನಿಶ್ಚಯಿಸಲಾಗಿದೆ.
അറബി തഫ്സീറുകൾ:
 
പരിഭാഷ അദ്ധ്യായം: അഅ്റാഫ്
സൂറത്തുകളുടെ സൂചിക പേജ് നമ്പർ
 
വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി - വിവർത്തനങ്ങളുടെ സൂചിക

വിവർത്തനം - ശൈഖ് ബഷീർ മൈസൂരി. മർകസ് റുവാദ് തർജമയുടെ മേൽനോട്ടത്തിൽ വികസിപ്പിച്ചത്.

അവസാനിപ്പിക്കുക