Check out the new design

വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി * - വിവർത്തനങ്ങളുടെ സൂചിക


പരിഭാഷ അദ്ധ്യായം: ഫത്ഹ്   ആയത്ത്:

ಅಲ್ -ಫತ್ ಹ್

اِنَّا فَتَحْنَا لَكَ فَتْحًا مُّبِیْنًا ۟ۙ
(ಓ ಪೈಗಂಬರರೇ) ನಿಸ್ಸಂಶಯವಾಗಿ ನಾವು ನಿಮಗೆ ಸುಸ್ಪಷ್ಟವಾದ ವಿಜಯವನ್ನು ದಯಪಾಲಿಸಿದೆವು.
അറബി തഫ്സീറുകൾ:
لِّیَغْفِرَ لَكَ اللّٰهُ مَا تَقَدَّمَ مِنْ ذَنْۢبِكَ وَمَا تَاَخَّرَ وَیُتِمَّ نِعْمَتَهٗ عَلَیْكَ وَیَهْدِیَكَ صِرَاطًا مُّسْتَقِیْمًا ۟ۙ
ಇದು ನಿಮ್ಮ ಹಿಂದಿನ ಹಾಗು ಮುಂದಿನ ಪಾಪಗಳÀನು ಕ್ಷಮಿಸಲೆಂದೂ, ನಿಮ್ಮ ಮೇಲೆ ಅವನ ಅನುಗ್ರಹವನ್ನು ಪೂರ್ಣಗೊಳಿಸಲೆಂದೂ ಮತ್ತು ನಿಮ್ಮನ್ನು ಋಜುವಾದ ಮಾರ್ಗದಲ್ಲಿ ಮುನ್ನಡೆಸಲೆಂದಾಗಿದೆ.
അറബി തഫ്സീറുകൾ:
وَّیَنْصُرَكَ اللّٰهُ نَصْرًا عَزِیْزًا ۟
ಮತ್ತು ಅಲ್ಲಾಹನು ನಿಮಗೆ ಪ್ರಬಲವಾದ ಸಹಾಯವನ್ನು ದಯಪಾಲಿಸಲೆಂದೂ ಆಗಿದೆ.
അറബി തഫ്സീറുകൾ:
هُوَ الَّذِیْۤ اَنْزَلَ السَّكِیْنَةَ فِیْ قُلُوْبِ الْمُؤْمِنِیْنَ لِیَزْدَادُوْۤا اِیْمَانًا مَّعَ اِیْمَانِهِمْ ؕ— وَلِلّٰهِ جُنُوْدُ السَّمٰوٰتِ وَالْاَرْضِ ؕ— وَكَانَ اللّٰهُ عَلِیْمًا حَكِیْمًا ۟ۙ
ಅವನೇ ಸತ್ಯವಿಶ್ವಾಸಿಗಳ ಹೃದಯಗಳಲ್ಲಿ ಶಾಂತಿಯನ್ನು ಇಳಿಸಿದವನು, ಇದು ಅವರ ಸತ್ಯವಿಶ್ವಾಸದ ಜೊತೆಗೆ ಇನ್ನಷ್ಟು ವಿಶ್ವಾಸವನ್ನು ವರ್ಧಿಸಲೆಂದಾಗಿದೆ. ಆಕಾಶಗಳ ಮತ್ತು ಭೂಮಿಯ ಸೈನ್ಯಗಳು ಅಲ್ಲಾಹನದ್ದಾಗಿವೆ ಮತ್ತು ಅಲ್ಲಾಹನು ಸರ್ವಜ್ಞಾನಿಯೂ, ಯುಕ್ತಿಪೂರ್ಣನೂ ಆಗಿದ್ದಾನೆ.
അറബി തഫ്സീറുകൾ:
لِّیُدْخِلَ الْمُؤْمِنِیْنَ وَالْمُؤْمِنٰتِ جَنّٰتٍ تَجْرِیْ مِنْ تَحْتِهَا الْاَنْهٰرُ خٰلِدِیْنَ فِیْهَا وَیُكَفِّرَ عَنْهُمْ سَیِّاٰتِهِمْ ؕ— وَكَانَ ذٰلِكَ عِنْدَ اللّٰهِ فَوْزًا عَظِیْمًا ۟ۙ
ಇದು ಅವನು ಸತ್ಯವಿಶ್ವಾಸಿ ಪುರುಷರನ್ನೂ, ಸ್ತಿçÃಯರನ್ನೂ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವಂತಹ ಸ್ವರ್ಗೋದ್ಯಾನಗಳಲ್ಲಿ ಶಾಶ್ವತರಾಗಿರಲು ಪ್ರವೇಶಿಸಲೆಂದೂ, ಅವರಿಂದ ಅವರ ದೋಷಗಳನ್ನು ಮನ್ನಿಸಲೆಂದೂ ಆಗಿದೆ. ಇದು ಅಲ್ಲಾಹನ ಬಳಿ ಮಹಾ ಯಶಸ್ಸು ಆಗಿದೆ.
അറബി തഫ്സീറുകൾ:
وَّیُعَذِّبَ الْمُنٰفِقِیْنَ وَالْمُنٰفِقٰتِ وَالْمُشْرِكِیْنَ وَالْمُشْرِكٰتِ الظَّآنِّیْنَ بِاللّٰهِ ظَنَّ السَّوْءِ ؕ— عَلَیْهِمْ دَآىِٕرَةُ السَّوْءِ ۚ— وَغَضِبَ اللّٰهُ عَلَیْهِمْ وَلَعَنَهُمْ وَاَعَدَّ لَهُمْ جَهَنَّمَ ؕ— وَسَآءَتْ مَصِیْرًا ۟
ಇದು ಅಲ್ಲಾಹನ ಕುರಿತು ಅನುಮಾನಗಳನ್ನು ಇರಿಸಿಕೊಂಡ ಕಪಟವಿಶ್ವಾಸಿಗಳನ್ನೂ, ಕಪಟವಿಶ್ವಾಸಿನಿಗಳನ್ನೂ, ಬಹುದೇವಾರಾಧಕರನ್ನೂ, ಬಹುದೇವಾರಾಧಕಿಯರನ್ನೂ ಶಿಕ್ಷಿಸಲೆಂದಾಗಿದೆ. (ವಾಸ್ತವದಲ್ಲಿ) ಅವರ ಮೇಲೆ ಕೆಡುಕಿನ ಆವರಣವಿದೆ, ಅಲ್ಲಾಹನು ಅವರ ಮೇಲೆ ಕುಪಿತನಾಗಿದ್ದಾನೆ ಹಾಗು ಅವರನ್ನು ಶಪಿಸಿರುತ್ತಾನೆ ಮತ್ತು ಅವರಿಗಾಗಿ ನರಕವನ್ನು ಸಿದ್ಧಗೊಳಿಸಿರುತ್ತಾನೆ. ಅದು (ಅತ್ಯಂತ) ನಿಕೃಷ್ಟ ಮರಳುವ ಸ್ಥಾನವಾಗಿದೆ.
അറബി തഫ്സീറുകൾ:
وَلِلّٰهِ جُنُوْدُ السَّمٰوٰتِ وَالْاَرْضِ ؕ— وَكَانَ اللّٰهُ عَزِیْزًا حَكِیْمًا ۟
ಆಕಾಶಗಳ ಮತ್ತು ಭೂಮಿಯ ಸಕಲ ಸೈನ್ಯಗಳು ಅಲ್ಲಾಹನದ್ದಾಗಿವೆ, ಅಲ್ಲಾಹನು ಪ್ರತಾಪಶಾಲಿಯು, ಯುಕ್ತಿಪೂರ್ಣನೂ ಆಗಿದ್ದಾನೆ.
അറബി തഫ്സീറുകൾ:
اِنَّاۤ اَرْسَلْنٰكَ شَاهِدًا وَّمُبَشِّرًا وَّنَذِیْرًا ۟ۙ
(ಓ ಪೈಗಂಬರೇ) ನಿಶ್ಚಯವಾಗಿಯೂ ನಾವು ನಿಮ್ಮನ್ನು ಒಬ್ಬ ಸಾಕ್ಷಿಯನ್ನಾಗಿಯು, ಮಾಡಿ ಸುವಾರ್ತೆ ನೀಡುವವರಾಗಿಯು, ಮುನ್ನೆಚ್ಚರಿಕೆ ಕೊಡುವವರಾಗಿಯು ಮಾಡಿ ಕಳುಹಿಸಿರುತ್ತೆವೆ.
അറബി തഫ്സീറുകൾ:
لِّتُؤْمِنُوْا بِاللّٰهِ وَرَسُوْلِهٖ وَتُعَزِّرُوْهُ وَتُوَقِّرُوْهُ ؕ— وَتُسَبِّحُوْهُ بُكْرَةً وَّاَصِیْلًا ۟
(ಓ ಸತ್ಯವಿಶ್ವಾಸಿಗಳೇ) ಇದು ನೀವು ಅಲ್ಲಾಹನಲ್ಲೂ, ಅವನ ಸಂದೇಶವಾಹಕರಲ್ಲೂ ವಿಶ್ವಾಸವಿರಿಸಲು, ಅವನ ಧರ್ಮಕ್ಕೆ ನೆರವು ನೀಡಲು, ಅವನಿಗೆ ಗೌರವಿಸಲು ಮತ್ತು ಸಂಜೆ ಮುಂಜಾನೆಗಳಲ್ಲಿ ಅಲ್ಲಾಹನ ಪಾವಿತ್ರö್ಯವನ್ನು ಸ್ತುತಿಸಲೆಂದಾಗಿದೆ.
അറബി തഫ്സീറുകൾ:
اِنَّ الَّذِیْنَ یُبَایِعُوْنَكَ اِنَّمَا یُبَایِعُوْنَ اللّٰهَ ؕ— یَدُ اللّٰهِ فَوْقَ اَیْدِیْهِمْ ۚ— فَمَنْ نَّكَثَ فَاِنَّمَا یَنْكُثُ عَلٰی نَفْسِهٖ ۚ— وَمَنْ اَوْفٰی بِمَا عٰهَدَ عَلَیْهُ اللّٰهَ فَسَیُؤْتِیْهِ اَجْرًا عَظِیْمًا ۟۠
ಖಂಡಿತವಾಗಿಯು ನಿಮ್ಮೊಂದಿಗೆ ವಿಧೇಯತೆಯ ಪ್ರಮಾಣ ಮಾಡುವವರು ನಿಜವಾಗಿಯು ಅಲ್ಲಾಹನೊಂದಿಗೆ ವಿಧೇಯತೆಯ ಪ್ರಮಾಣ ಮಾಡುತ್ತಿದ್ದಾರೆ. ಅವರ ಹಸ್ತಗಳ ಮೇಲೆ ಅಲ್ಲಾಹನ ಹಸ್ತವಿದೆ. ಇನ್ನು ಯಾರು ಕರಾರನ್ನು ಉಲ್ಲಂಘಿಸುತ್ತಾನೋ ಅದರ ದುಷ್ಪರಿಣಾಮವು ಸ್ವತಃ ಅವನ ಮೇಲೆಯೇ ಇರುವುದು ಮತ್ತು ಯಾರು ಅಲ್ಲಾಹನೊಂದಿಗೆ ಮಾಡಿದ ಕರಾರನ್ನು ಈಡೇರಿಸುತ್ತಾನೋ ಸದ್ಯದಲ್ಲೇ ಅವನು ಅವನಿಗೆ ಮಹಾ ಪ್ರತಿಫಲವನ್ನು ಕರುಣಿಸುವನು.
അറബി തഫ്സീറുകൾ:
سَیَقُوْلُ لَكَ الْمُخَلَّفُوْنَ مِنَ الْاَعْرَابِ شَغَلَتْنَاۤ اَمْوَالُنَا وَاَهْلُوْنَا فَاسْتَغْفِرْ لَنَا ۚ— یَقُوْلُوْنَ بِاَلْسِنَتِهِمْ مَّا لَیْسَ فِیْ قُلُوْبِهِمْ ؕ— قُلْ فَمَنْ یَّمْلِكُ لَكُمْ مِّنَ اللّٰهِ شَیْـًٔا اِنْ اَرَادَ بِكُمْ ضَرًّا اَوْ اَرَادَ بِكُمْ نَفْعًا ؕ— بَلْ كَانَ اللّٰهُ بِمَا تَعْمَلُوْنَ خَبِیْرًا ۟
ಗ್ರಾಮೀಣರ ಪೈಕಿ (ಹುದೈಬಿಯಾದ ಯಾತ್ರೆಯಿಂದ) ಹಿಂದುಳಿದು ಬಿಟ್ಟವರು ನಿಮ್ಮೊಡನೆ ಹೇಳುತ್ತಾರೆ; ನಮ್ಮ ಸೊತ್ತು ಸಂಪತ್ತು ಮತ್ತು ಸಂತಾನಗಳು ನಮ್ಮನ್ನು ಕಾರ್ಯ ನಿರಂತರನ್ನಾಗಿ ಮಾಡಿದ್ದವು. ಆದ್ದರಿಂದ ನೀವು ನಮಗಾಗಿ ಕ್ಷಮೆಯಾಚಿಸಿರಿ, ಇವರು ತಮ್ಮ ಹೃದಯಗಳಲ್ಲಿಲ್ಲದ್ದನ್ನು ತಮ್ಮ ನಾಲಗೆಗಳ ಮೂಲಕ ಹೇಳುತ್ತಿದ್ದಾರೆ. ನೀವು ಉತ್ತರಿಸಿರಿ; ಅಲ್ಲಾಹನು ನಿಮಗೆ ಹಾನಿಯನ್ನುಂಟು ಮಾಡಲು ಉದ್ದೇಶಿಸಿದರೆ ಅಥವ ನಿಮಗೆ ಯಾವುದಾದರೂ ಪ್ರಯೋಜನವನ್ನುಂಟು ಮಾಡಲು ಉದ್ದೇಶಿಸಿದರೆ ನಿಮ್ಮ ವಿಷಯದಲ್ಲಿ ಅಲ್ಲಾಹನ ತೀರ್ಮಾನವನ್ನು ತಡೆಯಲು ಸ್ವಲ್ಪವಾದರೂ ಅಧಿಕಾರವುಳ್ಳವರು ಯಾರಿದ್ದಾರೆ? ಇಲ್ಲ! ನೀವು ಮಾಡುತ್ತಿರುವುದರ ಕುರಿತು ಅಲ್ಲಾಹನು ಸೂಕ್ಷö್ಮಜ್ಞಾನಿಯಾಗಿದ್ದಾನೆ.
അറബി തഫ്സീറുകൾ:
بَلْ ظَنَنْتُمْ اَنْ لَّنْ یَّنْقَلِبَ الرَّسُوْلُ وَالْمُؤْمِنُوْنَ اِلٰۤی اَهْلِیْهِمْ اَبَدًا وَّزُیِّنَ ذٰلِكَ فِیْ قُلُوْبِكُمْ وَظَنَنْتُمْ ظَنَّ السَّوْءِ ۖۚ— وَكُنْتُمْ قَوْمًا بُوْرًا ۟
ಖಂಡಿತವಾಗಿಯೂ ಸಂದೇಶವಾಹಕರು ಮತ್ತು ಸತ್ಯವಿಶ್ವಾಸಿಗಳು ತಮ್ಮ ಮನೆಯವರೆಡೆಗೆ ಮರಳಲಾರರೆಂದು ನೀವು ಭಾವಿಸಿದ್ದಿರಿ ಮತ್ತು ಇದೇ ಭಾವನೆಯು ನಿಮ್ಮ ಹೃದಯಗಳಲ್ಲಿ ಅಲಂಕೃತಗೊಳಿಸಲಾಗಿತ್ತು, ನೀವು ಕೆಟ್ಟ ಅನುಮಾನವನ್ನು ಹೊಂದಿದ್ದಿರಿ, ವಾಸ್ತವದಲ್ಲಿ ನೀವು ನಾಶವಾಗುವ ಜನಾಂಗವಾಗಿದ್ದೀರಿ.
അറബി തഫ്സീറുകൾ:
وَمَنْ لَّمْ یُؤْمِنْ بِاللّٰهِ وَرَسُوْلِهٖ فَاِنَّاۤ اَعْتَدْنَا لِلْكٰفِرِیْنَ سَعِیْرًا ۟
ಅಲ್ಲಾಹನಲ್ಲೂ, ಅವನ ಸಂದೇಶವಾಹಕರಲ್ಲೂ ವಿಶ್ವಾಸವಿಡದ ಸತ್ಯನಿಷೇಧಿಗಳಿಗೆ ಖಂಡಿತ ನಾವು ಧಗಧಗಿಸುವ ನರಕಾಗ್ನಿಯನ್ನು ಸಿದ್ಧಗೊಳಿಸಿದ್ದೇವೆ.
അറബി തഫ്സീറുകൾ:
وَلِلّٰهِ مُلْكُ السَّمٰوٰتِ وَالْاَرْضِ ؕ— یَغْفِرُ لِمَنْ یَّشَآءُ وَیُعَذِّبُ مَنْ یَّشَآءُ ؕ— وَكَانَ اللّٰهُ غَفُوْرًا رَّحِیْمًا ۟
ಆಕಾಶಗಳ, ಭೂಮಿಯ ಅಧಿಪತ್ಯವು ಅಲ್ಲಾಹನದ್ದಾಗಿದೆ, ಅವನು ತಾನಿಚ್ಛಿಸಿದವರನ್ನು ಕ್ಷಮಿಸುತ್ತಾನೆ ಮತ್ತು ತಾನಿಚ್ಛಿಸಿದವರನ್ನು ಶಿಕ್ಷಿಸುತ್ತಾನೆ ಮತ್ತು ಅಲ್ಲಾಹನು ಕ್ಷಮಾಶೀಲನು, ಕರುಣಾನಿಧಿಯು ಆಗಿದ್ದಾನೆ.
അറബി തഫ്സീറുകൾ:
سَیَقُوْلُ الْمُخَلَّفُوْنَ اِذَا انْطَلَقْتُمْ اِلٰی مَغَانِمَ لِتَاْخُذُوْهَا ذَرُوْنَا نَتَّبِعْكُمْ ۚ— یُرِیْدُوْنَ اَنْ یُّبَدِّلُوْا كَلٰمَ اللّٰهِ ؕ— قُلْ لَّنْ تَتَّبِعُوْنَا كَذٰلِكُمْ قَالَ اللّٰهُ مِنْ قَبْلُ ۚ— فَسَیَقُوْلُوْنَ بَلْ تَحْسُدُوْنَنَا ؕ— بَلْ كَانُوْا لَا یَفْقَهُوْنَ اِلَّا قَلِیْلًا ۟
ನೀವು (ಖೈಬರ್) ಯುದ್ಧಾರ್ಜಿತ ಸೊತ್ತುಗಳನ್ನು ಪಡೆಯಲೆಂದು ಹೋಗತೊಡಗಿದರೆ (ಹುದೈಬಿಯಾ ಯಾತ್ರೆಯಿಂದ) ಹಿಂದುಳಿದವರು ಹೇಳುವರು; “ನಮಗೂ ನಿಮ್ಮೊಂದಿಗೆ ಬರುವ ಅನುಮತಿಯನ್ನು ನೀಡಿರಿ” ಅವರು ಅಲ್ಲಾಹನ ವಚನವನ್ನು ಬದಲಾಯಿಸಿ ಬಿಡಲು ಇಚ್ಛಿಸಿದ್ದಾರೆ. ನೀವು ಹೇಳಿರಿ; ನೀವು ನಮ್ಮ ಹಿಂದೆ ಬರುವಂತಿಲ್ಲವೆAದು. “ಅಲ್ಲಾಹನು ಮೊದಲೇ ಹೇಳಿರುತ್ತಾನೆ, ಆಗ ಅವರು ಹೀಗೆ ಹೇಳುತ್ತಾರೆ; ನೀವು ನಮ್ಮೊಂದಿಗೆ ಅಸೂಯೆ ತೋರಿಸುತ್ತಿದ್ದೀರಿ, ವಾಸ್ತವ ವಿಚಾರವೇನೆಂದರೆ ಅವರು ಅತ್ಯಲ್ಪವೇ ಅರಿತುಕೊಳ್ಳುತ್ತಾರೆ.
അറബി തഫ്സീറുകൾ:
قُلْ لِّلْمُخَلَّفِیْنَ مِنَ الْاَعْرَابِ سَتُدْعَوْنَ اِلٰی قَوْمٍ اُولِیْ بَاْسٍ شَدِیْدٍ تُقَاتِلُوْنَهُمْ اَوْ یُسْلِمُوْنَ ۚ— فَاِنْ تُطِیْعُوْا یُؤْتِكُمُ اللّٰهُ اَجْرًا حَسَنًا ۚ— وَاِنْ تَتَوَلَّوْا كَمَا تَوَلَّیْتُمْ مِّنْ قَبْلُ یُعَذِّبْكُمْ عَذَابًا اَلِیْمًا ۟
ಹಿಂದೆ ಉಳಿದುಬಿಟ್ಟ ಗ್ರಾಮೀಣ ಅರಬರೊಂದಿಗೆ ನೀವು ಹೇಳಿರಿ; ಸದ್ಯದಲ್ಲೇ ನಿಮ್ಮನ್ನು ಬಲಿಷ್ಠರಾದ ಒಂದು ಪರಾಕ್ರಮಿ ಜನಾಂಗದೆಡೆಗೆ ಕರೆಯಲಾಗುವುದು. ನೀವು ಅವರೊಂದಿಗೆ ಯುದ್ಧಮಾಡುವಿರಿ ಇಲ್ಲವೇ ಅವರು ಶರಣಾಗುವರು. ಇನ್ನು ನೀವು ಆಜ್ಞೆ ಪಾಲಿಸಿದರೆ ಅಲ್ಲಾಹನು ನಿಮಗೆ ಅತ್ಯುತ್ತಮವಾದ ಪ್ರತಿಫಲವನ್ನು ನೀಡುವನು ಮತ್ತು ನೀವು ಈ ಮೊದಲು ವಿಮುಖರಾದಂತೆ (ಪುನಃ) ವಿಮುಖರಾಗಿ ಬಿಟ್ಟರೆ ಅವನು ನಿಮಗೆ ವೇದನಾಜನಕ ಯಾತನೆಯನ್ನು ನೀಡುವನು.
അറബി തഫ്സീറുകൾ:
لَیْسَ عَلَی الْاَعْمٰی حَرَجٌ وَّلَا عَلَی الْاَعْرَجِ حَرَجٌ وَّلَا عَلَی الْمَرِیْضِ حَرَجٌ ؕ— وَمَنْ یُّطِعِ اللّٰهَ وَرَسُوْلَهٗ یُدْخِلْهُ جَنّٰتٍ تَجْرِیْ مِنْ تَحْتِهَا الْاَنْهٰرُ ۚ— وَمَنْ یَّتَوَلَّ یُعَذِّبْهُ عَذَابًا اَلِیْمًا ۟۠
(ಸಮರಕ್ಕೆ ಹೊರಡದಿರಲು) ಕುರುಡನ ಮೇಲೆ ದೋಷವಿಲ್ಲ, ಕುಂಟನ ಮೇಲೆ ದೋಷವಿಲ್ಲ ಮತ್ತು ರೋಗಿಯ ಮೇಲೂ ದೋಷವಿಲ್ಲ. ಯಾರು ಅಲ್ಲಾಹನ ಮತ್ತು ಅವನ ಸಂದೇಶವಾಹಕರ ಆಜ್ಞೆಯನ್ನು ಪಾಲಿಸುತ್ತಾನೋ ಅವನನ್ನು ಅಲ್ಲಾಹನು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವಂತಹ ಸ್ವರ್ಗೋದ್ಯಾನಗಳಲ್ಲಿ ಪ್ರವೇಶಗೊಳಿಸುವನು ಮತ್ತು ಯಾರು ವಿಮುಖನಾಗುತ್ತಾನೋ ಅವನಿಗೆ ಅಲ್ಲಾಹನು ವೇದನಾಜನಕ ಯಾತನೆಯನ್ನು ಕೊಡುವನು.
അറബി തഫ്സീറുകൾ:
لَقَدْ رَضِیَ اللّٰهُ عَنِ الْمُؤْمِنِیْنَ اِذْ یُبَایِعُوْنَكَ تَحْتَ الشَّجَرَةِ فَعَلِمَ مَا فِیْ قُلُوْبِهِمْ فَاَنْزَلَ السَّكِیْنَةَ عَلَیْهِمْ وَاَثَابَهُمْ فَتْحًا قَرِیْبًا ۟ۙ
ನಿಶ್ಚಯವಾಗಿಯೂ ಆ ವೃಕ್ಷದಡಿಯಲ್ಲಿ ಸತ್ಯವಿಶ್ವಾಸಿಗಳು ನಿಮ್ಮೊಂದಿಗೆ ವಿಧೇಯತೆಯ ಪ್ರಮಾಣ ಮಾಡುತ್ತಿದ್ದಂತಹ ಸಂದರ್ಭದಲ್ಲಿ ಅಲ್ಲಾಹನು ಸಂತುಷ್ಟನಾದನು. ಅವನು ಅವರ ಹೃದಯಗಳಲ್ಲಿರುವುದನ್ನು ಅರಿತನು ಮತ್ತು ಅವರ ಮೇಲೆ ಶಾಂತಿ ನೆಮ್ಮದಿಯನ್ನು ಇಳಿಸಿದನು ಹಾಗೂ ಅವರಿಗೆ ಅತಿ ಸಮೀಪದಲ್ಲಿರುವ (ಖೈಬರ್‌ನ) ವಿಜಯವೊಂದನ್ನು ಕರುಣಿಸಿದನು.
അറബി തഫ്സീറുകൾ:
وَّمَغَانِمَ كَثِیْرَةً یَّاْخُذُوْنَهَا ؕ— وَكَانَ اللّٰهُ عَزِیْزًا حَكِیْمًا ۟
ಹೇರಳ ಯುದ್ಧಾರ್ಜಿತ ಸೊತ್ತುಗಳನ್ನು ಅವರು ಪಡೆಯುವರು ಮತ್ತು ಅಲ್ಲಾಹನು ಪ್ರತಾಪಶಾಲಿಯು, ಯುಕ್ತಿಪೂರ್ಣನು ಆಗಿದ್ದಾನೆ.
അറബി തഫ്സീറുകൾ:
وَعَدَكُمُ اللّٰهُ مَغَانِمَ كَثِیْرَةً تَاْخُذُوْنَهَا فَعَجَّلَ لَكُمْ هٰذِهٖ وَكَفَّ اَیْدِیَ النَّاسِ عَنْكُمْ ۚ— وَلِتَكُوْنَ اٰیَةً لِّلْمُؤْمِنِیْنَ وَیَهْدِیَكُمْ صِرَاطًا مُّسْتَقِیْمًا ۟ۙ
ನೀವು ಪಡೆಯಲಿರುವ ಧಾರಾಳವಾದ ಯುದ್ಧಾರ್ಜಿತ ಸೊತ್ತುಗಳ ವಾಗ್ದಾನವನ್ನು ಅಲ್ಲಾಹನು ಮಾಡಿದ್ದಾನೆ; ಇದು (ಖೈಬರಿನ ವಿಜಯವನ್ನು) ಅವನು ನಿಮಗೆ ಶೀಘ್ರವೇ ದಯಪಾಲಿಸಿದನು ಮತ್ತು ಜನರ ಕೈಗಳು ನಿಮ್ಮ ವಿರುದ್ಧ ಏಳದಂತೆ ತಡೆದನು. ಇದು ಸತ್ಯವಿಶ್ವಾಸಿಗಳಿಗೆ ನಿದರ್ಶನವಾಗಲೆಂದೂ, ಅವನು ನಿಮ್ಮನ್ನು ಋಜುವಾದ ಮಾರ್ಗದಲ್ಲಿ ಮುನ್ನಡೆಸಲೆಂದಾಗಿದೆ.
അറബി തഫ്സീറുകൾ:
وَّاُخْرٰی لَمْ تَقْدِرُوْا عَلَیْهَا قَدْ اَحَاطَ اللّٰهُ بِهَا ؕ— وَكَانَ اللّٰهُ عَلٰی كُلِّ شَیْءٍ قَدِیْرًا ۟
ಅವನು ನಿಮಗೆ ಇನ್ನೂ ಸಾಧಿಸಲು ಸಾಧ್ಯವಾಗದ ಇನ್ನೊಂದು ಯುದ್ಧಾರ್ಜಿತ ಸೊತ್ತಿನ ವಾಗ್ದಾನವನ್ನು ಮಾಡಿದ್ದಾನೆ. ಅಲ್ಲಾಹನು ಅದನ್ನು ಸುತ್ತುವರಿದಿದ್ದಾನೆ ಮತ್ತು ಅಲ್ಲಾಹನು ಸಕಲ ಸಂಗತಿಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ.
അറബി തഫ്സീറുകൾ:
وَلَوْ قَاتَلَكُمُ الَّذِیْنَ كَفَرُوْا لَوَلَّوُا الْاَدْبَارَ ثُمَّ لَا یَجِدُوْنَ وَلِیًّا وَّلَا نَصِیْرًا ۟
ಸತ್ಯನಿಷೇಧಿಗಳು ನಿಮ್ಮೊಂದಿಗೆ ಯುದ್ಧ ಮಾಡಿರುತ್ತಿದ್ದರೆ ಖಂಡಿತ ಬೆನ್ನು ತಿರುಗಿಸಿ ಓಡುತ್ತಿದ್ದರು. ಆ ಬಳಿಕ ಅವರು ಯಾವ ರಕ್ಷಕ ಮಿತ್ರನನ್ನಾಗಲಿ, ಸಹಾಯಕನನ್ನಾಲೀ ಪಡೆಯುತ್ತಿರಲಿಲ್ಲ.
അറബി തഫ്സീറുകൾ:
سُنَّةَ اللّٰهِ الَّتِیْ قَدْ خَلَتْ مِنْ قَبْلُ ۖۚ— وَلَنْ تَجِدَ لِسُنَّةِ اللّٰهِ تَبْدِیْلًا ۟
ಇದು ಮೊದಲಿನಿಂದಲೇ ಜಾರಿಯಲ್ಲಿರುವಂತಹ ಅಲ್ಲಾಹನ ಕ್ರಮವಾಗಿದೆ ಮತ್ತು ಅಲ್ಲಾಹನ ಕ್ರಮದಲ್ಲಿ ಯಾವ ಬದಲಾವಣೆಯನ್ನು ನೀವು ಕಾಣಲಾರಿರಿ.
അറബി തഫ്സീറുകൾ:
وَهُوَ الَّذِیْ كَفَّ اَیْدِیَهُمْ عَنْكُمْ وَاَیْدِیَكُمْ عَنْهُمْ بِبَطْنِ مَكَّةَ مِنْ بَعْدِ اَنْ اَظْفَرَكُمْ عَلَیْهِمْ ؕ— وَكَانَ اللّٰهُ بِمَا تَعْمَلُوْنَ بَصِیْرًا ۟
ಅವನೇ ಸತ್ಯನಿಷೇಧಿಗಳ ಕೈಗಳನ್ನು ನಿಮ್ಮಿಂದಲೂ ಮತ್ತು ನಿಮ್ಮ ಕೈಗಳನ್ನು ಅವರಿಂದಲೂ ಮಕ್ಕಾಃ ಕಣಿವೆಯಲ್ಲಿ ತಡೆದನು, ಬಳಿಕ ಅವನು ನಿಮಗೆ ಅವರ ಮೇಲೆ ವಿಜಯ ದಯಪಾಲಿಸಿದನು, ನೀವು ಮಾಡುತ್ತಿರುವುದನ್ನು ಅಲ್ಲಾಹನು ಚೆನ್ನಾಗಿ ಬಲ್ಲನು.
അറബി തഫ്സീറുകൾ:
هُمُ الَّذِیْنَ كَفَرُوْا وَصَدُّوْكُمْ عَنِ الْمَسْجِدِ الْحَرَامِ وَالْهَدْیَ مَعْكُوْفًا اَنْ یَّبْلُغَ مَحِلَّهٗ ؕ— وَلَوْلَا رِجَالٌ مُّؤْمِنُوْنَ وَنِسَآءٌ مُّؤْمِنٰتٌ لَّمْ تَعْلَمُوْهُمْ اَنْ تَطَـُٔوْهُمْ فَتُصِیْبَكُمْ مِّنْهُمْ مَّعَرَّةٌ بِغَیْرِ عِلْمٍ ۚ— لِیُدْخِلَ اللّٰهُ فِیْ رَحْمَتِهٖ مَنْ یَّشَآءُ ۚ— لَوْ تَزَیَّلُوْا لَعَذَّبْنَا الَّذِیْنَ كَفَرُوْا مِنْهُمْ عَذَابًا اَلِیْمًا ۟
ಅವರೇ ಸತ್ಯನಿಷೇಧಿಸಿದವರು ಮತ್ತು ನಿಮ್ಮನ್ನು ಮಸ್ಜಿದುಲ್ ಹರಾಮ್ ನಿಂದ ತಡೆದವರು ಹಾಗೂ ಬಲಿಮೃಗಗಳನ್ನು ಅವುಗಳ ಬಲಿತಾಣಗಳಿಗೆ ತಲುಪುವುದರಿಂದ (ತಡೆದವರು) ನೀವು ಅರಿಯದ ಸತ್ಯವಿಶ್ವಾಸಿ ಪುರುಷರು ಮತ್ತು ಸತ್ಯವಿಶ್ವಾಸಿನಿ ಸ್ತಿçÃಯರು ಮಕ್ಕಾಃದಲ್ಲಿ (ಸತ್ಯನಿಷೇಧಿಗಳೊಂದಿಗೆ) ಇಲ್ಲದಿರುತ್ತಿದ್ದರೆ ಆ ಸಂದರ್ಭದಲ್ಲಿ ನಿಮಗೆ ಯುದ್ಧದ ಅನುಮತಿ ಸಿಕ್ಕಿದರೆ ನೀವು ಅವರ ಬಗ್ಗೆ ತಿಳುವಳಿಕೆಯಿಲ್ಲದೆ (ಆ ಸ್ಥಿತಿಯಲ್ಲಿ ಅವರನ್ನು) ವಧಿಸಿರುವುದರಿಂದ ನಿಮಗೆ ಅಪಾಯ ತಟ್ಟುವ ಸಂಭವವಿರುತ್ತಿತ್ತು. ಇದೇಕೆಂದರೆ ಅಲ್ಲಾಹನು ತಾನಿಚ್ಛಿಸುವವರನ್ನು ತನ್ನ ಕಾರುಣ್ಯದಲ್ಲಿ ಸೇರಿಸಲೆಂದಾಗಿದೆ. ಇನ್ನು ಅವರು ಬೇರೆಬೇರೆಯಾಗಿರುತ್ತಿದ್ದರೆ ನಾವು ಅವರ ಪೈಕಿಯ ಸತ್ಯನಿಷೇಧಿಗಳಿಗೆ ವೇದನಾಜನಕ ಯಾತನೆಯನ್ನು ಕೊಡುತ್ತಿದ್ದೆವು.
അറബി തഫ്സീറുകൾ:
اِذْ جَعَلَ الَّذِیْنَ كَفَرُوْا فِیْ قُلُوْبِهِمُ الْحَمِیَّةَ حَمِیَّةَ الْجَاهِلِیَّةِ فَاَنْزَلَ اللّٰهُ سَكِیْنَتَهٗ عَلٰی رَسُوْلِهٖ وَعَلَی الْمُؤْمِنِیْنَ وَاَلْزَمَهُمْ كَلِمَةَ التَّقْوٰی وَكَانُوْۤا اَحَقَّ بِهَا وَاَهْلَهَا ؕ— وَكَانَ اللّٰهُ بِكُلِّ شَیْءٍ عَلِیْمًا ۟۠
ಸತ್ಯನಿಷೇಧಿಗಳು ತಮ್ಮ ಹೃದಯಗಳಲ್ಲಿ ಅಜ್ಞಾನ ಕಾಲದ ದುರಭಿಮಾನವನ್ನು ನೆಲೆಗೊಳಿಸಿದಾಗ! ಅಲ್ಲಾಹನು ತನ್ನ ಸಂದೇಶವಾಹಕನ ಮತ್ತು ಸತ್ಯವಿಶ್ವಾಸಿಗಳ ಮೇಲೆ ತನ್ನೆಡೆಯ ಶಾಂತಿ ನೆಮ್ಮದಿಯನ್ನು ಇಳಿಸಿದನು ಮತ್ತು ಅಲ್ಲಾಹನು ಸತ್ಯವಿಶ್ವಾಸಿಗಳಿಗೆ ಭಯಭಕ್ತಿಯ ಮಾತಿಗೆ ಬದ್ಧರನ್ನಾಗಿಸಿದನು. ಅವರೇ (ಆ ಭಯಭಕ್ತಿಯನ್ನು ಸ್ವೀಕರಿಸಲು) ಹೆಚ್ಚು ಅರ್ಹತೆಯುಳ್ಳವರೂ ಆಗಿದ್ದರು ಮತ್ತು ಅಲ್ಲಾಹನು ಪ್ರತಿಯೊಂದು ಸಂಗತಿಯನ್ನು ಚೆನ್ನಾಗಿ ಅರಿಯುತ್ತಾನೆ.
അറബി തഫ്സീറുകൾ:
لَقَدْ صَدَقَ اللّٰهُ رَسُوْلَهُ الرُّءْیَا بِالْحَقِّ ۚ— لَتَدْخُلُنَّ الْمَسْجِدَ الْحَرَامَ اِنْ شَآءَ اللّٰهُ اٰمِنِیْنَ ۙ— مُحَلِّقِیْنَ رُءُوْسَكُمْ وَمُقَصِّرِیْنَ ۙ— لَا تَخَافُوْنَ ؕ— فَعَلِمَ مَا لَمْ تَعْلَمُوْا فَجَعَلَ مِنْ دُوْنِ ذٰلِكَ فَتْحًا قَرِیْبًا ۟
ನಿಜವಾಗಿಯೂ ಅಲ್ಲಾಹನು ತನ್ನ ಸಂದೇಶವಾಹಕರ ಕನಸನ್ನು ನನಸಾಗಿ ಮಾಡಿದನು, ಆದರೆ ಅಲ್ಲಾಹನಿಚ್ಛಿಸಿದರೆ ನೀವು ನಿರ್ಭಯತೆ ಹಾಗು ಸುರಕ್ಷತೆಯೊಂದಿಗೆ ಕೇಶ ಮುಂಡನ ಮಾಡಿಸುತ್ತಾ ಮತ್ತು ತಲೆಗೂದಲನ್ನು ಕತ್ತರಿಸುತ್ತಾ ಯಾವುದೇ ಭಯವಿಲ್ಲದೇ ಖಂಡಿತ ಮಸ್ಜಿದುಲ್‌ಹರಾಮನ್ನು ಪ್ರವೇಶಿಸುವಿರಿ. ನೀವು ಅರಿಯದಿದ್ದನ್ನು ಅವನು ಅರಿಯುತ್ತಾನೆ. ಇದಕ್ಕೆ ಮೊದಲು ಅವನು ನಿಮಗೆ ಸನ್ನಿಹಿತ ಖೈಬರ್ ವಿಜಯವೊಂದನ್ನು ದಯಪಾಲಿಸಿದನು.
അറബി തഫ്സീറുകൾ:
هُوَ الَّذِیْۤ اَرْسَلَ رَسُوْلَهٗ بِالْهُدٰی وَدِیْنِ الْحَقِّ لِیُظْهِرَهٗ عَلَی الدِّیْنِ كُلِّهٖ ؕ— وَكَفٰی بِاللّٰهِ شَهِیْدًا ۟ؕ
ಅವನೇ ತನ್ನ ಸಂದೇಶವಾಹಕರನನ್ನು ಮಾರ್ಗದರ್ಶನದೊಂದಿಗೆ ಮತ್ತು ಸತ್ಯಧರ್ಮದೊಂದಿಗೆ ಕಳುಹಿಸಿದನು, ಇದೇಕೆಂದರೆ ಅದನ್ನು ಸಕಲ ಧರ್ಮಗಳ ಮೇಲೆ ವಿಜಯಸಾಧಿಸಲೆಂದಾಗಿದೆ ಮತ್ತು ಸಾಕ್ಷಿಯಾಗಿ ಅಲ್ಲಾಹನೇ ಸಾಕು.
അറബി തഫ്സീറുകൾ:
مُحَمَّدٌ رَّسُوْلُ اللّٰهِ ؕ— وَالَّذِیْنَ مَعَهٗۤ اَشِدَّآءُ عَلَی الْكُفَّارِ رُحَمَآءُ بَیْنَهُمْ تَرٰىهُمْ رُكَّعًا سُجَّدًا یَّبْتَغُوْنَ فَضْلًا مِّنَ اللّٰهِ وَرِضْوَانًا ؗ— سِیْمَاهُمْ فِیْ وُجُوْهِهِمْ مِّنْ اَثَرِ السُّجُوْدِ ؕ— ذٰلِكَ مَثَلُهُمْ فِی التَّوْرٰىةِ ۛۖۚ— وَمَثَلُهُمْ فِی الْاِنْجِیْلِ ۛ۫ۚ— كَزَرْعٍ اَخْرَجَ شَطْاَهٗ فَاٰزَرَهٗ فَاسْتَغْلَظَ فَاسْتَوٰی عَلٰی سُوْقِهٖ یُعْجِبُ الزُّرَّاعَ لِیَغِیْظَ بِهِمُ الْكُفَّارَ ؕ— وَعَدَ اللّٰهُ الَّذِیْنَ اٰمَنُوْا وَعَمِلُوا الصّٰلِحٰتِ مِنْهُمْ مَّغْفِرَةً وَّاَجْرًا عَظِیْمًا ۟۠
ಮುಹಮ್ಮದ್‌ರವರು ಅಲ್ಲಾಹನ ಸಂದೇಶವಾಹಕರಾಗಿರುವರು, ಅವರ ಸಂಗಡವಿರುವವರು ಸತ್ಯನಿಷೇಧಿಗಳ ಮೇಲೆ ಕಠೋರರೂ ಪರಸ್ಪರ ಕರುಣೆಯುಳ್ಳವರಾಗಿದ್ದಾರೆ, ಅಲ್ಲಾಹನ ಅನುಗ್ರಹ ಮತ್ತು ಅವನ ಸಂತೃಪ್ತಿಯನ್ನು ಹಂಬಲಿಸುತ್ತಾ ತಲೆ ಬಾಗುತ್ತಲೂ, ಸಾಷ್ಟಾಂಗವೆರಗುತ್ತಲೂ ನೀವು ಅವರನ್ನು ಕಾಣುವಿರಿ ಮತ್ತು ಅವರ ಮುಖಗಳ ಮೇಲೆ ಸಾಷ್ಟಾಂಗದ ನಿಮಿತ್ತ ಗುರುತುಗಳಿವೆ, ಇದು ತೌರಾತ್‌ನಲ್ಲಿರುವ ಅವರ ಉಪಮೆಯಾಗಿದೆ, ಹಾಗೂ ಇಂಜೀಲಿನ ಅವರ ಉಪಮೆಯು ಒಂದು ಹೊಲದಂತಿದೆ, ಅದು ಮೊಳೆಯಿತು, ಅನಂತರ ಅದನ್ನು ಬಲಗೊಳಿಸಿತು ಬಳಿಕ ಅದು ದಪ್ಪಾಗಾಗಿ ತನ್ನ ಕಾಂಡದ ಮೇಲೆ ನೆಟ್ಟಗೆ ನಿಂತು, ಕೃಷಿಕರಿಗೆ ಸಂತೋಷಪಡಿಸಿತು, ಇದು ಅವುಗಳ ಮೂಲಕ ಸತ್ಯನಿಷೇಧಿಗಳನ್ನು ಕೆರಳಿಸಲೆಂದಾಗಿದೆ. ಅಲ್ಲಾಹನು ವಿಶ್ವಾಸವಿರಿಸಿ ಸತ್ಕರ್ಮಗಳನ್ನು ಕೈಗೊಂಡವರಿಗೆ ಕ್ಷಮೆಯನ್ನು ಮತ್ತು ಮಹಾಪ್ರತಿಫಲದ ವಾಗ್ದಾನವನ್ನು ಮಾಡಿರುವನು.
അറബി തഫ്സീറുകൾ:
 
പരിഭാഷ അദ്ധ്യായം: ഫത്ഹ്
സൂറത്തുകളുടെ സൂചിക പേജ് നമ്പർ
 
വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി - വിവർത്തനങ്ങളുടെ സൂചിക

വിവർത്തനം - ശൈഖ് ബഷീർ മൈസൂരി. മർകസ് റുവാദ് തർജമയുടെ മേൽനോട്ടത്തിൽ വികസിപ്പിച്ചത്.

അവസാനിപ്പിക്കുക