Check out the new design

വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി * - വിവർത്തനങ്ങളുടെ സൂചിക


പരിഭാഷ അദ്ധ്യായം: ന്നിസാഅ്   ആയത്ത്:
اَللّٰهُ لَاۤ اِلٰهَ اِلَّا هُوَ ؕ— لَیَجْمَعَنَّكُمْ اِلٰی یَوْمِ الْقِیٰمَةِ لَا رَیْبَ فِیْهِ ؕ— وَمَنْ اَصْدَقُ مِنَ اللّٰهِ حَدِیْثًا ۟۠
ಅಲ್ಲಾಹ್ ಅವನ ಹೊರತು ಅನ್ಯ ನೈಜ ಆರಾಧ್ಯನಿಲ್ಲ. ಪುನರುತ್ಥಾನದ ದಿನ ಖಂಡಿತ ಅವನು ನಿಮ್ಮೆಲ್ಲರನ್ನು ಒಟ್ಟು ಸೇರಿಸುವನು. ಅದರ ಆಗಮನದಲ್ಲಿ ಯಾವುದೇ ಸಂದೇಹವಿಲ್ಲ. ಅಲ್ಲಾಹನಿಗಿಂತ ಅಧಿಕ ಸತ್ಯ ಮಾತನ್ನಾಡುವವನು ಇನ್ನಾರಿದ್ದಾನೆ?
അറബി തഫ്സീറുകൾ:
فَمَا لَكُمْ فِی الْمُنٰفِقِیْنَ فِئَتَیْنِ وَاللّٰهُ اَرْكَسَهُمْ بِمَا كَسَبُوْا ؕ— اَتُرِیْدُوْنَ اَنْ تَهْدُوْا مَنْ اَضَلَّ اللّٰهُ ؕ— وَمَنْ یُّضْلِلِ اللّٰهُ فَلَنْ تَجِدَ لَهٗ سَبِیْلًا ۟
ಕಪಟ ವಿಶ್ವಾಸಿಗಳ ವಿಷಯದಲ್ಲಿ ನೀವೇಕೆ ಎರಡು ಗುಂಪುಗಳಾಗುತ್ತೀರಿ? ವಸ್ತುತಃ ಅವರನ್ನು ಅಲ್ಲಾಹನು ಅವರ ಕರ್ಮಗಳ ನಿಮಿತ್ತ ಅಧೋಮುಖಿಗಳನ್ನಾಗಿಸಿರುವನು. ಅಲ್ಲಾಹನು ಪಥಭ್ರಷ್ಟಗೊಳಿಸಿರುವವನನ್ನು ನೀವು ಸನ್ಮಾರ್ಗ ನೀಡಲು ಇಚ್ಛಿಸುತ್ತೀರಾ? ಅಲ್ಲಾಹನು ಯಾರನ್ನು ಪಥಭ್ರಷ್ಟಗೊಳಿಸುವನೋ ಅವನಿಗೆ ನೀವು ಯಾವ ಮಾರ್ಗವನ್ನೂ ಪಡೆಯಲಾರಿರಿ.
അറബി തഫ്സീറുകൾ:
وَدُّوْا لَوْ تَكْفُرُوْنَ كَمَا كَفَرُوْا فَتَكُوْنُوْنَ سَوَآءً فَلَا تَتَّخِذُوْا مِنْهُمْ اَوْلِیَآءَ حَتّٰی یُهَاجِرُوْا فِیْ سَبِیْلِ اللّٰهِ ؕ— فَاِنْ تَوَلَّوْا فَخُذُوْهُمْ وَاقْتُلُوْهُمْ حَیْثُ وَجَدْتُّمُوْهُمْ ۪— وَلَا تَتَّخِذُوْا مِنْهُمْ وَلِیًّا وَّلَا نَصِیْرًا ۟ۙ
ಅವರು ಸತ್ಯನಿಷೇಧಿಗಳಾಗಿರುವಂತೆ ನೀವು ಸತ್ಯನಿಷೇಧಿಗಳಾಗಿ ಅನಂತರ ಎಲ್ಲರೂ ಸಮಾನರಾಗಬೇಕೆಂದು ಅವರು ಬಯಸುತ್ತಾರೆ. ಅವರು ಅಲ್ಲಾಹನ ಮಾರ್ಗದಲ್ಲಿ ತಮ್ಮ ನಾಡನ್ನು ತ್ಯಜಿಸುವವರಗೆ ನೀವು ಅವರ ಪೈಕಿ ಯಾರನ್ನೂ ಮಿತ್ರರನ್ನಾಗಿ ಮಾಡಿಕೊಳ್ಳಬೇಡಿರಿ. ಇನ್ನು ಅವರು ವಿಮುಖರಾಗುವುದಾದರೆ ನೀವು ಅವರನ್ನು ಹಿಡಿಯಿರಿ ಮತ್ತು ಅವರನ್ನು ಕಂಡಲ್ಲಿ ಕೊಂದು ಹಾಕಿರಿ ಮತ್ತು ನೀವು ಅವರ ಪೈಕಿ ಯಾರನ್ನೂ ನಿಮ್ಮ ಮಿತ್ರರಾಗಿ ಹಾಗೂ ಸಹಾಯಕರಾಗಿ ಮಾಡಿಕೊಳ್ಳಬೇಡಿರಿ.
അറബി തഫ്സീറുകൾ:
اِلَّا الَّذِیْنَ یَصِلُوْنَ اِلٰی قَوْمٍ بَیْنَكُمْ وَبَیْنَهُمْ مِّیْثَاقٌ اَوْ جَآءُوْكُمْ حَصِرَتْ صُدُوْرُهُمْ اَنْ یُّقَاتِلُوْكُمْ اَوْ یُقَاتِلُوْا قَوْمَهُمْ ؕ— وَلَوْ شَآءَ اللّٰهُ لَسَلَّطَهُمْ عَلَیْكُمْ فَلَقٰتَلُوْكُمْ ۚ— فَاِنِ اعْتَزَلُوْكُمْ فَلَمْ یُقَاتِلُوْكُمْ وَاَلْقَوْا اِلَیْكُمُ السَّلَمَ ۙ— فَمَا جَعَلَ اللّٰهُ لَكُمْ عَلَیْهِمْ سَبِیْلًا ۟
ಆದರೆ ನಿಮ್ಮೊಂದಿಗೆ ಒಪ್ಪಂದ ಮಾಡಿಕೊಂಡಿರುವ ಒಂದು ಸಮೂಹದೊಂದಿಗೆ ಸೇರಿಕೊಂಡವರ ಅಥವಾ ನಿಮ್ಮೊಂದಿಗೆ ಯುದ್ಧ ಮಾಡಲಿಕ್ಕಾಗಲೀ, ಸ್ವತಃ ತಮ್ಮ ಜನರೊಂದಿಗೆ ಯುದ್ಧ ಮಾಡಲಿಕ್ಕಾಗಿ ಇಷ್ಟವಿಲ್ಲದೆ ನಿಮ್ಮ ಬಳಿಗೆ ಬರುವವರ ಹೊರತು. ಅಲ್ಲಾಹನು ಇಚ್ಛಿಸುತ್ತಿದ್ದರೆ ಅವರಿಗೆ ನಿಮ್ಮ ಮೇಲೆ ಪ್ರಾಬಲ್ಯ ನೀಡುತ್ತಿದ್ದನು. ಮತ್ತು ನಿಮ್ಮೆಡೆಗೆ ಶಾಂತಿಯ ಪ್ರಸ್ತಾಪವನ್ನಿಟ್ಟರೆ ಅಲ್ಲಾಹನು ಅವರ ವಿರುದ್ಧ ಯಾವ ಯುದ್ಧ ಮಾರ್ಗವನ್ನೂ ನಿಮಗೆ ಕೊಟ್ಟಿರುವುದಿಲ್ಲ.
അറബി തഫ്സീറുകൾ:
سَتَجِدُوْنَ اٰخَرِیْنَ یُرِیْدُوْنَ اَنْ یَّاْمَنُوْكُمْ وَیَاْمَنُوْا قَوْمَهُمْ ؕ— كُلَّ مَا رُدُّوْۤا اِلَی الْفِتْنَةِ اُرْكِسُوْا فِیْهَا ۚ— فَاِنْ لَّمْ یَعْتَزِلُوْكُمْ وَیُلْقُوْۤا اِلَیْكُمُ السَّلَمَ وَیَكُفُّوْۤا اَیْدِیَهُمْ فَخُذُوْهُمْ وَاقْتُلُوْهُمْ حَیْثُ ثَقِفْتُمُوْهُمْ ؕ— وَاُولٰٓىِٕكُمْ جَعَلْنَا لَكُمْ عَلَیْهِمْ سُلْطٰنًا مُّبِیْنًا ۟۠
ಬೇರೊಂದು ಸಮುದಾಯವನ್ನು ನೀವು ಕಾಣುವಿರಿ. ಅವರು ನಿಮ್ಮೊಂದಿಗೂ ಸ್ವತಃ ತಮ್ಮ ಜನರೊಂದಿಗೂ ಅಭಯವನ್ನು ಬಯಸುತ್ತಾರೆ. (ಆದರೆ) ಕ್ಷೆÆÃಭೆಯೆಡೆಗೆ ಅವರನ್ನು ಮರಳಿಸಲಾಗುವಾಗ ಅದರಲ್ಲಿ ಅವರು ಅಧೋಮುಖಿಗಳಾಗಿ ಬೀಳುತ್ತಾರೆ. ಅವರೇನಾದರೂ ನಿಮ್ಮಿಂದ ದೂರ ಸರಿದು ನಿಮ್ಮ ಮುಂದೆ ಶಾಂತಿಯ ಪ್ರಸ್ತಾಪವನ್ನಿಡದಿದ್ದರೆ ಮತ್ತು ತಮ್ಮ ಕೈಗಳನ್ನು ತಡೆಹಿಡಿಯದಿದ್ದರೆ ಅವರನ್ನು ಹಿಡಿಯಿರಿ ಮತ್ತು ಅವರನ್ನು ಕಂಡಲ್ಲಿ ಕೊಂದು ಹಾಕಿರಿ. ನಾವು ಅವರ ವಿರುದ್ಧ ನಿಮಗೆ ಸ್ಪಷ್ಟವಾದ ಅಧಿಕಾರವನ್ನು ನೀಡಿರುತ್ತೇವೆ.
അറബി തഫ്സീറുകൾ:
 
പരിഭാഷ അദ്ധ്യായം: ന്നിസാഅ്
സൂറത്തുകളുടെ സൂചിക പേജ് നമ്പർ
 
വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി - വിവർത്തനങ്ങളുടെ സൂചിക

വിവർത്തനം - ശൈഖ് ബഷീർ മൈസൂരി. മർകസ് റുവാദ് തർജമയുടെ മേൽനോട്ടത്തിൽ വികസിപ്പിച്ചത്.

അവസാനിപ്പിക്കുക