Check out the new design

വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി * - വിവർത്തനങ്ങളുടെ സൂചിക


പരിഭാഷ അദ്ധ്യായം: ശ്ശുഅറാഅ്   ആയത്ത്:
لَعَلَّنَا نَتَّبِعُ السَّحَرَةَ اِنْ كَانُوْا هُمُ الْغٰلِبِیْنَ ۟
ಇಂದು ಜಾದುಗಾರರು ಮೇಲುಗೈ ಸಾಧಿಸಿದರೆ, ನಾವು ಅವರನ್ನೇ ಅನುಸರಿಸಲೆಂದಾಗಿದೆ.
അറബി തഫ്സീറുകൾ:
فَلَمَّا جَآءَ السَّحَرَةُ قَالُوْا لِفِرْعَوْنَ اَىِٕنَّ لَنَا لَاَجْرًا اِنْ كُنَّا نَحْنُ الْغٰلِبِیْنَ ۟
ಜಾದುಗಾರರು ಬಂದು ಫಿರ್‌ಔನನಿಗೆ ಹೇಳಿದರು: ನಾವೇನಾದರೂ ಮೇಲುಗೈ ಸಾಧಿಸಿದರೆ ನಮಗೆ ಪ್ರತಿಫಲವೇನಾದರೂ ಇದೆಯೇ?
അറബി തഫ്സീറുകൾ:
قَالَ نَعَمْ وَاِنَّكُمْ اِذًا لَّمِنَ الْمُقَرَّبِیْنَ ۟
ಫಿರ್‌ಔನನು ಉತ್ತರಿಸಿದನು: ಹೌದು ಆಗ ನೀವು ನನ್ನ ಆಪ್ತರಲ್ಲಿ ಸೇರಿಬಿಡುವಿರಿ.
അറബി തഫ്സീറുകൾ:
قَالَ لَهُمْ مُّوْسٰۤی اَلْقُوْا مَاۤ اَنْتُمْ مُّلْقُوْنَ ۟
ಮೂಸಾ(ಅ) ಅವರೊಡನೆ ಹೇಳಿದರು: ನೀವೇನನ್ನು ಹಾಕುವವರಿದ್ದೀರೋ ಅದನ್ನು ಹಾಕಿಬಿಡಿರಿ.
അറബി തഫ്സീറുകൾ:
فَاَلْقَوْا حِبَالَهُمْ وَعِصِیَّهُمْ وَقَالُوْا بِعِزَّةِ فِرْعَوْنَ اِنَّا لَنَحْنُ الْغٰلِبُوْنَ ۟
ಕೊನೆಗೆ ಅವರು ತಮ್ಮ ಹಗ್ಗಗಳನ್ನೂ, ಲಾಠಿಗಳನ್ನೂ ಹಾಕಿದರು ಮತ್ತು ಹೇಳಿದರು: ಫಿರ್‌ಔನನ ಪ್ರತಾಪದಾಣೆ! ಖಂಡಿತ ನಾವು ಮೇಲುಗೈ ಸಾಧಿಸಲಿದ್ದೇವೆ.
അറബി തഫ്സീറുകൾ:
فَاَلْقٰی مُوْسٰی عَصَاهُ فَاِذَا هِیَ تَلْقَفُ مَا یَاْفِكُوْنَ ۟ۚۖ
ಆಗ ಮೂಸಾ ಸಹ ತನ್ನ ಲಾಠಿಯನ್ನು ಹಾಕಿದರು. ಆಗಲೇ ಅದು (ಹೆಬ್ಬಾವಾಗಿ) ಅವರು ಸೃಷ್ಟಿಸಿದ ಮಿಥ್ಯಗಳನ್ನೆಲ್ಲಾ ನುಂಗಿಹಾಕಿತು.
അറബി തഫ്സീറുകൾ:
فَاُلْقِیَ السَّحَرَةُ سٰجِدِیْنَ ۟ۙ
ಕೂಡಲೇ ಜಾದುಗಾರರೆಲ್ಲರೂ ಸಾಷ್ಟಾಂಗವೆರಗಿದರು.
അറബി തഫ്സീറുകൾ:
قَالُوْۤا اٰمَنَّا بِرَبِّ الْعٰلَمِیْنَ ۟ۙ
ಅವರು ಹೇಳಿದರು: ನಾವು ಸರ್ವಲೋಕಗಳ ಪ್ರಭುವಿನಲ್ಲಿ ವಿಶ್ವಾಸವಿರಿಸಿದೆವು.
അറബി തഫ്സീറുകൾ:
رَبِّ مُوْسٰی وَهٰرُوْنَ ۟
ಮೂಸಾ ಮತ್ತು ಹಾರೂನರ ಪ್ರಭುವಿನಲ್ಲಿ.
അറബി തഫ്സീറുകൾ:
قَالَ اٰمَنْتُمْ لَهٗ قَبْلَ اَنْ اٰذَنَ لَكُمْ ۚ— اِنَّهٗ لَكَبِیْرُكُمُ الَّذِیْ عَلَّمَكُمُ السِّحْرَ ۚ— فَلَسَوْفَ تَعْلَمُوْنَ ؕ۬— لَاُقَطِّعَنَّ اَیْدِیَكُمْ وَاَرْجُلَكُمْ مِّنْ خِلَافٍ وَّلَاُوصَلِّبَنَّكُمْ اَجْمَعِیْنَ ۟ۚ
ಫಿರ್‌ಔನ್ ಹೇಳಿದನು: ನಾನು ನಿಮಗೆ ಅನುಮತಿ ನೀಡುವ ಮೊದಲೇ ನೀವು ಅವನನ್ನು ನಂಬಿ ಬಿಟ್ಟಿರಾ? ನಿಜವಾಗಿಯು ಅವನೇ ನಿಮ್ಮೆಲ್ಲರಿಗೂ ಜಾದುವನ್ನು ಕಲಿಸಿಕೊಟ್ಟಂತಹ ನಿಮ್ಮ ಗುರು ಆಗಿದ್ದಾನೆ. ಇನ್ನು ಸದ್ಯದಲ್ಲೇ ಅರಿತುಕೊಳ್ಳಲಿದ್ದೀರಿ. ನಾನು ಖಂಡಿತ ನಿಮ್ಮ ಕೈ, ಕಾಲುಗಳನ್ನು ಒಂದಕ್ಕೊAದು ವಿರುದ್ಧ ದಿಕ್ಕಿನಲ್ಲಿ ಕತ್ತರಿಸಿ ಹಾಕುವೆನು ಮತ್ತು ಖಂಡಿತ ನಿಮ್ಮೆಲ್ಲರನ್ನೂ ಶಿಲುಬೆಗೇರಿಸುವೆನು.
അറബി തഫ്സീറുകൾ:
قَالُوْا لَا ضَیْرَ ؗ— اِنَّاۤ اِلٰی رَبِّنَا مُنْقَلِبُوْنَ ۟ۚ
ಅವರು ಹೇಳಿದರು: ತೊಂದರೆಯಿಲ್ಲ. ನಾವು ನಮ್ಮ ಪ್ರಭುವಿನೆಡೆಗೆ ಮರಳಿಹೋಗುವವರೇ ಆಗಿದ್ದೇವೆ.
അറബി തഫ്സീറുകൾ:
اِنَّا نَطْمَعُ اَنْ یَّغْفِرَ لَنَا رَبُّنَا خَطٰیٰنَاۤ اَنْ كُنَّاۤ اَوَّلَ الْمُؤْمِنِیْنَ ۟ؕ۠
ನಾವು ಸತ್ಯವಿಶ್ವಾಸಿಗಳಲ್ಲಿ ಮೊದಲಿಗರಾಗಿದ್ದೆವೆಂಬ ಕಾರಣಕ್ಕೆ ನಮ್ಮ ಪ್ರಭುವು ನಮ್ಮ ಪಾಪಗಳನ್ನು ಕ್ಷಮಿಸಿ ಬಿಡುವನೆಂದು ನಾವು ತೀವ್ರ ಆಕಾಂಕ್ಷೆಯನ್ನಿರಿಸಿದ್ದೇವೆ.
അറബി തഫ്സീറുകൾ:
وَاَوْحَیْنَاۤ اِلٰی مُوْسٰۤی اَنْ اَسْرِ بِعِبَادِیْۤ اِنَّكُمْ مُّتَّبَعُوْنَ ۟
ನಾವು ಮೂಸಾರವರೆಡೆಗೆ ದಿವ್ಯ ಸಂದೇಶ ನೀಡಿದೆವು: ನೀವು ನನ್ನ ದಾಸರನ್ನು ಕರೆದುಕೊಂಡು ರಾತ್ರೋ ರಾತ್ರಿ ಹೊರಡಿರಿ. ಖಂಡಿತ ನೀವು ಬೆನ್ನಟ್ಟಲ್ಪಡುವಿರಿ.
അറബി തഫ്സീറുകൾ:
فَاَرْسَلَ فِرْعَوْنُ فِی الْمَدَآىِٕنِ حٰشِرِیْنَ ۟ۚ
ಫಿರ್‌ಔನನು ನಗರಗಳಲ್ಲಿ ಕರೆ ನೀಡುವವರನ್ನು ಕಳುಹಿಸಿದನು.
അറബി തഫ്സീറുകൾ:
اِنَّ هٰۤؤُلَآءِ لَشِرْذِمَةٌ قَلِیْلُوْنَ ۟ۙ
ನಿಶ್ಚಯವಾಗಿಯು ಈ ಗುಂಪು ಅತ್ಯಲ್ಪ ಸಂಖ್ಯೆಯದ್ದಾಗಿದೆ.
അറബി തഫ്സീറുകൾ:
وَاِنَّهُمْ لَنَا لَغَآىِٕظُوْنَ ۟ۙ
ಮತ್ತು ಅವರು ನಮ್ಮನ್ನು ತೀವ್ರವಾಗಿ ಕೆರಳಿಸಿದ್ದಾರೆ.
അറബി തഫ്സീറുകൾ:
وَاِنَّا لَجَمِیْعٌ حٰذِرُوْنَ ۟ؕ
ಮತ್ತು ಅವರು ನಮ್ಮನ್ನು ತೀವ್ರವಾಗಿ ಕೆರಳಿಸಿದ್ದಾರೆ.
അറബി തഫ്സീറുകൾ:
فَاَخْرَجْنٰهُمْ مِّنْ جَنّٰتٍ وَّعُیُوْنٍ ۟ۙ
ಕೊನೆಗೆ ನಾವು ಅವರನ್ನು ತೋಟಗಳಿಂದಲೂ, ಚಿಲುಮೆಗಳಿಂದಲೂ ಹೊರಕ್ಕಟ್ಟಿದೆವು.
അറബി തഫ്സീറുകൾ:
وَّكُنُوْزٍ وَّمَقَامٍ كَرِیْمٍ ۟ۙ
ಮತ್ತು ಭಂಡಾರಗಳಿAದಲೂ, ಉತ್ತಮ ನಿವಾಸಗಳಿಂದಲೂ ಹೊರದೂಡಿದೆವು.
അറബി തഫ്സീറുകൾ:
كَذٰلِكَ ؕ— وَاَوْرَثْنٰهَا بَنِیْۤ اِسْرَآءِیْلَ ۟ؕ
ಹೀಗೇ ಆಯಿತು ಮತ್ತು ನಾವು ಅವುಗಳಿಗೆ ಇಸ್ರಾಯೀಲ್ ಸಂತತಿಗಳನ್ನು ವಾರೀಸುದಾರರನ್ನಾಗಿ ಮಾಡಿದೆವು.
അറബി തഫ്സീറുകൾ:
فَاَتْبَعُوْهُمْ مُّشْرِقِیْنَ ۟
ಕೊನೆಗೆ ಫಿರ್‌ಔನಿಯರು ಸೂರ್ಯೋದಯದ ಹೊತ್ತಿನಲ್ಲೇ ಅವರನ್ನು ಬೆಂಬತ್ತಿ ಹೋದರು.
അറബി തഫ്സീറുകൾ:
 
പരിഭാഷ അദ്ധ്യായം: ശ്ശുഅറാഅ്
സൂറത്തുകളുടെ സൂചിക പേജ് നമ്പർ
 
വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി - വിവർത്തനങ്ങളുടെ സൂചിക

വിവർത്തനം - ശൈഖ് ബഷീർ മൈസൂരി. മർകസ് റുവാദ് തർജമയുടെ മേൽനോട്ടത്തിൽ വികസിപ്പിച്ചത്.

അവസാനിപ്പിക്കുക