Check out the new design

വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി * - വിവർത്തനങ്ങളുടെ സൂചിക


പരിഭാഷ അദ്ധ്യായം: ന്നൂർ   ആയത്ത്:
یٰۤاَیُّهَا الَّذِیْنَ اٰمَنُوْا لَا تَتَّبِعُوْا خُطُوٰتِ الشَّیْطٰنِ ؕ— وَمَنْ یَّتَّبِعْ خُطُوٰتِ الشَّیْطٰنِ فَاِنَّهٗ یَاْمُرُ بِالْفَحْشَآءِ وَالْمُنْكَرِ ؕ— وَلَوْلَا فَضْلُ اللّٰهِ عَلَیْكُمْ وَرَحْمَتُهٗ مَا زَكٰی مِنْكُمْ مِّنْ اَحَدٍ اَبَدًا ۙ— وَّلٰكِنَّ اللّٰهَ یُزَكِّیْ مَنْ یَّشَآءُ ؕ— وَاللّٰهُ سَمِیْعٌ عَلِیْمٌ ۟
ಓ ಸತ್ಯವಿಶ್ವಾಸಿಗಳೇ, ನೀವು ಶೈತಾನನ ಹೆಜ್ಜೆಗಳನ್ನು ಅನುಸರಿಸಬೇಡಿರಿ ಮತ್ತು ಯಾರು ಶೈತಾನನ ಹೆಜ್ಜೆಗಳನ್ನು ಅನುಸರಿಸುತ್ತಾನೋ ಖಂಡಿತವಾಗಿಯೂ ಅವನು ನಿರ್ಲಜ್ಜೆ ಮತ್ತು ದುಷ್ಕೃತ್ಯಗಳ ಆದೇಶವನ್ನೀಡುತ್ತಾನೆ ಮತ್ತು ಅಲ್ಲಾಹನ ಅನುಗ್ರಹವು, ಅವನ ಕಾರುಣ್ಯವು ನಿಮ್ಮ ಮೇಲೆ ಇಲ್ಲದಿರುತ್ತಿದ್ದರೆ ನಿಮ್ಮ ಪೈಕಿ ಯಾವೊಬ್ಬನೂ ಪರಿಶುದ್ಧನಾಗುತ್ತಿರಲಿಲ್ಲ. ಆದರೆ ಅಲ್ಲಾಹನು ತಾನಿಚ್ಛಿಸಿದವರನ್ನು ಪರಿಶುದ್ಧಗೊಳಿಸುತ್ತಾನೆ ಮತ್ತು ಅಲ್ಲಾಹನು ಸರ್ವವನ್ನಾಲಿಸುವವನೂ, ಚನ್ನಾಗಿ ಅರಿಯುವವನೂ ಆಗಿದ್ದಾನೆ.
അറബി തഫ്സീറുകൾ:
وَلَا یَاْتَلِ اُولُوا الْفَضْلِ مِنْكُمْ وَالسَّعَةِ اَنْ یُّؤْتُوْۤا اُولِی الْقُرْبٰی وَالْمَسٰكِیْنَ وَالْمُهٰجِرِیْنَ فِیْ سَبِیْلِ اللّٰهِ ۪ۖ— وَلْیَعْفُوْا وَلْیَصْفَحُوْا ؕ— اَلَا تُحِبُّوْنَ اَنْ یَّغْفِرَ اللّٰهُ لَكُمْ ؕ— وَاللّٰهُ غَفُوْرٌ رَّحِیْمٌ ۟
ನಿಮ್ಮಲ್ಲಿ ಶ್ರೇಷ್ಠರು ಮತ್ತು ಐಶ್ವರ್ಯವಂತರು ತಮ್ಮ ಆಪ್ತಸಂಬAಧಿಕರಿಗೆ, ನಿರ್ಗತಿಕರಿಗೆ ಮತ್ತು ಅಲ್ಲಾಹನ ಮಾರ್ಗದಲ್ಲಿ ವಲಸೆ ಹೋದವರಿಗೆ ದಾನ ಧರ್ಮ ನೀಡುವುದಿಲ್ಲವೆಂದು ಶಪಥ ಹಾಕದಿರಲಿ. ಅವರು ಕ್ಷಮೆ ನೀಡಲಿ ಹಾಗೂ ಮನ್ನಿಸಲಿ. ನಿಮಗೆ ಅಲ್ಲಾಹನು ಕ್ಷಮೆ ನೀಡಬೇಕೆಂದು ನೀವು ಆಶಿಸುವುದಿಲ್ಲವೇ? ಅಲ್ಲಾಹನು ಕ್ಷಮಾಶೀಲನು, ಕರುಣಾನಿಧಿಯು ಆಗಿದ್ದಾನೆ.
അറബി തഫ്സീറുകൾ:
اِنَّ الَّذِیْنَ یَرْمُوْنَ الْمُحْصَنٰتِ الْغٰفِلٰتِ الْمُؤْمِنٰتِ لُعِنُوْا فِی الدُّنْیَا وَالْاٰخِرَةِ ۪— وَلَهُمْ عَذَابٌ عَظِیْمٌ ۟ۙ
ಖಂಡಿತವಾಗಿಯು ಸುಶೀಲೆಯರೂ, ಮುಗ್ಧರೂ ಆದ ಸತ್ಯವಿಶ್ವಾಸಿನಿ ಸ್ತಿçÃಯರ ಮೇಲೆ ಅಪವಾದ ಹೊರಿಸುವವರು ಇಹಲೋಕದಲ್ಲೂ, ಪರಲೋಕದಲ್ಲೂ ಶಪಿಸಲ್ಪಟ್ಟಿದ್ದಾರೆ ಹಾಗೂ ಅವರಿಗೆ ಘೋರ ಯಾತನೆಯಿದೆ.
അറബി തഫ്സീറുകൾ:
یَّوْمَ تَشْهَدُ عَلَیْهِمْ اَلْسِنَتُهُمْ وَاَیْدِیْهِمْ وَاَرْجُلُهُمْ بِمَا كَانُوْا یَعْمَلُوْنَ ۟
ಅಂದು ಅವರ ಕರ್ಮಗಳ ಬಗ್ಗೆ ಅವರ ನಾಲಿಗೆಗಳು, ಅವರ ಕೈಗಳು, ಅವರ ಕಾಲುಗಳು ಅವರ ವಿರುದ್ಧ ಸಾಕ್ಷö್ಯ ನೀಡಲಿವೆ.
അറബി തഫ്സീറുകൾ:
یَوْمَىِٕذٍ یُّوَفِّیْهِمُ اللّٰهُ دِیْنَهُمُ الْحَقَّ وَیَعْلَمُوْنَ اَنَّ اللّٰهَ هُوَ الْحَقُّ الْمُبِیْنُ ۟
ಅಂದು ಅಲ್ಲಾಹನು ಅವರಿಗೆ ನ್ಯಾಯಯುಕ್ತ ಪ್ರತಿಫಲವನ್ನು ಸಂಪೂರ್ಣವಾಗಿ ನೀಡುವನು ಮತ್ತು ಅಲ್ಲಾಹನೇ ಸತ್ಯವೆಂದು ಮತ್ತು ಸತ್ಯವನ್ನು ಬಹಿರಂಗಗೊಳಿಸುವವನೆAದೂ ಅವರು ಮನಗಾಣುವರು.
അറബി തഫ്സീറുകൾ:
اَلْخَبِیْثٰتُ لِلْخَبِیْثِیْنَ وَالْخَبِیْثُوْنَ لِلْخَبِیْثٰتِ ۚ— وَالطَّیِّبٰتُ لِلطَّیِّبِیْنَ وَالطَّیِّبُوْنَ لِلطَّیِّبٰتِ ۚ— اُولٰٓىِٕكَ مُبَرَّءُوْنَ مِمَّا یَقُوْلُوْنَ ؕ— لَهُمْ مَّغْفِرَةٌ وَّرِزْقٌ كَرِیْمٌ ۟۠
ನಡತೆಗೆಟ್ಟ ಸ್ತಿçÃಯರು ನಡತೆಗೆಟ್ಟ ಪುರುಷರಿಗೆ. ನಡತೆಗೆಟ್ಟ ಪುರುಷರು ನಡತೆಗೆಟ್ಟ ಸ್ತಿçÃಯರಿಗೆ ಯೋಗ್ಯವಾಗಿರುವರು ಮತ್ತು ಸುಶೀಲೆ ಸ್ತಿçÃಯರು ಸುಶೀಲ ಪುರುಷರಿಗೆ. ಸುಶೀಲ ಪುರುಷರು ಸುಶೀಲೆ ಸ್ತಿçÃಯರಿಗೆ ಯೋಗ್ಯವಾಗಿರುವರು. ಜನರು ಅವರ ಬಗ್ಗೆ ಆಡುವ ಅಸಂಬದ್ಧ ಆರೋಪಗಳಿಂದ ಅವರು ದೋಷಮುಕ್ತರು. ಅವರಿಗೆ ಕ್ಷಮೆಯು ಹಾಗೂ ಗೌರವಪೂರ್ಣ ಜೀವನಾಧಾರವು ಇರುವುದು.
അറബി തഫ്സീറുകൾ:
یٰۤاَیُّهَا الَّذِیْنَ اٰمَنُوْا لَا تَدْخُلُوْا بُیُوْتًا غَیْرَ بُیُوْتِكُمْ حَتّٰی تَسْتَاْنِسُوْا وَتُسَلِّمُوْا عَلٰۤی اَهْلِهَا ؕ— ذٰلِكُمْ خَیْرٌ لَّكُمْ لَعَلَّكُمْ تَذَكَّرُوْنَ ۟
ಓ ಸತ್ಯವಿಶ್ವಾಸಿಗಳೇ, ನೀವು ನಿಮ್ಮ ಮನೆಗಳ ಹೊರತು ಇತರರ ಮನೆಗಳಿಗೆ ಅವರ ಅನುಮತಿ ಪಡೆಯುವ ಹಾಗೂ ಮನೆಯವರಿಗೆ ಸಲಾಮ್ ಹೇಳುವ ತನಕ ಪ್ರವೇಶಿಸಬೇಡಿರಿ. ಇದು ನಿಮ್ಮ ಪಾಲಿಗೆ ಉತ್ತಮವಾಗಿದೆ.ಇದು ನೀವು ಉಪದೇಶ ಪಡೆಯಬಹುದೆಂದಾಗಿದೆ.
അറബി തഫ്സീറുകൾ:
 
പരിഭാഷ അദ്ധ്യായം: ന്നൂർ
സൂറത്തുകളുടെ സൂചിക പേജ് നമ്പർ
 
വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി - വിവർത്തനങ്ങളുടെ സൂചിക

വിവർത്തനം - ശൈഖ് ബഷീർ മൈസൂരി. മർകസ് റുവാദ് തർജമയുടെ മേൽനോട്ടത്തിൽ വികസിപ്പിച്ചത്.

അവസാനിപ്പിക്കുക