Check out the new design

വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി * - വിവർത്തനങ്ങളുടെ സൂചിക


പരിഭാഷ അദ്ധ്യായം: ഇസ്റാഅ്   ആയത്ത്:
وَبِالْحَقِّ اَنْزَلْنٰهُ وَبِالْحَقِّ نَزَلَ ؕ— وَمَاۤ اَرْسَلْنٰكَ اِلَّا مُبَشِّرًا وَّنَذِیْرًا ۟ۘ
ನಾವು ಈ ಕುರ್‌ಆನನ್ನು ಸತ್ಯದೊಂದಿಗೆ ಇಳಿಸಿರುತ್ತೇವೆ. ಮತ್ತು ಅದು ಸತ್ಯದೊಂದಿಗೇ ಇಳಿಯಿತು ಮತ್ತು (ಓ ಪೈಗಂಬರರೇ) ನಾವು ನಿಮ್ಮನ್ನು ಕೇವಲ ಸುವಾರ್ತೆ ನೀಡುವವನಾಗಿ, ಮುನ್ನೆಚ್ಚರಿಕೆ ಕೊಡುವವನಾಗಿ ಕಳುಹಿಸಿರುತ್ತೇವೆ.
അറബി തഫ്സീറുകൾ:
وَقُرْاٰنًا فَرَقْنٰهُ لِتَقْرَاَهٗ عَلَی النَّاسِ عَلٰی مُكْثٍ وَّنَزَّلْنٰهُ تَنْزِیْلًا ۟
ನಾವು ಕುರ್‌ಆನನ್ನು ನೀವು ಜನರಿಗೆ ಸಂದರ್ಭಕ್ಕೆ ತಕ್ಕಂತೆ ಓದಿ ಕೊಡಲೆಂದು ಸ್ವಲ್ಪ ಸ್ವಲ್ಪವಾಗಿ ಅವತೀರ್ಣಗೊಳಿಸಿರುತ್ತೇವೆ. ಮತ್ತು ನಾವು ಸಹ ಅದನ್ನು ಹಂತ ಹಂತವಾಗಿ ಇಳಿಸಿರುತ್ತೇವೆ.
അറബി തഫ്സീറുകൾ:
قُلْ اٰمِنُوْا بِهٖۤ اَوْ لَا تُؤْمِنُوْا ؕ— اِنَّ الَّذِیْنَ اُوْتُوا الْعِلْمَ مِنْ قَبْلِهٖۤ اِذَا یُتْلٰی عَلَیْهِمْ یَخِرُّوْنَ لِلْاَذْقَانِ سُجَّدًا ۟ۙ
ಹೇಳಿರಿ: (ಓ ಸತ್ಯನಿಷೇಧಿಗಳೇ) ನೀವು ಇದರಲ್ಲಿ ವಿಶ್ವಾಸವಿಡಿರಿ: ಇಲ್ಲವೇ ವಿಶ್ವಾಸವಿಡದಿರಿ. ಖಂಡಿತವಾಗಿಯು ಇದಕ್ಕೆ ಮೊದಲು ಜ್ಞಾನ ನೀಡಲಾದವರ ಬಳಿ ಇದನ್ನು ಓದಿ ಹೇಳಲಾದಾಗ ಅವರು ಅಡ್ಡಬಿದ್ದು ಸಾಷ್ಟಾಂಗವೆರಗಿ ಬಿಡುತ್ತಾರೆ.
അറബി തഫ്സീറുകൾ:
وَّیَقُوْلُوْنَ سُبْحٰنَ رَبِّنَاۤ اِنْ كَانَ وَعْدُ رَبِّنَا لَمَفْعُوْلًا ۟
ಮತ್ತು ಅವರು ಹೇಳುತ್ತಾರೆ: ನಮ್ಮ ಪ್ರಭುವು ಅದೆಷ್ಟೋ ಪರಮ ಪಾವನನು ನಿಸ್ಸಂದೇಹವಾಗಿಯು ನಮ್ಮ ಪ್ರಭುವಿನ ವಾಗ್ದಾನವು ನಡೆದೇ ತೀರುವುದು.
അറബി തഫ്സീറുകൾ:
وَیَخِرُّوْنَ لِلْاَذْقَانِ یَبْكُوْنَ وَیَزِیْدُهُمْ خُشُوْعًا ۟
ಅವರು ರೋಧಿಸುತ್ತಾ ಮುಖವನ್ನು ನೆಲಕ್ಕಿಟ್ಟು ಅಡ್ಡಬೀಳುತ್ತಾರೆ. ಮತ್ತು ಈ ಕುರ್‌ಆನ್ ಅವರ ಭಯ, ಭಕ್ತಿಯನ್ನು ಹೆಚ್ಚಿಸುತ್ತದೆ.
അറബി തഫ്സീറുകൾ:
قُلِ ادْعُوا اللّٰهَ اَوِ ادْعُوا الرَّحْمٰنَ ؕ— اَیًّا مَّا تَدْعُوْا فَلَهُ الْاَسْمَآءُ الْحُسْنٰی ۚ— وَلَا تَجْهَرْ بِصَلَاتِكَ وَلَا تُخَافِتْ بِهَا وَابْتَغِ بَیْنَ ذٰلِكَ سَبِیْلًا ۟
ಹೇಳಿರಿ: ನೀವು ಅಲ್ಲಾಹನನ್ನು ಅಲ್ಲಾಹನೆಂದು ಕರೆಯಿರಿ ಇಲ್ಲವೇ ರಹ್ಮಾನ್ ಎಂದು ಕರೆಯಿರಿ. ನೀವು ಯಾವ ನಾಮದಿಂದ ಕರೆದರು ಅವನಿಗೇ ಅತ್ಯುತ್ತಮ ನಾಮಗಳಿವೆ. ಮತ್ತು ನೀವು ನಿಮ್ಮ ನಮಾಝನ್ನು ಉಚ್ಛಸ್ವರದಲ್ಲಾಗಲಿ ಅಥವಾ ಮೆಲು ಧ್ವನಿಯಲ್ಲಾಗಲಿ ನಿರ್ವಹಿಸದಿರಿ. ಬದಲಿಗೆ ಅವುಗಳ ಮಧ್ಯಮ ಮಾರ್ಗವನ್ನು ಅರಸಿರಿ.
അറബി തഫ്സീറുകൾ:
وَقُلِ الْحَمْدُ لِلّٰهِ الَّذِیْ لَمْ یَتَّخِذْ وَلَدًا وَّلَمْ یَكُنْ لَّهٗ شَرِیْكٌ فِی الْمُلْكِ وَلَمْ یَكُنْ لَّهٗ وَلِیٌّ مِّنَ الذُّلِّ وَكَبِّرْهُ تَكْبِیْرًا ۟۠
ಹೇಳಿರಿ: ಸರ್ವಸ್ತುತಿಯು ಅಲ್ಲಾಹನಿಗೇ ಮಿಸಲು. ಅವನು ಯಾರನ್ನು ಪುತ್ರನನ್ನಾಗಿ ಮಾಡಿಕೊಂಡಿಲ್ಲ. ಅವನ ಅಧಿಪತ್ಯದಲ್ಲಿ ಯಾರೂ ಸಹಭಾಗಿ ಇಲ್ಲ ತನ್ನನ್ನು ದೌರ್ಬಲ್ಯದಿಂದ ರಕ್ಷಿಸುವ ಸಹಾಯಕರ ಅಗತ್ಯವೂ ಅವನಿಗಿಲ್ಲ. ಆದ್ದರಿಂದ ನೀವು ಸಂಪೂರ್ಣವಾಗಿ ಅವನ ಹಿರಿಮೆಯನ್ನು ಕೊಂಡಾಡಿರಿ.
അറബി തഫ്സീറുകൾ:
 
പരിഭാഷ അദ്ധ്യായം: ഇസ്റാഅ്
സൂറത്തുകളുടെ സൂചിക പേജ് നമ്പർ
 
വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി - വിവർത്തനങ്ങളുടെ സൂചിക

വിവർത്തനം - ശൈഖ് ബഷീർ മൈസൂരി. മർകസ് റുവാദ് തർജമയുടെ മേൽനോട്ടത്തിൽ വികസിപ്പിച്ചത്.

അവസാനിപ്പിക്കുക