Check out the new design

വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി * - വിവർത്തനങ്ങളുടെ സൂചിക


പരിഭാഷ അദ്ധ്യായം: ന്നഹ്ൽ   ആയത്ത്:
ثُمَّ اِنَّ رَبَّكَ لِلَّذِیْنَ عَمِلُوا السُّوْٓءَ بِجَهَالَةٍ ثُمَّ تَابُوْا مِنْ بَعْدِ ذٰلِكَ وَاَصْلَحُوْۤا اِنَّ رَبَّكَ مِنْ بَعْدِهَا لَغَفُوْرٌ رَّحِیْمٌ ۟۠
ನಂತರ ಯಾರು ಅಜ್ಞಾನದಿಂದ ದುಷ್ಕೃತ್ಯವನ್ನು ಎಸಗಿ ತರುವಾಯ ಪಶ್ಚಾತ್ತಾಪ ಪಟ್ಟರೆ ಹಾಗೂ ತಮ್ಮ ಸುಧಾರಣೆಯನ್ನು ಮಾಡಿಕೊಂಡರೆ ನಿಸ್ಸಂಶಯವಾಗಿಯು ಇದರ ನಂತರ ನಿಮ್ಮ ಪ್ರಭುವು ಕ್ಷಮಾಶೀಲನು, ಕರುಣಾನಿಧಿಯು ಆಗಿರುತ್ತಾನೆ.
അറബി ഖുർആൻ വിവരണങ്ങൾ:
اِنَّ اِبْرٰهِیْمَ كَانَ اُمَّةً قَانِتًا لِّلّٰهِ حَنِیْفًا ؕ— وَلَمْ یَكُ مِنَ الْمُشْرِكِیْنَ ۟ۙ
ನಿಸ್ಸಂಶಯವಾಗಿಯು ಇಬ್ರಾಹೀಮ್ ಸ್ವಯಂ ಒಂದು ಸಮುದಾಯ ವಾಗಿದ್ದರು ಹಾಗೂ ಅಲ್ಲಾಹನಿಗೆ ವಿಧೇಯರೂ, ಏಕನಿಷ್ಠರೂ ಆಗಿದ್ದರು ಮತ್ತು ಅವರು ಬಹುದೇವಾರಾಧಕರಲ್ಲಾಗಿರಲಿಲ್ಲ.
അറബി ഖുർആൻ വിവരണങ്ങൾ:
شَاكِرًا لِّاَنْعُمِهٖ ؕ— اِجْتَبٰىهُ وَهَدٰىهُ اِلٰی صِرَاطٍ مُّسْتَقِیْمٍ ۟
ಅವರು ಅಲ್ಲಾಹನ ಅನುಗ್ರಹಗಳಿಗೆ ಕೃತಜ್ಞರಾಗಿದ್ದರು. ಅಲ್ಲಾಹನು ಅವರನ್ನು (ತನ್ನ ದೌತ್ಯಕಾರ್ಯಕ್ಕೆ) ಆಯ್ಕೆ ಮಾಡಿಕೊಂಡನು ಹಾಗೂ ಅವರಿಗೆ ಋಜುವಾದ ಮಾರ್ಗವನ್ನು ತೋರಿಸಿದನು.
അറബി ഖുർആൻ വിവരണങ്ങൾ:
وَاٰتَیْنٰهُ فِی الدُّنْیَا حَسَنَةً ؕ— وَاِنَّهٗ فِی الْاٰخِرَةِ لَمِنَ الصّٰلِحِیْنَ ۟ؕ
ನಾವು ಅವರಿಗೆ ಇಹಲೋಕದಲ್ಲಿ ಒಳಿತನ್ನು ನೀಡಿದೆವು ನಿಸ್ಸಂಶಯವಾಗಿಯೂ ಅವರು ಪರಲೋಕದಲ್ಲೂ ಸಜ್ಜನರಲ್ಲಾಗಿರುವರು.
അറബി ഖുർആൻ വിവരണങ്ങൾ:
ثُمَّ اَوْحَیْنَاۤ اِلَیْكَ اَنِ اتَّبِعْ مِلَّةَ اِبْرٰهِیْمَ حَنِیْفًا ؕ— وَمَا كَانَ مِنَ الْمُشْرِكِیْنَ ۟
(ಓ ಪೈಗಂಬರರೇ) ತರುವಾಯ ನೀವು ಏಕನಿಷ್ಠರಾದ ಇಬ್ರಾಹೀಮರವರ ಪಥವನ್ನು ಅನುಸರಿಸಿರಿ ಎಂದು ನಾವು ನಿಮ್ಮೆಡೆಗೆ ದಿವ್ಯವಾಣಿ ಮಾಡಿದೆವು. ಅವರು ಬಹುದೇವಾರಾಧಕರಲ್ಲಾಗಿರಲಿಲ್ಲ.
അറബി ഖുർആൻ വിവരണങ്ങൾ:
اِنَّمَا جُعِلَ السَّبْتُ عَلَی الَّذِیْنَ اخْتَلَفُوْا فِیْهِ ؕ— وَاِنَّ رَبَّكَ لَیَحْكُمُ بَیْنَهُمْ یَوْمَ الْقِیٰمَةِ فِیْمَا كَانُوْا فِیْهِ یَخْتَلِفُوْنَ ۟
ಸಬ್ತ್ ದಿನದ ಆಚರಣೆಯು ಅದರಲ್ಲಿ ಭಿನ್ನತೆ ಹೊಂದಿದವರ ಮೇಲೆಯೇ ನಿಶ್ಚಯಿಸಲಾಗಿತ್ತು ನಿಶ್ಚಯವಾಗಿಯೂ ನಿಮ್ಮ ಪ್ರಭೂ ಪ್ರಳಯ ದಿನದಂದು ಅವರು ಭಿನ್ನಾಭಿಪ್ರಾಯ ಹೊಂದಿದ ವಿಚಾರಗಳ ಕುರಿತು ಅವರ ನಡುವೆ ತೀರ್ಮಾನ ಮಾಡಲಿದ್ದಾನೆ.
അറബി ഖുർആൻ വിവരണങ്ങൾ:
اُدْعُ اِلٰی سَبِیْلِ رَبِّكَ بِالْحِكْمَةِ وَالْمَوْعِظَةِ الْحَسَنَةِ وَجَادِلْهُمْ بِالَّتِیْ هِیَ اَحْسَنُ ؕ— اِنَّ رَبَّكَ هُوَ اَعْلَمُ بِمَنْ ضَلَّ عَنْ سَبِیْلِهٖ وَهُوَ اَعْلَمُ بِالْمُهْتَدِیْنَ ۟
ನೀವು ನಿಮ್ಮ ಪ್ರಭುವಿನ ಮಾರ್ಗದೆಡೆಗೆ ಯುಕ್ತಿ ಹಾಗೂ ಸದುಪದೇಶದೊಂದಿಗೆ ಜನರನ್ನು ಆಹ್ವಾನಿಸಿರಿ ಹಾಗೂ ಅವರೊಂದಿಗೆ ಅತ್ಯುತ್ತಮ ರೀತಿಯಿಂದ ಸಂವಾದ ನಡೆಸಿರಿ. ಖಂಡಿತವಾಗಿಯೂ ನಿಮ್ಮ ಪ್ರಭು ತನ್ನ ಮಾರ್ಗದಿಂದ ಭ್ರಷ್ಟರಾದವರನ್ನು ಚೆನ್ನಾಗಿ ಬಲ್ಲನು ಮತ್ತು ಅವನು ಸನ್ಮಾರ್ಗ ಹೊಂದಿದವರನ್ನು ಚೆನ್ನಾಗಿ ಅರಿಯುತ್ತಾನೆ.
അറബി ഖുർആൻ വിവരണങ്ങൾ:
وَاِنْ عَاقَبْتُمْ فَعَاقِبُوْا بِمِثْلِ مَا عُوْقِبْتُمْ بِهٖ ؕ— وَلَىِٕنْ صَبَرْتُمْ لَهُوَ خَیْرٌ لِّلصّٰبِرِیْنَ ۟
ನೀವು ಪ್ರತಿಕಾರ ಕೈಗೊಳ್ಳುವುದಾದರೆ ನಿಮಗೆ ಎಷ್ಟು ಪ್ರಹಾರ ಬಿದ್ದಿದೆಯೋ ಅಷ್ಟು ಮಾತ್ರವೇ ಪ್ರತಿಕಾರಪಡೆಯಿರಿ. ಇನ್ನು ನೀವು ಸಹನೆ ವಹಿಸುವುದಾದರೆ ನಿಸ್ಸಂಶಯವಾಗಿಯು ಸಹನಾಶೀಲರಿಗೆ ಇದು ಅತ್ಯುತ್ತಮವಾಗಿದೆ.
അറബി ഖുർആൻ വിവരണങ്ങൾ:
وَاصْبِرْ وَمَا صَبْرُكَ اِلَّا بِاللّٰهِ وَلَا تَحْزَنْ عَلَیْهِمْ وَلَا تَكُ فِیْ ضَیْقٍ مِّمَّا یَمْكُرُوْنَ ۟
ನೀವು ಸಹನೆ ವಹಿಸಿರಿ. ನಿಮ್ಮ ಸಹನೆಯು ಅಲ್ಲಾಹನ ಪುಷ್ಠಿಯಿಂದಲೇ ಸಾಧ್ಯ ಮತ್ತು ಅವರ ಕುರಿತು ದುಃಖಿತರಾಗಬೇಡಿರಿ ಹಾಗೂ ಸತ್ಯನಿಷೇಧಿಗಳು ನಡೆಸುತ್ತಿರುವ ಕುತಂತ್ರಗಳ ಬಗ್ಗೆ ನೀವು ಸಂಕಟಕ್ಕೊಳಗಾಗದಿರಿ.
അറബി ഖുർആൻ വിവരണങ്ങൾ:
اِنَّ اللّٰهَ مَعَ الَّذِیْنَ اتَّقَوْا وَّالَّذِیْنَ هُمْ مُّحْسِنُوْنَ ۟۠
ನಿಶ್ಚಯವಾಗಿಯು ಅಲ್ಲಾಹನು ಭಯ ಭಕ್ತಿಯುಳ್ಳವರ ಮತ್ತು ಒಳಿತನ ಪಾಲಕರ ಜೊತೆಯಲ್ಲಿದ್ದಾನೆ.
അറബി ഖുർആൻ വിവരണങ്ങൾ:
 
പരിഭാഷ അദ്ധ്യായം: ന്നഹ്ൽ
സൂറത്തുകളുടെ സൂചിക പേജ് നമ്പർ
 
വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി - വിവർത്തനങ്ങളുടെ സൂചിക

വിവർത്തനം - ശൈഖ് ബഷീർ മൈസൂരി. മർകസ് റുവാദ് തർജമയുടെ മേൽനോട്ടത്തിൽ വികസിപ്പിച്ചത്.

അടക്കുക