Check out the new design

ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ * - ಅನುವಾದಗಳ ವಿಷಯಸೂಚಿ


ಅರ್ಥಗಳ ಅನುವಾದ ಅಧ್ಯಾಯ: ಅಲ್ -ಅನ್ ಫಾಲ್   ಶ್ಲೋಕ:
وَاذْكُرُوْۤا اِذْ اَنْتُمْ قَلِیْلٌ مُّسْتَضْعَفُوْنَ فِی الْاَرْضِ تَخَافُوْنَ اَنْ یَّتَخَطَّفَكُمُ النَّاسُ فَاٰوٰىكُمْ وَاَیَّدَكُمْ بِنَصْرِهٖ وَرَزَقَكُمْ مِّنَ الطَّیِّبٰتِ لَعَلَّكُمْ تَشْكُرُوْنَ ۟
ನೀವು ಭೂಮಿಯಲ್ಲಿ ಅಲ್ಪಸಂಖ್ಯಾತರು, ದುರ್ಬಲರೆಂದು ಪರಿಗಣಿಸಲಾಗು ತ್ತಿದ್ದಂತಹ ಸ್ಥಿತಿಯನ್ನು ಸ್ಮರಿಸಿರಿ. ಜನರು ನಿಮ್ಮನ್ನು ಅಪಹರಿಸಿ ಬಿಡುವರೇನೋ ಎಂಬ ಆಶಂಕೆಯಲ್ಲಿ ನೀವಿದ್ದಿರಿ. ನಂತರ ಅಲ್ಲಾಹನು ನಿಮಗೆ ನೆಲೆಯನ್ನು ಕೊಟ್ಟನು ಮತ್ತು ತನ್ನ ಸಹಾಯದಿಂದ ನಿಮಗೆ ಬೆಂಬಲ ನೀಡಿದನು ಮತ್ತು ನಿಮಗೆ ಉತ್ತಮ ವಸ್ತುಗಳನ್ನು ಕರುಣಿಸಿದನು. ಪ್ರಾಯಶಃ ನೀವು ಕೃತಜ್ಞತೆ ಸಲ್ಲಿಸಬಹುದು.
ಅರಬ್ಬಿ ವ್ಯಾಖ್ಯಾನಗಳು:
یٰۤاَیُّهَا الَّذِیْنَ اٰمَنُوْا لَا تَخُوْنُوا اللّٰهَ وَالرَّسُوْلَ وَتَخُوْنُوْۤا اَمٰنٰتِكُمْ وَاَنْتُمْ تَعْلَمُوْنَ ۟
ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನನ್ನು ಸಂದೇಶವಾಹಕರನ್ನು ವಂಚಿಸಬೇಡಿರಿ ಮತ್ತು ತಿಳಿದೂ ತಿಳಿದೂ ನಿಮ್ಮ ಅಮಾನತ್ತುಗಳಲ್ಲಿ ವಂಚನೆ ಮಾಡಬೇಡಿರಿ.
ಅರಬ್ಬಿ ವ್ಯಾಖ್ಯಾನಗಳು:
وَاعْلَمُوْۤا اَنَّمَاۤ اَمْوَالُكُمْ وَاَوْلَادُكُمْ فِتْنَةٌ ۙ— وَّاَنَّ اللّٰهَ عِنْدَهٗۤ اَجْرٌ عَظِیْمٌ ۟۠
ನಿಮ್ಮ ಸಂಪತ್ತುಗಳು ಮತ್ತು ನಿಮ್ಮ ಸಂತಾನಗಳು ಒಂದು ಪರೀಕ್ಷಾ ಸಾಧನಗಳೆಂಬುದನ್ನು ಮತ್ತು ಅಲ್ಲಾಹನ ಬಳಿ ಆಗಾಧ ಪ್ರತಿಫಲವಿದೆಯೆಂಬುದನ್ನು ಅರಿತುಕೊಳ್ಳಿರಿ.
ಅರಬ್ಬಿ ವ್ಯಾಖ್ಯಾನಗಳು:
یٰۤاَیُّهَا الَّذِیْنَ اٰمَنُوْۤا اِنْ تَتَّقُوا اللّٰهَ یَجْعَلْ لَّكُمْ فُرْقَانًا وَّیُكَفِّرْ عَنْكُمْ سَیِّاٰتِكُمْ وَیَغْفِرْ لَكُمْ ؕ— وَاللّٰهُ ذُو الْفَضْلِ الْعَظِیْمِ ۟
ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನನ್ನು ಭಯಪಡುವುದಾದರೆ ಅವನು ನಿಮಗೆ ಸತ್ಯಾಸತ್ಯತೆಯ ಮಾನದಂಡವನ್ನು ನೀಡುವನು, ನಿಮ್ಮ ಪಾಪಗಳನ್ನು ನಿಮ್ಮಿಂದ ದೂರ ಮಾಡುವನು ಮತ್ತು ನಿಮಗೆ ಕ್ಷಮೆ ನೀಡುವನು. ಅಲ್ಲಾಹನು ಮಹಾ ಔದಾರ್ಯವಂತನಾಗಿದ್ದಾನೆ.
ಅರಬ್ಬಿ ವ್ಯಾಖ್ಯಾನಗಳು:
وَاِذْ یَمْكُرُ بِكَ الَّذِیْنَ كَفَرُوْا لِیُثْبِتُوْكَ اَوْ یَقْتُلُوْكَ اَوْ یُخْرِجُوْكَ ؕ— وَیَمْكُرُوْنَ وَیَمْكُرُ اللّٰهُ ؕ— وَاللّٰهُ خَیْرُ الْمٰكِرِیْنَ ۟
ನಿಮ್ಮನ್ನು ಬಂಧಿಸಲು ಅಥವಾ ವಧಿಸಲು ಅಥವಾ ನಿಮ್ಮನ್ನು ನಾಡಿನಿಂದ ಹೊರಗಟ್ಟಲು ನಿಮ್ಮ ವಿರುದ್ಧ ಸತ್ಯನಿಷೇಧಿಗಳು ತಂತ್ರಗಳನ್ನು ಹೂಡುತ್ತಿದ್ದ ಸಂದರ್ಭವನ್ನು ಸ್ಮರಿಸಿರಿ. ಅವರು ತಮ್ಮ ತಂತ್ರವನ್ನು ಹೂಡುತ್ತಿದ್ದರು ಮತ್ತು ಅಲ್ಲಾಹನು ತನ್ನ ತಂತ್ರವನ್ನು ಹೂಡುತ್ತಿದ್ದನು. ತಂತ್ರ ಹೂಡುವವರಲ್ಲಿ ಅಲ್ಲಾಹನು ಅತ್ಯುತ್ತಮನಾಗಿದ್ದಾನೆ.
ಅರಬ್ಬಿ ವ್ಯಾಖ್ಯಾನಗಳು:
وَاِذَا تُتْلٰی عَلَیْهِمْ اٰیٰتُنَا قَالُوْا قَدْ سَمِعْنَا لَوْ نَشَآءُ لَقُلْنَا مِثْلَ هٰذَاۤ ۙ— اِنْ هٰذَاۤ اِلَّاۤ اَسَاطِیْرُ الْاَوَّلِیْنَ ۟
ಮತ್ತು ಅವರ ಮುಂದೆ ನಮ್ಮ ಸೂಕ್ತಿಗಳನ್ನು ಪಠಿಸಲಾದಾಗ ನಾವು ಆಲಿಸಿದೆವು ಮತ್ತು ನಾವು ಇಚ್ಛಿಸುವುದಾದರೆ ಇದರಂತಿರುವುದನ್ನು ರಚಿಸಿ ಹೇಳುತ್ತಿದ್ದೆವು. ಮತ್ತು ಇದು ಪೂರ್ವಿಕರಿಂದ ಬಂದ ಕಟ್ಟು ಕತೆಗಳಲ್ಲದೆ ಇನ್ನೇನೂ ಅಲ್ಲ ಎಂದು ಅವರು ಹೇಳುತ್ತಾರೆ.
ಅರಬ್ಬಿ ವ್ಯಾಖ್ಯಾನಗಳು:
وَاِذْ قَالُوا اللّٰهُمَّ اِنْ كَانَ هٰذَا هُوَ الْحَقَّ مِنْ عِنْدِكَ فَاَمْطِرْ عَلَیْنَا حِجَارَةً مِّنَ السَّمَآءِ اَوِ ائْتِنَا بِعَذَابٍ اَلِیْمٍ ۟
ಓ ಅಲ್ಲಾಹ್, ಈ ಖುರ್‌ಆನ್ ನಿಜವಾಗಿಯು ನಿನ್ನ ಬಳಿಯಿಂದಾಗಿದ್ದರೆ ನೀನು ನಮ್ಮ ಮೇಲೆ ಆಕಾಶದಿಂದ ಕಲ್ಲಿನ ಮಳೆಯನ್ನು ಸುರಿಸು ಅಥವಾ ನಮ್ಮ ಮೇಲೆ ವೇದನಾಜನಕ ಶಿಕ್ಷೆಯನ್ನು ಎರಗಿಸು ಎಂದು ಅವರು ಹೇಳಿದ ಸಂದರ್ಭ.
ಅರಬ್ಬಿ ವ್ಯಾಖ್ಯಾನಗಳು:
وَمَا كَانَ اللّٰهُ لِیُعَذِّبَهُمْ وَاَنْتَ فِیْهِمْ ؕ— وَمَا كَانَ اللّٰهُ مُعَذِّبَهُمْ وَهُمْ یَسْتَغْفِرُوْنَ ۟
ನೀವು ಅವರ ನಡುವೆಯಿರುವಾಗ, ಅಲ್ಲಾಹನು ಅವರನ್ನು ಶಿಕ್ಷಿಸುವುದಿಲ್ಲ. ಮತ್ತು ಅವರು ಪಾಪವಿಮೋಚನೆಯನ್ನು ಬೇಡುತ್ತಿರುವಾಗಲೂ ಅಲ್ಲಾಹನು ಅವರಿಗೆ ಶಿಕ್ಷಿಸುವುದಿಲ್ಲ.
ಅರಬ್ಬಿ ವ್ಯಾಖ್ಯಾನಗಳು:
 
ಅರ್ಥಗಳ ಅನುವಾದ ಅಧ್ಯಾಯ: ಅಲ್ -ಅನ್ ಫಾಲ್
ಅಧ್ಯಾಯಗಳ ವಿಷಯಸೂಚಿ ಪುಟ ಸಂಖ್ಯೆ
 
ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ - ಅನುವಾದಗಳ ವಿಷಯಸೂಚಿ

ಅನುವಾದ - ಶೇಖ್ ಬಶೀರ್ ಮೈಸೂರಿ. ರುವ್ವಾದ್ ಭಾಷಾಂತರ ಕೇಂದ್ರದ ಮೇಲ್ವಿಚಾರಣೆಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಮುಚ್ಚಿ