Check out the new design

ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ * - ಅನುವಾದಗಳ ವಿಷಯಸೂಚಿ


ಅರ್ಥಗಳ ಅನುವಾದ ಅಧ್ಯಾಯ: ಅಲ್ -ಮುದ್ದಸ್ಸಿರ್   ಶ್ಲೋಕ:
فَقُتِلَ كَیْفَ قَدَّرَ ۟ۙ
ಅವನಿಗೆ ನಾಶವಿರಲಿ, ಅವನು ಹೇಗೆ ನರ‍್ಧರಿಸಿದನು,
ಅರಬ್ಬಿ ವ್ಯಾಖ್ಯಾನಗಳು:
ثُمَّ قُتِلَ كَیْفَ قَدَّرَ ۟ۙ
ಪುನಃ ಅವನಿಗೆ ನಾಶವಿರಲಿ. ಅವನು ಹೇಗೆ ನರ‍್ಧರಿಸಿದನು,
ಅರಬ್ಬಿ ವ್ಯಾಖ್ಯಾನಗಳು:
ثُمَّ نَظَرَ ۟ۙ
ಅವನು ಪುನಃ (ತನ್ನ ಸಂಗಡಿಗರಕಡೆಗೆ) ನೋಡಿದನು.
ಅರಬ್ಬಿ ವ್ಯಾಖ್ಯಾನಗಳು:
ثُمَّ عَبَسَ وَبَسَرَ ۟ۙ
ತರುವಾಯ ಅವನು ಮುಖ ಗಂಟಿಕ್ಕಿಕೊಂಡನು ಮತ್ತು ಮುಖವನ್ನು ಸಿಂಡರಿಸಿಕೊಂಡನು.
ಅರಬ್ಬಿ ವ್ಯಾಖ್ಯಾನಗಳು:
ثُمَّ اَدْبَرَ وَاسْتَكْبَرَ ۟ۙ
ಬಳಿಕ ಅವನು ಹಿಂದೆ ಸರಿದನು ಮತ್ತು ಅಹಂಕಾರ ತೋರಿದನು.
ಅರಬ್ಬಿ ವ್ಯಾಖ್ಯಾನಗಳು:
فَقَالَ اِنْ هٰذَاۤ اِلَّا سِحْرٌ یُّؤْثَرُ ۟ۙ
ಮತ್ತು ಹೇಳಿದನು; ಇದಂತು ಹಿಂದಿನಿಂದ ನಡೆದು ಬರುತ್ತಿರುವ ಜಾದೂ ಅಲ್ಲದೇ ಇನ್ನೇನೂ ಅಲ್ಲ.
ಅರಬ್ಬಿ ವ್ಯಾಖ್ಯಾನಗಳು:
اِنْ هٰذَاۤ اِلَّا قَوْلُ الْبَشَرِ ۟ؕ
ಇದು (ಕುರ್ಆನ್) ಮನುಷ್ಯನ ಮಾತಲ್ಲದೆ ಇನ್ನೇನೂ ಅಲ್ಲ.
ಅರಬ್ಬಿ ವ್ಯಾಖ್ಯಾನಗಳು:
سَاُصْلِیْهِ سَقَرَ ۟
ಸಧ್ಯವೇ ನಾನು ಅವನನ್ನು ನರಕಾಗ್ನಿಗೆ ಹಾಕುವೆನು.
ಅರಬ್ಬಿ ವ್ಯಾಖ್ಯಾನಗಳು:
وَمَاۤ اَدْرٰىكَ مَا سَقَرُ ۟ؕ
ನರಕಾಗ್ನಿ ಏನೆಂದು ನಿಮಗೇನು ಗೊತ್ತು ?
ಅರಬ್ಬಿ ವ್ಯಾಖ್ಯಾನಗಳು:
لَا تُبْقِیْ وَلَا تَذَرُ ۟ۚ
ಅದು ಬಾಕಿ ಉಳಿಸುವುದೂ ಇಲ್ಲ ಬಿಡುವುದೂ ಇಲ್ಲ.
ಅರಬ್ಬಿ ವ್ಯಾಖ್ಯಾನಗಳು:
لَوَّاحَةٌ لِّلْبَشَرِ ۟ۚ
ಅದು ರ‍್ಮವನ್ನು ಸುಟ್ಟು ಹಾಕುವಂತದ್ದಾಗಿದೆ.
ಅರಬ್ಬಿ ವ್ಯಾಖ್ಯಾನಗಳು:
عَلَیْهَا تِسْعَةَ عَشَرَ ۟ؕ
ಅದರಲ್ಲಿ ಹತ್ತೊಂಬತ್ತು ಮಲಕ್ಗಳು ನಿಯೋಗಿಸಲ್ಪಟ್ಟಿದ್ದಾರೆ.
ಅರಬ್ಬಿ ವ್ಯಾಖ್ಯಾನಗಳು:
وَمَا جَعَلْنَاۤ اَصْحٰبَ النَّارِ اِلَّا مَلٰٓىِٕكَةً ۪— وَّمَا جَعَلْنَا عِدَّتَهُمْ اِلَّا فِتْنَةً لِّلَّذِیْنَ كَفَرُوْا ۙ— لِیَسْتَیْقِنَ الَّذِیْنَ اُوْتُوا الْكِتٰبَ وَیَزْدَادَ الَّذِیْنَ اٰمَنُوْۤا اِیْمَانًا وَّلَا یَرْتَابَ الَّذِیْنَ اُوْتُوا الْكِتٰبَ وَالْمُؤْمِنُوْنَ ۙ— وَلِیَقُوْلَ الَّذِیْنَ فِیْ قُلُوْبِهِمْ مَّرَضٌ وَّالْكٰفِرُوْنَ مَاذَاۤ اَرَادَ اللّٰهُ بِهٰذَا مَثَلًا ؕ— كَذٰلِكَ یُضِلُّ اللّٰهُ مَنْ یَّشَآءُ وَیَهْدِیْ مَنْ یَّشَآءُ ؕ— وَمَا یَعْلَمُ جُنُوْدَ رَبِّكَ اِلَّا هُوَ ؕ— وَمَا هِیَ اِلَّا ذِكْرٰی لِلْبَشَرِ ۟۠
ನರಕದ ಕಾವಲುಗಾರರನ್ನಾಗಿ ನಾವು ಕೇವಲ ಮಲಕ್ಗಳನ್ನು ನಿಯೋಗಿಸುತ್ತೇವೆ ಮತ್ತು ಅವರ ಸಂಖ್ಯೆಯನ್ನು ಸತ್ಯನಿಷೇಧಿಗಳ ಪಾಲಿಗೆ ಪರೀಕ್ಷಾ ಸಾಧನವನ್ನಾಗಿ ನಿಶ್ಚಯಿಸಿದ್ದೇವೆ, ಇದು ಗ್ರಂಥ ನೀಡಲಾದವರು ನಂಬಲೆಂದೂ (ಅವರ ಗ್ರಂಥದಲ್ಲೂ ಇದೇ ಸಂಖ್ಯೆ ಇದೆ) ಸತ್ಯವಿಶ್ವಾಸಿಗಳ ವಿಶ್ವಾಸವು ವೃದ್ಧಿಸಲೆಂದೂ, ಗ್ರಂಥ ನೀಡಲಾದವರು ಮತ್ತು ಸತ್ಯವಿಶ್ವಾಸಿಗಳು ಕುರ್ಆನಿನಲ್ಲಿ ಸಂದೇಹ ಪಡದಿರಲೆಂದು ಮತ್ತು ಹೃದಯದಲ್ಲಿ (ಕಾಪಟ್ಯದ) ರೋಗವಿದ್ದವರು ಮತ್ತು ಸತ್ಯನಿಷೇಧಿಗಳು “ಈ ಮಾತಿನ ಮೂಲಕ ಅಲ್ಲಾಹನ ಉದ್ದೇಶವೇನು?” ಎಂದು ಹೇಳಲೆಂದಾಗಿದೆ, ಇದೇ ಪ್ರಕಾರ ಅಲ್ಲಾಹನು (ಒಂದೇ ಮಾತಿನಿಂದ) ತಾನಿಚ್ಛಿಸುವವರನ್ನು ದಾರಿಗೆಡಿಸುತ್ತಾನೆ ಮತ್ತು ತಾನಿಚ್ಛಿಸುವವರನ್ನು ಸನ್ಮರ‍್ಗದಲ್ಲಿ ಮುನ್ನಡೆಸುತ್ತಾನೆ. ನಿನ್ನ ಪ್ರಭುವಿನ ಸೈನ್ಯಗಳನ್ನು ಅವನ ಹೊರತು ಇನ್ನಾರೂ ಅರಿಯಲಾರರು, ಇದು ಸಕಲ ಮಾನವರಿಗೆ ಸ್ಪಷ್ಟ ಉಪದೇಶವಲ್ಲದೇ ಇನ್ನೇನೂ ಅಲ್ಲ.
ಅರಬ್ಬಿ ವ್ಯಾಖ್ಯಾನಗಳು:
كَلَّا وَالْقَمَرِ ۟ۙ
ಅನುಮಾನವೇ ಇಲ್ಲ, ಚಂದ್ರನ ಮೇಲಾಣೆ.
ಅರಬ್ಬಿ ವ್ಯಾಖ್ಯಾನಗಳು:
وَالَّیْلِ اِذْ اَدْبَرَ ۟ۙ
ರಾತ್ರಿಯು ಮರಳುವಾಗಿನ ಆಣೆ.
ಅರಬ್ಬಿ ವ್ಯಾಖ್ಯಾನಗಳು:
وَالصُّبْحِ اِذَاۤ اَسْفَرَ ۟ۙ
ಪ್ರಭಾತದಾಣೆ, ಅದು ಪ್ರಕಾಶಮಾನವಾಗುವಾಗ
ಅರಬ್ಬಿ ವ್ಯಾಖ್ಯಾನಗಳು:
اِنَّهَا لَاِحْدَی الْكُبَرِ ۟ۙ
ಖಂಡಿತವಾಗಿಯೂ (ಆ ನರಕಾಗ್ನಿ) ಮಹಾ ವಿಷಯಗಳಲ್ಲೊಂದಾಗಿದೆ,
ಅರಬ್ಬಿ ವ್ಯಾಖ್ಯಾನಗಳು:
نَذِیْرًا لِّلْبَشَرِ ۟ۙ
ಮಾನವರಿಗೆ ಎಚ್ಚರಿಕೆ ನೀಡುವಂತಹದು.
ಅರಬ್ಬಿ ವ್ಯಾಖ್ಯಾನಗಳು:
لِمَنْ شَآءَ مِنْكُمْ اَنْ یَّتَقَدَّمَ اَوْ یَتَاَخَّرَ ۟ؕ
ನಿಮ್ಮ ಪೈಕಿ (ಸನ್ಮರ‍್ಗದಲ್ಲಿ) ಮುಂದೆ ಸಾಗಲು ಅಥವ ಹಿಂದೆ ಸರಿಯಲು ಇಚ್ಛಿಸುವವರಿಗೆ.
ಅರಬ್ಬಿ ವ್ಯಾಖ್ಯಾನಗಳು:
كُلُّ نَفْسٍ بِمَا كَسَبَتْ رَهِیْنَةٌ ۟ۙ
ಪ್ರತಿಯೊಬ್ಬ ವ್ಯಕ್ತಿಯೂ ತನ್ನ ರ‍್ಮಗಳ ಬದಲಿಗೆ ಅಡವಿಸಲ್ಪಟ್ಟಿದ್ದಾನೆ.
ಅರಬ್ಬಿ ವ್ಯಾಖ್ಯಾನಗಳು:
اِلَّاۤ اَصْحٰبَ الْیَمِیْنِ ۟ؕۛ
ಆದರೆ ಬಲಗಡೆಯವರ ಹೊರತು
ಅರಬ್ಬಿ ವ್ಯಾಖ್ಯಾನಗಳು:
فِیْ جَنّٰتٍ ۛ۫— یَتَسَآءَلُوْنَ ۟ۙ
ಅವರು ಸ್ರ‍್ಗೋದ್ಯಾನಗಳಲ್ಲಿ ಪರಸ್ಪರ ಪ್ರಶ್ನಿಸುವರು.
ಅರಬ್ಬಿ ವ್ಯಾಖ್ಯಾನಗಳು:
عَنِ الْمُجْرِمِیْنَ ۟ۙ
ಅಪರಾಧಿಗಳ ಕುರಿತು
ಅರಬ್ಬಿ ವ್ಯಾಖ್ಯಾನಗಳು:
مَا سَلَكَكُمْ فِیْ سَقَرَ ۟
ನಿಮ್ಮನ್ನು ನರಕಕ್ಕೆ ಒಯ್ದುದ್ದು ಯಾವುದು ?
ಅರಬ್ಬಿ ವ್ಯಾಖ್ಯಾನಗಳು:
قَالُوْا لَمْ نَكُ مِنَ الْمُصَلِّیْنَ ۟ۙ
ಅವರು ಉತ್ತರಿಸುವರು; ನಾವು ನಮಾಜ್ ಮಾಡುವವರಲ್ಲಾಗಿರಲಿಲ್ಲ.
ಅರಬ್ಬಿ ವ್ಯಾಖ್ಯಾನಗಳು:
وَلَمْ نَكُ نُطْعِمُ الْمِسْكِیْنَ ۟ۙ
ಮತ್ತು ನಾವು ನರ‍್ಗತಿಕರಿಗೆ ಉಣಿಸುತ್ತಿರಲಿಲ್ಲ.
ಅರಬ್ಬಿ ವ್ಯಾಖ್ಯಾನಗಳು:
وَكُنَّا نَخُوْضُ مَعَ الْخَآىِٕضِیْنَ ۟ۙ
ನಾವು ಸತ್ಯದ ವಿರುದ್ಧ ರ‍್ಕಿಸುವವರ ಜೊತೆ ಸೇರಿರ‍್ಕದಲ್ಲಿ ತಲ್ಲೀನರಾಗಿರುತ್ತಿದ್ದೆವು.
ಅರಬ್ಬಿ ವ್ಯಾಖ್ಯಾನಗಳು:
وَكُنَّا نُكَذِّبُ بِیَوْمِ الدِّیْنِ ۟ۙ
ಹಾಗು ನಾವು ಪ್ರತಿಫಲ ದಿನವನ್ನು ನಿಷೇಧಿಸುತ್ತಿದ್ದೆವು.
ಅರಬ್ಬಿ ವ್ಯಾಖ್ಯಾನಗಳು:
حَتّٰۤی اَتٰىنَا الْیَقِیْنُ ۟ؕ
ಕೊನೆಗೆ ಖಚಿತವಾದುದು(ಮರಣವು) ನಮಗೆ ಬಂದುಬಿಟ್ಟಿತು.
ಅರಬ್ಬಿ ವ್ಯಾಖ್ಯಾನಗಳು:
 
ಅರ್ಥಗಳ ಅನುವಾದ ಅಧ್ಯಾಯ: ಅಲ್ -ಮುದ್ದಸ್ಸಿರ್
ಅಧ್ಯಾಯಗಳ ವಿಷಯಸೂಚಿ ಪುಟ ಸಂಖ್ಯೆ
 
ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ - ಅನುವಾದಗಳ ವಿಷಯಸೂಚಿ

ಅನುವಾದ - ಶೇಖ್ ಬಶೀರ್ ಮೈಸೂರಿ. ರುವ್ವಾದ್ ಭಾಷಾಂತರ ಕೇಂದ್ರದ ಮೇಲ್ವಿಚಾರಣೆಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಮುಚ್ಚಿ