Check out the new design

ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ * - ಅನುವಾದಗಳ ವಿಷಯಸೂಚಿ


ಅರ್ಥಗಳ ಅನುವಾದ ಅಧ್ಯಾಯ: ಅಲ್- ಅಅ್ ರಾಫ್   ಶ್ಲೋಕ:
قَالَ یٰمُوْسٰۤی اِنِّی اصْطَفَیْتُكَ عَلَی النَّاسِ بِرِسٰلٰتِیْ وَبِكَلَامِیْ ۖؗ— فَخُذْ مَاۤ اٰتَیْتُكَ وَكُنْ مِّنَ الشّٰكِرِیْنَ ۟
ಹೇಳಲಾಯಿತು: ಓ ಮೂಸಾ, ನಾನು ನನ್ನ ಪೈಗಂಬರರ ಮತ್ತು ನನ್ನೊಡನೆಯ ಸಂಭಾಷಣೆಯಿAದ ಇತರ ಜನರ ಪೈಕಿ ನಿಮ್ಮನ್ನು ಆರಿಸಿರುವೆನು. ಆದ್ದರಿಂದ ನಾನು ನಿಮಗೆ ನೀಡಿರುವುದನ್ನು ಸ್ವೀಕರಿಸಿರಿ ಮತ್ತು ಕೃತಜ್ಞತೆ ತೋರಿಸಿರಿ.
ಅರಬ್ಬಿ ವ್ಯಾಖ್ಯಾನಗಳು:
وَكَتَبْنَا لَهٗ فِی الْاَلْوَاحِ مِنْ كُلِّ شَیْءٍ مَّوْعِظَةً وَّتَفْصِیْلًا لِّكُلِّ شَیْءٍ ۚ— فَخُذْهَا بِقُوَّةٍ وَّاْمُرْ قَوْمَكَ یَاْخُذُوْا بِاَحْسَنِهَا ؕ— سَاُورِیْكُمْ دَارَ الْفٰسِقِیْنَ ۟
ಮತ್ತು ನಾವು ಸರ್ವ ವಿಧದ ಉಪದೇಶ ಹಾಗೂ ಸಕಲ ವಿಷಯಗಳ ವಿವರಣೆಯನ್ನು ಅವರಿಗೆ ಫಲಕಗಳ ಮೇಲೆ ಬರೆದು ಕೊಟ್ಟೆವು. ನೀವು ಇದನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ ಮತ್ತು ಅದರಲ್ಲಿರುವ ಉತ್ತಮ ಕಾರ್ಯಗಳನ್ನು ಅನುಸರಿಸಲು ನಿಮ್ಮ ಜನರಿಗೆ ಆದೇಶಿಸಿರಿ. ಇನ್ನು ಶೀಘ್ರವೇ ಧಿಕ್ಕಾರಿಗಳ ವಾಸಸ್ಥಳವನ್ನು ನಾನು ನಿಮಗೆ ತೋರಿಸಿಕೊಡಲಿರುವೆನು.
ಅರಬ್ಬಿ ವ್ಯಾಖ್ಯಾನಗಳು:
سَاَصْرِفُ عَنْ اٰیٰتِیَ الَّذِیْنَ یَتَكَبَّرُوْنَ فِی الْاَرْضِ بِغَیْرِ الْحَقِّ ؕ— وَاِنْ یَّرَوْا كُلَّ اٰیَةٍ لَّا یُؤْمِنُوْا بِهَا ۚ— وَاِنْ یَّرَوْا سَبِیْلَ الرُّشْدِ لَا یَتَّخِذُوْهُ سَبِیْلًا ۚ— وَاِنْ یَّرَوْا سَبِیْلَ الْغَیِّ یَتَّخِذُوْهُ سَبِیْلًا ؕ— ذٰلِكَ بِاَنَّهُمْ كَذَّبُوْا بِاٰیٰتِنَا وَكَانُوْا عَنْهَا غٰفِلِیْنَ ۟
ಇಹಲೋಕದಲ್ಲಿ ಅನ್ಯಾಯವಾಗಿ ಅಹಂಕಾರ ತೋರುವವರನ್ನು ನಾನು ನನ್ನ ಆದೇಶಗಳಿಂದ ದೂರಸರಿಸಿರುವೆನು ಮತ್ತು ಅವರು ಸಕಲ ದೃಷ್ಟಾಂತವನ್ನು ಕಂಡರೂ ಅದರಲ್ಲಿ ವಿಶ್ವಾಸವಿಡಲಾರರು ಮತ್ತು ಸನ್ಮಾರ್ಗವನ್ನು ಕಂಡರೆ ಅದನ್ನು ತಮ್ಮ ಮಾರ್ಗವನ್ನಾಗಿ ಸ್ವೀಕರಿಸುವುದಿಲ್ಲ ಮತ್ತು ದುರ್ಮಾರ್ಗವನ್ನು ಕಂಡರೆ ಅದನ್ನು ತಮ್ಮ ಮಾರ್ಗವನ್ನಾಗಿ ಸ್ವೀಕರಿಸುತ್ತಾರೆ. ಇದು ಅವರು ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದುದರ ಮತ್ತು ಅವುಗಳ ಕುರಿತು ನಿರಾಕರಿಸಿದ್ದುದರ ಫಲವಾಗಿದೆ.
ಅರಬ್ಬಿ ವ್ಯಾಖ್ಯಾನಗಳು:
وَالَّذِیْنَ كَذَّبُوْا بِاٰیٰتِنَا وَلِقَآءِ الْاٰخِرَةِ حَبِطَتْ اَعْمَالُهُمْ ؕ— هَلْ یُجْزَوْنَ اِلَّا مَا كَانُوْا یَعْمَلُوْنَ ۟۠
ಮತ್ತು ಯಾರು ನಮ್ಮ ದೃಷ್ಟಾಂತಗಳನ್ನು ಮತ್ತು ಪರಲೋಕದ ಭೇಟಿಯನ್ನು ನಿರಾಕರಿಸಿದರೋ ಅವರ ಸಕಲ ಕರ್ಮಗಳು ನಿಷ್ಫಲವಾಗಿ ಬಿಟ್ಟವು. ಅವರಿಗೆ ಅವರು ಮಾಡಿಕೊಳ್ಳುತ್ತಿದ್ದುದನ್ನೇ ಶಿಕ್ಷೆಯಾಗಿ ನೀಡಲಾಗುವುದು.
ಅರಬ್ಬಿ ವ್ಯಾಖ್ಯಾನಗಳು:
وَاتَّخَذَ قَوْمُ مُوْسٰی مِنْ بَعْدِهٖ مِنْ حُلِیِّهِمْ عِجْلًا جَسَدًا لَّهٗ خُوَارٌ ؕ— اَلَمْ یَرَوْا اَنَّهٗ لَا یُكَلِّمُهُمْ وَلَا یَهْدِیْهِمْ سَبِیْلًا ۘ— اِتَّخَذُوْهُ وَكَانُوْا ظٰلِمِیْنَ ۟
ಮೂಸಾರವರು ತೂರ್ ಯಾತ್ರೆ ಹೋದ ಬಳಿಕ ಅವರ ಜನತೆಯು ತಮ್ಮ ಆಭರಣಗಳಿಂದ ಒಂದು ಕರುವಿನ ಪ್ರತಿಮೆಯನ್ನು ಆರಾಧ್ಯವನ್ನಾಗಿ ಮಾಡಿಕೊಂಡರು. ಅದು ಶಬ್ದ ಹೊರಡಿಸುವ ಒಂದು ಅಸ್ಥಿ ಪಂಜರ, ಅದು ಅವರೊಂದಿಗೆ ಮಾತನಾಡುವುದಿಲ್ಲವೆಂದು ಮತ್ತು ಮಾರ್ಗದರ್ಶನ ಮಾಡುವುದಿಲ್ಲವೆಂದೂ ಅವರು ಕಂಡಿಲ್ಲವೇ? ಆದರೂ ಅವರು ಅದನ್ನು ಆರಾಧ್ಯನನ್ನಾಗಿ ಮಾಡಿಕೊಂಡರು ಮತ್ತು ಅಕ್ರಮಿಗಳಾಗಿ ಬಿಟ್ಟರು.
ಅರಬ್ಬಿ ವ್ಯಾಖ್ಯಾನಗಳು:
وَلَمَّا سُقِطَ فِیْۤ اَیْدِیْهِمْ وَرَاَوْا اَنَّهُمْ قَدْ ضَلُّوْا ۙ— قَالُوْا لَىِٕنْ لَّمْ یَرْحَمْنَا رَبُّنَا وَیَغْفِرْ لَنَا لَنَكُوْنَنَّ مِنَ الْخٰسِرِیْنَ ۟
ಮತ್ತು ಅವರು (ಕರುವನ್ನು ಆರಾಧಿಸುವವರು) ಪಶ್ಚಾತ್ತಾಪ ಪಡುವವರಾದಾಗ ಮತ್ತು ತಾವು ನಿಜವಾಗಿಯು ಪಥಭ್ರಷ್ಟರಾಗಿದ್ದೇವೆಂದು ಅವರು ಮನಗಂಡಾಗ ಹೇಳಿದರು: ನಮ್ಮ ಪ್ರಭೂ, ನಮ್ಮ ಮೇಲೆ ಕರುಣೆ ತೋರದಿದ್ದರೆ ಮತ್ತು ನಮ್ಮ ಪಾಪವನ್ನು ಕ್ಷಮಿಸದಿದ್ದರೆ ಖಂಡಿತ ನಾವು ನಷ್ಟ ಹೊಂದುವವರಲ್ಲಾಗುವೆವು.
ಅರಬ್ಬಿ ವ್ಯಾಖ್ಯಾನಗಳು:
 
ಅರ್ಥಗಳ ಅನುವಾದ ಅಧ್ಯಾಯ: ಅಲ್- ಅಅ್ ರಾಫ್
ಅಧ್ಯಾಯಗಳ ವಿಷಯಸೂಚಿ ಪುಟ ಸಂಖ್ಯೆ
 
ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ - ಅನುವಾದಗಳ ವಿಷಯಸೂಚಿ

ಅನುವಾದ - ಶೇಖ್ ಬಶೀರ್ ಮೈಸೂರಿ. ರುವ್ವಾದ್ ಭಾಷಾಂತರ ಕೇಂದ್ರದ ಮೇಲ್ವಿಚಾರಣೆಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಮುಚ್ಚಿ