Check out the new design

ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ * - ಅನುವಾದಗಳ ವಿಷಯಸೂಚಿ


ಅರ್ಥಗಳ ಅನುವಾದ ಅಧ್ಯಾಯ: ಅಸ್ಸಾಫ್ಫಾತ್   ಶ್ಲೋಕ:
وَجَعَلْنَا ذُرِّیَّتَهٗ هُمُ الْبٰقِیْنَ ۟ؗۖ
ಮತ್ತು ನಾವು ಅವರ ಸಂತತಿಗಳನ್ನು ಉಳಿಸಿದೆವು.
ಅರಬ್ಬಿ ವ್ಯಾಖ್ಯಾನಗಳು:
وَتَرَكْنَا عَلَیْهِ فِی الْاٰخِرِیْنَ ۟ؗۖ
ಮತ್ತು ನಾವು ಅವರ( ಸತ್ಕೀರ್ತಿಯನ್ನು) ನಂತರದ ತಲೆಮಾರುಗಳಲ್ಲಿ ಉಳಿಸಿದೆವು.
ಅರಬ್ಬಿ ವ್ಯಾಖ್ಯಾನಗಳು:
سَلٰمٌ عَلٰی نُوْحٍ فِی الْعٰلَمِیْنَ ۟
ಸರ್ವಲೋಕದಲ್ಲಿ ನೂಹರಿಗೆ ಸಲಾಮ್ (ಶಾಂತಿ) ಇರಲಿ.
ಅರಬ್ಬಿ ವ್ಯಾಖ್ಯಾನಗಳು:
اِنَّا كَذٰلِكَ نَجْزِی الْمُحْسِنِیْنَ ۟
ನಿಶ್ಚಯವಾಗಿಯೂ ನಾವು ಪುಣ್ಯ ಕಾರ್ಯವೆಸಗುವವರಿಗೆ ಇದೇ ಪ್ರಕಾರ ಪ್ರತಿಫಲ ನೀಡುತ್ತೇವೆ.
ಅರಬ್ಬಿ ವ್ಯಾಖ್ಯಾನಗಳು:
اِنَّهٗ مِنْ عِبَادِنَا الْمُؤْمِنِیْنَ ۟
ನಿಶ್ಚಯವಾಗಿಯೂ ಅವರು ನಮ್ಮ ಸತ್ಯವಿಶ್ವಾಸಿಗಳಾದ ದಾಸರಲ್ಲಾಗಿದ್ದರು.
ಅರಬ್ಬಿ ವ್ಯಾಖ್ಯಾನಗಳು:
ثُمَّ اَغْرَقْنَا الْاٰخَرِیْنَ ۟
ಅನಂತರ ನಾವು ಇತರ ಸತ್ಯನಿಷೆಧಿಗಳನ್ನು ಮುಳುಗಿಸಿಬಿಟ್ಟೆವು.
ಅರಬ್ಬಿ ವ್ಯಾಖ್ಯಾನಗಳು:
وَاِنَّ مِنْ شِیْعَتِهٖ لَاِبْرٰهِیْمَ ۟ۘ
ಮತ್ತು ಇಬ್ರಾಹೀಮ್‌ರವರು ನೂಹರ ಸಮುದಾಯದವರಾಗಿದ್ದರು.
ಅರಬ್ಬಿ ವ್ಯಾಖ್ಯಾನಗಳು:
اِذْ جَآءَ رَبَّهٗ بِقَلْبٍ سَلِیْمٍ ۟
ಅವರು ತನ್ನ ಪ್ರಭುವಿನೆಡೆಗೆ ನಿರ್ಮಲ ಮನಸ್ಸಿನೊಂದಿಗೆ ಬಂದ ಸಂದರ್ಭ.
ಅರಬ್ಬಿ ವ್ಯಾಖ್ಯಾನಗಳು:
اِذْ قَالَ لِاَبِیْهِ وَقَوْمِهٖ مَاذَا تَعْبُدُوْنَ ۟ۚ
ಅವರು ತನ್ನ ತಂದೆಗೂ, ತನ್ನಜನತೆಗೂ ನೀವು ಏನನ್ನೂ ಆರಾಧಿಸುತ್ತಿರುವಿರಿ? ಎಂದು ಕೇಳಿದ ಸಂದರ್ಭ.
ಅರಬ್ಬಿ ವ್ಯಾಖ್ಯಾನಗಳು:
اَىِٕفْكًا اٰلِهَةً دُوْنَ اللّٰهِ تُرِیْدُوْنَ ۟ؕ
ನೀವು ಅಲ್ಲಾಹನ ಹೊರತು ಮಿಥ್ಯ ದೇವರುಗಳನ್ನು ಬಯಸುತ್ತೀರಾ?
ಅರಬ್ಬಿ ವ್ಯಾಖ್ಯಾನಗಳು:
فَمَا ظَنُّكُمْ بِرَبِّ الْعٰلَمِیْنَ ۟
ಹಾಗೆಯೇ ಸರ್ವಲೋಕಗಳ ಪ್ರಭುವಿನ ಕುರಿತು ನಿಮ್ಮ ಅಭಿಪ್ರಾಯವೇನು?
ಅರಬ್ಬಿ ವ್ಯಾಖ್ಯಾನಗಳು:
فَنَظَرَ نَظْرَةً فِی النُّجُوْمِ ۟ۙ
ಅನಂತರ ಅವರು ಒಮ್ಮೆ ನಕ್ಷತ್ರಗಳೆಡೆಗೆ ದೃಷ್ಟಿ ಹಾಯಿಸಿದರು.
ಅರಬ್ಬಿ ವ್ಯಾಖ್ಯಾನಗಳು:
فَقَالَ اِنِّیْ سَقِیْمٌ ۟
ಮತ್ತು ಹೇಳಿದರು: ನಿಜವಾಗಿಯೂ ನಾನು ರೋಗಗ್ರಸ್ಥನಾಗಿದ್ದೇನೆ.
ಅರಬ್ಬಿ ವ್ಯಾಖ್ಯಾನಗಳು:
فَتَوَلَّوْا عَنْهُ مُدْبِرِیْنَ ۟
ಆದುದರಿಂದ ಅವರು ಅವರನ್ನು ಬಿಟ್ಟು ಹೋದರು.
ಅರಬ್ಬಿ ವ್ಯಾಖ್ಯಾನಗಳು:
فَرَاغَ اِلٰۤی اٰلِهَتِهِمْ فَقَالَ اَلَا تَاْكُلُوْنَ ۟ۚ
ಅವರು (ಮೆಲ್ಲನೆ) ಅವರ ಆರಾಧ್ಯ ದೇವರುಗಳೆಡೆಗೆ ಹೋದರು ಮತ್ತು ಹೇಳತೊಡಗಿದರು: ನೀವು ತಿನ್ನುವುದಿಲ್ಲವೇಕೆ?
ಅರಬ್ಬಿ ವ್ಯಾಖ್ಯಾನಗಳು:
مَا لَكُمْ لَا تَنْطِقُوْنَ ۟
ನಿಮಗೇನಾಗಿದೆ: ನೀವು ಮಾತನಾಡುವುದಿಲ್ಲವಲ್ಲ?
ಅರಬ್ಬಿ ವ್ಯಾಖ್ಯಾನಗಳು:
فَرَاغَ عَلَیْهِمْ ضَرْبًا بِالْیَمِیْنِ ۟
ನಂತರ ಅವರು ಹಠಾತ್ತಾಗಿ ತಮ್ಮ ಬಲಗÉÊಯಿಂದ ಅವುಗಳನ್ನು ಹೊಡೆಯತೊಡಗಿದರು.
ಅರಬ್ಬಿ ವ್ಯಾಖ್ಯಾನಗಳು:
فَاَقْبَلُوْۤا اِلَیْهِ یَزِفُّوْنَ ۟
ಆಗ ಜನರು ಅವರೆಡೆಗೆ ಧಾವಿಸಿ ಬಂದರು.
ಅರಬ್ಬಿ ವ್ಯಾಖ್ಯಾನಗಳು:
قَالَ اَتَعْبُدُوْنَ مَا تَنْحِتُوْنَ ۟ۙ
ಇಬ್ರಾಹೀಮರು ಹೇಳಿದರು: (ಸ್ವತಃ) ನೀವೇ ಕೆತ್ತಿ ನಿರ್ಮಿಸುತ್ತಿರುವ ವಸ್ತುಗಳನ್ನು ನೀವು ಆರಾಧಿಸುತ್ತಿರುವಿರಾ?
ಅರಬ್ಬಿ ವ್ಯಾಖ್ಯಾನಗಳು:
وَاللّٰهُ خَلَقَكُمْ وَمَا تَعْمَلُوْنَ ۟
ವಸ್ತುತಃ ನಿಮ್ಮನ್ನು ಮತ್ತು ನೀವು ನಿರ್ಮಿಸುತ್ತಿರುವ ವಸ್ತುಗಳನ್ನು ಅಲ್ಲಾಹನು ಸೃಷ್ಟಿಸಿದ್ದಾನೆ.
ಅರಬ್ಬಿ ವ್ಯಾಖ್ಯಾನಗಳು:
قَالُوا ابْنُوْا لَهٗ بُنْیَانًا فَاَلْقُوْهُ فِی الْجَحِیْمِ ۟
ಅವರು ಹೇಳತೊಡಗಿದರು: ನೀವು ಇವನಿಗಾಗಿ ಅಗ್ನಿಕುಂಡವನ್ನು ನಿರ್ಮಿಸಿರಿ. ಅನಂತರ ಇವನನ್ನು ಧಗಧಗಿಸುವ ಬೆಂಕಿಯಲ್ಲಿ ಎಸೆದುಬಿಡಿರಿ.
ಅರಬ್ಬಿ ವ್ಯಾಖ್ಯಾನಗಳು:
فَاَرَادُوْا بِهٖ كَیْدًا فَجَعَلْنٰهُمُ الْاَسْفَلِیْنَ ۟
ಅವರು ಇಬ್ರಾಹೀಮರೊಂದಿಗೆ ತಂತ್ರವೆಸಗಲು ಬಯಸಿದ್ದರು. ಆದರೆ ನಾವು ಅವರನ್ನೇ ಕೀಳಾಗಿ ಮಾಡಿಬಿಟ್ಟೆವು.
ಅರಬ್ಬಿ ವ್ಯಾಖ್ಯಾನಗಳು:
وَقَالَ اِنِّیْ ذَاهِبٌ اِلٰی رَبِّیْ سَیَهْدِیْنِ ۟
ಮತ್ತÄ ಇಬ್ರಾಹೀಮ್ ಹೇಳಿದರು: ನಾನಂತು ನನ್ನ ಪ್ರಭುವಿನೆಡೆಗೆ ಹೋಗುವೆನು. ಖಂಡಿತ ಅವನು ನನಗೆ ಮಾರ್ಗದರ್ಶನ ಮಾಡಲಿರುವನು.
ಅರಬ್ಬಿ ವ್ಯಾಖ್ಯಾನಗಳು:
رَبِّ هَبْ لِیْ مِنَ الصّٰلِحِیْنَ ۟
ಓ ನನ್ನ ಪ್ರಭುವೇ, ನನಗೆ ನೀನು ಸಜ್ಜನರಲ್ಲಾದ ಸಂತತಿಗಳನ್ನು ಕರುಣಿಸು.
ಅರಬ್ಬಿ ವ್ಯಾಖ್ಯಾನಗಳು:
فَبَشَّرْنٰهُ بِغُلٰمٍ حَلِیْمٍ ۟
ಆಗ ನಾವು ಅವರಿಗೆ ಒಬ್ಬ ಸಹನಾಶೀಲ ಪುತ್ರನ ಶುಭ ವಾರ್ತೆಯನ್ನು ನೀಡಿದೆವು.
ಅರಬ್ಬಿ ವ್ಯಾಖ್ಯಾನಗಳು:
فَلَمَّا بَلَغَ مَعَهُ السَّعْیَ قَالَ یٰبُنَیَّ اِنِّیْۤ اَرٰی فِی الْمَنَامِ اَنِّیْۤ اَذْبَحُكَ فَانْظُرْ مَاذَا تَرٰی ؕ— قَالَ یٰۤاَبَتِ افْعَلْ مَا تُؤْمَرُ ؗ— سَتَجِدُنِیْۤ اِنْ شَآءَ اللّٰهُ مِنَ الصّٰبِرِیْنَ ۟
ಅನಂತರ ಅವರ ಪುತ್ರನು ಅವರ ಜೊತೆಯಲ್ಲಿ ನಡೆದಾಡುವ ಪ್ರಾಯಕ್ಕೆ ತಲುಪಿದಾಗ ಇಬ್ರಾಹೀಮರು ಹೇಳಿದರು: ಓ ನನ್ನ ಪ್ರಿಯ ಮಗನೇ, ನಾನು ಕನಸಿನಲ್ಲಿ ನಿನ್ನನ್ನು ಕೊಯ್ಯುತ್ತಿರುವುದಾಗಿ ಕಂಡಿರುವೆನು. ನಿನ್ನ ಅಭಿಪ್ರಾಯವೇನೆಂದು ಹೇಳು ಮಗನು ಉತ್ತರಿಸಿದನು. ಓ ನನ್ನ ಪ್ರಿಯತಂದೆಯೇ, ನಿಮಗೆ ಆಜ್ಞೆ ನೀಡಲಾಗಿರುವುದನ್ನು ಕಾರ್ಯರೂಪಕ್ಕೆ ತನ್ನಿರಿ. ಅಲ್ಲಾಹನ ಇಚ್ಛೆಯಿದ್ದರೆ ನೀವು ನನ್ನನ್ನು ಸಹನಾಶೀಲರಲ್ಲಿ ಕಾಣಲಿರುವಿರಿ.
ಅರಬ್ಬಿ ವ್ಯಾಖ್ಯಾನಗಳು:
 
ಅರ್ಥಗಳ ಅನುವಾದ ಅಧ್ಯಾಯ: ಅಸ್ಸಾಫ್ಫಾತ್
ಅಧ್ಯಾಯಗಳ ವಿಷಯಸೂಚಿ ಪುಟ ಸಂಖ್ಯೆ
 
ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ - ಅನುವಾದಗಳ ವಿಷಯಸೂಚಿ

ಅನುವಾದ - ಶೇಖ್ ಬಶೀರ್ ಮೈಸೂರಿ. ರುವ್ವಾದ್ ಭಾಷಾಂತರ ಕೇಂದ್ರದ ಮೇಲ್ವಿಚಾರಣೆಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಮುಚ್ಚಿ