Check out the new design

ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ * - ಅನುವಾದಗಳ ವಿಷಯಸೂಚಿ


ಅರ್ಥಗಳ ಅನುವಾದ ಅಧ್ಯಾಯ: ಅಲ್ ಅಂಬಿಯಾ   ಶ್ಲೋಕ:
وَجَعَلْنٰهُمْ اَىِٕمَّةً یَّهْدُوْنَ بِاَمْرِنَا وَاَوْحَیْنَاۤ اِلَیْهِمْ فِعْلَ الْخَیْرٰتِ وَاِقَامَ الصَّلٰوةِ وَاِیْتَآءَ الزَّكٰوةِ ۚ— وَكَانُوْا لَنَا عٰبِدِیْنَ ۟ۙ
ಮತ್ತು ನಾವು ಅವರನ್ನು ನಮ್ಮ ಆದೇಶದಂತೆ ಜನರನ್ನು ಸನ್ಮಾರ್ಗದಲ್ಲಿ ಮುನ್ನಡೆಸುವ ನಾಯಕರನ್ನಾಗಿ ಮಾಡಿದೆವು ಮತ್ತು ನಾವು ಅವರೆಡೆಗೆ ಒಳಿತುಗಳ ಪಾಲನೆ, ನಮಾಝ್‌ನ ಸಂಸ್ಥಾಪನೆ ಹಾಗೂ ಝಕಾತ್ ಪಾವತಿ ಮಾಡಲಿಕ್ಕೆಂದು ದಿವ್ಯಸಂದೇಶವನ್ನು ನೀಡಿದ್ದೆವು ಮತ್ತು ಅವರು ನಮ್ಮನ್ನು ಆರಾಧಿಸುತ್ತಿದ್ದರು.
ಅರಬ್ಬಿ ವ್ಯಾಖ್ಯಾನಗಳು:
وَلُوْطًا اٰتَیْنٰهُ حُكْمًا وَّعِلْمًا وَّنَجَّیْنٰهُ مِنَ الْقَرْیَةِ الَّتِیْ كَانَتْ تَّعْمَلُ الْخَبٰٓىِٕثَ ؕ— اِنَّهُمْ كَانُوْا قَوْمَ سَوْءٍ فٰسِقِیْنَ ۟ۙ
ಲೂತರಿಗೆ ನಾವು ವಿವೇಕವನ್ನೂ, ಜ್ಞಾನವನ್ನೂ ದಯಪಾಲಿಸಿದೆವು ಮತ್ತು ನಾವವರನ್ನು ನೀಚಕೃತ್ಯಗಳನ್ನು ಎಸಗುತ್ತಿದ್ದ ನಾಡಿನಿಂದ ರಕ್ಷಿಸಿದೆವು. ನಿಜವಾಗಿಯು ಅವರು ಅತೀ ನಿಕೃಷ್ಟ ಅಪರಾಧಿ ಜನಾಂಗವಾಗಿದ್ದರು.
ಅರಬ್ಬಿ ವ್ಯಾಖ್ಯಾನಗಳು:
وَاَدْخَلْنٰهُ فِیْ رَحْمَتِنَا ؕ— اِنَّهٗ مِنَ الصّٰلِحِیْنَ ۟۠
ಮತ್ತು ನಾವು ಲೂತ್‌ರನ್ನು ನಮ್ಮ ಕೃಪೆಯಲ್ಲಿ ಸೇರಿಸಿದೆವು. ನಿಸ್ಸಂದೇಹವಾಗಿಯು ಅವರು ಸಜ್ಜನರಲ್ಲಾಗಿದ್ದರು.
ಅರಬ್ಬಿ ವ್ಯಾಖ್ಯಾನಗಳು:
وَنُوْحًا اِذْ نَادٰی مِنْ قَبْلُ فَاسْتَجَبْنَا لَهٗ فَنَجَّیْنٰهُ وَاَهْلَهٗ مِنَ الْكَرْبِ الْعَظِیْمِ ۟ۚ
ನೂಹರವರು ಇದಕ್ಕೆ ಮೊದಲು ಪ್ರಾರ್ಥಿಸಿದ ಸಂದರ್ಭವನ್ನು ಸ್ಮರಿಸಿರಿ. ನಾವು ಅವರ ಪ್ರಾರ್ಥನೆಗೆ ಓಗೊಟ್ಟೆವು ಮತ್ತು ಅವರನ್ನು, ಅವರ ಮನೆಯವರನ್ನು ಮಹಾ ವಿಪತ್ತಿನಿಂದ ರಕ್ಷಿಸಿದೆವು.
ಅರಬ್ಬಿ ವ್ಯಾಖ್ಯಾನಗಳು:
وَنَصَرْنٰهُ مِنَ الْقَوْمِ الَّذِیْنَ كَذَّبُوْا بِاٰیٰتِنَا ؕ— اِنَّهُمْ كَانُوْا قَوْمَ سَوْءٍ فَاَغْرَقْنٰهُمْ اَجْمَعِیْنَ ۟
ನಾವು ಅವರಿಗೆ ನಮ್ಮ ದೃಷ್ಟಾಂತಗಳನ್ನು ಸುಳ್ಳಾಗಿಸಿದ ಜನಾಂಗದ ವಿರುದ್ಧ ಸಹಾಯ ನೀಡಿದೆವು. ನಿಜವಾಗಿಯು ಅವರು ಕೆಟ್ಟ ಜನರಾಗಿದ್ದರು.ಆದ್ದರಿಂದ ನಾವು ಅವರೆಲ್ಲರನ್ನು ಮುಳಿಗಿಸಿ ಬಿಟ್ಟೆವು.
ಅರಬ್ಬಿ ವ್ಯಾಖ್ಯಾನಗಳು:
وَدَاوٗدَ وَسُلَیْمٰنَ اِذْ یَحْكُمٰنِ فِی الْحَرْثِ اِذْ نَفَشَتْ فِیْهِ غَنَمُ الْقَوْمِ ۚ— وَكُنَّا لِحُكْمِهِمْ شٰهِدِیْنَ ۟ۙ
ಮತ್ತು ದಾವೂದ್ ಹಾಗೂ ಸುಲೈಮಾನರು ಒಂದು ಹೊಲದ ಕುರಿತು ತೀರ್ಪು ನೀಡುತ್ತಿದ್ದಂತಹ ಸಂದರ್ಭವನ್ನು ಸ್ಮರಿಸಿರಿ. ಒಂದು ಜನಾಂಗದ ಅಡುಗಳು ಒಂದು ಹೊಲದಲ್ಲಿ ರಾತ್ರಿ ಹೊತ್ತಲ್ಲಿ ಮೇಯ್ದಿದ್ದವು ಮತ್ತು ನಾವು ಅವರ ತೀರ್ಪಿನ ಕುರಿತು ಸಾಕ್ಷಿಯಾಗಿದ್ದೆವು.
ಅರಬ್ಬಿ ವ್ಯಾಖ್ಯಾನಗಳು:
فَفَهَّمْنٰهَا سُلَیْمٰنَ ۚ— وَكُلًّا اٰتَیْنَا حُكْمًا وَّعِلْمًا ؗ— وَّسَخَّرْنَا مَعَ دَاوٗدَ الْجِبَالَ یُسَبِّحْنَ وَالطَّیْرَ ؕ— وَكُنَّا فٰعِلِیْنَ ۟
ನಾವದರ ಸರಿಯಾದ ತೀರ್ಪನ್ನು ಸುಲೈಮಾನರಿಗೆ ತಿಳಿಸಿಕೊಟ್ಟೆವು. ನಾವು ಇಬ್ಬರಿಗೂ ವಿವೇಕ ಮತ್ತು ಜ್ಞಾನವನ್ನು ದಯಪಾಲಿಸಿದ್ದೆವು ಮತ್ತು ದಾವೂದರವರೊಂದಿಗೆ ಪಾವಿತ್ರö್ಯವನ್ನು ಸ್ತುತಿಸಲಿಕ್ಕಾಗಿ ಪರ್ವತಗಳನ್ನು, ಪಕ್ಷಿಗಳನ್ನು ವಿಧೇಯಗೊಳಿಸಿ ಕೊಟ್ಟೆವು ಮತ್ತು ನಾವು ಹೀಗೆ ಮಾಡುವವರಾಗಿದ್ದೆವು.
ಅರಬ್ಬಿ ವ್ಯಾಖ್ಯಾನಗಳು:
وَعَلَّمْنٰهُ صَنْعَةَ لَبُوْسٍ لَّكُمْ لِتُحْصِنَكُمْ مِّنْ بَاْسِكُمْ ۚ— فَهَلْ اَنْتُمْ شٰكِرُوْنَ ۟
ನಾವು ದಾವೂದರಿಗೆ ಯುದ್ಧಗಳ ಸಂದರ್ಭದಲ್ಲಿ ನಿಮ್ಮನ್ನು ಅಪಾಯದಿಂದ ರಕ್ಷಿಸಲು ನಿಮಗೋಸ್ಕರ ಎದೆಗವಚ ನಿರ್ಮಾಣ ಕೌಶಲ್ಯವನ್ನು ಕಲಿಸಿಕೊಟ್ಟೆವು. ನೀವು ಕೃತಜ್ಞತೆ ತೋರುವಿರಾ?
ಅರಬ್ಬಿ ವ್ಯಾಖ್ಯಾನಗಳು:
وَلِسُلَیْمٰنَ الرِّیْحَ عَاصِفَةً تَجْرِیْ بِاَمْرِهٖۤ اِلَی الْاَرْضِ الَّتِیْ بٰرَكْنَا فِیْهَا ؕ— وَكُنَّا بِكُلِّ شَیْءٍ عٰلِمِیْنَ ۟
ಮತ್ತು ಸುಲೈಮಾನರಿಗೆ ಬಿರುಗಾಳಿಯನ್ನು ವಿಧೇಯಗೊಳಿಸಿ ಕೊಟ್ಟೆವು. ಅದು ಅವರ ಆದೇಶದ ಮೇರೆಗೆ ನಾವು ಸಮೃದ್ಧಿ ನೀಡಿದ್ದ ಭೂಮಿಯೆಡೆಗೆ ಸಂಚರಿಸುತ್ತಿತ್ತು ಮತ್ತು ನಾವು ಸಕಲ ವಸ್ತುಗಳ ಜ್ಞಾನವುಳ್ಳವರಾಗಿದ್ದೇವೆ.
ಅರಬ್ಬಿ ವ್ಯಾಖ್ಯಾನಗಳು:
 
ಅರ್ಥಗಳ ಅನುವಾದ ಅಧ್ಯಾಯ: ಅಲ್ ಅಂಬಿಯಾ
ಅಧ್ಯಾಯಗಳ ವಿಷಯಸೂಚಿ ಪುಟ ಸಂಖ್ಯೆ
 
ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ - ಅನುವಾದಗಳ ವಿಷಯಸೂಚಿ

ಅನುವಾದ - ಶೇಖ್ ಬಶೀರ್ ಮೈಸೂರಿ. ರುವ್ವಾದ್ ಭಾಷಾಂತರ ಕೇಂದ್ರದ ಮೇಲ್ವಿಚಾರಣೆಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಮುಚ್ಚಿ