Check out the new design

ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ * - ಅನುವಾದಗಳ ವಿಷಯಸೂಚಿ


ಅರ್ಥಗಳ ಅನುವಾದ ಅಧ್ಯಾಯ: ಅಲ್- ಬಕರ   ಶ್ಲೋಕ:
وَاذْكُرُوا اللّٰهَ فِیْۤ اَیَّامٍ مَّعْدُوْدٰتٍ ؕ— فَمَنْ تَعَجَّلَ فِیْ یَوْمَیْنِ فَلَاۤ اِثْمَ عَلَیْهِ ۚ— وَمَنْ تَاَخَّرَ فَلَاۤ اِثْمَ عَلَیْهِ ۙ— لِمَنِ اتَّقٰی ؕ— وَاتَّقُوا اللّٰهَ وَاعْلَمُوْۤا اَنَّكُمْ اِلَیْهِ تُحْشَرُوْنَ ۟
ಮಿನಾದ ನಿರ್ದಿಷ್ಟ ದಿನಗಳಲ್ಲಿ ಅಲ್ಲಾಹನನ್ನು ಸ್ಮರಿಸಿರಿ. ಇನ್ನು ಎರಡು ದಿನಗಳಲ್ಲೇ ಮಿನಾದಿಂದ ಹೊರಡುವವನ ಮೇಲೆ ಯಾವ ದೋಷವಿಲ್ಲ, ಮತ್ತು ಒಂದು ದಿನ ತಡ ಮಾಡುವವನ ಮೇಲೂ ದೋಷವಿರುವುದಿಲ್ಲ. ಇದು ಭಯಭಕ್ತಿ ಹೊಂದಿದವನಿಗೆ ಮತ್ತು ನೀವು ಅಲ್ಲಾಹÀನನ್ನು ಭಯಪಡಿರಿ. ನಿಸ್ಸಂದೇಹವಾಗಿಯು ನೀವು ಅವನೆಡೆಗೇ ಒಟ್ಟುಗೂಡಿಸಲಾಗುವಿರೆಂಬುದನ್ನು ಅರಿತುಕೊಳ್ಳಿರಿ.
ಅರಬ್ಬಿ ವ್ಯಾಖ್ಯಾನಗಳು:
وَمِنَ النَّاسِ مَنْ یُّعْجِبُكَ قَوْلُهٗ فِی الْحَیٰوةِ الدُّنْیَا وَیُشْهِدُ اللّٰهَ عَلٰی مَا فِیْ قَلْبِهٖ ۙ— وَهُوَ اَلَدُّ الْخِصَامِ ۟
ಇಹಲೋಕ ಜೀವನದಲ್ಲಿ ಜನರ ಪೈಕಿ ಒಬ್ಬನ ಮಾತು ನಿಮ್ಮನ್ನು ಆಕರ್ಶಿಸುತ್ತದೆ ಮತ್ತು ಅವನು ತನ್ನ ಮನಸ್ಸಿನಲ್ಲಿರುವುದರ ಬಗ್ಗೆ ತಾನು ಪ್ರಾಮಾಣಿಕನೆಂದು ಅಲ್ಲಾಹನನ್ನು ಸಾಕ್ಷಿಯಾಗಿಸುತ್ತಾನೆ. ವಸ್ತುತಃ ಅವನು ಭಯಂಕರ ಜಗಳಗಂಟನಾಗಿದ್ದಾನೆ.
ಅರಬ್ಬಿ ವ್ಯಾಖ್ಯಾನಗಳು:
وَاِذَا تَوَلّٰی سَعٰی فِی الْاَرْضِ لِیُفْسِدَ فِیْهَا وَیُهْلِكَ الْحَرْثَ وَالنَّسْلَ ؕ— وَاللّٰهُ لَا یُحِبُّ الْفَسَادَ ۟
ಅವನು ಮರಳಿ ಹೋಗುವಾಗ ಭೊಮಿಯಲ್ಲಿ ಕ್ಷೆÆÃಭೆಯನ್ನುಂಟು ಮಾಡಲು ಬೆಳೆ ನಾಶಪಡಿಸಲು ಮತ್ತು ಪ್ರಾಣಹಾನಿಗೈಯ್ಯಲು ಶ್ರಮಿಸುವನು ಮತ್ತು ಅಲ್ಲಾಹನು ಕ್ಷೆÆÃಭೆಯನ್ನು ಇಷ್ಟಪಡುವುದಿಲ್ಲ.
ಅರಬ್ಬಿ ವ್ಯಾಖ್ಯಾನಗಳು:
وَاِذَا قِیْلَ لَهُ اتَّقِ اللّٰهَ اَخَذَتْهُ الْعِزَّةُ بِالْاِثْمِ فَحَسْبُهٗ جَهَنَّمُ ؕ— وَلَبِئْسَ الْمِهَادُ ۟
ಮತ್ತು ನೀನು ಅಲ್ಲಾಹನನ್ನು ಭಯಪಡು ಎಂದು ಅವನೊಡನೆ ಹೇಳಲಾದರೆ ಅವನ ದುರಭಿಮಾನವು ಅವನನ್ನು ಪಾಪಕೃತ್ಯಕ್ಕೆ ಪ್ರಚೋಧಿಸುತ್ತದೆ. ಅವನಿಗೆ ನರಕವೇ ಸಾಕು ಖಂಡಿತವಾಗಿಯು ಅದು ಅತ್ಯಂತ ನಿಕೃಷ್ಟ ನೆಲೆಯಾಗಿದೆ.
ಅರಬ್ಬಿ ವ್ಯಾಖ್ಯಾನಗಳು:
وَمِنَ النَّاسِ مَنْ یَّشْرِیْ نَفْسَهُ ابْتِغَآءَ مَرْضَاتِ اللّٰهِ ؕ— وَاللّٰهُ رَءُوْفٌۢ بِالْعِبَادِ ۟
(ಇನ್ನು) ಜನರ ಪೈಕಿ ಕೆಲವರು ಅಲ್ಲಾಹನ ಸಂತೃಪ್ತಿಯನ್ನು ಹಂಬಲಿಸಿ ಪ್ರಾಣಾರ್ಪಣೆ ಮಾಡುವವರೂ ಇದ್ದಾರೆ ಮತ್ತು ಅಲ್ಲಾಹನು ದಾಸರ ಕುರಿತು ಕೃಪಾಳುವಾಗಿದ್ದಾನೆ.
ಅರಬ್ಬಿ ವ್ಯಾಖ್ಯಾನಗಳು:
یٰۤاَیُّهَا الَّذِیْنَ اٰمَنُوا ادْخُلُوْا فِی السِّلْمِ كَآفَّةً ۪— وَلَا تَتَّبِعُوْا خُطُوٰتِ الشَّیْطٰنِ ؕ— اِنَّهٗ لَكُمْ عَدُوٌّ مُّبِیْنٌ ۟
ಓ ಸತ್ಯವಿಶ್ವಾಸಿಗಳೇ, ನೀವು ಸಂಪೂರ್ಣವಾಗಿ ಇಸ್ಲಾಮಿನೊಳಗೆ ಪ್ರವೇಶಿಸಿರಿ ಮತ್ತು ಶೈತಾನನ ಹೆಜ್ಜೆಗಳನ್ನು ಅನುಸರಿಸಬೇಡಿರಿ. ಅವನು ನಿಮ್ಮ ಪ್ರತ್ಯಕ್ಷ ಶತ್ರುವಾಗಿದ್ದಾನೆ.
ಅರಬ್ಬಿ ವ್ಯಾಖ್ಯಾನಗಳು:
فَاِنْ زَلَلْتُمْ مِّنْ بَعْدِ مَا جَآءَتْكُمُ الْبَیِّنٰتُ فَاعْلَمُوْۤا اَنَّ اللّٰهَ عَزِیْزٌ حَكِیْمٌ ۟
ಇನ್ನು ಸುಸ್ಪಷ್ಟ ಪುರಾವೆಗಳು ನಿಮ್ಮ ಬಳಿಗೆ ಬಂದ ಬಳಿಕವೂ ನೀವು ಮಾರ್ಗಭ್ರಷ್ಟರಾದರೆ ಅಲ್ಲಾಹನು ಪ್ರಬಲನೂ, ಯುಕ್ತಿಪೂರ್ಣನೂ ಆಗಿದ್ದಾನೆಂಬುದನ್ನು ತಿಳಿದುಕೊಳ್ಳಿರಿ.
ಅರಬ್ಬಿ ವ್ಯಾಖ್ಯಾನಗಳು:
هَلْ یَنْظُرُوْنَ اِلَّاۤ اَنْ یَّاْتِیَهُمُ اللّٰهُ فِیْ ظُلَلٍ مِّنَ الْغَمَامِ وَالْمَلٰٓىِٕكَةُ وَقُضِیَ الْاَمْرُ ؕ— وَاِلَی اللّٰهِ تُرْجَعُ الْاُمُوْرُ ۟۠
(ಉಪದೇಶದ ಬಳಿಕ) ಅವರು ತಮ್ಮಲ್ಲಿಗೆ ಸಾಕ್ಷಾತ್ ಅಲ್ಲಾಹನು ದೇವದೂತರೊಂದಿಗೆ ಮೋಡಗಳ ನೆರಳುಗಳಲ್ಲಿ ಬಂದು. ಅವರ ಅಂತಿಮ ತೀರ್ಮಾನವನ್ನೇ ಮಾಡಿಬಿಡಬೇಕೆಂದು ನಿರೀಕ್ಷಿಸುತ್ತಿರುವರೇ? ಕೊನೆಗಂತು ಸಕಲ ಸಂಗತಿಗಳೂ ಅಲ್ಲಾಹನೆಡೆಗೇ ಮರಳಿ ಹೋಗುವುವು.
ಅರಬ್ಬಿ ವ್ಯಾಖ್ಯಾನಗಳು:
 
ಅರ್ಥಗಳ ಅನುವಾದ ಅಧ್ಯಾಯ: ಅಲ್- ಬಕರ
ಅಧ್ಯಾಯಗಳ ವಿಷಯಸೂಚಿ ಪುಟ ಸಂಖ್ಯೆ
 
ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ - ಅನುವಾದಗಳ ವಿಷಯಸೂಚಿ

ಅನುವಾದ - ಶೇಖ್ ಬಶೀರ್ ಮೈಸೂರಿ. ರುವ್ವಾದ್ ಭಾಷಾಂತರ ಕೇಂದ್ರದ ಮೇಲ್ವಿಚಾರಣೆಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಮುಚ್ಚಿ