Check out the new design

ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ * - ಅನುವಾದಗಳ ವಿಷಯಸೂಚಿ


ಅರ್ಥಗಳ ಅನುವಾದ ಅಧ್ಯಾಯ: ಅಲ್- ಕಹ್ಫ್   ಶ್ಲೋಕ:
فَلَمَّا جَاوَزَا قَالَ لِفَتٰىهُ اٰتِنَا غَدَآءَنَا ؗ— لَقَدْ لَقِیْنَا مِنْ سَفَرِنَا هٰذَا نَصَبًا ۟
ಅವರಿಬ್ಬರು ಅಲ್ಲಿಂದ ದಾಟಿ ಮುಂದೆ ಹೋದಾಗ ಮೂಸಾ ತನ್ನ ಯುವಕನಿಗೆ ಕೇಳಿದರು: ನೀನು ನಮ್ಮ ಬೆಳಗ್ಗಿನ ಉಪಹಾರವನ್ನು ತಾ ನಮಗಂತು ನಮ್ಮ ಪ್ರಯಾಣದ ಕಾರಣ ತುಂಬಾ ಆಯಾಸ ಉಂಟಾಗಿದೆ.
ಅರಬ್ಬಿ ವ್ಯಾಖ್ಯಾನಗಳು:
قَالَ اَرَءَیْتَ اِذْ اَوَیْنَاۤ اِلَی الصَّخْرَةِ فَاِنِّیْ نَسِیْتُ الْحُوْتَ ؗ— وَمَاۤ اَنْسٰىنِیْهُ اِلَّا الشَّیْطٰنُ اَنْ اَذْكُرَهٗ ۚ— وَاتَّخَذَ سَبِیْلَهٗ فِی الْبَحْرِ ۖۗ— عَجَبًا ۟
ಅವನು ಉತ್ತರಿಸಿದನು: ಅಗೋ ನೀವು ಕಂಡಿರಾ? ನಾವು ಆ ಬಂಡೆಗಲ್ಲಿಗೆ ಒರಗಿ ವಿಶ್ರಾಂತಿ ಪಡೆದಿದ್ದ ಸಂದರ್ಭ. ಅಲ್ಲೇ ನಾನು ಮೀನನ್ನು ಮರೆತು ಬಿಟ್ಟಿದ್ದೆನು. ವಾಸ್ತವದಲ್ಲಿ ಅದನ್ನು ನಾನು ತಮಗೆ ನೆನಪಿಸುವುದರಿಂದ ಶೈತಾನನು ನನ್ನನ್ನು ಮರೆಯುವಂತೆ ಮಾಡಿದನು ಮತ್ತು ಆ ಮೀನು ಸಮುದ್ರದಲ್ಲಿ ಅದ್ಭುತಕರವಾಗಿ ತನ್ನ ಮಾರ್ಗವನ್ನು ಮಾಡಿಕೊಂಡಿತು.
ಅರಬ್ಬಿ ವ್ಯಾಖ್ಯಾನಗಳು:
قَالَ ذٰلِكَ مَا كُنَّا نَبْغِ ۖۗ— فَارْتَدَّا عَلٰۤی اٰثَارِهِمَا قَصَصًا ۟ۙ
ಮೂಸ ಹೇಳಿದರು: ನಾವು ಹುಡುಕುತ್ತಿದ್ದ ಸ್ಥಳ ಅದುವೇ ಆಗಿದೆ. ಅಂತೂ ಅವರಿಬ್ಬರೂ ತಮ್ಮ ಹೆಜ್ಜೆಗಳನ್ನು ಗುರುತಿಸುತ್ತಾ ಮರಳಿ ಹೋದರು.
ಅರಬ್ಬಿ ವ್ಯಾಖ್ಯಾನಗಳು:
فَوَجَدَا عَبْدًا مِّنْ عِبَادِنَاۤ اٰتَیْنٰهُ رَحْمَةً مِّنْ عِنْدِنَا وَعَلَّمْنٰهُ مِنْ لَّدُنَّا عِلْمًا ۟
ಆಗ ಅವರಿಬ್ಬರೂ ನಮ್ಮ ದಾಸರ ಪೈಕಿ ಒಬ್ಬ ದಾಸನನ್ನು (ಖಿಜರ್‌ರವರನ್ನು) ಕಂಡರು. ನಾವು ಅವನಿಗೆ ನಮ್ಮ ಬಳಿಯ ಅನುಗ್ರಹವನ್ನು ದಯಪಾಲಿಸಿದ್ದೆವು ಹಾಗೂ ನಮ್ಮ ವತಿಯಿಂದ ವಿಶೇಷ ಜ್ಞಾನವನ್ನು ಕಲಿಸಿ ಕೊಟ್ಟಿದ್ದೆವು.
ಅರಬ್ಬಿ ವ್ಯಾಖ್ಯಾನಗಳು:
قَالَ لَهٗ مُوْسٰی هَلْ اَتَّبِعُكَ عَلٰۤی اَنْ تُعَلِّمَنِ مِمَّا عُلِّمْتَ رُشْدًا ۟
ಅವರೊಂದಿಗೆ ಮೂಸಾ ಹೇಳಿದರು: ನಿಮಗೆ ಕಲಿಸಿಕೊಡಲಾಗಿರುವ ಸನ್ಮಾರ್ಗ ಜ್ಞಾನದಿಂದ ನೀವು ನನಗೆ ಕಲಿಸಿ ಕೊಡಲೆಂದು ನಾನು ನಿಮ್ಮ ಜೊತೆ ಬರಲೇ?
ಅರಬ್ಬಿ ವ್ಯಾಖ್ಯಾನಗಳು:
قَالَ اِنَّكَ لَنْ تَسْتَطِیْعَ مَعِیَ صَبْرًا ۟
ಆಗ ಅವರು ಹೇಳಿದರು: ನೀವು ನನ್ನ ಜೊತೆ ಸಹನೆಯಿಂದಿರಲು ಖಂಡಿತ ಸಾಧ್ಯವಿಲ್ಲ.
ಅರಬ್ಬಿ ವ್ಯಾಖ್ಯಾನಗಳು:
وَكَیْفَ تَصْبِرُ عَلٰی مَا لَمْ تُحِطْ بِهٖ خُبْرًا ۟
ಮತ್ತು ನಿಮಗೆ ಅರಿವಿಲ್ಲದಂತಹ ವಿಷಯದ ಬಗ್ಗೆ ನೀವು ಹೇಗೆ ತಾನೇ ಸಹನೆ ವಹಿಸುವಿರಿ?
ಅರಬ್ಬಿ ವ್ಯಾಖ್ಯಾನಗಳು:
قَالَ سَتَجِدُنِیْۤ اِنْ شَآءَ اللّٰهُ صَابِرًا وَّلَاۤ اَعْصِیْ لَكَ اَمْرًا ۟
ಮೂಸಾ ಉತ್ತರಿಸಿದರು: ಅಲ್ಲಾಹನು ಇಚ್ಛಿಸಿದರೆ ನೀವು ನನ್ನನ್ನು ಸಹನಾಶೀಲನಾಗಿ ಕಾಣುವಿರಿ ಹಾಗೂ ಯಾವ ವಿಷಯದಲ್ಲೂ ನಿಮ್ಮನ್ನು ನಾನು ಧಿಕ್ಕರಿಸದಿರುವೆನು.
ಅರಬ್ಬಿ ವ್ಯಾಖ್ಯಾನಗಳು:
قَالَ فَاِنِ اتَّبَعْتَنِیْ فَلَا تَسْـَٔلْنِیْ عَنْ شَیْءٍ حَتّٰۤی اُحْدِثَ لَكَ مِنْهُ ذِكْرًا ۟۠
ಅವರು ಹೇಳಿದರು: ನೀವು ನನ್ನ ಜೊತೆ ಬರುವುದಾದರೆ; ನೀವು ಯಾವುದೇ ವಿಷಯದ ಕುರಿತು ನಾನೇ ನಿಮಗೆ ಅದನ್ನು ಹೇಳುವ ತನಕ ಕೇಳಬಾರದು.
ಅರಬ್ಬಿ ವ್ಯಾಖ್ಯಾನಗಳು:
فَانْطَلَقَا ۫— حَتّٰۤی اِذَا رَكِبَا فِی السَّفِیْنَةِ خَرَقَهَا ؕ— قَالَ اَخَرَقْتَهَا لِتُغْرِقَ اَهْلَهَا ۚ— لَقَدْ جِئْتَ شَیْـًٔا اِمْرًا ۟
ಅನಂತರ ಅವರಿಬ್ಬರೂ ಮುಂದೆ ಸಾಗಿದರು. ಕೊನೆಗೆ ಅವರಿಬ್ಬರೂ ಒಂದು ಹಡಗಿನಲ್ಲಿ ಹತ್ತಿದರು. ಅಗ ಅವರು ಅದರೊಳಗೆ ತೂತು ಮಾಡಿದರು. ಮೂಸಾ ಹೇಳಿದರು: ಹಡಗಿನ ಜನರನ್ನು ಮುಳುಗಿಸಲೆಂದು ನೀವು ಇದರೊಳಗೆ ತೂತು ಮಾಡಿರುವಿರಾ? ಇದಂತು ನೀವು ಮಹಾ (ಅಪಾಯಕಾರಿ) ಸಂಗತಿಯನ್ನು ಉಂಟು ಮಾಡಿರುವಿರಿ.
ಅರಬ್ಬಿ ವ್ಯಾಖ್ಯಾನಗಳು:
قَالَ اَلَمْ اَقُلْ اِنَّكَ لَنْ تَسْتَطِیْعَ مَعِیَ صَبْرًا ۟
ಅವರು ಉತ್ತರಿಸಿದರು: ನೀವು ನನ್ನ ಜೊತೆ ಸಹೆಯಿಂದಿರಲು ಖಂಡಿತ ಸಾಧ್ಯವಿಲ್ಲವೆಂದು ನಾನು ನಿಮಗೆ ಮೊದಲೇ ಹೇಳಿರಲಿಲ್ಲವೆ?
ಅರಬ್ಬಿ ವ್ಯಾಖ್ಯಾನಗಳು:
قَالَ لَا تُؤَاخِذْنِیْ بِمَا نَسِیْتُ وَلَا تُرْهِقْنِیْ مِنْ اَمْرِیْ عُسْرًا ۟
ಮೂಸಾ ಹೇಳಿದರು: ನಾನು ಮರೆತು ಹೇಳಿದ್ದಕ್ಕಾಗಿ ನೀವು ನನ್ನನ್ನು ಹಿಡಿಯಬೇಡಿರಿ ಮತ್ತು ನನ್ನ ವಿಷಯದಲ್ಲಿ ಕಠೋರವಾಗಿ ವರ್ತಿಸಬೇಡಿರಿ.
ಅರಬ್ಬಿ ವ್ಯಾಖ್ಯಾನಗಳು:
فَانْطَلَقَا ۫— حَتّٰۤی اِذَا لَقِیَا غُلٰمًا فَقَتَلَهٗ ۙ— قَالَ اَقَتَلْتَ نَفْسًا زَكِیَّةً بِغَیْرِ نَفْسٍ ؕ— لَقَدْ جِئْتَ شَیْـًٔا نُّكْرًا ۟
ಅನಂತರ ಅವರಿಬ್ಬರೂ ಮುಂದೆ ಸಾಗಿದರು. ಕೊನೆಗೆ ಒಬ್ಬ ಬಾಲಕನನ್ನು ಭೇಟಿಯಾದಾಗ ಅವರು ಅವನನ್ನು ಕೊಂದು ಹಾಕಿದರು. ಮೂಸಾ ಹೇಳಿದರು: ಮುಗ್ಧ ಜೀವವೊಂದನ್ನು ನೀವು ಕೊಂದು ಹಾಕಿದಿರಾ? ವಸ್ತುತಃ ಅವನು ಯಾರನ್ನೂ ಕೊಂದಿರಲಿಲ್ಲ. ನಿಸ್ಸಂದೇಹವಾಗಿಯೂ ನೀವು ಅತ್ಯಂತ ನೀಚ ಕೃತ್ಯವನ್ನೆಸಗಿದ್ದೀರಿ.
ಅರಬ್ಬಿ ವ್ಯಾಖ್ಯಾನಗಳು:
 
ಅರ್ಥಗಳ ಅನುವಾದ ಅಧ್ಯಾಯ: ಅಲ್- ಕಹ್ಫ್
ಅಧ್ಯಾಯಗಳ ವಿಷಯಸೂಚಿ ಪುಟ ಸಂಖ್ಯೆ
 
ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ - ಅನುವಾದಗಳ ವಿಷಯಸೂಚಿ

ಅನುವಾದ - ಶೇಖ್ ಬಶೀರ್ ಮೈಸೂರಿ. ರುವ್ವಾದ್ ಭಾಷಾಂತರ ಕೇಂದ್ರದ ಮೇಲ್ವಿಚಾರಣೆಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಮುಚ್ಚಿ