Check out the new design

ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ * - ಅನುವಾದಗಳ ವಿಷಯಸೂಚಿ


ಅರ್ಥಗಳ ಅನುವಾದ ಅಧ್ಯಾಯ: ಅನ್ನಹ್ಲ್   ಶ್ಲೋಕ:
وَاَلْقٰی فِی الْاَرْضِ رَوَاسِیَ اَنْ تَمِیْدَ بِكُمْ وَاَنْهٰرًا وَّسُبُلًا لَّعَلَّكُمْ تَهْتَدُوْنَ ۟ۙ
ಮತ್ತು ಅವನು ಭೂಮಿಯಲ್ಲಿ ಭದ್ರವಾದ ಪರ್ವತಗಳನ್ನು ಅದು ನಿಮ್ಮೊಂದಿಗೆ ಅಲುಗಾಡದಂತೆ ನಾಟಿಬಿಟ್ಟನು. ಮತ್ತು ನದಿಗಳನ್ನು, ಮಾರ್ಗಗಳನ್ನು ಮಾಡಿದನು. ಇದು ನೀವು ಮಾರ್ಗ ಪಡೆಯಲೆಂದಾಗಿದೆ.
ಅರಬ್ಬಿ ವ್ಯಾಖ್ಯಾನಗಳು:
وَعَلٰمٰتٍ ؕ— وَبِالنَّجْمِ هُمْ یَهْتَدُوْنَ ۟
ಇನ್ನೂ ಅನೇಕ ಗುರುತುಗಳನ್ನು ಅವನು ನಿಶ್ಚಯಿಸಿದ್ದಾನೆ ಮತ್ತು ನಕ್ಷತ್ರದಿಂದಲೂ ಜನರು ದಾರಿ ಪಡೆಯುತ್ತಾರೆ.
ಅರಬ್ಬಿ ವ್ಯಾಖ್ಯಾನಗಳು:
اَفَمَنْ یَّخْلُقُ كَمَنْ لَّا یَخْلُقُ ؕ— اَفَلَا تَذَكَّرُوْنَ ۟
ಹೀಗಿರುವಾಗ ಸೃಷ್ಟಿಸುವಾತ(ಅಲ್ಲಾಹ್) ಏನನ್ನು ಸೃಷ್ಟಿಸಲಾಗದವನಂತೆ ಆಗಿರುವನೇ? ನೀವು ಒಂದಿಷ್ಟು ಚಿಂತಿಸುವುದಿಲ್ಲವೇ
ಅರಬ್ಬಿ ವ್ಯಾಖ್ಯಾನಗಳು:
وَاِنْ تَعُدُّوْا نِعْمَةَ اللّٰهِ لَا تُحْصُوْهَا ؕ— اِنَّ اللّٰهَ لَغَفُوْرٌ رَّحِیْمٌ ۟
ನೀವು ಅಲ್ಲಾಹನ ಅನುಗ್ರಹಗಳನ್ನು ಎಣಿಸಲು ಬಯಸಿದರು ನಿಮಗೆ ಅದನ್ನು ಎಣಿಸಲು ಸಾಧ್ಯವಿಲ್ಲ. ನಿಶ್ಚಯವಾಗಿಯು ಅಲ್ಲಾಹನು ಮಹಾ ಕ್ಷಮಾಶೀಲನು, ಕರುಣಾನಿಧಿಯು ಆಗಿರುವನು.
ಅರಬ್ಬಿ ವ್ಯಾಖ್ಯಾನಗಳು:
وَاللّٰهُ یَعْلَمُ مَا تُسِرُّوْنَ وَمَا تُعْلِنُوْنَ ۟
ನೀವು ರಹಸ್ಯವಾಗಿರಿಸುವುದನ್ನು ಮತ್ತು ಬಹಿರಂಗಗೊಳಿಸುವುದನ್ನು ಅಲ್ಲಾಹನು ಅರಿಯುತ್ತಾನೆ.
ಅರಬ್ಬಿ ವ್ಯಾಖ್ಯಾನಗಳು:
وَالَّذِیْنَ یَدْعُوْنَ مِنْ دُوْنِ اللّٰهِ لَا یَخْلُقُوْنَ شَیْـًٔا وَّهُمْ یُخْلَقُوْنَ ۟ؕ
ಅಲ್ಲಾಹನ ಹೊರತು ಅವರು ಯಾರನ್ನು ಕರೆದು ಪ್ರಾರ್ಥಿಸುತ್ತಿರುವರೋ ಅವರು ಏನನ್ನೂ ಸೃಷ್ಟಿಸಲಾರರು. ಅಲ್ಲದೇ, ಸ್ವತಃ ಅವರೇ ಸೃಷ್ಟಿಸಲ್ಪಟ್ಟವರು.
ಅರಬ್ಬಿ ವ್ಯಾಖ್ಯಾನಗಳು:
اَمْوَاتٌ غَیْرُ اَحْیَآءٍ ؕۚ— وَمَا یَشْعُرُوْنَ ۙ— اَیَّانَ یُبْعَثُوْنَ ۟۠
ಅವರು ಮೃತರು, ಜೀವಂತರಲ್ಲ ಮತ್ತು ತಮ್ಮನ್ನು ಯಾವಾಗ ಎಬ್ಬಿಸಲಾಗವುದೆಂದೂ ಅವರು ತಿಳಿಯಲಾರರು.
ಅರಬ್ಬಿ ವ್ಯಾಖ್ಯಾನಗಳು:
اِلٰهُكُمْ اِلٰهٌ وَّاحِدٌ ۚ— فَالَّذِیْنَ لَا یُؤْمِنُوْنَ بِالْاٰخِرَةِ قُلُوْبُهُمْ مُّنْكِرَةٌ وَّهُمْ مُّسْتَكْبِرُوْنَ ۟
ನಿಮ್ಮ ಆರಾಧ್ಯನು ಏಕೈಕ ಆರಾಧ್ಯನಾಗಿದ್ದಾನೆ ಮತ್ತು ಪರಲೋಕದ ಮೇಲೆ ವಿಶ್ವಾಸವಿಡದವರ ಹೃದಯಗಳು ನಿಷೇಧಿಗಳಾಗಿವೆ ಮತ್ತು ಸ್ವತಃ ಅವರು ಅಹಂಕಾರದಲ್ಲಿ ತುಂಬಿ ಹೋಗಿದ್ದಾರೆ.
ಅರಬ್ಬಿ ವ್ಯಾಖ್ಯಾನಗಳು:
لَا جَرَمَ اَنَّ اللّٰهَ یَعْلَمُ مَا یُسِرُّوْنَ وَمَا یُعْلِنُوْنَ ؕ— اِنَّهٗ لَا یُحِبُّ الْمُسْتَكْبِرِیْنَ ۟
ನಿಸ್ಸಂದೇಹವಾಗಿಯು ಅಲ್ಲಾಹನು ಅವರು ರಹಸ್ಯಗೊಳಿಸುವ ಮತ್ತು ಬಹಿರಂಗಗೊಳಿಸುವ ಸಕಲವನ್ನೂ ಅರಿಯುತ್ತಾನೆ. ಖಂಡಿತವಾಗಿಯು ಅವನು ಅಹಂಕಾರ ತೋರುವವರನ್ನು ಮೆಚ್ಚುವುದಿಲ್ಲ.
ಅರಬ್ಬಿ ವ್ಯಾಖ್ಯಾನಗಳು:
وَاِذَا قِیْلَ لَهُمْ مَّاذَاۤ اَنْزَلَ رَبُّكُمْ ۙ— قَالُوْۤا اَسَاطِیْرُ الْاَوَّلِیْنَ ۟ۙ
ನಿಮ್ಮ ಪ್ರಭುವು ಅವತೀರ್ಣಗೊಳಿಸಿರುವುದೇನೆಂದು ಅವರೊಡನೆ ಕೇಳಲಾದರೆ, ಅವೆಲ್ಲವು ಹಿಂದಿನವರ ಕಟ್ಟು ಕಥೆಗಳಾಗಿವೆಯೆಂದು ಅವರು ಉತ್ತರಿಸುತ್ತಾರೆ.
ಅರಬ್ಬಿ ವ್ಯಾಖ್ಯಾನಗಳು:
لِیَحْمِلُوْۤا اَوْزَارَهُمْ كَامِلَةً یَّوْمَ الْقِیٰمَةِ ۙ— وَمِنْ اَوْزَارِ الَّذِیْنَ یُضِلُّوْنَهُمْ بِغَیْرِ عِلْمٍ ؕ— اَلَا سَآءَ مَا یَزِرُوْنَ ۟۠
(ಇದರ ಪರಿಣಾಮವಾಗಿ) ಅವರು ಪುನರುತ್ಥಾನದ ದಿನದಂದು ತಮ್ಮ ಸಂಪೂರ್ಣ ಪಾಪ ಭಾರಗಳ ಜೊತೆಗೇ ಅಜ್ಞಾನದಿಂದ ದಾರಿಗೆಡಿಸಿದವರು ಪಾಪ ಭಾರಗಳ ಪಾಲನ್ನು ಕೂಡ ವಹಿಸಿಕೊಳ್ಳುವರು. ತಿಳಿದುಕೊಳ್ಳಿರಿ! ಅವರು ಹೊರುತ್ತಿರುವ ಭಾರವು ಅದೆಷ್ಟು ಕೆಟ್ಟದು.
ಅರಬ್ಬಿ ವ್ಯಾಖ್ಯಾನಗಳು:
قَدْ مَكَرَ الَّذِیْنَ مِنْ قَبْلِهِمْ فَاَتَی اللّٰهُ بُنْیَانَهُمْ مِّنَ الْقَوَاعِدِ فَخَرَّ عَلَیْهِمُ السَّقْفُ مِنْ فَوْقِهِمْ وَاَتٰىهُمُ الْعَذَابُ مِنْ حَیْثُ لَا یَشْعُرُوْنَ ۟
ಇವರಿಗಿಂತ ಮುಂಚಿನವರು ಸಹ ಕುತಂತ್ರ ಹೂಡಿದ್ದರು. ಕೊನೆಗೆ ಅಲ್ಲಾಹನು ಅವರ ಕಟ್ಟಡಗಳನ್ನು ಬುಡ ಸಮೇತ ಕಿತ್ತು ಹಾಕಿದನು ಮತ್ತು ಅವರ ಮೇಲ್ಛಾವಣಿಗಳು ಕುಸಿದು ಬಿದ್ದವು ಹಾಗೂ ಅವರು ಊಹಿಸಿರದಂತಹ ಕಡೆಯಿಂದ ಅವರ ಮೇಲೆ ಯಾತನೆಯು ಬಂದುಬಿಟ್ಟಿತು.
ಅರಬ್ಬಿ ವ್ಯಾಖ್ಯಾನಗಳು:
 
ಅರ್ಥಗಳ ಅನುವಾದ ಅಧ್ಯಾಯ: ಅನ್ನಹ್ಲ್
ಅಧ್ಯಾಯಗಳ ವಿಷಯಸೂಚಿ ಪುಟ ಸಂಖ್ಯೆ
 
ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ - ಅನುವಾದಗಳ ವಿಷಯಸೂಚಿ

ಅನುವಾದ - ಶೇಖ್ ಬಶೀರ್ ಮೈಸೂರಿ. ರುವ್ವಾದ್ ಭಾಷಾಂತರ ಕೇಂದ್ರದ ಮೇಲ್ವಿಚಾರಣೆಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಮುಚ್ಚಿ