Check out the new design

ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ * - សន្ទស្សន៍នៃការបកប្រែ

PDF XML CSV Excel API
Please review the Terms and Policies

ការបកប្រែអត្ថន័យ ជំពូក​: អាល់អាន់អាម   អាយ៉ាត់:
اَلَّذِیْنَ اٰمَنُوْا وَلَمْ یَلْبِسُوْۤا اِیْمَانَهُمْ بِظُلْمٍ اُولٰٓىِٕكَ لَهُمُ الْاَمْنُ وَهُمْ مُّهْتَدُوْنَ ۟۠
ಸತ್ಯವಿಶ್ವಾಸಿಗಳು ಮತ್ತು ತಮ್ಮ ವಿಶ್ವಾಸದಲ್ಲಿ ಸಹಭಾಗಿತ್ವವನ್ನು (ಶಿರ್ಕ್) ಬೆರೆಸದವರು ಯಾರೋ—ಅವರಿಗೆ ನಿರ್ಭಯವಿದೆ. ಅವರೇ ಸನ್ಮಾರ್ಗ ಪಡೆದವರು.
តាហ្វសៀរជាភាសា​អារ៉ាប់ជាច្រេីន:
وَتِلْكَ حُجَّتُنَاۤ اٰتَیْنٰهَاۤ اِبْرٰهِیْمَ عَلٰی قَوْمِهٖ ؕ— نَرْفَعُ دَرَجٰتٍ مَّنْ نَّشَآءُ ؕ— اِنَّ رَبَّكَ حَكِیْمٌ عَلِیْمٌ ۟
ಇದು ನಾವು ಇಬ್ರಾಹೀಮರಿಗೆ ಅವರ ಜನರ ವಿರುದ್ಧ ತರ್ಕಿಸಲು ನೀಡಿದ ಪುರಾವೆಯಾಗಿದೆ. ನಾವು ಇಚ್ಛಿಸುವವರ ಸ್ಥಾನಮಾನಗಳನ್ನು ನಾವು ಏರಿಸುತ್ತೇವೆ. ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು ವಿವೇಕಪೂರ್ಣನು ಮತ್ತು ಸರ್ವಜ್ಞನಾಗಿದ್ದಾನೆ.
តាហ្វសៀរជាភាសា​អារ៉ាប់ជាច្រេីន:
وَوَهَبْنَا لَهٗۤ اِسْحٰقَ وَیَعْقُوْبَ ؕ— كُلًّا هَدَیْنَا ۚ— وَنُوْحًا هَدَیْنَا مِنْ قَبْلُ وَمِنْ ذُرِّیَّتِهٖ دَاوٗدَ وَسُلَیْمٰنَ وَاَیُّوْبَ وَیُوْسُفَ وَمُوْسٰی وَهٰرُوْنَ ؕ— وَكَذٰلِكَ نَجْزِی الْمُحْسِنِیْنَ ۟ۙ
ನಾವು ಅವರಿಗೆ ಇಸ್‍ಹಾಕ್ ಮತ್ತು ಯಾಕೂಬರನ್ನು ದಯಪಾಲಿಸಿದೆವು. ಅವರೆಲ್ಲರಿಗೂ ನಾವು ಸನ್ಮಾರ್ಗವನ್ನು ತೋರಿಸಿದೆವು. ಅವರಿಗಿಂತ ಮೊದಲು ನಾವು ನೂಹರಿಗೆ ಸನ್ಮಾರ್ಗವನ್ನು ತೋರಿಸಿದೆವು. ಅವರ ಸಂತಾನದಲ್ಲಿ ಸೇರಿದ ದಾವೂದ್, ಸುಲೈಮಾನ್, ಅಯ್ಯೂಬ್, ಯೂಸುಫ್, ಮೂಸಾ ಮತ್ತು ಹಾರೂನರಿಗೂ ಕೂಡ. ಒಳಿತು ಮಾಡುವವರಿಗೆ ನಾವು ಈ ರೀತಿ ಪ್ರತಿಫಲವನ್ನು ನೀಡುವೆವು.
តាហ្វសៀរជាភាសា​អារ៉ាប់ជាច្រេីន:
وَزَكَرِیَّا وَیَحْیٰی وَعِیْسٰی وَاِلْیَاسَ ؕ— كُلٌّ مِّنَ الصّٰلِحِیْنَ ۟ۙ
ಝಕರಿಯ್ಯಾ, ಯಹ್ಯಾ, ಈಸಾ ಮತ್ತು ಇಲ್ಯಾಸರಿಗೂ ಕೂಡ. ಅವರೆಲ್ಲರೂ ನೀತಿವಂತರಲ್ಲಿ ಸೇರಿದವರು.
តាហ្វសៀរជាភាសា​អារ៉ាប់ជាច្រេីន:
وَاِسْمٰعِیْلَ وَالْیَسَعَ وَیُوْنُسَ وَلُوْطًا ؕ— وَكُلًّا فَضَّلْنَا عَلَی الْعٰلَمِیْنَ ۟ۙ
ಇಸ್ಮಾಈಲ್, ಅಲ್‍ಯಸಅ್, ಯೂನುಸ್ ಮತ್ತು ಲೂತರಿಗೂ ಕೂಡ. ಅವರೆಲ್ಲರನ್ನೂ ನಾವು ಸರ್ವಲೋಕದವರಲ್ಲಿ ಶ್ರೇಷ್ಠಗೊಳಿಸಿದೆವು.
តាហ្វសៀរជាភាសា​អារ៉ាប់ជាច្រេីន:
وَمِنْ اٰبَآىِٕهِمْ وَذُرِّیّٰتِهِمْ وَاِخْوَانِهِمْ ۚ— وَاجْتَبَیْنٰهُمْ وَهَدَیْنٰهُمْ اِلٰی صِرَاطٍ مُّسْتَقِیْمٍ ۟
ಅವರ ಪೂರ್ವಜರು, ಅವರ ಮಕ್ಕಳು ಮತ್ತು ಸಹೋದರರಿಗೂ ಕೂಡ. ಅವರನ್ನು ನಾವು ವಿಶೇಷವಾಗಿ ಆರಿಸಿದೆವು ಮತ್ತು ನೇರಮಾರ್ಗಕ್ಕೆ ಮುನ್ನಡೆಸಿದೆವು.
តាហ្វសៀរជាភាសា​អារ៉ាប់ជាច្រេីន:
ذٰلِكَ هُدَی اللّٰهِ یَهْدِیْ بِهٖ مَنْ یَّشَآءُ مِنْ عِبَادِهٖ ؕ— وَلَوْ اَشْرَكُوْا لَحَبِطَ عَنْهُمْ مَّا كَانُوْا یَعْمَلُوْنَ ۟
ಇದು ಅಲ್ಲಾಹನ ಸನ್ಮಾರ್ಗವಾಗಿದೆ. ಅವನು ತನ್ನ ದಾಸರಲ್ಲಿ ಅವನು ಇಚ್ಛಿಸುವವರಿಗೆ ಅದನ್ನು ತೋರಿಸುತ್ತಾನೆ. ಅವರು (ಅಲ್ಲಾಹನೊಡನೆ) ಸಹಭಾಗಿತ್ವ (ಶಿರ್ಕ್) ಮಾಡುತ್ತಿದ್ದರೆ ಅವರು ಮಾಡಿದ ಕರ್ಮಗಳೆಲ್ಲವೂ ನಿಷ್ಫಲವಾಗಿ ಬಿಡುತ್ತಿದ್ದವು.
តាហ្វសៀរជាភាសា​អារ៉ាប់ជាច្រេីន:
اُولٰٓىِٕكَ الَّذِیْنَ اٰتَیْنٰهُمُ الْكِتٰبَ وَالْحُكْمَ وَالنُّبُوَّةَ ۚ— فَاِنْ یَّكْفُرْ بِهَا هٰۤؤُلَآءِ فَقَدْ وَكَّلْنَا بِهَا قَوْمًا لَّیْسُوْا بِهَا بِكٰفِرِیْنَ ۟
ಇವರಿಗೇ ನಾವು ಗ್ರಂಥ, ವಿವೇಕ ಮತ್ತು ಪ್ರವಾದಿತ್ವಗಳನ್ನು ನೀಡಿದ್ದು. ಇವರು (ಸತ್ಯನಿಷೇಧಿಗಳು) ಅವುಗಳನ್ನು ನಿಷೇಧಿಸಿದರೆ, ಅವುಗಳನ್ನು ನಿಷೇಧಿಸದ ಜನರಿಗೆ ನಾವು ಅದನ್ನು ವಹಿಸಿಕೊಟ್ಟಿದ್ದೇವೆ.
តាហ្វសៀរជាភាសា​អារ៉ាប់ជាច្រេីន:
اُولٰٓىِٕكَ الَّذِیْنَ هَدَی اللّٰهُ فَبِهُدٰىهُمُ اقْتَدِهْ ؕ— قُلْ لَّاۤ اَسْـَٔلُكُمْ عَلَیْهِ اَجْرًا ؕ— اِنْ هُوَ اِلَّا ذِكْرٰی لِلْعٰلَمِیْنَ ۟۠
ಇವರಿಗೇ ಅಲ್ಲಾಹು ಸನ್ಮಾರ್ಗವನ್ನು ತೋರಿಸಿದ್ದು. ಆದ್ದರಿಂದ ಅವರ ಸನ್ಮಾರ್ಗವನ್ನು ಅನುಸರಿಸಿರಿ. ಹೇಳಿರಿ: “ಇದಕ್ಕಾಗಿ ನಾನು ನಿಮ್ಮಿಂದ ಪ್ರತಿಫಲ ಕೇಳುವುದಿಲ್ಲ. ಇದು ಸರ್ವಲೋಕದವರಿಗೆ ಒಂದು ಉಪದೇಶ ಮಾತ್ರವಾಗಿದೆ.”
តាហ្វសៀរជាភាសា​អារ៉ាប់ជាច្រេីន:
 
ការបកប្រែអត្ថន័យ ជំពូក​: អាល់អាន់អាម
សន្ទស្សន៍នៃជំពូក លេខ​ទំព័រ
 
ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ - សន្ទស្សន៍នៃការបកប្រែ

បានបកប្រែដោយ​មុហាម៉ាត់ ហាំហ្សា បេតួរ។ បានអភិវឌ្ឍដោយការត្រួតពិនិត្យរបស់មជ្ឈមណ្ឌលបកប្រែរ៉ូវ៉ាទ។

បិទ