Check out the new design

ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ * - សន្ទស្សន៍នៃការបកប្រែ

PDF XML CSV Excel API
Please review the Terms and Policies

ការបកប្រែអត្ថន័យ ជំពូក​: អាល់ម៉ាអ៊ីដះ   អាយ៉ាត់:
اُحِلَّ لَكُمْ صَیْدُ الْبَحْرِ وَطَعَامُهٗ مَتَاعًا لَّكُمْ وَلِلسَّیَّارَةِ ۚ— وَحُرِّمَ عَلَیْكُمْ صَیْدُ الْبَرِّ مَا دُمْتُمْ حُرُمًا ؕ— وَاتَّقُوا اللّٰهَ الَّذِیْۤ اِلَیْهِ تُحْشَرُوْنَ ۟
ನಿಮಗೆ ಸಮುದ್ರ ಬೇಟೆ ಮತ್ತು ಅದರ ಆಹಾರವು ಧರ್ಮಸಮ್ಮತವಾಗಿದೆ. ಇದು ನಿಮಗೆ ಮತ್ತು ಪ್ರಯಾಣಿಕರಿಗೆ ಒಂದು ಅನುಕೂಲವಾಗಿರುವುದಕ್ಕಾಗಿ. ನೀವು ಇಹ್ರಾಮ್‍ನಲ್ಲಿರುವ ತನಕ ನಿಮಗೆ ನೆಲದಲ್ಲಿ ಬೇಟೆಯಾಡುವುದನ್ನು ನಿಷೇಧಿಸಲಾಗಿದೆ. ಯಾರ ಬಳಿಗೆ ನಿಮ್ಮನ್ನು ಒಟ್ಟುಗೂಡಿಸಲಾಗುತ್ತದೋ ಆ ಅಲ್ಲಾಹನನ್ನು ಭಯಪಡಿರಿ.
តាហ្វសៀរជាភាសា​អារ៉ាប់ជាច្រេីន:
جَعَلَ اللّٰهُ الْكَعْبَةَ الْبَیْتَ الْحَرَامَ قِیٰمًا لِّلنَّاسِ وَالشَّهْرَ الْحَرَامَ وَالْهَدْیَ وَالْقَلَآىِٕدَ ؕ— ذٰلِكَ لِتَعْلَمُوْۤا اَنَّ اللّٰهَ یَعْلَمُ مَا فِی السَّمٰوٰتِ وَمَا فِی الْاَرْضِ وَاَنَّ اللّٰهَ بِكُلِّ شَیْءٍ عَلِیْمٌ ۟
ಪವಿತ್ರ ಭವನವಾದ ಕಅಬಾಲಯವನ್ನು ಮತ್ತು ಯುದ್ಧ ನಿಷೇಧಿತ ತಿಂಗಳನ್ನು ಅಲ್ಲಾಹು ಜನರ ಅಸ್ತಿತ್ವಕ್ಕೆ ಆಧಾರವಾಗಿ ಮಾಡಿದ್ದಾನೆ. (ಅದೇ ರೀತಿ) ಬಲಿಮೃಗವನ್ನು ಮತ್ತು (ಅವುಗಳ) ಕೊರಳಪಟ್ಟಿಗಳನ್ನು ಸಹ. ಇದೇಕೆಂದರೆ, ನಿಶ್ಚಯವಾಗಿಯೂ ಭೂಮ್ಯಾಕಾಶಗಳಲ್ಲಿರುವುದೆಲ್ಲವನ್ನೂ ಅಲ್ಲಾಹು ತಿಳಿದಿದ್ದಾನೆ ಮತ್ತು ನಿಶ್ಚಯವಾಗಿಯೂ ಅಲ್ಲಾಹನಿಗೆ ಎಲ್ಲಾ ವಿಷಯಗಳ ಬಗ್ಗೆ ಸಂಪೂರ್ಣ ಜ್ಞಾನವಿದೆಯೆಂದು ನೀವು ತಿಳಿಯುವುದಕ್ಕಾಗಿದೆ.
តាហ្វសៀរជាភាសា​អារ៉ាប់ជាច្រេីន:
اِعْلَمُوْۤا اَنَّ اللّٰهَ شَدِیْدُ الْعِقَابِ وَاَنَّ اللّٰهَ غَفُوْرٌ رَّحِیْمٌ ۟ؕ
ತಿಳಿಯಿರಿ! ಅಲ್ಲಾಹು ಕಠೋರವಾಗಿ ಶಿಕ್ಷಿಸುವವನಾಗಿದ್ದಾನೆ ಮತ್ತು ಅಲ್ಲಾಹು ಕ್ಷಮಿಸುವವನು ಹಾಗೂ ದಯೆ ತೋರುವವನಾಗಿದ್ದಾನೆ.
តាហ្វសៀរជាភាសា​អារ៉ាប់ជាច្រេីន:
مَا عَلَی الرَّسُوْلِ اِلَّا الْبَلٰغُ ؕ— وَاللّٰهُ یَعْلَمُ مَا تُبْدُوْنَ وَمَا تَكْتُمُوْنَ ۟
ಸಂದೇಶವಾಹಕರ ಕರ್ತವ್ಯವು ಸಂದೇಶವನ್ನು ತಲುಪಿಸಿಕೊಡುವುದು ಮಾತ್ರ. ನೀವು ಬಹಿರಂಗಪಡಿಸುವುದನ್ನು ಹಾಗೂ ರಹಸ್ಯವಾಗಿಡುವುದನ್ನು ಅಲ್ಲಾಹು ತಿಳಿಯುತ್ತಾನೆ.
តាហ្វសៀរជាភាសា​អារ៉ាប់ជាច្រេីន:
قُلْ لَّا یَسْتَوِی الْخَبِیْثُ وَالطَّیِّبُ وَلَوْ اَعْجَبَكَ كَثْرَةُ الْخَبِیْثِ ۚ— فَاتَّقُوا اللّٰهَ یٰۤاُولِی الْاَلْبَابِ لَعَلَّكُمْ تُفْلِحُوْنَ ۟۠
ಹೇಳಿರಿ: “ಹೊಲಸು ಮತ್ತು ಶುದ್ಧ ವಸ್ತುಗಳು ಸಮಾನವಲ್ಲ. ಹೊಲಸುಗಳ ಹೆಚ್ಚಳವು ನಿಮ್ಮನ್ನು ಅಚ್ಚರಿಗೊಳಿಸಿದರೂ ಸಹ!” ಆದ್ದರಿಂದ ಓ ಬುದ್ಧಿವಂತರೇ! ಅಲ್ಲಾಹನನ್ನು ಭಯಪಡಿರಿ. ನೀವು ಯಶಸ್ವಿಯಾಗುವುದಕ್ಕಾಗಿ.
តាហ្វសៀរជាភាសា​អារ៉ាប់ជាច្រេីន:
یٰۤاَیُّهَا الَّذِیْنَ اٰمَنُوْا لَا تَسْـَٔلُوْا عَنْ اَشْیَآءَ اِنْ تُبْدَ لَكُمْ تَسُؤْكُمْ ۚ— وَاِنْ تَسْـَٔلُوْا عَنْهَا حِیْنَ یُنَزَّلُ الْقُرْاٰنُ تُبْدَ لَكُمْ ؕ— عَفَا اللّٰهُ عَنْهَا ؕ— وَاللّٰهُ غَفُوْرٌ حَلِیْمٌ ۟
ಓ ಸತ್ಯವಿಶ್ವಾಸಿಗಳೇ! ಕೆಲವು ವಿಷಯಗಳ ಬಗ್ಗೆ ನೀವು ಪ್ರಶ್ನಿಸಬೇಡಿ. ಅವುಗಳನ್ನು ನಿಮಗೆ ವಿವರಿಸಲಾದರೆ ನಿಮಗೆ ಸಂಕಷ್ಟವಾಗಬಹುದು. ಕುರ್‌ಆನ್ ಅವತೀರ್ಣವಾಗುವಾಗ ನೀವು ಅವುಗಳ ಬಗ್ಗೆ ಪ್ರಶ್ನಿಸಿದರೆ, ಅವುಗಳನ್ನು ನಿಮಗೆ ವಿವರಿಸಿಕೊಡಲಾಗುವುದು. (ಹಿಂದೆ ಸಂಭವಿಸಿದ್ದಕ್ಕೆ) ಅಲ್ಲಾಹು ನಿಮ್ಮನ್ನು ಕ್ಷಮಿಸಿದ್ದಾನೆ. ಅಲ್ಲಾಹು ಕ್ಷಮಿಸುವವನು ಮತ್ತು ಸಹಿಷ್ಣುತೆಯುಳ್ಳನಾಗಿದ್ದಾನೆ.
តាហ្វសៀរជាភាសា​អារ៉ាប់ជាច្រេីន:
قَدْ سَاَلَهَا قَوْمٌ مِّنْ قَبْلِكُمْ ثُمَّ اَصْبَحُوْا بِهَا كٰفِرِیْنَ ۟
ನಿಮಗಿಂತ ಮೊದಲಿನ ಜನರು ಅವುಗಳ ಬಗ್ಗೆ ಪ್ರಶ್ನಿಸಿದ್ದರು. ನಂತರ ಅವುಗಳ ಕಾರಣದಿಂದ ಅವರು ಸತ್ಯನಿಷೇಧಿಗಳಾದರು.
តាហ្វសៀរជាភាសា​អារ៉ាប់ជាច្រេីន:
مَا جَعَلَ اللّٰهُ مِنْ بَحِیْرَةٍ وَّلَا سَآىِٕبَةٍ وَّلَا وَصِیْلَةٍ وَّلَا حَامٍ ۙ— وَّلٰكِنَّ الَّذِیْنَ كَفَرُوْا یَفْتَرُوْنَ عَلَی اللّٰهِ الْكَذِبَ ؕ— وَاَكْثَرُهُمْ لَا یَعْقِلُوْنَ ۟
ಬಹೀರ, ಸಾಇಬ, ವಸೀಲ, ಹಾಮ್ ಮುಂತಾದ ಹರಕೆ ಮೃಗಗಳನ್ನು ಅಲ್ಲಾಹು ನೇಮಿಸಿಲ್ಲ.[1] ಆದರೆ ಸತ್ಯನಿಷೇಧಿಗಳು ಅಲ್ಲಾಹನ ಮೇಲೆ ಸುಳ್ಳು ಆರೋಪಿಸುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರೂ ಅರ್ಥಮಾಡಿಕೊಳ್ಳದವರಾಗಿದ್ದಾರೆ.
[1] ಅನೇಕ ಮರಿಗಳಿಗೆ ಜನ್ಮ ನೀಡಿದ ಜಾನುವಾರಿನ ಕಿವಿಯನ್ನು ಹರಿದು ಮಕ್ಕಾದ ಬಹುದೇವಾರಾಧಕರು ಅದನ್ನು ವಿಗ್ರಹಗಳಿಗೆ ಹರಕೆ ಮಾಡುತ್ತಿದ್ದರು. ಅವರು ಅದನ್ನು ಬಹೀರ ಎಂದು ಕರೆಯುತ್ತಿದ್ದರು. ಕೆಲವು ಜಾನುವಾರುಗಳನ್ನು ಅವರು ವಿಗ್ರಹಗಳಿಗೆ ಹರಕೆ ಮಾಡಿ ಬಿಟ್ಟು ಬಿಡುತ್ತಿದ್ದರು. ಯಾರೂ ಅದನ್ನು ಮುಟ್ಟುತ್ತಿರಲಿಲ್ಲ ಮತ್ತು ತೊಂದರೆ ಕೊಡುತ್ತಿರಲಿಲ್ಲ. ಅವರು ಅದನ್ನು ಸಾಇಬ ಎಂದು ಕರೆಯುತ್ತಿದ್ದರು. ಒಂದು ಪ್ರಾಣಿ ನಿರಂತರ ಹೆಣ್ಣು ಮರಿಗಳಿಗೆ ಜನ್ಮ ನೀಡಿದರೆ ಅವರು ಅದನ್ನು ವಸೀಲ ಎಂದು ಕರೆದು ವಿಗ್ರಹಗಳಿಗೆ ಹರಕೆ ಮಾಡುತ್ತಿದ್ದರು. ಒಂದು ಗಂಡು ಒಂಟೆಯಿಂದ ಅನೇಕ ಮರಿಗಳುಂಟಾದರೆ ಅವರು ಅದನ್ನು ಹಾಮ್ ಎಂದು ಕರೆದು ಹರಕೆ ಮಾಡುತ್ತಿದ್ದರು.
តាហ្វសៀរជាភាសា​អារ៉ាប់ជាច្រេីន:
 
ការបកប្រែអត្ថន័យ ជំពូក​: អាល់ម៉ាអ៊ីដះ
សន្ទស្សន៍នៃជំពូក លេខ​ទំព័រ
 
ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ - សន្ទស្សន៍នៃការបកប្រែ

បានបកប្រែដោយ​មុហាម៉ាត់ ហាំហ្សា បេតួរ។ បានអភិវឌ្ឍដោយការត្រួតពិនិត្យរបស់មជ្ឈមណ្ឌលបកប្រែរ៉ូវ៉ាទ។

បិទ