Check out the new design

ការបកប្រែអត្ថន័យនៃគម្ពីរគួរអាន - ការបកប្រែជាភាសាកាណាដា - ហាំហ្សះ បេតួរ * - មាតិកានៃការបកប្រែ

PDF XML CSV Excel API
Please review the Terms and Policies

ការបកប្រែអត្ថន័យ ជំពូក​: អាល់អ៊ីសរ៉ក   វាក្យខណ្ឌ:
قُلْ كُوْنُوْا حِجَارَةً اَوْ حَدِیْدًا ۟ۙ
ಹೇಳಿರಿ: “ನೀವು ಕಲ್ಲುಗಳಾಗಿ ಬಿಡಿ ಅಥವಾ ಕಬ್ಬಿಣವಾಗಿ ಬಿಡಿ.
ការបកស្រាយជាភាសា​អារ៉ាប់:
اَوْ خَلْقًا مِّمَّا یَكْبُرُ فِیْ صُدُوْرِكُمْ ۚ— فَسَیَقُوْلُوْنَ مَنْ یُّعِیْدُنَا ؕ— قُلِ الَّذِیْ فَطَرَكُمْ اَوَّلَ مَرَّةٍ ۚ— فَسَیُنْغِضُوْنَ اِلَیْكَ رُءُوْسَهُمْ وَیَقُوْلُوْنَ مَتٰی هُوَ ؕ— قُلْ عَسٰۤی اَنْ یَّكُوْنَ قَرِیْبًا ۟
ಅಥವಾ ನಿಮ್ಮ ಹೃದಯಗಳಲ್ಲಿ ಹಿರಿದಾಗಿ ಕಾಣುವ ಯಾವುದಾದರೂ ಸೃಷ್ಟಿಯಾಗಿ ಬಿಡಿ. (ಏನೇ ಆದರೂ ನಿಮ್ಮನ್ನು ಜೀವ ನೀಡಿ ಎಬ್ಬಿಸಲಾಗುವುದು)”. ಅವರು ಕೇಳುತ್ತಾರೆ: “ನಮಗೆ ಪುನಃ ಜೀವ ನೀಡುವುದು ಯಾರು?” ಹೇಳಿರಿ: “ನಿಮ್ಮನ್ನು ಮೊದಲ ಬಾರಿ ಸೃಷ್ಟಿಸಿದವನು.” ಆಗ ಅವರು ನಿಮ್ಮ ಕಡೆಗೆ ತಲೆಯಾಡಿಸುತ್ತಾ ಕೇಳುತ್ತಾರೆ: “ಅದು ಯಾವಾಗ?” ಹೇಳಿರಿ: “ಅದು ಸಮೀಪದಲ್ಲೇ ಆಗಿರಬಹುದು.”
ការបកស្រាយជាភាសា​អារ៉ាប់:
یَوْمَ یَدْعُوْكُمْ فَتَسْتَجِیْبُوْنَ بِحَمْدِهٖ وَتَظُنُّوْنَ اِنْ لَّبِثْتُمْ اِلَّا قَلِیْلًا ۟۠
ಅವನು ನಿಮ್ಮನ್ನು ಕರೆಯುವ ಮತ್ತು ನೀವು ಅವನನ್ನು ಸ್ತುತಿಸುತ್ತಾ ಅವನಿಗೆ ಉತ್ತರ ನೀಡುವ ದಿನ. ನೀವು (ಇಹಲೋಕದಲ್ಲಿ) ಸ್ವಲ್ಪ ಸಮಯ ಮಾತ್ರ ವಾಸವಾಗಿದ್ದಿರಿ ಎಂದು ನಿಮಗೆ ಭಾಸವಾಗುವುದು.
ការបកស្រាយជាភាសា​អារ៉ាប់:
وَقُلْ لِّعِبَادِیْ یَقُوْلُوا الَّتِیْ هِیَ اَحْسَنُ ؕ— اِنَّ الشَّیْطٰنَ یَنْزَغُ بَیْنَهُمْ ؕ— اِنَّ الشَّیْطٰنَ كَانَ لِلْاِنْسَانِ عَدُوًّا مُّبِیْنًا ۟
ನನ್ನ ದಾಸರೊಡನೆ, ಅವರು ಅತ್ಯುತ್ತಮ ಮಾತುಗಳನ್ನೇ ಆಡಲಿ ಎಂದು ಹೇಳಿರಿ. ನಿಶ್ಚಯವಾಗಿಯೂ ಶೈತಾನನು ಅವರ ನಡುವೆ (ಸಂಘರ್ಷವನ್ನು) ಹುಟ್ಟುಹಾಕುತ್ತಾನೆ. ನಿಶ್ಚಯವಾಗಿಯೂ ಶೈತಾನನು ಮನುಷ್ಯನ ಪ್ರತ್ಯಕ್ಷ ಶತ್ರುವಾಗಿದ್ದಾನೆ.
ការបកស្រាយជាភាសា​អារ៉ាប់:
رَبُّكُمْ اَعْلَمُ بِكُمْ ؕ— اِنْ یَّشَاْ یَرْحَمْكُمْ اَوْ اِنْ یَّشَاْ یُعَذِّبْكُمْ ؕ— وَمَاۤ اَرْسَلْنٰكَ عَلَیْهِمْ وَكِیْلًا ۟
ನಿಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ನಿಮ್ಮ ಬಗ್ಗೆ ಚೆನ್ನಾಗಿ ತಿಳಿದಿದೆ. ಅವನು ಇಚ್ಛಿಸಿದರೆ ನಿಮಗೆ ದಯೆ ತೋರುವನು ಅಥವಾ ಅವನು ಇಚ್ಛಿಸಿದರೆ ನಿಮ್ಮನ್ನು ಶಿಕ್ಷಿಸುವನು. (ಪ್ರವಾದಿಯವರೇ) ನಾವು ನಿಮ್ಮನ್ನು ಅವರ ಮೇಲ್ವಿಚಾರಣೆ ಮಾಡಲು ಕಳುಹಿಸಿಲ್ಲ.
ការបកស្រាយជាភាសា​អារ៉ាប់:
وَرَبُّكَ اَعْلَمُ بِمَنْ فِی السَّمٰوٰتِ وَالْاَرْضِ ؕ— وَلَقَدْ فَضَّلْنَا بَعْضَ النَّبِیّٖنَ عَلٰی بَعْضٍ وَّاٰتَیْنَا دَاوٗدَ زَبُوْرًا ۟
ಭೂಮ್ಯಾಕಾಶಗಳಲ್ಲಿರುವವರ ಬಗ್ಗೆ ನಿಮ್ಮ ಪರಿಪಾಲಕನು (ಅಲ್ಲಾಹು) ಬಹಳ ಚೆನ್ನಾಗಿ ತಿಳಿದಿದ್ದಾನೆ. ನಾವು ಕೆಲವು ಪ್ರವಾದಿಗಳನ್ನು ಇತರ ಪ್ರವಾದಿಗಳಿಗಿಂತ ಶ್ರೇಷ್ಠಗೊಳಿಸಿದ್ದೇವೆ. ನಾವು ದಾವೂದರಿಗೆ ಝಬೂರ್ ನೀಡಿದ್ದೇವೆ.
ការបកស្រាយជាភាសា​អារ៉ាប់:
قُلِ ادْعُوا الَّذِیْنَ زَعَمْتُمْ مِّنْ دُوْنِهٖ فَلَا یَمْلِكُوْنَ كَشْفَ الضُّرِّ عَنْكُمْ وَلَا تَحْوِیْلًا ۟
ಹೇಳಿರಿ: “ನೀವು ಅಲ್ಲಾಹನನ್ನು ಬಿಟ್ಟು (ಅಲ್ಲಾಹನ ಸಹಭಾಗಿಗಳೆಂದು) ನೀವು ವಾದಿಸುತ್ತಿರುವ ನಿಮ್ಮ ದೇವರುಗಳನ್ನು ಕರೆದು ಪ್ರಾರ್ಥಿಸಿರಿ. ನಿಮ್ಮಿಂದ ಯಾವುದೇ ತೊಂದರೆಯನ್ನು ನಿವಾರಿಸಲು ಅಥವಾ ನಿಮ್ಮ ಸ್ಥಿತಿಯನ್ನು ಬದಲಾಯಿಸಲು ಅವರಿಗೆ ಸಾಧ್ಯವಿಲ್ಲ.”
ការបកស្រាយជាភាសា​អារ៉ាប់:
اُولٰٓىِٕكَ الَّذِیْنَ یَدْعُوْنَ یَبْتَغُوْنَ اِلٰی رَبِّهِمُ الْوَسِیْلَةَ اَیُّهُمْ اَقْرَبُ وَیَرْجُوْنَ رَحْمَتَهٗ وَیَخَافُوْنَ عَذَابَهٗ ؕ— اِنَّ عَذَابَ رَبِّكَ كَانَ مَحْذُوْرًا ۟
ಅವರು ಯಾರನ್ನು ಕರೆದು ಪ್ರಾರ್ಥಿಸುತ್ತಿದ್ದಾರೋ, ಅವರು ಅವರ ಪರಿಪಾಲಕನ (ಅಲ್ಲಾಹನ) ಬಳಿಗೆ ಹತ್ತಿರವಾಗುವ ಮಾರ್ಗಗಳನ್ನು ಹುಡುಕುತ್ತಿದ್ದಾರೆ.[1] ಅವರಲ್ಲಿ ಅಲ್ಲಾಹನಿಗೆ ಹೆಚ್ಚು ಹತ್ತಿರವಾಗುವುದು ಯಾರು ಎಂದು. ಅವರು ಅವನ ದಯೆಯನ್ನು ಆಶಿಸುತ್ತಾರೆ ಮತ್ತು ಅವನ ಶಿಕ್ಷೆಯನ್ನು ಹೆದರುತ್ತಾರೆ. ಖಂಡಿತವಾಗಿಯೂ ನಿಮ್ಮ ಪರಿಪಾಲಕನ (ಅಲ್ಲಾಹನ) ಶಿಕ್ಷೆಯು ಹೆದರಬೇಕಾದುದೇ ಆಗಿದೆ.
[1] ಅಂದರೆ ದೇವದೂತರುಗಳು, ಪ್ರವಾದಿಗಳು ಮತ್ತು ಮಹಾಪುರುಷರು. ಬಹುದೇವಾರಾಧಕರಲ್ಲಿ ಅನೇಕರು ದೇವದೂತರುಗಳನ್ನು ಆರಾಧಿಸುತ್ತಿದ್ದರು. ಯಹೂದಿಗಳು ಪ್ರವಾದಿ ಉಝೈರ್ (ಎಜ್ರಾ) ರನ್ನು ಮತ್ತು ಕ್ರೈಸ್ತರು ಪ್ರವಾದಿ ಈಸಾ (ಯೇಸು) ರನ್ನು ಅಲ್ಲಾಹನ ಪುತ್ರರೆಂದು ಕರೆದು ಆರಾಧಿಸುತ್ತಾರೆ. ಕೆಲವರು ಸಮಾಧಿಗಳಲ್ಲಿರುವ ಮಹಾಪುರುಷರನ್ನು ಆರಾಧಿಸುತ್ತಾರೆ. ವಾಸ್ತವವಾಗಿ ಇವರೆಲ್ಲರೂ ಅಲ್ಲಾಹನ ಇಷ್ಟದಾಸರಾಗಿದ್ದಾರೆ ಮತ್ತು ಅಲ್ಲಾಹನಿಗೆ ಸಮೀಪವಾಗುವ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ನೀವು ಅವರನ್ನು ಆರಾಧಿಸುತ್ತಿರುವ ಬಗ್ಗೆ ಅವರಿಗೆ ಯಾವುದೇ ಜ್ಞಾನವಿಲ್ಲ.
ការបកស្រាយជាភាសា​អារ៉ាប់:
وَاِنْ مِّنْ قَرْیَةٍ اِلَّا نَحْنُ مُهْلِكُوْهَا قَبْلَ یَوْمِ الْقِیٰمَةِ اَوْ مُعَذِّبُوْهَا عَذَابًا شَدِیْدًا ؕ— كَانَ ذٰلِكَ فِی الْكِتٰبِ مَسْطُوْرًا ۟
ಎಷ್ಟೆಲ್ಲಾ ಊರುಗಳಿವೆಯೋ ಅವೆಲ್ಲವನ್ನೂ ನಾವು ಪುನರುತ್ಥಾನ ದಿನಕ್ಕಿಂತ ಮೊದಲು ನಾಶ ಮಾಡುವೆವು; ಅಥವಾ ಕಠೋರ ಶಿಕ್ಷೆ ನೀಡುವೆವು. ಇದು ಗ್ರಂಥದಲ್ಲಿ ಲಿಖಿತವಾದ ವಿಷಯವಾಗಿದೆ.
ការបកស្រាយជាភាសា​អារ៉ាប់:
 
ការបកប្រែអត្ថន័យ ជំពូក​: អាល់អ៊ីសរ៉ក
មាតិកានៃជំពូក លេខ​ទំព័រ
 
ការបកប្រែអត្ថន័យនៃគម្ពីរគួរអាន - ការបកប្រែជាភាសាកាណាដា - ហាំហ្សះ បេតួរ - មាតិកានៃការបកប្រែ

បានបកប្រែដោយ​មូហាម៉ាត់ ហាំហ្សះ បេតួរ។ បានអភិវឌ្ឍដោយការត្រួតពិនិត្យរបស់មជ្ឈមណ្ឌលបកប្រែរ៉ូវ៉ាទ។

បិទ