Check out the new design

ការបកប្រែអត្ថន័យនៃគម្ពីរគួរអាន - ការបកប្រែជាភាសាកាណាដា - ប៉ាសៀរ មីសូរី * - មាតិកានៃការបកប្រែ


ការបកប្រែអត្ថន័យ ជំពូក​: អាន់ណាច់ម៍   វាក្យខណ្ឌ:

ಅನ್ನಜ್ಮ್

وَالنَّجْمِ اِذَا هَوٰی ۟ۙ
ನಕ್ಷತ್ರದಾಣೆ, ಅದು ಅಸ್ತಮಿಸಿದಾಗ.
ការបកស្រាយជាភាសា​អារ៉ាប់:
مَا ضَلَّ صَاحِبُكُمْ وَمَا غَوٰی ۟ۚ
ನಿಮ್ಮ ಸಂಗಡಿಗ (ಮುಹಮ್ಮದ್) ದಾರಿತಪ್ಪಿಲ್ಲ, ಮತ್ತು ಮಾರ್ಗ ಭ್ರಷ್ಟನೂ ಅಲ್ಲ.
ការបកស្រាយជាភាសា​អារ៉ាប់:
وَمَا یَنْطِقُ عَنِ الْهَوٰی ۟ؕۚ
ಆತ ತನ್ನ ಸ್ವೇಚ್ಛೆಯಿಂದ ಮಾತನಾಡುವುದಿಲ್ಲ.
ការបកស្រាយជាភាសា​អារ៉ាប់:
اِنْ هُوَ اِلَّا وَحْیٌ یُّوْحٰی ۟ۙ
ಅದು ಅವರಿಗೆ ಸಂದೇಶ ನೀಡಲಾದ ದಿವ್ಯವಾಣಿ ಆಗಿರುತ್ತದೆ.
ការបកស្រាយជាភាសា​អារ៉ាប់:
عَلَّمَهٗ شَدِیْدُ الْقُوٰی ۟ۙ
ಮಹಾಶಕ್ತಿಶಾಲಿಯಾದ ದೇವದೂತ ಜಿಬ್ರೀಲನು ಅವರಿಗೆ ಕಲಿಸಿರುತ್ತಾನೆ.
ការបកស្រាយជាភាសា​អារ៉ាប់:
ذُوْ مِرَّةٍ ؕ— فَاسْتَوٰی ۟ۙ
ಅವನು ಬಲಿಷ್ಠನಾಗಿರುವನು, ಅನಂತರ ಅವನು ಪ್ರತ್ಯಕ್ಷನಾದನು.
ការបកស្រាយជាភាសា​អារ៉ាប់:
وَهُوَ بِالْاُفُقِ الْاَعْلٰی ۟ؕ
ಅವನು ಉನ್ನತ ದಿಗಂತದ ತುದಿಯಲ್ಲಿದ್ದನು.
ការបកស្រាយជាភាសា​អារ៉ាប់:
ثُمَّ دَنَا فَتَدَلّٰی ۟ۙ
ತರುವಾಯ ಅವನು ಹತ್ತಿರವಾದನು, ಬಳಿಕ ಇನ್ನೂ ನಿಕಟನಾದನು.
ការបកស្រាយជាភាសា​អារ៉ាប់:
فَكَانَ قَابَ قَوْسَیْنِ اَوْ اَدْنٰی ۟ۚ
ಎರಡು ಬಿಲ್ಲುಗಳಷ್ಟು ಅಥವ ಅದಕ್ಕಿಂತಲೂ ಸಮೀಪ.
ការបកស្រាយជាភាសា​អារ៉ាប់:
فَاَوْحٰۤی اِلٰی عَبْدِهٖ مَاۤ اَوْحٰی ۟ؕ
ಆಗ ಅವನು ಅಲ್ಲಾಹನ ದಾಸನೆಡೆಗೆ ತಲುಪಿಸಬೇಕಾದುದನ್ನು ದಿವ್ಯವಾಣಿಯನ್ನು ತಲುಪಿಸಿದನು.
ការបកស្រាយជាភាសា​អារ៉ាប់:
مَا كَذَبَ الْفُؤَادُ مَا رَاٰی ۟
ಪೈಗಂಬರರು ನೋಡಿದ್ದನ್ನು ಅವರ ಮನಸ್ಸು ಸುಳ್ಳಾಗಿಸಲಿಲ್ಲ.
ការបកស្រាយជាភាសា​អារ៉ាប់:
اَفَتُمٰرُوْنَهٗ عَلٰی مَا یَرٰی ۟
ಇನ್ನು ಅವರು ಕಣ್ಣಾರೆ ಕಂಡಿರುವುದರ ಬಗ್ಗೆ ನೀವು ತರ್ಕ ಮಾಡುತ್ತಿರುವಿರಾ ?
ការបកស្រាយជាភាសា​អារ៉ាប់:
وَلَقَدْ رَاٰهُ نَزْلَةً اُخْرٰی ۟ۙ
ಪೈಗಂಬರರು ಅವರನ್ನು (ಜಿಬ್ರೀಲರನ್ನು) ಮತ್ತೊಂದು ಸಲ ಕಂಡಿದ್ದರು.
ការបកស្រាយជាភាសា​អារ៉ាប់:
عِنْدَ سِدْرَةِ الْمُنْتَهٰی ۟
'ಸಿದ್‌ರತುಲ್ ಮುಂತಹಾ'ದ ಬಳಿ.
ការបកស្រាយជាភាសា​អារ៉ាប់:
عِنْدَهَا جَنَّةُ الْمَاْوٰی ۟ؕ
ಅದರ ಸಮೀಪದಲ್ಲಿ 'ಜನ್ನತುಲ್ ಮಾವಾ' ಇದೆ.
ការបកស្រាយជាភាសា​អារ៉ាប់:
اِذْ یَغْشَی السِّدْرَةَ مَا یَغْشٰی ۟ۙ
ಆಗ 'ಸಿದ್ರ್ ವೃಕ್ಷ'(ಬಾರೆ ವೃಕ್ಷ)ವನ್ನು ಆಚ್ಛಾದಿಸ ಬೇಕಾದದ್ದು ಆಚ್ಛಾದಿಸುತ್ತಿತ್ತು.
ការបកស្រាយជាភាសា​អារ៉ាប់:
مَا زَاغَ الْبَصَرُ وَمَا طَغٰی ۟
ಪೈಗಂಬರರ ದೃಷ್ಟಿಯು ತಪ್ಪಲಿಲ್ಲ ಮತ್ತು ಮೇರೆಮೀರಲೂ ಇಲ್ಲ.
ការបកស្រាយជាភាសា​អារ៉ាប់:
لَقَدْ رَاٰی مِنْ اٰیٰتِ رَبِّهِ الْكُبْرٰی ۟
ನಿಜವಾಗಿಯೂ ಅವರು ತಮ್ಮ ಪ್ರಭುವಿನ ಮಹಾ ನಿದರ್ಶನಗಳಲ್ಲಿ ಕೆಲವನ್ನು ಕಂಡರು.
ការបកស្រាយជាភាសា​អារ៉ាប់:
اَفَرَءَیْتُمُ اللّٰتَ وَالْعُزّٰی ۟ۙ
ನೀವು ಲಾತ್ ಉಝ್ಝಾಗಳ ಬಗ್ಗೆ ಯೋಚಿಸಿದ್ದೀರಾ ?
ការបកស្រាយជាភាសា​អារ៉ាប់:
وَمَنٰوةَ الثَّالِثَةَ الْاُخْرٰی ۟
ಮೂರನೆಯದಾದ 'ಮನಾತ'ನ ಬಗ್ಗೆ ?
ការបកស្រាយជាភាសា​អារ៉ាប់:
اَلَكُمُ الذَّكَرُ وَلَهُ الۡاُنۡثٰى‏ ۟
ಏನು ನಿಮಗೆ ಪುತ್ರರು ಮತ್ತು ಅಲ್ಲಾಹನಿಗೆ ಪುತ್ರಿಯರೇ ?
ការបកស្រាយជាភាសា​អារ៉ាប់:
تِلْكَ اِذًا قِسْمَةٌ ضِیْزٰی ۟
ಹಾಗಿದ್ದರೆ ಇದಂತು ಘೋರ ಅನ್ಯಾಯದ ಹಂಚುವಿಕೆಯಾಗಿದೆ.
ការបកស្រាយជាភាសា​អារ៉ាប់:
اِنْ هِیَ اِلَّاۤ اَسْمَآءٌ سَمَّیْتُمُوْهَاۤ اَنْتُمْ وَاٰبَآؤُكُمْ مَّاۤ اَنْزَلَ اللّٰهُ بِهَا مِنْ سُلْطٰنٍ ؕ— اِنْ یَّتَّبِعُوْنَ اِلَّا الظَّنَّ وَمَا تَهْوَی الْاَنْفُسُ ۚ— وَلَقَدْ جَآءَهُمْ مِّنْ رَّبِّهِمُ الْهُدٰی ۟ؕ
ವಾಸ್ತವದಲ್ಲಿ ಇವು (ವಿಗ್ರಹಗಳು) ನೀವೂ, ನಿಮ್ಮ ಪೂರ್ವಿಕರು ಇಟ್ಟಿರುವ ಕೆಲವು ನಾಮಗಳ ಹೊರತು ಬೇರೇನೂ ಅಲ್ಲ. ಇವುಗಳ ಬಗ್ಗೆ ಅಲ್ಲಾಹನು ಯಾವ ಆಧಾರವನ್ನು ಇಳಿಸಿಲ್ಲ. ಅವರು ಕೇವಲ ಊಹೆಯನ್ನು ಹಾಗು ತಮ್ಮ ಸ್ವೇಚ್ಛೆಯನ್ನು ಅನುಸರಿಸುತ್ತಿದ್ದಾರೆ ಮತ್ತು ನಿಜವಾಗಿಯೂ ಅವರ ಬಳಿ ಅವರ ಪ್ರಭುವಿನ ಕಡೆಯಿಂದ ಸನ್ಮಾರ್ಗವೂ ಬಂದಿರುತ್ತದೆ.
ការបកស្រាយជាភាសា​អារ៉ាប់:
اَمْ لِلْاِنْسَانِ مَا تَمَنّٰی ۟ؗۖ
ಏನು ಮನುಷ್ಯನಿಗೆ ಅವನು ಬಯಸುವುದೆಲ್ಲವೂ ಲಭಿಸುವುದೇ ?
ការបកស្រាយជាភាសា​អារ៉ាប់:
فَلِلّٰهِ الْاٰخِرَةُ وَالْاُوْلٰی ۟۠
ಆದರೆ ಇಹಲೋಕ ಮತ್ತು ಪರಲೋಕ ಅಲ್ಲಾಹನದ್ದಾಗಿದೆ.
ការបកស្រាយជាភាសា​អារ៉ាប់:
وَكَمْ مِّنْ مَّلَكٍ فِی السَّمٰوٰتِ لَا تُغْنِیْ شَفَاعَتُهُمْ شَیْـًٔا اِلَّا مِنْ بَعْدِ اَنْ یَّاْذَنَ اللّٰهُ لِمَنْ یَّشَآءُ وَیَرْضٰی ۟
ಆಕಾಶಗಳಲ್ಲಿ ಅದೆಷ್ಟೋ ದೇವಚರರಿದ್ದಾರೆ. ಅವರ ಶಿಫಾರಸ್ಸು (ಯಾರಿಗೂ) ಯಾವ ಪ್ರಯೋಜನಕ್ಕೂ ಬಾರದು. ಆದರೆ ಅಲ್ಲಾಹನು ತನ್ನ ಸಂತೃಪ್ತಿಯಿAದ ತಾನು ಇಚ್ಛಿಸುವವರಿಗೆ ಅನುಮತಿ ನೀಡಿದರೆ ಬೇರೆ ವಿಚಾರ.
ការបកស្រាយជាភាសា​អារ៉ាប់:
 
ការបកប្រែអត្ថន័យ ជំពូក​: អាន់ណាច់ម៍
មាតិកានៃជំពូក លេខ​ទំព័រ
 
ការបកប្រែអត្ថន័យនៃគម្ពីរគួរអាន - ការបកប្រែជាភាសាកាណាដា - ប៉ាសៀរ មីសូរី - មាតិកានៃការបកប្រែ

ការបកប្រែដោយលោកគ្រូប៉ាសៀរ មីសូរី។ ត្រូវបានអភិវឌ្ឍដោយការត្រួតពិនិត្យរបស់មជ្ឈមណ្ឌលបកប្រែរ៉ូវ៉ាទ។

បិទ