Check out the new design

ការបកប្រែអត្ថន័យនៃគម្ពីរគួរអាន - ការបកប្រែជាភាសាកាណាដា - ប៉ាសៀរ មីសូរី * - មាតិកានៃការបកប្រែ


ការបកប្រែអត្ថន័យ ជំពូក​: មូហាំម៉ាត់   វាក្យខណ្ឌ:
اِنَّ اللّٰهَ یُدْخِلُ الَّذِیْنَ اٰمَنُوْا وَعَمِلُوا الصّٰلِحٰتِ جَنّٰتٍ تَجْرِیْ مِنْ تَحْتِهَا الْاَنْهٰرُ ؕ— وَالَّذِیْنَ كَفَرُوْا یَتَمَتَّعُوْنَ وَیَاْكُلُوْنَ كَمَا تَاْكُلُ الْاَنْعَامُ وَالنَّارُ مَثْوًی لَّهُمْ ۟
ಸತ್ಯವಿಶ್ವಾಸವಿರಿಸಿ ಸತ್ಕರ್ಮಗಳನ್ನು ಕೈಗೊಂಡಿರುವವರನ್ನು ಖಂಡಿತ ಅಲ್ಲಾಹನು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಲ್ಲಿ ಪ್ರವೇಶಿಸುವನು ಮತ್ತು ಸತ್ಯನಿಷೇಧಿಸಿರುವವರು ಇಹಲೋಕದಲ್ಲಿ ಸುಖಭೋಗಗಳನ್ನು ಅನುಭವಿಸುತ್ತಾ ಜಾನುವಾರುಗಳು ತಿನ್ನುವಂತೆ ತಿನ್ನುತ್ತಿದ್ದಾರೆ. ನರಕಾಗ್ನಿಯೇ ಅವರ ನೆಲೆಯಾಗಿದೆ.
ការបកស្រាយជាភាសា​អារ៉ាប់:
وَكَاَیِّنْ مِّنْ قَرْیَةٍ هِیَ اَشَدُّ قُوَّةً مِّنْ قَرْیَتِكَ الَّتِیْۤ اَخْرَجَتْكَ ۚ— اَهْلَكْنٰهُمْ فَلَا نَاصِرَ لَهُمْ ۟
ನಿಮ್ಮನ್ನು ಹೊರಹಾಕಿದ ನಿಮ್ಮ ನಾಡಿಗಿಂತಲೂ ಬಲಿಷ್ಠವಾಗಿದ್ದ ಅದೆಷ್ಟೋ ನಾಡುಗಳು ಹಿಂದೆ ಗತಿಸಿವೆ ನಾವು ಅವರನ್ನು ನಾಶಗೊಳಿಸಿಬಿಟ್ಟೆವು ಮತ್ತು ಅವರ ಸಹಾಯಕನಾರೂ ಇರಲಿಲ್ಲ.
ការបកស្រាយជាភាសា​អារ៉ាប់:
اَفَمَنْ كَانَ عَلٰی بَیِّنَةٍ مِّنْ رَّبِّهٖ كَمَنْ زُیِّنَ لَهٗ سُوْٓءُ عَمَلِهٖ وَاتَّبَعُوْۤا اَهْوَآءَهُمْ ۟
ತನ್ನ ಪ್ರಭುವಿನ ಕಡೆಯಿಂದ ಸುಸ್ಪಷ್ಟ ಆಧಾರದಲ್ಲಿರುವ ಒಬ್ಬ ವ್ಯಕ್ತಿಯು ತನ್ನ ದುಷ್ಕರ್ಮವು ಸುಂದರಗೊಳಿಸಲಾದ, ಮತ್ತು ತನ್ನ ಸ್ವೇಚ್ಛೆಗಳನ್ನು ಅನುಸರಿಸುತ್ತಿರುವ ಮತ್ತೊಬ್ಬ ವ್ಯಕ್ತಿಯಂತಾಗುವನೇ ?
ការបកស្រាយជាភាសា​អារ៉ាប់:
مَثَلُ الْجَنَّةِ الَّتِیْ وُعِدَ الْمُتَّقُوْنَ ؕ— فِیْهَاۤ اَنْهٰرٌ مِّنْ مَّآءٍ غَیْرِ اٰسِنٍ ۚ— وَاَنْهٰرٌ مِّنْ لَّبَنٍ لَّمْ یَتَغَیَّرْ طَعْمُهٗ ۚ— وَاَنْهٰرٌ مِّنْ خَمْرٍ لَّذَّةٍ لِّلشّٰرِبِیْنَ ۚ۬— وَاَنْهٰرٌ مِّنْ عَسَلٍ مُّصَفًّی ؕ— وَلَهُمْ فِیْهَا مِنْ كُلِّ الثَّمَرٰتِ وَمَغْفِرَةٌ مِّنْ رَّبِّهِمْ ؕ— كَمَنْ هُوَ خَالِدٌ فِی النَّارِ وَسُقُوْا مَآءً حَمِیْمًا فَقَطَّعَ اَمْعَآءَهُمْ ۟
ಭಯಭಕ್ತಿಯುಳ್ಳವರಿಗೆ ವಾಗ್ದಾನ ನೀಡಲಾಗುತ್ತಿರುವ ಸ್ವರ್ಗೋದ್ಯಾನದ ಗುಣವಿಶೇಷ ಹೀಗಿದೆ – ಅದರಲ್ಲಿ ಬದಲಾವಣೆ ಹೊಂದದAತಹ ನೀರಿನ ನದಿಗಳಿವೆ. ರುಚಿ ಬದಲಾಗದಂತಹ ಹಾಲಿನ ನದಿಗಳಿವೆ. ಕುಡಿಯುವವರಿಗೆ ಅತ್ಯಂತ ಸ್ವಾದಿಷ್ಟವಾದ ಮದ್ಯದ ನದಿಗಳಿವೆ ಮತ್ತು ಪರಿಶುದ್ಧಗೊಳಿಸಲಾದ ಜೇನಿನ ನದಿಗಳು ಇವೆ. ಅದರಲ್ಲಿ ಅವರಿಗೆ ಎಲ್ಲ ವಿಧದ ಹಣ್ಣು ಹಂಪಲುಗಳಿವೆ ಮತ್ತು ಅವರಿಗೆ ಅವರ ಪ್ರಭುವಿನ ಕ್ಷಮೆಯೂ ಇದೆ. ಇಂತಹಾ ಸ್ವರ್ಗವಾಸಿಗಳು ನರಕಾಗ್ನಿಯಲ್ಲಿ ಶಾಶ್ವತವಾಗಿರುವ ವ್ಯಕ್ತಿಗಳಂತಾಗುವರೇ ? ಅವರಿಗೆ ಕರುಳುಗಳನ್ನು ಕತ್ತರಿಸುವಂತಹ ಕುದಿಯುವ ನೀರನ್ನು ಕುಡಿಸಲಾಗುವುದು.
ការបកស្រាយជាភាសា​អារ៉ាប់:
وَمِنْهُمْ مَّنْ یَّسْتَمِعُ اِلَیْكَ ۚ— حَتّٰۤی اِذَا خَرَجُوْا مِنْ عِنْدِكَ قَالُوْا لِلَّذِیْنَ اُوْتُوا الْعِلْمَ مَاذَا قَالَ اٰنِفًا ۫— اُولٰٓىِٕكَ الَّذِیْنَ طَبَعَ اللّٰهُ عَلٰی قُلُوْبِهِمْ وَاتَّبَعُوْۤا اَهْوَآءَهُمْ ۟
(ಓ ಪೈಗಂಬರರೇ) ಅವರಲ್ಲಿ ಕೆಲವು ಕಪಟಿಗಳು ತಮ್ಮ ಮಾತನ್ನು ಕಿವಿಕೊಟ್ಟು ಕೇಳುತ್ತಾರೆ. ಕೊನೆಗೆ ಅವರು ನಿಮ್ಮ ಬಳಿಯಿಂದ ಹೊರಟುಹೋದರೆ ಜ್ಞಾನ ನೀಡಲ್ಪಟ್ಟವರೊಂದಿಗೆ (ಗೇಲಿ ಮಾಡುತ್ತಾ) ಈಗ ಅವರು ಹೇಳಿದ್ದೇನು ? ಎಂದು ಕೇಳುತ್ತಾರೆ, ಅವರ ಹೃದಯಗಳ ಮೇಲೆ ಅಲ್ಲಾಹನು ಮುದ್ರೆಯೊತ್ತಿರುವನು, ಮತ್ತು ಅವರು ತಮ್ಮ ಸ್ವೇಚ್ಛೆಗಳನ್ನು ಅನುಸರಿಸುತ್ತಿದ್ದಾರೆ.
ការបកស្រាយជាភាសា​អារ៉ាប់:
وَالَّذِیْنَ اهْتَدَوْا زَادَهُمْ هُدًی وَّاٰتٰىهُمْ تَقْوٰىهُمْ ۟
ಸನ್ಮಾರ್ಗ ಹೊಂದಿದವರಿಗೆ ಅಲ್ಲಾಹನು ಇನ್ನಷ್ಟು ಸನ್ಮಾರ್ಗವನ್ನು ಹೆಚ್ಚಿಸಿಕೊಡುತ್ತಾನೆ. ಮತ್ತು ಅವರಿಗೆ ಭಯಭಕ್ತಿಯನ್ನು ದಯಪಾಲಿಸುತ್ತಾನೆ.
ការបកស្រាយជាភាសា​អារ៉ាប់:
فَهَلْ یَنْظُرُوْنَ اِلَّا السَّاعَةَ اَنْ تَاْتِیَهُمْ بَغْتَةً ۚ— فَقَدْ جَآءَ اَشْرَاطُهَا ۚ— فَاَنّٰی لَهُمْ اِذَا جَآءَتْهُمْ ذِكْرٰىهُمْ ۟
ಅಂತ್ಯಗಳಿಗೆಯು ತಮ್ಮೆಡೆಗೆ ಹಠಾತ್ತನೆ ಬರುವುದನ್ನು ಅವರು ನಿರೀಕ್ಷಿಸುತ್ತಿದ್ದಾರೆಯೇ? ನಿಶ್ಚಯವಾಗಿಯೂ ಅದರ ಕುರುಹುಗಳು ಬಂದುಬಿಟ್ಟಿವೆ. ಇನ್ನು ಅವರೆಡೆಗೆ ಅದು ಬಂದರೆ ಅವರಿಗೆ ಉಪದೇಶ ಪಡೆಯುವ ಅವಕಾಶವೆಲ್ಲಿದೆ?
ការបកស្រាយជាភាសា​អារ៉ាប់:
فَاعْلَمْ اَنَّهٗ لَاۤ اِلٰهَ اِلَّا اللّٰهُ وَاسْتَغْفِرْ لِذَنْۢبِكَ وَلِلْمُؤْمِنِیْنَ وَالْمُؤْمِنٰتِ ؕ— وَاللّٰهُ یَعْلَمُ مُتَقَلَّبَكُمْ وَمَثْوٰىكُمْ ۟۠
ಓ ಪೈಗಂಬರರೇ ಖಂಡಿತವಾಗಿಯು ಅಲ್ಲಾಹನ ಹೊರತು ಅನ್ಯ ಆರಾಧ್ಯನಿಲ್ಲವೆಂಬುದನ್ನು ಅರಿತುಕೊಳ್ಳಿರಿ ಮತ್ತು ನಿಮ್ಮ ಪರವಾಗಿ ಮತ್ತು ಸತ್ಯವಿಶ್ವಾಸಿ-ವಿಶ್ವಾಸಿನಿಗಳ ಪರವಾಗಿಯು ಕ್ಷಮೆಯನ್ನು ಬೇಡಿರಿ. ನಿಮ್ಮ ಚಟುವಟಿಕೆಗಳನ್ನು ಮತ್ತು ನಿಮ್ಮ ತಂಗುದಾಣವನ್ನು ಅಲ್ಲಾಹನು ಬಲ್ಲನು.
ការបកស្រាយជាភាសា​អារ៉ាប់:
 
ការបកប្រែអត្ថន័យ ជំពូក​: មូហាំម៉ាត់
មាតិកានៃជំពូក លេខ​ទំព័រ
 
ការបកប្រែអត្ថន័យនៃគម្ពីរគួរអាន - ការបកប្រែជាភាសាកាណាដា - ប៉ាសៀរ មីសូរី - មាតិកានៃការបកប្រែ

ការបកប្រែដោយលោកគ្រូប៉ាសៀរ មីសូរី។ ត្រូវបានអភិវឌ្ឍដោយការត្រួតពិនិត្យរបស់មជ្ឈមណ្ឌលបកប្រែរ៉ូវ៉ាទ។

បិទ