Check out the new design

ការបកប្រែអត្ថន័យនៃគម្ពីរគួរអាន - ការបកប្រែជាភាសាកាណាដា - ប៉ាសៀរ មីសូរី * - មាតិកានៃការបកប្រែ


ការបកប្រែអត្ថន័យ ជំពូក​: អាន់នីសាក   វាក្យខណ្ឌ:
١لَّذِیْنَ یَتَرَبَّصُوْنَ بِكُمْ ۚ— فَاِنْ كَانَ لَكُمْ فَتْحٌ مِّنَ اللّٰهِ قَالُوْۤا اَلَمْ نَكُنْ مَّعَكُمْ ۖؗ— وَاِنْ كَانَ لِلْكٰفِرِیْنَ نَصِیْبٌ ۙ— قَالُوْۤا اَلَمْ نَسْتَحْوِذْ عَلَیْكُمْ وَنَمْنَعْكُمْ مِّنَ الْمُؤْمِنِیْنَ ؕ— فَاللّٰهُ یَحْكُمُ بَیْنَكُمْ یَوْمَ الْقِیٰمَةِ ؕ— وَلَنْ یَّجْعَلَ اللّٰهُ لِلْكٰفِرِیْنَ عَلَی الْمُؤْمِنِیْنَ سَبِیْلًا ۟۠
ಇವರು (ಕಪಟವಿಶ್ವಾಸಿಗಳು) ನಿಮಗೊದಗುವ ಪರಿಣಾಮವನ್ನು ನಿರೀಕ್ಷಿಸುತ್ತಿರುತ್ತಾರೆ. ಅನಂತರ ನಿಮಗೆ ಅಲ್ಲಾಹನು ವಿಜಯವನ್ನು ಕರುಣಿಸಿದರೆ ನಾವು ನಿಮ್ಮ ಜೊತೆಗಾರರಲ್ಲವೆ? ಎನ್ನುವರು. ಮತ್ತು ಸತ್ಯನಿಷೇಧಿಗಳಿಗೇನಾದರು ಯಶಸ್ಸು ಲಭಿಸಿದರೆ (ಅವರೊಂದಿಗೆ) ಹೇಳುವರು: ನಾವು ನಿಮ್ಮ ಮೇಲೆ ಯಶಸ್ಸು ಸಾಧಿಸಿದಾಗ ಮತ್ತು ನಿಮನ್ನು ವಿಶ್ವಾಸಿಗಳ ಕೈಗಳಿಂದ ರಕ್ಷಿಸಲಿಲ್ಲವೆ? ಆದರೆ ಪುನರುತ್ಥಾನ ದಿನದಂದು ಸ್ವತಃ ಅಲ್ಲಾಹನೇ ನಿಮ್ಮ ಮಧ್ಯೆ ತೀರ್ಪು ನೀಡುವನು. ಮತ್ತು ಅಲ್ಲಾಹನು ಸತ್ಯನಿಷೇಧಿಗಳಿಗೆ ವಿಶ್ವಾಸಿಗಳ ಮೇಲೆ ಎಂದೂ ಮಾರ್ಗವನ್ನು ತೆರೆದು ಕೊಡಲಾರನು.
ការបកស្រាយជាភាសា​អារ៉ាប់:
اِنَّ الْمُنٰفِقِیْنَ یُخٰدِعُوْنَ اللّٰهَ وَهُوَ خَادِعُهُمْ ۚ— وَاِذَا قَامُوْۤا اِلَی الصَّلٰوةِ قَامُوْا كُسَالٰی ۙ— یُرَآءُوْنَ النَّاسَ وَلَا یَذْكُرُوْنَ اللّٰهَ اِلَّا قَلِیْلًا ۟ؗۙ
ನಿಸ್ಸಂಶಯವಾಗಿಯು ಕಪಟ ವಿಶ್ವಾಸಿಗಳು ಅಲ್ಲಾಹನನ್ನು ವಂಚಿಸಲು ಯತ್ನಿಸುವರು ಮತ್ತು ಅವನು ಅವರನ್ನೇ ವಂಚನೆಗಳಿಗೆ ಸಿಲುಕಿಸುತ್ತಾನೆ. ಮತ್ತು ಅವರು ನಮಾಝ್‌ಗಾಗಿ ನಿಂತರೆ ತುಂಬಾ ಉದಾಸೀನರಾಗಿ ನಿಲ್ಲುತ್ತಾರೆ ಮತ್ತು ಜನರಿಗೆ ತೋರಿಸಲಿಕ್ಕಾಗಿ ನಿಲ್ಲುತ್ತಾರೆ. ಮತ್ತು ಅಲ್ಪವೇ ವಿನಃ ಅವರು ಅಲ್ಲಾಹನನ್ನು ಸ್ಮರಿಸಲಾರರು.
ការបកស្រាយជាភាសា​អារ៉ាប់:
مُّذَبْذَبِیْنَ بَیْنَ ذٰلِكَ ۖۗ— لَاۤ اِلٰی هٰۤؤُلَآءِ وَلَاۤ اِلٰی هٰۤؤُلَآءِ ؕ— وَمَنْ یُّضْلِلِ اللّٰهُ فَلَنْ تَجِدَ لَهٗ سَبِیْلًا ۟
ಅವರು ಆ ಗುಂಪಿಗೂ ಸೇರದೆ ಈ ಗುಂಪಿಗೂ ಸೇರದೇ ಮಧ್ಯದಲ್ಲಿ ಸಿಲುಕಿಕೊಂಡು ಹೊಯ್ದಾಡುತ್ತಿರುತ್ತಾರೆ. ಅಲ್ಲಾಹನು ಯಾರನ್ನು ಪಥಭ್ರಷ್ಟಗೊಳಿಸುತ್ತಾನೋ ಅವನಿಗೆ ನೀವು ಯಾವುದೇ ಮಾರ್ಗವನ್ನೂ ಕಾಣಲಾರಿರಿ.
ការបកស្រាយជាភាសា​អារ៉ាប់:
یٰۤاَیُّهَا الَّذِیْنَ اٰمَنُوْا لَا تَتَّخِذُوا الْكٰفِرِیْنَ اَوْلِیَآءَ مِنْ دُوْنِ الْمُؤْمِنِیْنَ ؕ— اَتُرِیْدُوْنَ اَنْ تَجْعَلُوْا لِلّٰهِ عَلَیْكُمْ سُلْطٰنًا مُّبِیْنًا ۟
ಓ ಸತ್ಯವಿಶ್ವಾಸಿಗಳೇ, ನೀವು ಸತ್ಯವಿಶ್ವಾಸಿಗಳ ವಿರುದ್ಧ ಸತ್ಯನಿಷೇಧಿಗಳನ್ನು ಅಪ್ತಮಿತ್ರರನ್ನಾಗಿ ಮಾಡಬೇಡಿರಿ. ನೀವು ನಿಮ್ಮ ವಿರುದ್ಧ ಅಲ್ಲಾಹನ ಸ್ಪಷ್ಟ ಪುರಾವೆಯು ಉಂಟುಮಾಡಲು ಇಚ್ಛಿಸುತ್ತಿರಾ?
ការបកស្រាយជាភាសា​អារ៉ាប់:
اِنَّ الْمُنٰفِقِیْنَ فِی الدَّرْكِ الْاَسْفَلِ مِنَ النَّارِ ۚ— وَلَنْ تَجِدَ لَهُمْ نَصِیْرًا ۟ۙ
ಖಂಡಿತವಾಗಿಯು ಕಪಟವಿಶ್ವಾಸಿಗಳು ನರಕದ ಅತ್ಯಂತ ತಳಭಾಗದಲ್ಲಿರುವರು. ನೀವು ಅವರಿಗೆ ಅಲ್ಲಾಹನೆದುರು ಯಾವ ಸಹಾಯಕನನ್ನು ಕಾಣಲಾರಿರಿ.
ការបកស្រាយជាភាសា​អារ៉ាប់:
اِلَّا الَّذِیْنَ تَابُوْا وَاَصْلَحُوْا وَاعْتَصَمُوْا بِاللّٰهِ وَاَخْلَصُوْا دِیْنَهُمْ لِلّٰهِ فَاُولٰٓىِٕكَ مَعَ الْمُؤْمِنِیْنَ ؕ— وَسَوْفَ یُؤْتِ اللّٰهُ الْمُؤْمِنِیْنَ اَجْرًا عَظِیْمًا ۟
ಆದರೆ ಯಾರು ಪಶ್ಚಾತ್ತಾಪ ಪಟ್ಟು ಮರಳುತ್ತಾರೋ ಸುಧಾರಣೆ ಮಾಡಿಕೊಳ್ಳುತ್ತಾರೋ ಅಲ್ಲಾಹನಲ್ಲಿ ದೃಢವಿಶ್ವಾಸ ಹೊಂದುತ್ತಾರೋ ಮತ್ತು ಅಲ್ಲಾಹನಿಗೋಸ್ಕರ ತಮ್ಮ ಧರ್ಮವನ್ನು ಮೀಸಲಿಡುತ್ತಾರೊ ಅವರು ಸತ್ಯವಿಶ್ವಾಸಿಗಳ ಜೊತೆಗಿರುವರು. ಅಲ್ಲಾಹನು ಸತ್ಯವಿಶ್ವಾಸಿಗಳಿಗೆ ಮಹಾಪ್ರತಿಫಲವನ್ನು ನೀಡುವನು.
ការបកស្រាយជាភាសា​អារ៉ាប់:
مَا یَفْعَلُ اللّٰهُ بِعَذَابِكُمْ اِنْ شَكَرْتُمْ وَاٰمَنْتُمْ ؕ— وَكَانَ اللّٰهُ شَاكِرًا عَلِیْمًا ۟
ನೀವು ಕೃತಜ್ಞತೆ ತೋರಿದರೆ ಮತ್ತು ಸತ್ಯವಿಶ್ವಾಸ ಹೊಂದಿದರೆ ಅಲ್ಲಾಹನು ನಿಮ್ಮನ್ನು ಶಿಕ್ಷಿಸಿ ಏನು ಮಾಡುವನು? ಅಲ್ಲಾಹನು ಆದರಿಸುವವನೂ ಸರ್ವಜ್ಞನೂ ಆಗಿದ್ದಾನೆ.
ការបកស្រាយជាភាសា​អារ៉ាប់:
 
ការបកប្រែអត្ថន័យ ជំពូក​: អាន់នីសាក
មាតិកានៃជំពូក លេខ​ទំព័រ
 
ការបកប្រែអត្ថន័យនៃគម្ពីរគួរអាន - ការបកប្រែជាភាសាកាណាដា - ប៉ាសៀរ មីសូរី - មាតិកានៃការបកប្រែ

ការបកប្រែដោយលោកគ្រូប៉ាសៀរ មីសូរី។ ត្រូវបានអភិវឌ្ឍដោយការត្រួតពិនិត្យរបស់មជ្ឈមណ្ឌលបកប្រែរ៉ូវ៉ាទ។

បិទ