Check out the new design

ការបកប្រែអត្ថន័យនៃគម្ពីរគួរអាន - ការបកប្រែជាភាសាកាណាដា - ប៉ាសៀរ មីសូរី * - មាតិកានៃការបកប្រែ


ការបកប្រែអត្ថន័យ ជំពូក​: អាលីអុិមរ៉ន   វាក្យខណ្ឌ:
یٰۤاَیُّهَا الَّذِیْنَ اٰمَنُوْۤا اِنْ تُطِیْعُوا الَّذِیْنَ كَفَرُوْا یَرُدُّوْكُمْ عَلٰۤی اَعْقَابِكُمْ فَتَنْقَلِبُوْا خٰسِرِیْنَ ۟
ಓ ಸತ್ಯವಿಶ್ವಾಸಿಗಳೇ, ನೀವು ಸತ್ಯನಿಷೇಧಿಗಳನ್ನು ಅನುಸರಿಸುವುದಾದರೆ ಅವರು ನಿಮ್ಮನ್ನು ಪೂರ್ವ ಸ್ಥಿತಿಗೆ ಮರಳಿಸಿ ಬಿಡುವರು. ಅನಂತರ ನೀವು ಪರಾಜಯ ಹೊಂದಿ ಹಿಂದಿರುಗುವಿರಿ.
ការបកស្រាយជាភាសា​អារ៉ាប់:
بَلِ اللّٰهُ مَوْلٰىكُمْ ۚ— وَهُوَ خَیْرُ النّٰصِرِیْنَ ۟
ಹಾಗಲ್ಲ, ಅಲ್ಲಾಹನು ನಿಮ್ಮ ರಕ್ಷಕನಾಗಿದ್ದಾನೆ ಮತ್ತು ಅವನೇ ನಿಮ್ಮ ಉತ್ತಮ ಸಹಾಯಕನಾಗಿದ್ದಾನೆ (ಸತ್ಯನಿಷೇಧಿಗಳು ನಿಮ್ಮ ಓಳಿತನ್ನು ಬಯಸುವವರಲ್ಲ).
ការបកស្រាយជាភាសា​អារ៉ាប់:
سَنُلْقِیْ فِیْ قُلُوْبِ الَّذِیْنَ كَفَرُوا الرُّعْبَ بِمَاۤ اَشْرَكُوْا بِاللّٰهِ مَا لَمْ یُنَزِّلْ بِهٖ سُلْطٰنًا ۚ— وَمَاْوٰىهُمُ النَّارُ ؕ— وَبِئْسَ مَثْوَی الظّٰلِمِیْنَ ۟
ಸದ್ಯದಲ್ಲೇ ನಾವು ಸತ್ಯನಿಷೇಧಿಗಳ ಹೃದಯಗಳಲ್ಲಿ ಭೀತಿಯನ್ನು ಹುಟ್ಟಿಸುವೆವು. ಇದು ಅವರು ಅಲ್ಲಾಹನೊಂದಿಗೆ ಅವನು ಯಾವ ಪುರಾವೆಯನ್ನೂ ಅವತೀರ್ಣಗೊಳಿಸದಿರುವ ವಸ್ತುಗಳನ್ನು ಸಹಭಾಗಿಗಳನ್ನಾಗಿ ನಿಶ್ಚಯಿಸಿದುದರ ಫಲವಾಗಿದೆ. ಅವರ (ಅಂತಿಮ) ವಾಸಸ್ಥಳವು ನರಕವಾಗಿದೆ ಮತ್ತು ಆ ಅಕ್ರಮಿಗಳ ವಾಸಸ್ಥಳವು ಅದೆಷ್ಟು ನಿಕೃಷ್ಟವಾಗಿದೆ!
ការបកស្រាយជាភាសា​អារ៉ាប់:
وَلَقَدْ صَدَقَكُمُ اللّٰهُ وَعْدَهٗۤ اِذْ تَحُسُّوْنَهُمْ بِاِذْنِهٖ ۚ— حَتّٰۤی اِذَا فَشِلْتُمْ وَتَنَازَعْتُمْ فِی الْاَمْرِ وَعَصَیْتُمْ مِّنْ بَعْدِ مَاۤ اَرٰىكُمْ مَّا تُحِبُّوْنَ ؕ— مِنْكُمْ مَّنْ یُّرِیْدُ الدُّنْیَا وَمِنْكُمْ مَّنْ یُّرِیْدُ الْاٰخِرَةَ ۚ— ثُمَّ صَرَفَكُمْ عَنْهُمْ لِیَبْتَلِیَكُمْ ۚ— وَلَقَدْ عَفَا عَنْكُمْ ؕ— وَاللّٰهُ ذُوْ فَضْلٍ عَلَی الْمُؤْمِنِیْنَ ۟
ಅಲ್ಲಾಹನು ನಿಮ್ಮೊಡನೆ ಮಾಡಿದ್ದ ತನ್ನ ವಾಗ್ದಾನವನ್ನು ಈಡೇರಿಸಿ ಕೊಟ್ಟಿರುವನು. ಆರಂಭದಲ್ಲಿ ಅಲ್ಲಾಹನ ಅಪ್ಪಣೆಯಿಂದ ನೀವು ಖುರೈಷರನ್ನು ವದಿಸುತ್ತಿದ್ದೀರಿ. ಅಲ್ಲಾಹನು ನೀವು ಆಶಿಸುತ್ತಿದ್ದ ವಿಜಯವನ್ನು ತೋರಿಸಿಕೊಟ್ಟನು ಬಳಿಕ ನೀವು ಪೈಗಂಬರರ ಆದೇಶವನ್ನು ಉಲ್ಲಂಘಿಸಿ ಯುದ್ಧದ ಆಯಕಟ್ಟಿನಲ್ಲಿ ಸ್ಥಿರವಾಗಿರುವ ವಿಷಯದಲ್ಲಿ ಅವಿಧೇಯತೆ ತೋರಿ ಜಗಳವಾಡತೊಡಗದಿರಿ. ಏಕೆಂದರೆ, ನಿಮ್ಮಲ್ಲಿ ಕೆಲವರು ಇಹಲೋಕವನ್ನು ಬಯಸುತ್ತಿದ್ದರು ಮತ್ತು ಕೆಲವರ ಉದ್ದೇಶವು ಪರಲೋಕವಾಗಿತ್ತು. ಅಲ್ಲಾಹನು ನಿಮ್ಮನ್ನು ಪರೀಕ್ಷಿಸಲೆಂದು ಅವರಿಂದ (ಖುರೈಷರಿಂದ) ಅಲಕ್ಷö್ಯಗೊಳಿಸಿದನು. ಆದರೂ ನಿಮ್ಮ ಪ್ರಮಾದವನ್ನು (ಯುದ್ಧದಿಂದ ಬೆನ್ನು ತೋರಿಸಿದ ಪಾಪವನ್ನು) ಖಂಡಿತವಾಗಿಯೂ ಕ್ಷಮಿಸಿರುತ್ತಾನೆ. ಅಲ್ಲಾಹನು ಸತ್ಯವಿಶ್ವಾಸಿಗಳ ಮೇಲೆ ಮಹಾ ಔದರ್ಯವಂತನಾಗಿದ್ದಾನೆ.
ការបកស្រាយជាភាសា​អារ៉ាប់:
اِذْ تُصْعِدُوْنَ وَلَا تَلْوٗنَ عَلٰۤی اَحَدٍ وَّالرَّسُوْلُ یَدْعُوْكُمْ فِیْۤ اُخْرٰىكُمْ فَاَثَابَكُمْ غَمًّا بِغَمٍّ لِّكَیْلَا تَحْزَنُوْا عَلٰی مَا فَاتَكُمْ وَلَا مَاۤ اَصَابَكُمْ ؕ— وَاللّٰهُ خَبِیْرٌ بِمَا تَعْمَلُوْنَ ۟
ನೀವು ಯಾರನ್ನು ತಿರುಗಿಯು ನೋಡದೇ (ರಣರಂಗದಿAದ) ಪಲಾಯನ ಗೈಯುತ್ತಿದ್ದ ಸಂದರ್ಭವನ್ನು ಸ್ಮರಿಸಿರಿ ಮತ್ತು ಸಂದೇಶವಾಹಕರು ನಿಮ್ಮನ್ನು ಹಿಂದಿನಿAದ ಕರೆಯುತ್ತಿದ್ದರು. ಅಲ್ಲಾಹನು ನಿಮಗೆ ದುಃಖದ ಮೇಲೆ ದುಃಖವನ್ನು ನೀಡಿದನು. ಇದೇಕೆಂದರೆ (ಮುಂದೆ ನಿಮಗೊಂದು ಪಾಠವಾಗಲೆಂದು) ನೀವು ನಷ್ಟ ಹೊಂದಿದ ವಸ್ತುವಿನ ಕುರಿತಾಗಲೀ ನಿಮಗೆ ಬಾಧಿಸಿದ ಆಪತ್ತಿನ ಕುರಿತಾಗಲೀ ದುಃಖಿಸದಿರಲೆಂದಾಗಿದೆ. ಅಲ್ಲಾಹನು ನಿಮ್ಮ ಸಕಲ ಕರ್ಮಗಳ ಕುರಿತು ಸೂಕ್ಷö್ಮ ಜ್ಞಾನವುಳ್ಳವನಾಗಿದ್ದಾನೆ.
ការបកស្រាយជាភាសា​អារ៉ាប់:
 
ការបកប្រែអត្ថន័យ ជំពូក​: អាលីអុិមរ៉ន
មាតិកានៃជំពូក លេខ​ទំព័រ
 
ការបកប្រែអត្ថន័យនៃគម្ពីរគួរអាន - ការបកប្រែជាភាសាកាណាដា - ប៉ាសៀរ មីសូរី - មាតិកានៃការបកប្រែ

ការបកប្រែដោយលោកគ្រូប៉ាសៀរ មីសូរី។ ត្រូវបានអភិវឌ្ឍដោយការត្រួតពិនិត្យរបស់មជ្ឈមណ្ឌលបកប្រែរ៉ូវ៉ាទ។

បិទ