Check out the new design

કુરઆન મજીદના શબ્દોનું ભાષાંતર - કન્નડ ભાષામાં અનુવાદ - બશીર મૈસૂરી * - ભાષાંતરોની અનુક્રમણિકા


શબ્દોનું ભાષાંતર સૂરહ: અત્ તહરીમ   આયત:

ಅತ್ತಹ್ರೀಮ್

یٰۤاَیُّهَا النَّبِیُّ لِمَ تُحَرِّمُ مَاۤ اَحَلَّ اللّٰهُ لَكَ ۚ— تَبْتَغِیْ مَرْضَاتَ اَزْوَاجِكَ ؕ— وَاللّٰهُ غَفُوْرٌ رَّحِیْمٌ ۟
ಓ ಪೈಗಂಬರರೇ ನೀವು ನಿಮ್ಮ ಪತ್ನಿಯರ ಮೆಚ್ಚುಗೆಯನ್ನು ಬಯಸುತ್ತಾ ಅಲ್ಲಾಹನು ನಿಮಗೆ ರ‍್ಮಸಮ್ಮತಗೊಳಿಸಿರುವುದನ್ನು ಏಕೆ ನಿಷಿದ್ಧಗೊಳಿಸಿರುತ್ತೀರಿ ? ಅಲ್ಲಾಹನು ಕ್ಷಮಾಶೀಲನು, ಕರುಣಾನಿಧಿಯು, ಆಗಿರುವನು.
અરબી તફસીરો:
قَدْ فَرَضَ اللّٰهُ لَكُمْ تَحِلَّةَ اَیْمَانِكُمْ ۚ— وَاللّٰهُ مَوْلٰىكُمْ ۚ— وَهُوَ الْعَلِیْمُ الْحَكِیْمُ ۟
ನಿಜವಾಗಿಯು ಅಲ್ಲಾಹನು ನಿಮಗೆ ಶಪಥಗಳಿಂದ ಬಿಡುಗಡೆಯ ಪರಿಹಾರವನ್ನು ನಿಶ್ಚಯಿಸಿದ್ದಾನೆ. ಅಲ್ಲಾಹನು ನಿಮ್ಮ ಸಂರಕ್ಷಕನು ಮತ್ತು ಅವನೇ ರ‍್ವಜ್ಞನು ಯುಕ್ತಿಪರ‍್ಣನಾಗಿರುವನು.
અરબી તફસીરો:
وَاِذْ اَسَرَّ النَّبِیُّ اِلٰی بَعْضِ اَزْوَاجِهٖ حَدِیْثًا ۚ— فَلَمَّا نَبَّاَتْ بِهٖ وَاَظْهَرَهُ اللّٰهُ عَلَیْهِ عَرَّفَ بَعْضَهٗ وَاَعْرَضَ عَنْ بَعْضٍ ۚ— فَلَمَّا نَبَّاَهَا بِهٖ قَالَتْ مَنْ اَنْۢبَاَكَ هٰذَا ؕ— قَالَ نَبَّاَنِیَ الْعَلِیْمُ الْخَبِیْرُ ۟
ಪೈಗಂಬರರು ತನ್ನ ರ‍್ವ ಪತ್ನಿಯೊಡನೆ ಒಂದು ಮಾತನ್ನು ರಹಸ್ಯವಾಗಿ ತಿಳಿಸಿದ ಸಂರ‍್ಭವನ್ನು ಸ್ಮರಿಸಿರಿ, ಆಕೆಯು ಈ ಮಾತನ್ನು ಇನ್ನೊಬ್ಬಳಿಗೆ ಮುಟ್ಟಿಸಿದಾಗ ಅಲ್ಲಾಹನು ತನ್ನ ಪೈಗಂಬರರಿಗೆ ಅದನ್ನು ತಿಳಿಸಿದನು, ಆಗ ಪೈಗಂಬರರು ಆ ಮಾತಿನ ಕೆಲವು ಅಂಶವನ್ನು ತಮ್ಮ ಪತ್ನಿಗೆ ತಿಳಿಸಿದರು ಹಾಗು ಕೆಲವನ್ನು ಬಿಟ್ಟುಬಿಟ್ಟರು, ಹಾಗೆಯೇ ಅವರು ಅದನ್ನು ತನ್ನ ಆ ಪತ್ನಿಗೆ ತಿಳಿಸಿದಾಗ ಆಕೆ ಹೇಳಿದಳು; ಇದನ್ನು ನಿಮಗೆ ತಿಳಿಸಿದವರಾರು ? ಪೈಗಂಬರರು ಹೇಳಿದರು; ಸಕಲವನ್ನು ಅರಿಯುವವನು ಸಂಪರ‍್ಣ ಜ್ಞಾನಿಯಾದ ಅಲ್ಲಾಹನು ಇದನ್ನು ತಿಳಿಸಿದನು.
અરબી તફસીરો:
اِنْ تَتُوْبَاۤ اِلَی اللّٰهِ فَقَدْ صَغَتْ قُلُوْبُكُمَا ۚ— وَاِنْ تَظٰهَرَا عَلَیْهِ فَاِنَّ اللّٰهَ هُوَ مَوْلٰىهُ وَجِبْرِیْلُ وَصَالِحُ الْمُؤْمِنِیْنَ ۚ— وَالْمَلٰٓىِٕكَةُ بَعْدَ ذٰلِكَ ظَهِیْرٌ ۟
ನೀವಿಬ್ಬರೂ ಅಲ್ಲಾಹನ ಮುಂದೆ ಪಶ್ಚಾತ್ತಾಪ ಹೊಂದಿ ಮರಳುವುದಾದರೆ (ಉತ್ತಮವಾಗಿದೆ) ನಿಜವಾಗಿಯೂ ನಿಮ್ಮಿಬ್ಬರ ಹೃದಯಗಳು ಋಜು ಮರ‍್ಗದಿಂದ ವಾಲಿಬಿಟ್ಟಿವೆ, ಮತ್ತು ನೀವಿಬ್ಬರೂ ಪೈಗಂಬರರ ವಿರುದ್ಧ ಪರಸ್ಪರ ಸಹಾಯ ನೀಡುವುದಾದರೆ ನಿಜವಾಗಿಯೂ ಅಲ್ಲಾಹನು ಅವರ ಕರ‍್ಯಸಾಧಕನಾಗಿರುವನು ಮತ್ತು ಜಿಬ್ರೀಲರು ಹಾಗು ಸಜ್ಜನರಾದ ಸತ್ಯವಿಶ್ವಾಸಿಗಳೂ ಸಹ ಅವರ ಜೊತೆಗೆ ದೇವದೂತರು ಸಹಾಯಕರಾಗಿರುತ್ತಾರೆ.
અરબી તફસીરો:
عَسٰی رَبُّهٗۤ اِنْ طَلَّقَكُنَّ اَنْ یُّبْدِلَهٗۤ اَزْوَاجًا خَیْرًا مِّنْكُنَّ مُسْلِمٰتٍ مُّؤْمِنٰتٍ قٰنِتٰتٍ تٰٓىِٕبٰتٍ عٰبِدٰتٍ سٰٓىِٕحٰتٍ ثَیِّبٰتٍ وَّاَبْكَارًا ۟
ಪೈಗಂಬರರು ನಿಮಗೆ ವಿಚ್ಛೇದನ ನೀಡಿದರೆ ಅವರ ಪ್ರಭುವು ಶೀಘ್ರವೇ ಅವರಿಗೆ ನಿಮ್ಮ ಬದಲಿಗೆ ನಿಮಗಿಂತ ಉತ್ತಮರೂ ವಿಧೇಯರಾಗುವವರೂ, ಸತ್ಯ ವಿಶ್ವಾಸವುಳ್ಳವರೂ, ಅಲ್ಲಾಹನ ಮುಂದೆ ಬಾಗುವವರೂ, ಪಶ್ಚಾತ್ತಾಪ ಹೊಂದಿ ಮರಳುವವರೂ, ಉಪವಾಸ ಆಚರಿಸುವವರೂ, ವಿವಾಹವಾದವರೂ, ಕನ್ಯೆಯರೂ ಆದ ಪತ್ನಿಯರನ್ನು ಕರುಣಿಸಬಹುದು.
અરબી તફસીરો:
یٰۤاَیُّهَا الَّذِیْنَ اٰمَنُوْا قُوْۤا اَنْفُسَكُمْ وَاَهْلِیْكُمْ نَارًا وَّقُوْدُهَا النَّاسُ وَالْحِجَارَةُ عَلَیْهَا مَلٰٓىِٕكَةٌ غِلَاظٌ شِدَادٌ لَّا یَعْصُوْنَ اللّٰهَ مَاۤ اَمَرَهُمْ وَیَفْعَلُوْنَ مَا یُؤْمَرُوْنَ ۟
ಓ ಸತ್ಯವಿಶ್ವಾಸಿಗಳೇ, ನಿಮ್ಮನ್ನೂ ನಿಮ್ಮ ಕುಟುಂಬವನ್ನು ನರಕಾಗ್ನಿಯಿಂದ ರಕ್ಷಿಸಿಕೊಳ್ಳಿರಿ. ಅದರ ಇಂಧನವು ಮನುಷ್ಯರು ಮತ್ತು ಕಲ್ಲುಗಳಾಗಿವೆ. ಅದರ ಮೇಲೆ ಕಠೋರರೂ, ಬಲಿಷ್ಠರೂ ಆದ ಮಲಕ್ಗಳಿರುವರು ಅಲ್ಲಾಹನು ಅವರಿಗೆ ಆಜ್ಞಾಪಿಸಿದ್ದನ್ನು ಅವರು ಉಲ್ಲಂಘಿಸುವುದಿಲ್ಲ. ಮಾತ್ರವಲ್ಲ ಆಜ್ಞೆ ನೀಡಲಾಗಿರುವುದನ್ನೇ ಅವರು ಮಾಡುತ್ತಾರೆ.
અરબી તફસીરો:
یٰۤاَیُّهَا الَّذِیْنَ كَفَرُوْا لَا تَعْتَذِرُوا الْیَوْمَ ؕ— اِنَّمَا تُجْزَوْنَ مَا كُنْتُمْ تَعْمَلُوْنَ ۟۠
ಓ ಸತ್ಯನಿಷೇಧಿಗಳೇ, ನೀವು ಇಂದು ನೆಪಗಳನ್ನೊಡ್ಡಬೇಡಿರಿ, ನೀವು ಮಾಡುತ್ತಿರುವ ಕೃತ್ಯಗಳ ಪ್ರತಿಫಲವನ್ನೇ ನಿಮಗೆ ನೀಡಲಾಗುತ್ತಿದೆ.
અરબી તફસીરો:
 
શબ્દોનું ભાષાંતર સૂરહ: અત્ તહરીમ
સૂરહ માટે અનુક્રમણિકા પેજ નંબર
 
કુરઆન મજીદના શબ્દોનું ભાષાંતર - કન્નડ ભાષામાં અનુવાદ - બશીર મૈસૂરી - ભાષાંતરોની અનુક્રમણિકા

શૈખ બશીર મૈસૂરી દ્વારા અનુવાદિત. રવ્વાદ ભાષાંતર કેન્દ્રની દેખરેખ હેઠળ તેની ચકાસણી કરવામાં આવી છે.

બંધ કરો