Check out the new design

Firo maanaaji Alqur'aana Teddunde nden - Eggo Kannada ngol - Bashiir Maisoori * - Loowdi firooji ɗi


Firo maanaaji Simoore.: Simoore pelle   Aaya.:

ಅಲ್- ಅಹ್ ಝಾಬ್

یٰۤاَیُّهَا النَّبِیُّ اتَّقِ اللّٰهَ وَلَا تُطِعِ الْكٰفِرِیْنَ وَالْمُنٰفِقِیْنَ ؕ— اِنَّ اللّٰهَ كَانَ عَلِیْمًا حَكِیْمًا ۟ۙ
ಓ ಪೈಗಂಬರರೇ! ಅಲ್ಲಾಹನನ್ನು ಭಯಪಡಿರಿ. ಮತ್ತು ಸತ್ಯ ನಿಷೇಧಿಗಳನ್ನು ಕಪಟವಿಶ್ವಾಸಿಗಳನ್ನು ಅನುಸರಿಸಬೇಡಿರಿ. ನಿಶ್ಚಯವಾಗಿಯು ಅಲ್ಲಾಹನು ಸರ್ವಜ್ಞಾನಿಯೂ, ಮಹಾ ಯುಕ್ತಿವಂತನೂ ಆಗಿದ್ದಾನೆ.
Tafsiraaɗe Aarabu ɗen:
وَّاتَّبِعْ مَا یُوْحٰۤی اِلَیْكَ مِنْ رَّبِّكَ ؕ— اِنَّ اللّٰهَ كَانَ بِمَا تَعْمَلُوْنَ خَبِیْرًا ۟ۙ
ನಿಮ್ಮೆಡೆಗೆ ನಿಮ್ಮ ಪ್ರಭುವಿನ ಕಡೆಯಿಂದ ಅವತೀರ್ಣವಾಗುತ್ತಿರುವುದನ್ನು ಅನುಸರಿಸಿರಿ. ಖಂಡತವಾಗಿಯೂ ಅಲ್ಲಾಹನು ನೀವು ಮಾಡುತ್ತಿರುವುದರ ಬಗ್ಗೆ ಅರಿವುಳ್ಳವನಾಗಿರುವನು.
Tafsiraaɗe Aarabu ɗen:
وَّتَوَكَّلْ عَلَی اللّٰهِ ؕ— وَكَفٰی بِاللّٰهِ وَكِیْلًا ۟
ನೀವು ಅಲ್ಲಾಹನ ಮೇಲೆ ಭರವಸೆಯನ್ನಿಡಿರಿ ಮತ್ತು ಕಾರ್ಯನಿರ್ವಾಹಕನಾಗಿ ಅಲ್ಲಾಹನೇ ಸಾಕು.
Tafsiraaɗe Aarabu ɗen:
مَا جَعَلَ اللّٰهُ لِرَجُلٍ مِّنْ قَلْبَیْنِ فِیْ جَوْفِهٖ ۚ— وَمَا جَعَلَ اَزْوَاجَكُمُ الّٰٓـِٔیْ تُظٰهِرُوْنَ مِنْهُنَّ اُمَّهٰتِكُمْ ۚ— وَمَا جَعَلَ اَدْعِیَآءَكُمْ اَبْنَآءَكُمْ ؕ— ذٰلِكُمْ قَوْلُكُمْ بِاَفْوَاهِكُمْ ؕ— وَاللّٰهُ یَقُوْلُ الْحَقَّ وَهُوَ یَهْدِی السَّبِیْلَ ۟
ಅಲ್ಲಾಹನು ಯಾವ ಮನುಷ್ಯನ ಎದೆಯೊಳಗೆ ಎರಡು ಹೃದಯಗಳನ್ನು ಇರಿಸಿಲ್ಲ ಮತ್ತು ನೀವು ತಾಯಿಯಂದಿರೆAದು ಕರೆದಿರುವ ನಿಮ್ಮ ಪತ್ನಿಯರನ್ನು ಅವನು ನಿಮಗೆ ಅವರನ್ನು ನಿಮ್ಮ ತಾಯಿಯಂದಿರನ್ನಾಗಿ ಮಾಡಿರುವುದಿಲ್ಲ ಮತ್ತು ನಿಮ್ಮ ದತ್ತು ಪುತ್ರರನ್ನು ನಿಮ್ಮ ಪುತ್ರರನ್ನಾಗಿಯೂ ನಿಶ್ಚಯಿಸಿರುವುದಿಲ್ಲ. ಇವು ನಿಮ್ಮ ಬಾಯಿ ಮಾತುಗಳು ಮಾತ್ರ. ಅಲ್ಲಾಹನು ಸತ್ಯವನ್ನೇ ಹೇಳುತ್ತಾನೆ ಹಾಗೂ ಅವನೇ ಸನ್ಮಾರ್ಗವನ್ನು ತೋರಿಸುತ್ತಾನೆ.
Tafsiraaɗe Aarabu ɗen:
اُدْعُوْهُمْ لِاٰبَآىِٕهِمْ هُوَ اَقْسَطُ عِنْدَ اللّٰهِ ۚ— فَاِنْ لَّمْ تَعْلَمُوْۤا اٰبَآءَهُمْ فَاِخْوَانُكُمْ فِی الدِّیْنِ وَمَوَالِیْكُمْ ؕ— وَلَیْسَ عَلَیْكُمْ جُنَاحٌ فِیْمَاۤ اَخْطَاْتُمْ بِهٖ وَلٰكِنْ مَّا تَعَمَّدَتْ قُلُوْبُكُمْ ؕ— وَكَانَ اللّٰهُ غَفُوْرًا رَّحِیْمًا ۟
ನೀವು ದತ್ತುಪುತ್ರರನ್ನು ಅವರ ತಂದೆಯರ ಹೆಸರುಗಳೊಂದಿಗೆ ಕರೆಯಿರಿ. ಇದು ಅಲ್ಲಾಹನ ಬಳಿ ಅತ್ಯಂತ ನ್ಯಾಯಯುತವಾಗಿದೆ. ಇನ್ನು ನೀವು ಅವರ ತಂದೆಯರನ್ನು ಅರಿತಿಲ್ಲವೆಂದಾದರೆ ಅವರು ಧರ್ಮದಲ್ಲಿ ನಿಮ್ಮ ಸಹೋದರರೂ ಅಗಿರುತ್ತಾರೆ. ನಿಮ್ಮಲ್ಲಿ ಪ್ರಮಾದವಶಾತ್ ಸಂಭವಿಸಿರುವುದರಲ್ಲಿ ನಿಮ್ಮ ಮೇಲೆ ದೋಷವೇನೂ ಇಲ್ಲ. ಆದರೆ ನೀವು ಉದ್ದೇಶಪೂರ್ವಕವಾಗಿ ಹೇಳಿರುವುದೇ ದೋಷಕರವಾಗಿದೆ. ಮತ್ತು ಅಲ್ಲಾಹನು ಮಹಾ ಕ್ಷಮಾಶೀಲನೂ ಕರುಣಾನಿಧಿಯೂ ಆಗಿದ್ದಾನೆ.
Tafsiraaɗe Aarabu ɗen:
اَلنَّبِیُّ اَوْلٰی بِالْمُؤْمِنِیْنَ مِنْ اَنْفُسِهِمْ وَاَزْوَاجُهٗۤ اُمَّهٰتُهُمْ ؕ— وَاُولُوا الْاَرْحَامِ بَعْضُهُمْ اَوْلٰی بِبَعْضٍ فِیْ كِتٰبِ اللّٰهِ مِنَ الْمُؤْمِنِیْنَ وَالْمُهٰجِرِیْنَ اِلَّاۤ اَنْ تَفْعَلُوْۤا اِلٰۤی اَوْلِیٰٓىِٕكُمْ مَّعْرُوْفًا ؕ— كَانَ ذٰلِكَ فِی الْكِتٰبِ مَسْطُوْرًا ۟
ಪೈಗಂಬರರು ಸತ್ಯವಿಶ್ವಾಸಿಗಳ ಮೇಲೆ ಸ್ವತಃ ಅವರಿಗಿಂತಲೂ ಹೆಚ್ಚು ಹಕ್ಕುದಾರರಾಗಿರುವರು. ಮತ್ತು ಪೈಗಂಬರರ ಪತ್ನಿಯರು ಸತ್ಯವಿಶ್ವಾಸಿಗಳ ಮಾತೆಯರಾಗಿದ್ದಾರೆ ಮತ್ತು ರಕ್ತ ಸಂಬAಧಿಕರು ಅಲ್ಲಾಹನ ಗ್ರಂಥದ ಪ್ರಕಾರ ಇತರ ಸತ್ಯ ವಿಶ್ವಾಸಿಗಳಿಗಿಂತಲೂ ಮುಹಾಜಿರ್‌ಗಳಿಗಿಂತಲೂ ಪರಸ್ಪರರ ನಡುವೆ ಹೆಚ್ಚು ಹಕ್ಕುದಾರರಾಗಿದ್ದಾರೆ. (ಆದರೆ) ನೀವು ನಿಮ್ಮ ಆಪ್ತಮಿತ್ರರೊಂದಿಗೆ ಒಳಿತು ಮಾಡುವುದಿದ್ದರೆ ಬೇರೆ ವಿಚಾರ. ಈ ನಿಯಮವು ಗ್ರಂಥದಲ್ಲಿ ದಾಖಲಾಗಿರುತ್ತದೆ.
Tafsiraaɗe Aarabu ɗen:
 
Firo maanaaji Simoore.: Simoore pelle
Loowdi cimooje ɗe Tonngoode hello ngon
 
Firo maanaaji Alqur'aana Teddunde nden - Eggo Kannada ngol - Bashiir Maisoori - Loowdi firooji ɗi

Eggo (lapito) mum ko Seyko Bashir Misuri. Nde woni ko e ñiiɓirde Ruwwad ngam eggude.

Uddu