Check out the new design

ترجمه‌ى معانی قرآن کریم - ترجمه‌ى كنادى ـ بشير ميسورى * - فهرست ترجمه‌ها


ترجمه‌ى معانی سوره: مجادله   آیه:

ಅಲ್ -ಮುಜಾದಿಲ

قَدْ سَمِعَ اللّٰهُ قَوْلَ الَّتِیْ تُجَادِلُكَ فِیْ زَوْجِهَا وَتَشْتَكِیْۤ اِلَی اللّٰهِ ۖۗ— وَاللّٰهُ یَسْمَعُ تَحَاوُرَكُمَا ؕ— اِنَّ اللّٰهَ سَمِیْعٌ بَصِیْرٌ ۟
(ಓ ಪೈಗಂಬರರೇ) ನಿಶ್ಚಯವಾಗಿಯೂ ನಿಮ್ಮೊಂದಿಗೆ ತನ್ನ ಪತಿಯ ವಿಚಾರದಲ್ಲಿತರ್ಕಿಸುತ್ತಿದ್ದಂತಹಾ ಹಾಗೂ ಅಲ್ಲಾಹನ ಮುಂದೆ ದೂರು ಹೇಳುತ್ತಿದ್ದಂತಹ ಸ್ತ್ರೀಯ ಮಾತನ್ನು ಅಲ್ಲಾಹನು ಆಲಿಸಿದನು ಮತ್ತು ಅಲ್ಲಾಹನು ನಿಮ್ಮಿಬ್ಬರ ಸಂಭಾಷಣೆಯನ್ನು ಆಲಿಸುತ್ತಿದ್ದನು. ನಿಸ್ಸಂಶಯವಾಗಿಯೂ ಅಲ್ಲಾಹನು ಆಲಿಸುವವನೂ ಎಲ್ಲವನ್ನು ನೋಡುವವನೂ ಆಗಿದ್ದಾನೆ.
تفسیرهای عربی:
اَلَّذِیْنَ یُظٰهِرُوْنَ مِنْكُمْ مِّنْ نِّسَآىِٕهِمْ مَّا هُنَّ اُمَّهٰتِهِمْ ؕ— اِنْ اُمَّهٰتُهُمْ اِلَّا الّٰٓـِٔیْ وَلَدْنَهُمْ ؕ— وَاِنَّهُمْ لَیَقُوْلُوْنَ مُنْكَرًا مِّنَ الْقَوْلِ وَزُوْرًا ؕ— وَاِنَّ اللّٰهَ لَعَفُوٌّ غَفُوْرٌ ۟
ನಿಮ್ಮ ಪೈಕಿ ಯಾರು ತಮ್ಮ ಪತ್ನಿಯೊಂದಿಗೆ ಝಿಹಾರ್ ಮಾಡಿ (ತಾಯಿ ಎಂದು ಹೇಳಿ) ಬಿಡುತ್ತಾರೋ ವಸ್ತುತಃ ಅವರು ಅವರ ತಾಯಂದಿರರಾಗ ಲಾರರು ,ಅವರನ್ನು ಹೆತ್ತವರೇ ಅವರ ತಾಯಂದಿರು, ನಿಜವಾಗಿಯೂ ಅವರು ವಿವೇಕಕ್ಕೆ ನಿಲುಕದಂತಹ ಸುಳ್ಳು ಹೇಳುತ್ತಿದ್ದಾರೆ. ನಿಸ್ಸಂಶಯವಾಗಿಯೂ ಅಲ್ಲಾಹನು ಮನ್ನಿಸುವವನು ಕ್ಷಮಾಶೀಲನೂ ಆಗಿದ್ದಾನೆ.
تفسیرهای عربی:
وَالَّذِیْنَ یُظٰهِرُوْنَ مِنْ نِّسَآىِٕهِمْ ثُمَّ یَعُوْدُوْنَ لِمَا قَالُوْا فَتَحْرِیْرُ رَقَبَةٍ مِّنْ قَبْلِ اَنْ یَّتَمَآسَّا ؕ— ذٰلِكُمْ تُوْعَظُوْنَ بِهٖ ؕ— وَاللّٰهُ بِمَا تَعْمَلُوْنَ خَبِیْرٌ ۟
ತಮ್ಮ ಸ್ತ್ರೀಯರೊಂದಿಗೆ ಝಿಹಾರ್ ಮಾಡುವವರು ತರುವಾಯ ತಾವು ಹೇಳಿದ ಮಾತಿನಿಂದ ಪಶ್ಚಾತ್ತಾಪ ಪಟ್ಟು ಮರಳಿದರೆ ಅವರು ಪರಸ್ಪರರನ್ನು ಸ್ಪರ್ಶಿಸುವ ಮೊದಲು ಒಬ್ಬ ಗುಲಾಮನನ್ನು ವಿಮೋಚಿಸತಕ್ಕದ್ದು. ಇದರ ಮೂಲಕ ನಿಮಗೆ ಉಪದೇಶ ನೀಡಲಾಗುತ್ತಿದೆ, ಅಲ್ಲಾಹನು ನೀವು ಮಾಡುತ್ತಿರುವುದರ ಕುರಿತು ಸೂಕ್ಷ್ಮಜ್ಞಾನಿಯಾಗಿರುವನು.
تفسیرهای عربی:
فَمَنْ لَّمْ یَجِدْ فَصِیَامُ شَهْرَیْنِ مُتَتَابِعَیْنِ مِنْ قَبْلِ اَنْ یَّتَمَآسَّا ۚ— فَمَنْ لَّمْ یَسْتَطِعْ فَاِطْعَامُ سِتِّیْنَ مِسْكِیْنًا ؕ— ذٰلِكَ لِتُؤْمِنُوْا بِاللّٰهِ وَرَسُوْلِهٖ ؕ— وَتِلْكَ حُدُوْدُ اللّٰهِ ؕ— وَلِلْكٰفِرِیْنَ عَذَابٌ اَلِیْمٌ ۟
ಇನ್ನು ಯಾರಿಗಾದರೂ ಗುಲಾಮನು ಸಿಗದಿದ್ದರೆ ಅವರು ಪರಸ್ಪರ ಸ್ಪರ್ಶಿಸುವ ಮೊದಲು ಅವನು ನಿರಂತರವಾಗಿ ಎರಡು ತಿಂಗಳ ಕಾಲ ಉಪವಾಸ ಆಚರಿಸಬೇಕಾಗಿದೆ, ಇದು ಸಾಧ್ಯವಾಗದಿದ್ದರೆ ಅವನು ಅರವತ್ತು ನಿರ್ಗತಿಕರಿಗೆ ಉಣಬಡಿಸಬೇಕಾಗಿದೆ. ಇದು ನೀವು ಅಲ್ಲಾಹನ ಹಾಗೂ ಅವನ ಸಂದೇಶವಾಹಕರ ಮೇಲೆ ವಿಶ್ವಾಸವಿಡಲೆಂದಾಗಿದೆ. ಇವು ಅಲ್ಲಾಹನ ಮೇರೆಗಳಾಗಿವೆ. ಮತ್ತು ಸತ್ಯ ನಿಷೇಧಿಗಳಿಗೆ ವೇದನಾಜನಕ ಯಾತನೆ ಇದೆ.
تفسیرهای عربی:
اِنَّ الَّذِیْنَ یُحَآدُّوْنَ اللّٰهَ وَرَسُوْلَهٗ كُبِتُوْا كَمَا كُبِتَ الَّذِیْنَ مِنْ قَبْلِهِمْ وَقَدْ اَنْزَلْنَاۤ اٰیٰتٍۢ بَیِّنٰتٍ ؕ— وَلِلْكٰفِرِیْنَ عَذَابٌ مُّهِیْنٌ ۟ۚ
ನಿಸ್ಸಂದೇಹವಾಗಿಯೂ ಅಲ್ಲಾಹನನ್ನು ಅವನ ಸಂದೇಶವಾಹಕರನ್ನು ವಿರೋಧಿಸುವವರು ತಮಗಿಂತ ಮುಂಚಿನವರು ನಿಂದಿಸಲ್ಪಟ್ಟAತೆ ಅವರೂ ನಿಂದಿಸಲ್ಪಡುವರು, ನಿಸ್ಸಂಶಯವಾಗಿಯೂ ನಾವು ಸುಸ್ಪಷ್ಟ ಪುರಾವೆಗಳನ್ನು ಅವತೀರ್ಣಗೊಳಿಸಿದ್ದೇವೆ ಮತ್ತು ಸತ್ಯ ನಿಷೇಧಿಗಳಿಗೆ ನಿಂದ್ಯತೆಯ ಯಾತನೆ ಇದೆ.
تفسیرهای عربی:
یَوْمَ یَبْعَثُهُمُ اللّٰهُ جَمِیْعًا فَیُنَبِّئُهُمْ بِمَا عَمِلُوْا ؕ— اَحْصٰىهُ اللّٰهُ وَنَسُوْهُ ؕ— وَاللّٰهُ عَلٰی كُلِّ شَیْءٍ شَهِیْدٌ ۟۠
ಅಲ್ಲಾಹನು ಅವರೆಲ್ಲರನ್ನು ಎಬ್ಬಿಸಿ ಅವರಿಗೆ ಅವರು ಮಾಡಿದಂತಹ ಕರ್ಮಗಳನ್ನು ತಿಳಿಸಿಕೊಡುವ ದಿನ. ಅಲ್ಲಾಹನು ಅದನ್ನು ಎಣಿಸಿ ದಾಖಲಿಸಿದ್ದಾನೆ. ಆದರೆ ಅವರು ಅದನ್ನು ಮರೆತುಬಿಟ್ಟಿದ್ದರು ಅಲ್ಲಾಹನು ಎಲ್ಲಾ ಸಂಗತಿಗಳ ಮೇಲೆ ಸಾಕ್ಷಿಯಾಗಿದ್ದಾನೆ.
تفسیرهای عربی:
اَلَمْ تَرَ اَنَّ اللّٰهَ یَعْلَمُ مَا فِی السَّمٰوٰتِ وَمَا فِی الْاَرْضِ ؕ— مَا یَكُوْنُ مِنْ نَّجْوٰی ثَلٰثَةٍ اِلَّا هُوَ رَابِعُهُمْ وَلَا خَمْسَةٍ اِلَّا هُوَ سَادِسُهُمْ وَلَاۤ اَدْنٰی مِنْ ذٰلِكَ وَلَاۤ اَكْثَرَ اِلَّا هُوَ مَعَهُمْ اَیْنَ مَا كَانُوْا ۚ— ثُمَّ یُنَبِّئُهُمْ بِمَا عَمِلُوْا یَوْمَ الْقِیٰمَةِ ؕ— اِنَّ اللّٰهَ بِكُلِّ شَیْءٍ عَلِیْمٌ ۟
ಆಕಾಶಗಳಲ್ಲಿರುವ ಮತ್ತು ಭೂಮಿಯಲ್ಲಿರುವ ಸಕಲ ವಸ್ತುಗಳನ್ನು ಅಲ್ಲಾಹನು ಅರಿಯುತ್ತಾನೆ ಎಂದು ನೀವು ಕಾಣುವುದಿಲ್ಲವೇ? ಮೂವರ ಗೂಢಾಲೋಚನೆಯು ಅವರ ಪೈಕಿ ನಾಲ್ಕನೆಯವನಾಗಿ ಅಲ್ಲಾಹನಲ್ಲದೆ ನಡೆಯದು, ಮತ್ತು ಐವರ ಗೂಢಾಲೋಚನೆಯು ಅವರ ಪೈಕಿ ಆರನೇಯವನಾಗಿ ಅವನಿಲ್ಲದೆ ನಡೆಯದು. ಅದಕ್ಕಿಂತ ಕಡಿಮೆಯವರದ್ದಾಗಲಿ ಹೆಚ್ಚಿನವರದ್ದಾಗಲಿ ಅವರೆಲ್ಲೇ ಇರಲಿ ಅವನು ಅವರ ಜೊತೆಯಲ್ಲಿ ಇರುತ್ತಾನೆ. ಬಳಿಕ ಪುನರುತ್ಥಾನದಂದು ಅವನು ಅವರಿಗೆ ಅವರು ಮಾಡುತ್ತಿದ್ದುದ್ದನ್ನು ತಿಳಿಸಿ ಕೊಡುವನು. ನಿಸ್ಸಂಶಯವಾಗಿಯೂ ಅಲ್ಲಾಹನು ಎಲ್ಲ ಸಂಗತಿಗಳನ್ನು ಅರಿಯುವವನಾಗಿರುವನು.
تفسیرهای عربی:
اَلَمْ تَرَ اِلَی الَّذِیْنَ نُهُوْا عَنِ النَّجْوٰی ثُمَّ یَعُوْدُوْنَ لِمَا نُهُوْا عَنْهُ وَیَتَنٰجَوْنَ بِالْاِثْمِ وَالْعُدْوَانِ وَمَعْصِیَتِ الرَّسُوْلِ ؗ— وَاِذَا جَآءُوْكَ حَیَّوْكَ بِمَا لَمْ یُحَیِّكَ بِهِ اللّٰهُ ۙ— وَیَقُوْلُوْنَ فِیْۤ اَنْفُسِهِمْ لَوْلَا یُعَذِّبُنَا اللّٰهُ بِمَا نَقُوْلُ ؕ— حَسْبُهُمْ جَهَنَّمُ ۚ— یَصْلَوْنَهَا ۚ— فَبِئْسَ الْمَصِیْرُ ۟
ಗೂಢಾಲೋಚನೆ ನಡೆಸುವುದರಿಂದ ತಡೆಯಲ್ಪಟ್ಟವರೆಡೆಗೆ ನೀವು ನೋಡಲಿಲ್ಲವೇ ?ಅವರು ತಮ್ಮನ್ನು ತಡೆಯಲಾದ ಕೆಲಸಗಳಿಗೆ ಪುನಃ ಮರಳುತ್ತಿದ್ದಾರೆ, ಮತ್ತು ಪರಸ್ಪರ ಪಾಪ, ಅತಿರೇಕ ಹಾಗೂ ಸಂದೇಶವಾಹಕರ ಧಿಕ್ಕಾರದ ವಿಚಾರದಲ್ಲಿ ಗೂಢಾಲೋಚನೆ ನಡೆಸುತ್ತಾರೆ, ಅವರು ನಿಮ್ಮ ಬಳಿಗೆ ಬಂದಾಗ ಅಲ್ಲಾಹನು ನಿಮಗೆ ಸಲಾಂ ಹೇಳದ ರೀತಿಯಲ್ಲಿ ಸಲಾಂ ಹೇಳುತ್ತಾರೆ ಮತ್ತು ನಾವು ಹೇಳುತ್ತಿರುವುದರ ನಿಮಿತ್ತ ಅಲ್ಲಾಹನು ನಮ್ಮನ್ನು ಶಿಕ್ಷಿಸುವುದಿಲ್ಲವೇಕೆ ? ಎಂದು ತಮ್ಮ ಮನಸ್ಸಿನಲ್ಲಿ ಹೇಳಿಕೊಳ್ಳುತ್ತಾರೆ. ಇವರಿಗೆ ನರಕವೇ ಸಾಕು, ಅವರು ಅದನ್ನು ಪ್ರವೇಶಿಸುವರು, ಹಾಗೆಯೇ ಅದೆಷ್ಟು ಕೆಟ್ಟ ನೆಲೆಯಾಗಿದೆ.
تفسیرهای عربی:
یٰۤاَیُّهَا الَّذِیْنَ اٰمَنُوْۤا اِذَا تَنَاجَیْتُمْ فَلَا تَتَنَاجَوْا بِالْاِثْمِ وَالْعُدْوَانِ وَمَعْصِیَتِ الرَّسُوْلِ وَتَنَاجَوْا بِالْبِرِّ وَالتَّقْوٰی ؕ— وَاتَّقُوا اللّٰهَ الَّذِیْۤ اِلَیْهِ تُحْشَرُوْنَ ۟
ಓ ಸತ್ಯ ವಿಶ್ವಾಸಿಗಳೇ ನೀವು ಪರಸ್ಪರ ಪಾಪ, ಅತಿರೇಕ, ಹಾಗೂ ಸಂದೇಶವಾಹಕನನ್ನು ಧಿಕ್ಕರಿಸುವ ವಿಚಾರದಲ್ಲಿ ಗೂಢಾಲೋಚನೆ ನಡೆಸದಿರಿ. ಬದಲಿಗೆ ನೀವು ಪುಣ್ಯ ಹಾಗೂ ಭಯ-ಭಕ್ತಿಯ ವಿಚಾರದಲ್ಲಿ ಗೂಢಾಲೋಚನೆ ನಡೆಸಿರಿ, ಮತ್ತು ನೀವು ಯಾರೆಡೆಗೆ ಒಟ್ಟುಗೂಡಿಸಲ್ಪಡುವಿರೋ ಆ ಅಲ್ಲಾಹನನ್ನು ಭಯಪಡಿರಿ.
تفسیرهای عربی:
اِنَّمَا النَّجْوٰی مِنَ الشَّیْطٰنِ لِیَحْزُنَ الَّذِیْنَ اٰمَنُوْا وَلَیْسَ بِضَآرِّهِمْ شَیْـًٔا اِلَّا بِاِذْنِ اللّٰهِ ؕ— وَعَلَی اللّٰهِ فَلْیَتَوَكَّلِ الْمُؤْمِنُوْنَ ۟
ಖಂಡಿತ ಗೂಢಾಲೋಚನೆಯು ಶೈತಾನನ ಕೃತ್ಯವಾಗಿದೆ, ಇದರಿಂದ ಸತ್ಯ ವಿಶ್ವಾಸಿಗಳಿಗೆ ದುಃಖವನ್ನುಂಟು ಮಾಡಲೆಂದಾಗಿದೆ ಆದರೆ ಅವನು ಅಲ್ಲಾಹನ ಅನುಮತಿ ಇಲ್ಲದೆ ಅವರಿಗೆ ಯಾವ ಹಾನಿಯನ್ನು ಮಾಡಲಾರನು ಸತ್ಯ ವಿಶ್ವಾಸಿಗಳು ಅಲ್ಲಾಹನ ಮೇಲೆಯೇ ಭರವಸೆಯನ್ನಿಡಲಿ.
تفسیرهای عربی:
یٰۤاَیُّهَا الَّذِیْنَ اٰمَنُوْۤا اِذَا قِیْلَ لَكُمْ تَفَسَّحُوْا فِی الْمَجٰلِسِ فَافْسَحُوْا یَفْسَحِ اللّٰهُ لَكُمْ ۚ— وَاِذَا قِیْلَ انْشُزُوْا فَانْشُزُوْا یَرْفَعِ اللّٰهُ الَّذِیْنَ اٰمَنُوْا مِنْكُمْ ۙ— وَالَّذِیْنَ اُوْتُوا الْعِلْمَ دَرَجٰتٍ ؕ— وَاللّٰهُ بِمَا تَعْمَلُوْنَ خَبِیْرٌ ۟
ಸತ್ಯ ವಿಶ್ವಾಸಿಗಳೇ ನೀವು ಸಭೆಗಳಲ್ಲಿ ಸ್ಥಳಾವಕಾಶ ಮಾಡಿಕೊಡಿರಿ ಎಂದು ನಿಮ್ಮೊಂದಿಗೆ ಹೇಳಲಾದರೆ ನೀವು ಸ್ಥಳಾವಕಾಶ ಮಾಡಿಕೊಡಿರಿ. ಅಲ್ಲಾಹನು ನಿಮಗೆ ಇಹಪರದಲ್ಲಿ) ವಿಶಾಲತೆಯನ್ನು ದಯಪಾಲಿಸುವನು ಮತ್ತು ನಿಮಗೆ ಎದ್ದು ಬಿಡಿರಿ ಎಂದು ಹೇಳಲಾದರೆ ನೀವು ಎದ್ದು ಬಿಡಿರಿ. ಅಲ್ಲಾಹನು ನಿಮ್ಮಲ್ಲಿ ಸತ್ಯ ವಿಶ್ವಾಸವಿರಿಸಿದವರ ಹಾಗೂ ಜ್ಞಾನ ನೀಡಲ್ಪಟ್ಟವರ ಪದವಿಗಳನ್ನು ಉನ್ನತಗೊಳಿಸುವನು ಮತ್ತು ಅಲ್ಲಾಹನು ನೀವು ಮಾಡುತ್ತಿರುವುದರ ಕುರಿತು ಚೆನ್ನಾಗಿ ಅರಿಯುವವನಾಗಿದ್ದಾನೆ.
تفسیرهای عربی:
یٰۤاَیُّهَا الَّذِیْنَ اٰمَنُوْۤا اِذَا نَاجَیْتُمُ الرَّسُوْلَ فَقَدِّمُوْا بَیْنَ یَدَیْ نَجْوٰىكُمْ صَدَقَةً ؕ— ذٰلِكَ خَیْرٌ لَّكُمْ وَاَطْهَرُ ؕ— فَاِنْ لَّمْ تَجِدُوْا فَاِنَّ اللّٰهَ غَفُوْرٌ رَّحِیْمٌ ۟
ಓ ಸತ್ಯ ವಿಶ್ವಾಸಿಗಳೇ ನೀವು ಸಂದೇಶವಾಹಕರೊAದಿಗೆ ಗೂಢಾಲೋಚನೆ ನಡೆಸಲು ಇಚ್ಚಿಸಿದಾಗ ನೀವು ನಿಮ್ಮ ಗೂಢಾಲೋಚನೆಯ ಮೊದಲು ಏನಾದರೂ ದಾನವನ್ನು ನೀಡಿರಿ. ಇದು ನಿಮ್ಮ ಪಾಲಿಗೆ ಅತ್ಯುತ್ತಮವೂ ಅತಿ ಪರಿಶುದ್ಧವೂ ಆಗಿದೆ, ಇನ್ನು ನಿಮ್ಮ ಬಳಿಗೆ ಏನೂ ಇಲ್ಲದಿದ್ದರೆ ನಿಸ್ಸಂಶಯವಾಗಿಯೂ ಅಲ್ಲಾಹನು ಕ್ಷಮಾಶೀಲನೂ ಕರುಣಾನಿಧಿಯೂ ಆಗಿದ್ದಾನೆ.
تفسیرهای عربی:
ءَاَشْفَقْتُمْ اَنْ تُقَدِّمُوْا بَیْنَ یَدَیْ نَجْوٰىكُمْ صَدَقٰتٍ ؕ— فَاِذْ لَمْ تَفْعَلُوْا وَتَابَ اللّٰهُ عَلَیْكُمْ فَاَقِیْمُوا الصَّلٰوةَ وَاٰتُوا الزَّكٰوةَ وَاَطِیْعُوا اللّٰهَ وَرَسُوْلَهٗ ؕ— وَاللّٰهُ خَبِیْرٌ بِمَا تَعْمَلُوْنَ ۟۠
ಗೂಢಾಲೋಚನೆಯ ಮೊದಲು ದಾನವನ್ನು ನೀಡುವುದರಿಂದ ನೀವು ಭಯಪಟ್ಟಿರಾ ? ಇನ್ನು ನೀವು ಅದನ್ನು ಮಾಡದಿದ್ದಾಗ ಅಲ್ಲಾಹನು ನಿಮ್ಮ ಪಶ್ಚಾತ್ತಾಪವನ್ನು ಸ್ವೀಕರಿಸಿಕೊಂಡನು. ಇನ್ನು ನೀವು ನಮಾಜ್ ಸಂಸ್ಥಾಪಿಸಿರಿ ಹಾಗೂ ಝಕಾತನ್ನು ಪಾವತಿಸಿರಿ ಮತ್ತು ಅಲ್ಲಾಹನನ್ನು, ಅವನ ಸಂದೇಶವಾಹಕರನ್ನು ಅನುಸರಿಸಿರಿ, ನೀವು ಮಾಡುತ್ತಿರುವುದರ ಕುರಿತು ಅಲ್ಲಾಹನು ಚೆನ್ನಾಗಿ ಬಲ್ಲನು.
تفسیرهای عربی:
اَلَمْ تَرَ اِلَی الَّذِیْنَ تَوَلَّوْا قَوْمًا غَضِبَ اللّٰهُ عَلَیْهِمْ ؕ— مَا هُمْ مِّنْكُمْ وَلَا مِنْهُمْ ۙ— وَیَحْلِفُوْنَ عَلَی الْكَذِبِ وَهُمْ یَعْلَمُوْنَ ۟ۚ
ಅಲ್ಲಾಹನ ಕ್ರೋಧಕ್ಕೊಳಗಾಗಿರುವ ಒಂದು(ಯಹೂದಿ) ಸಮೂಹದೊಂದಿಗೆ ಮೈತ್ರಿ ಮಾಡಿಕೊಂಡ ಕಪಟ ವಿಶ್ವಾಸಿಗಳೆಡೆಗೆ ನೀವು ನೋಡಲಿಲ್ಲವೇ? ಅವರು ನಿಮ್ಮವರೂ ಅಲ್ಲ ಅಥವ ಅವರಕಡೆಯವರೂ ಅಲ್ಲ, ಅವರು ತಿಳಿದೂ ತಿಳಿದೂ ಸುಳ್ಳು ಆಣೆ ಹಾಕುತ್ತಾರೆ.
تفسیرهای عربی:
اَعَدَّ اللّٰهُ لَهُمْ عَذَابًا شَدِیْدًا ؕ— اِنَّهُمْ سَآءَ مَا كَانُوْا یَعْمَلُوْنَ ۟
ಅಲ್ಲಾಹನು ಅವರಿಗಾಗಿ ಕಠಿಣಯಾತನೆಯನ್ನು ಸಿದ್ಧಪಡಿಸಿಟ್ಟಿರುವನು. ನಿಜವಾಗಿಯೂ ಅವರು ಮಾಡುತ್ತಿರುವುದೆಲ್ಲವೂ ಅತಿ ನಿಕೃಷ್ಟವಾದುದು.
تفسیرهای عربی:
اِتَّخَذُوْۤا اَیْمَانَهُمْ جُنَّةً فَصَدُّوْا عَنْ سَبِیْلِ اللّٰهِ فَلَهُمْ عَذَابٌ مُّهِیْنٌ ۟
ಅವರು ತಮ್ಮ ಆಣೆಗಳನ್ನು ಗುರಾಣಿಯನ್ನಾಗಿ ಮಾಡಿಕೊಂಡಿದ್ದಾರೆ ಮತ್ತು ಅಲ್ಲಾಹನ ಮಾರ್ಗದಿಂದ ಜನರನ್ನು ತಡೆಯುತ್ತಾರೆ, ಅವರಿಗೆ ಅಪಮಾನಕರ ಯಾತನೆ ಇದೆ.
تفسیرهای عربی:
لَنْ تُغْنِیَ عَنْهُمْ اَمْوَالُهُمْ وَلَاۤ اَوْلَادُهُمْ مِّنَ اللّٰهِ شَیْـًٔا ؕ— اُولٰٓىِٕكَ اَصْحٰبُ النَّارِ ؕ— هُمْ فِیْهَا خٰلِدُوْنَ ۟
ಅವರ ಸಂಪತ್ತುಗಳಾಗಲಿ ಅವರ ಸಂತಾನಗಳಾಗಲಿ ಅಲ್ಲಾಹನ ಶಿಕ್ಷೆಯಿಂದ ಸ್ವಲ್ಪವೂ ಪ್ರಯೋಜನವನ್ನು ನೀಡಲಾರವು. ಅವರು ನರಕವಾಸಿಗಳಾಗಿದ್ದಾರೆ ಮತ್ತು ಅದರಲ್ಲಿ ಅವರು ಶಾಶ್ವತವಾಗಿರುವರು.
تفسیرهای عربی:
یَوْمَ یَبْعَثُهُمُ اللّٰهُ جَمِیْعًا فَیَحْلِفُوْنَ لَهٗ كَمَا یَحْلِفُوْنَ لَكُمْ وَیَحْسَبُوْنَ اَنَّهُمْ عَلٰی شَیْءٍ ؕ— اَلَاۤ اِنَّهُمْ هُمُ الْكٰذِبُوْنَ ۟
ಅಲ್ಲಾಹನು ಅವರೆಲ್ಲರನ್ನೂ ಜೀವಂತಗೊಳಿಸಿ ಎಬ್ಬಿಸುವ ದಿನ ಅವರು ನಿಮ್ಮ ಮುಂದೆ ಆಣೆಹಾಕುವಂತೆ ಅಲ್ಲಾಹನ ಮುಂದೆಯೂ ಆಣೆ ಹಾಕಲಿದ್ದಾರೆ ಮತ್ತು ಅವರು ತಾವು ಯಾವುದೊ ಕಾರ್ಯ ಸಾಧಿಸಿಬಿಡುವೆವೆಂದು ಭಾವಿಸಿಕೊಳ್ಳುವರು ನಿಜವಾಗಿಯೂ ಅವರು ಸುಳ್ಳುಗಾರರಾಗಿದ್ದಾರೆ.
تفسیرهای عربی:
اِسْتَحْوَذَ عَلَیْهِمُ الشَّیْطٰنُ فَاَنْسٰىهُمْ ذِكْرَ اللّٰهِ ؕ— اُولٰٓىِٕكَ حِزْبُ الشَّیْطٰنِ ؕ— اَلَاۤ اِنَّ حِزْبَ الشَّیْطٰنِ هُمُ الْخٰسِرُوْنَ ۟
ಶೈತಾನನು ಅವರ ಮೇಲೆ ಹಿಡಿತವನ್ನು ಸಾಧಿಸಿದ್ದಾನೆ ಮತ್ತು ಅವರಿಂದ ಅಲ್ಲಾಹನ ಸ್ಮರಣೆಯನ್ನು ಮರೆಸಿದ್ದಾನೆ ಅವರು ಶೈತಾನನ ಪಕ್ಷದವರಾಗಿದ್ದಾರೆ ನಿಸ್ಸಂದೇಹವಾಗಿಯೂ ಶೈತಾನನ ಪಕ್ಷವೇ ನಷ್ಟಹೊಂದುವAತಹದ್ದಾಗಿದೆ.
تفسیرهای عربی:
اِنَّ الَّذِیْنَ یُحَآدُّوْنَ اللّٰهَ وَرَسُوْلَهٗۤ اُولٰٓىِٕكَ فِی الْاَذَلِّیْنَ ۟
ಖಂಡಿತವಾಗಿಯೂ ಅಲ್ಲಾಹನನ್ನು ಮತ್ತು ಅವನ ಸಂದೇಶವಾಹಕರನ್ನು ವಿರೋಧಿಸುವವರೇ ಅತ್ಯಂತ ನಿಂದ್ಯರಲ್ಲಿ ಸೇರಿದವರಾಗಿದ್ದಾರೆ.
تفسیرهای عربی:
كَتَبَ اللّٰهُ لَاَغْلِبَنَّ اَنَا وَرُسُلِیْ ؕ— اِنَّ اللّٰهَ قَوِیٌّ عَزِیْزٌ ۟
ನಾನು ಮತ್ತು ನನ್ನ ಸಂದೇಶವಾಕರೇ ವಿಜಯ ಸಾಧಿಸುವೆವೆಂದು ಅಲ್ಲಾಹನು ದಾಖಲಿಸಿದ್ದಾನೆ. ವಾಸ್ತವದಲ್ಲಿ ಅಲ್ಲಾಹನು ಸರ್ವಶಕ್ತನು ಪ್ರತಾಪಶಾಲಿಯು ಆಗಿದ್ದಾನೆ.
تفسیرهای عربی:
لَا تَجِدُ قَوْمًا یُّؤْمِنُوْنَ بِاللّٰهِ وَالْیَوْمِ الْاٰخِرِ یُوَآدُّوْنَ مَنْ حَآدَّ اللّٰهَ وَرَسُوْلَهٗ وَلَوْ كَانُوْۤا اٰبَآءَهُمْ اَوْ اَبْنَآءَهُمْ اَوْ اِخْوَانَهُمْ اَوْ عَشِیْرَتَهُمْ ؕ— اُولٰٓىِٕكَ كَتَبَ فِیْ قُلُوْبِهِمُ الْاِیْمَانَ وَاَیَّدَهُمْ بِرُوْحٍ مِّنْهُ ؕ— وَیُدْخِلُهُمْ جَنّٰتٍ تَجْرِیْ مِنْ تَحْتِهَا الْاَنْهٰرُ خٰلِدِیْنَ فِیْهَا ؕ— رَضِیَ اللّٰهُ عَنْهُمْ وَرَضُوْا عَنْهُ ؕ— اُولٰٓىِٕكَ حِزْبُ اللّٰهِ ؕ— اَلَاۤ اِنَّ حِزْبَ اللّٰهِ هُمُ الْمُفْلِحُوْنَ ۟۠
ಅಲ್ಲಾಹನಲ್ಲೂ ಅಂತ್ಯದಿನದಲ್ಲೂ ವಿಶ್ವಾಸವಿಡುವ ಜನರನ್ನು ಅಲ್ಲಾಹನನ್ನೂ ಅವನ ಸಂದೇಶವಾಹಕರನ್ನೂ ವಿರೋಧಿಸುವವರೊಂದಿಗೆ ಸ್ನೇಹ ಹೊಂದಿರುವುದಾಗಿ ನೀವು ಎಂದಿಗೂ ಕಾಣಲಾರಿರಿ. ಅವರು ಅವರ ತಂದೆಯAದಿರು ಇಲ್ಲವೇ, ಅವರ ಪುತ್ರರುಇಲ್ಲವೇ, ಅವರ ಸಹೋದರರು ಇಲ್ಲವೇ, ಅವರ ಆಪ್ತ ಕುಟುಂಬಿಕರು ಆಗಿದ್ದರೂ ಸರಿಯೇ, ಅವರ ಹೃದಯಗಳಲ್ಲಿ ಅಲ್ಲಾಹನು ಸತ್ಯ ವಿಶ್ವಾಸವನ್ನು ದಾಖಲಿಸಿರುತ್ತಾನೆ, ಮತ್ತು ಅವನು ತನ್ನ ಪ್ರಕಾಶದ ಮೂಲಕ ಅವರನ್ನು ಪ್ರಬಲಗೊಳಿಸಿದ್ದಾನೆ. ಹಾಗೂ ಅವನು ಅವರನ್ನು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೊದ್ಯಾನಗಳಲ್ಲಿ ಪ್ರವೇಶಗೊಳಿಸುವನು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು, ಅಲ್ಲಾಹನು ಅವರಿಂದ ಸಂತುಷ್ಟನಾದನು ಹಾಗೂ ಅವರೂ ಅವರಿಂದ ಸಂತುಷ್ಟರಾಗಿದ್ದಾರೆ, ಅವರೇ ಅಲ್ಲಾಹನ ಪಕ್ಷದವರು ತಿಳಿದುಕೊಳ್ಳಿರಿ! ಅಲ್ಲಾಹನ ಪಕ್ಷದವರೇ ಯಶಸ್ಸು ಪಡೆಯುವವರಾಗಿದ್ದಾರೆ,
تفسیرهای عربی:
 
ترجمه‌ى معانی سوره: مجادله
فهرست سوره‌ها شماره‌ى صفحه
 
ترجمه‌ى معانی قرآن کریم - ترجمه‌ى كنادى ـ بشير ميسورى - فهرست ترجمه‌ها

مترجم: شیخ بشیر میسوری. تحت نظارت مرکز ترجمه‌ى رواد توسعه یافته است.

بستن