Check out the new design

ترجمه‌ى معانی قرآن کریم - ترجمه‌ى كنادى ـ بشير ميسورى * - فهرست ترجمه‌ها


ترجمه‌ى معانی سوره: شوریٰ   آیه:

ಅಶ್ಶೂರಾ

حٰمٓ ۟ۚ
ಹಾ-ಮೀಮ್
تفسیرهای عربی:
عٓسٓقٓ ۟
ಐನ್-ಸೀನ್-ಕಾಫ್.
تفسیرهای عربی:
كَذٰلِكَ یُوْحِیْۤ اِلَیْكَ وَاِلَی الَّذِیْنَ مِنْ قَبْلِكَ ۙ— اللّٰهُ الْعَزِیْزُ الْحَكِیْمُ ۟
ಓ ಸಂದೇಶವಾಹಕರೇ ಪ್ರತಾಪಶಾಲಿಯು ಯುಕ್ತಿಪೂರ್ಣನು ಆದ ಅಲ್ಲಾಹನು ನಿಮ್ಮ ಕಡೆಗೂ ನಿಮಗಿಂತ ಮುಂಚೆ ಗತಿಸಿದ ಸಂದೇಶವಾಹಕರ ಕಡೆಗೂ ಇದೇ ರೀತಿ ದಿವ್ಯವಾಣಿ ಕಳುಹಿಸುತ್ತಿದ್ದನು.
تفسیرهای عربی:
لَهٗ مَا فِی السَّمٰوٰتِ وَمَا فِی الْاَرْضِ ؕ— وَهُوَ الْعَلِیُّ الْعَظِیْمُ ۟
ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅವನದ್ದೇ ಆಗಿದೆ. ಅವನು ಅತ್ಯುನ್ನತನೂ, ಮಹೋನ್ನತನೂ ಆಗಿದ್ದಾನೆ.
تفسیرهای عربی:
تَكَادُ السَّمٰوٰتُ یَتَفَطَّرْنَ مِنْ فَوْقِهِنَّ وَالْمَلٰٓىِٕكَةُ یُسَبِّحُوْنَ بِحَمْدِ رَبِّهِمْ وَیَسْتَغْفِرُوْنَ لِمَنْ فِی الْاَرْضِ ؕ— اَلَاۤ اِنَّ اللّٰهَ هُوَ الْغَفُوْرُ الرَّحِیْمُ ۟
ಆಕಾಶಗಳು ಮೇಲ್ಭಾಗದಿಂದ ಸಿಡಿದು ಬೀಳುವುದರಲ್ಲಿದೆ ಮತ್ತು ಮಲಕ್‌ಗಳು ತಮ್ಮ ಪ್ರಭುವಿನ ಸ್ತುತಿ ಕೀರ್ತನೆಯೊಂದಿಗೆ ಅವನ ಪಾವಿತ್ರö್ಯವನ್ನು ಕೊಂಡಾಡುತ್ತಿದ್ದಾರೆ. ಮತ್ತು ಭೂವಾಸಿಗಳಿಗಾಗಿ ಅವರು ಪಾಪವಿಮೋಚನೆಯನ್ನು ಬೇಡುತ್ತಿರುತ್ತಾರೆ. ತಿಳಿಯಿರಿ! ಅಲ್ಲಾಹನೇ ಕ್ಷಮಿಸುವವನೂ ಕರುಣಾನಿಧಿಯೂ ಆಗಿದ್ದಾನೆ.
تفسیرهای عربی:
وَالَّذِیْنَ اتَّخَذُوْا مِنْ دُوْنِهٖۤ اَوْلِیَآءَ اللّٰهُ حَفِیْظٌ عَلَیْهِمْ ۖؗ— وَمَاۤ اَنْتَ عَلَیْهِمْ بِوَكِیْلٍ ۟
ಯಾರು ಅಲ್ಲಾಹನನ್ನು ಬಿಟ್ಟು ಇತರರನ್ನು ರಕ್ಷಕ ಮಿತ್ರರನ್ನಾಗಿ ಮಾಡಿಕೊಂಡಿರುವರೋ ಅವರ ಮೇಲ್ವಿಚಾರಕನು ಅಲ್ಲಾಹನೇ ಆಗಿರುತ್ತಾನೆ. ಮತ್ತು ನೀವು ಅವರ ಹೊಣೆಗಾರರಲ್ಲ.
تفسیرهای عربی:
وَكَذٰلِكَ اَوْحَیْنَاۤ اِلَیْكَ قُرْاٰنًا عَرَبِیًّا لِّتُنْذِرَ اُمَّ الْقُرٰی وَمَنْ حَوْلَهَا وَتُنْذِرَ یَوْمَ الْجَمْعِ لَا رَیْبَ فِیْهِ ؕ— فَرِیْقٌ فِی الْجَنَّةِ وَفَرِیْقٌ فِی السَّعِیْرِ ۟
ಇದೇ ರೀತಿ ನಾವು ನಿಮ್ಮೆಡೆಗೆ ಅರಬೀ ಭಾಷೆಯಲ್ಲಿರುವ ಕುರ್‌ಆನನ್ನು ಅವತೀರ್ಣಗೊಳಿಸಿದ್ದೇವೆ. ಇದು ನೀವು ಮಕ್ಕಾ ಮತ್ತು ಅದರ ಸುತ್ತಮುತ್ತಲಲ್ಲಿರು ವವರನ್ನು ಎಚ್ಚರಿಸಲೆಂದೂ, ಮತ್ತು ಸರ್ವರನ್ನು ಒಟ್ಟು ಸೇರಿಸಲಾಗುವ ದಿನದ ಬಗ್ಗೆ ಮುನ್ನೆಚ್ಚರಿಕೆ ನೀಡಲೆಂದಾಗಿದೆ. ಅಂದು ಒಂದು ತಂಡವು ಸ್ವರ್ಗಕ್ಕೆ ಹೋಗುವುದು ಮತ್ತೊಂದು ತಂಡವು ನರಕಕ್ಕೆ ಹೋಗುವುದು
تفسیرهای عربی:
وَلَوْ شَآءَ اللّٰهُ لَجَعَلَهُمْ اُمَّةً وَّاحِدَةً وَّلٰكِنْ یُّدْخِلُ مَنْ یَّشَآءُ فِیْ رَحْمَتِهٖ ؕ— وَالظّٰلِمُوْنَ مَا لَهُمْ مِّنْ وَّلِیٍّ وَّلَا نَصِیْرٍ ۟
ಅಲ್ಲಾಹನು ಇಚ್ಛಿಸುತ್ತಿದ್ದರೆ ಅವರೆಲ್ಲರನ್ನು ಒಂದೇ ಸಮುದಾಯದವರನ್ನಾಗಿ ಮಾಡುತ್ತಿದ್ದನು. ಆದರೆ ಅವನು ತಾನಿಚ್ಛಿಸುವವರನ್ನು ತನ್ನ ಕೃಪೆಯಲ್ಲಿ ಸೇರಿಸುತ್ತಾನೆ ಮತ್ತು ಅಕ್ರಮಿಗಳಿಗೆ ರಕ್ಷಕಮಿತ್ರನಾಗಲೀ ಸಹಾಯಕನಾಗಲೀ ಯಾರೂ ಇರಲಾರನು.
تفسیرهای عربی:
اَمِ اتَّخَذُوْا مِنْ دُوْنِهٖۤ اَوْلِیَآءَ ۚ— فَاللّٰهُ هُوَ الْوَلِیُّ وَهُوَ یُحْیِ الْمَوْتٰی ؗ— وَهُوَ عَلٰی كُلِّ شَیْءٍ قَدِیْرٌ ۟۠
ವಾಸ್ತವದಲ್ಲಿ ಅವರು ಅಲ್ಲಾಹನನ್ನು ಬಿಟ್ಟು ಇತರರನ್ನು ರಕ್ಷಕರನ್ನಾಗಿ ಮಾಡಿಕೊಂಡಿದ್ದಾರೆಯೇ? ಅಲ್ಲಾಹನೇ ರಕ್ಷಕನಾಗಿದ್ದಾನೆ. ಅವನೇ ಮೃತರನ್ನು ಜೀವಂತಗೊಳಿಸುತ್ತಾನೆ ಮತ್ತು ಅವನೇ ಸಕಲ ವಸ್ತುಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ.
تفسیرهای عربی:
وَمَا اخْتَلَفْتُمْ فِیْهِ مِنْ شَیْءٍ فَحُكْمُهٗۤ اِلَی اللّٰهِ ؕ— ذٰلِكُمُ اللّٰهُ رَبِّیْ عَلَیْهِ تَوَكَّلْتُ ۖۗ— وَاِلَیْهِ اُنِیْبُ ۟
ನೀವು ಯಾವ ವಿಷಯದಲ್ಲಿ ಭಿನ್ನಾಭಿಪ್ರಾಯ ಹೊಂದಿರುವಿರೋ ಅದರ ತೀರ್ಮಾನ ಅಲ್ಲಾಹನ ಕಡೆಯಿಂದಲೇ ಆಗುವುದು. ಆ ಅಲ್ಲಾಹನೇ ನನ್ನ ಪ್ರಭು. ನಾನು ಅವನ ಮೇಲೆ ಭರವಸೆಯನ್ನು ಇರಿಸಿದ್ದೇನೆ. ಮತ್ತು ಅವನ ಕಡೆಗೆ ನಾನು ಮರಳುತ್ತೇನೆ.
تفسیرهای عربی:
 
ترجمه‌ى معانی سوره: شوریٰ
فهرست سوره‌ها شماره‌ى صفحه
 
ترجمه‌ى معانی قرآن کریم - ترجمه‌ى كنادى ـ بشير ميسورى - فهرست ترجمه‌ها

مترجم: شیخ بشیر میسوری. تحت نظارت مرکز ترجمه‌ى رواد توسعه یافته است.

بستن