Check out the new design

የቅዱስ ቁርዓን ይዘት ትርጉም - የካናድኛ ትርጉም - በሺር ሜሶሪ * - የትርጉሞች ማዉጫ


የይዘት ትርጉም ምዕራፍ: ሷድ   አንቀጽ:
اِصْبِرْ عَلٰی مَا یَقُوْلُوْنَ وَاذْكُرْ عَبْدَنَا دَاوٗدَ ذَا الْاَیْدِ ۚ— اِنَّهٗۤ اَوَّابٌ ۟
ಓ ಪ್ರವಾದಿ, ನೀವು ಇವರ ಮಾತುಗಳ ಮೇಲೆ ಸಹನೆ ವಹಿಸಿರಿ ಹಾಗೂ ಮಹಾ ಬಲಿಷ್ಠರಾಗಿದ್ದ ನಮ್ಮ ದಾಸ ದಾವೂದರನ್ನು ಸ್ಮರಿಸಿರಿ. ನಿಜವಾಗಿಯು ಅವರು ಅತ್ಯಧಿಕ (ಅಲ್ಲಾಹನೆಡೆಗೆ) ಪಶ್ಚಾತಾಪ ಪಟ್ಟು ಮರಳುವವರಾಗಿದ್ದರು.
የአረብኛ ቁርኣን ማብራሪያ:
اِنَّا سَخَّرْنَا الْجِبَالَ مَعَهٗ یُسَبِّحْنَ بِالْعَشِیِّ وَالْاِشْرَاقِ ۟ۙ
ಅವರೊಂದಿಗೆ ಸಂಜೆ ಮುಂಜಾನೆಯಲ್ಲಿ ಪಾವಿತ್ರö್ಯವನ್ನು ಸ್ತುತಿಸಲಿಕ್ಕಾಗಿ ನಾವು ಪರ್ವತಗಳನ್ನು ನಿಯಂತ್ರಿಸಿ ಕೊಟ್ಟಿದ್ದೆವು.
የአረብኛ ቁርኣን ማብራሪያ:
وَالطَّیْرَ مَحْشُوْرَةً ؕ— كُلٌّ لَّهٗۤ اَوَّابٌ ۟
ಮತ್ತು ಪಕ್ಷಿಗಳೂ ಅವರ ಸುತ್ತಲೂ ಒಟ್ಟಾಗಿ ಸೇರುತ್ತಿದ್ದವು ಮತ್ತು ಅವೆಲ್ಲವೂ ಅವರಿಗೆ ವಿಧೇಯವಾಗಿದ್ದವು.
የአረብኛ ቁርኣን ማብራሪያ:
وَشَدَدْنَا مُلْكَهٗ وَاٰتَیْنٰهُ الْحِكْمَةَ وَفَصْلَ الْخِطَابِ ۟
ಮತ್ತು ನಾವು ಅವರ ಸಾಮ್ರಾಜ್ಯವನ್ನು ಬಲಪಡಿಸಿದ್ದೆವು ಹಾಗೂ ಅವರಿಗೆ ಸುಜ್ಞಾನವನ್ನು ನಿರ್ಣಾಯಕವಾಗಿ ಮಾತನಾಡುವ ಸಾಮರ್ಥ್ಯವನ್ನು ದಯಪಾಲಿಸಿದ್ದೆವು.
የአረብኛ ቁርኣን ማብራሪያ:
وَهَلْ اَتٰىكَ نَبَؤُا الْخَصْمِ ۘ— اِذْ تَسَوَّرُوا الْمِحْرَابَ ۟ۙ
ಗೋಡೆಯನ್ನೇರಿ ಅವರ ಆರಾಧನಾ ಕೊಠಡಿಗೆ ಬಂದAತಹ ಆ ವ್ಯಾಜ್ಯಗಾರರ ಸುದ್ದಿಯು ನಿಮಗೆ ತಲುಪಿದೆಯೇ ?
የአረብኛ ቁርኣን ማብራሪያ:
اِذْ دَخَلُوْا عَلٰی دَاوٗدَ فَفَزِعَ مِنْهُمْ قَالُوْا لَا تَخَفْ ۚ— خَصْمٰنِ بَغٰی بَعْضُنَا عَلٰی بَعْضٍ فَاحْكُمْ بَیْنَنَا بِالْحَقِّ وَلَا تُشْطِطْ وَاهْدِنَاۤ اِلٰی سَوَآءِ الصِّرَاطِ ۟
ಅವರು ದಾವೂದರ ಬಳಿಗೆ ಬಂದಾಗ ದಾವೂದರು ಅವರನ್ನು ಕಂಡು ಭಯಪಟ್ಟರು. ಆಗ ಅವರು ಹೇಳಿದರು: ಹೆದರಬೇಡಿರಿ. ನಾವು ಎರಡು ಕಕ್ಷಿದಾರರಾಗಿದ್ದೇವೆ. ನಮ್ಮಲ್ಲಿ ಒಬ್ಬನು ಇನ್ನೊಬ್ಬನ ಮೇಲೆ ಅತಿಕ್ರಮತೋರಿದ್ದಾನೆ. ಇನ್ನು ನೀವು ನ್ಯಾಯದೊಂದಿಗೆ ನಮ್ಮ ನಡುವೆ ತೀರ್ಮಾನ ಮಾಡಿರಿ ಮತ್ತು ಅನ್ಯಾಯ ಮಾಡಬೇಡಿರಿ ಮತ್ತು ನಮ್ಮನ್ನು ನೇರ ಮಾರ್ಗಕ್ಕೆ ಮುನ್ನಡೆಸಿರಿ.
የአረብኛ ቁርኣን ማብራሪያ:
اِنَّ هٰذَاۤ اَخِیْ ۫— لَهٗ تِسْعٌ وَّتِسْعُوْنَ نَعْجَةً وَّلِیَ نَعْجَةٌ وَّاحِدَةٌ ۫— فَقَالَ اَكْفِلْنِیْهَا وَعَزَّنِیْ فِی الْخِطَابِ ۟
(ಕೇಳಿರಿ) ಇವನು ನನ್ನ ಸಹೋದರನು. ಇವನ ಬಳಿ ತೊಂಬತ್ತೊAಬತ್ತು ಕುರಿಗಳಿವೆ ಮತ್ತು ನನ್ನ ಬಳಿ ಒಂದೇ ಒಂದು ಕುರಿ ಇದೆ. ಆದರೆ ಇವನು ನಿನ್ನ ಈ ಒಂದನ್ನು ಸಹ ನನಗೆ ಒಪ್ಪಿಸಿ ಬಿಡು ಎಂದು ನನ್ನೊಂದಿಗೆ ಹೇಳುತ್ತಾನೆ ಮತ್ತು ಇವನು ವಾಗ್ವಾದದಲ್ಲಿ ನನ್ನನ್ನು ಸೋಲಿಸಿದ್ದಾನೆ.
የአረብኛ ቁርኣን ማብራሪያ:
قَالَ لَقَدْ ظَلَمَكَ بِسُؤَالِ نَعْجَتِكَ اِلٰی نِعَاجِهٖ ؕ— وَاِنَّ كَثِیْرًا مِّنَ الْخُلَطَآءِ لَیَبْغِیْ بَعْضُهُمْ عَلٰی بَعْضٍ اِلَّا الَّذِیْنَ اٰمَنُوْا وَعَمِلُوا الصّٰلِحٰتِ وَقَلِیْلٌ مَّا هُمْ ؕ— وَظَنَّ دَاوٗدُ اَنَّمَا فَتَنّٰهُ فَاسْتَغْفَرَ رَبَّهٗ وَخَرَّ رَاكِعًا وَّاَنَابَ ۟
ಅವರು (ದಾವೂದ್) ಹೇಳಿದರು: ಇವನು ತನ್ನ ಕುರಿಗಳೊಂದಿಗೆ ನಿನ್ನ ಕುರಿಯನ್ನು ಸೇರಿಸಿಕೊಳ್ಳಲು ಕೇಳಿರುವುದು ನಿಸ್ಸಂಶಯವಾಗಿಯು ನಿನ್ನ ಮೇಲೆ ಮಾಡಿದ ಅಕ್ರಮವಾಗಿದೆ ಮತ್ತು ಹೆಚ್ಚಿನ ಭಾಗಸ್ಥರು ಪರಸ್ಪರ ಒಬ್ಬರನ್ನೊಬ್ಬರ ಮೇಲೆ ಅತಿಕ್ರಮವೆಸಗುತ್ತಾರೆ. ಆದರೆ ಸತ್ಯವಿಶ್ವಾಸವಿಟ್ಟವರು ಹಾಗೂ ಸತ್ಕರ್ಮಗಳನ್ನು ಕÉÊಗೊಂಡವರ ಹೊರತು. ಇಂತಹವರು ಬಹಳ ವಿರಳರಾಗಿದ್ದಾರೆ ಮತ್ತÄ ದಾವೂದರು ನಾವು ಅವರನ್ನು ಪರೀಕ್ಷೆಗೊಳಪಡಿಸಿ ದೆವೆಂದು ತಿಳಿದರು. ಕೊಡಲೇ ತನ್ನ ಪ್ರಭುವಿನಲ್ಲಿ ಕ್ಷೆಮೆಯಾಚಿಸಿದರು ಹಾಗೂ ದÉÊನ್ಯತೆಯನ್ನು ತೋರುತ್ತಾ ಸಾಷ್ಟಾಂಗವೆರಗಿದರು ಮತ್ತು ಪಶ್ಚಾತ್ತಾಪ ಪಟ್ಟು ಮರಳಿದರು.
የአረብኛ ቁርኣን ማብራሪያ:
فَغَفَرْنَا لَهٗ ذٰلِكَ ؕ— وَاِنَّ لَهٗ عِنْدَنَا لَزُلْفٰی وَحُسْنَ مَاٰبٍ ۟
ಆಗ ನಾವು ಅವರ ಪ್ರಮಾದವನ್ನು ಕ್ಷಮಿಸಿದೆವು ಮತ್ತು ಖಂಡಿತವಾಗಿಯು ಅವರಿಗಾಗಿ ನಮ್ಮ ಬಳಿ ನಿಕಟ ಸ್ಥಾನ ಮತ್ತು ಅತ್ಯುತ್ತಮ ನೆಲೆಯಿದೆ.
የአረብኛ ቁርኣን ማብራሪያ:
یٰدَاوٗدُ اِنَّا جَعَلْنٰكَ خَلِیْفَةً فِی الْاَرْضِ فَاحْكُمْ بَیْنَ النَّاسِ بِالْحَقِّ وَلَا تَتَّبِعِ الْهَوٰی فَیُضِلَّكَ عَنْ سَبِیْلِ اللّٰهِ ؕ— اِنَّ الَّذِیْنَ یَضِلُّوْنَ عَنْ سَبِیْلِ اللّٰهِ لَهُمْ عَذَابٌ شَدِیْدٌۢ بِمَا نَسُوْا یَوْمَ الْحِسَابِ ۟۠
ಓ ದಾವೂದ್! ನಾವು ನಿಮ್ಮನ್ನು ಈ ಭೂಮಿಯಲ್ಲಿ ಪ್ರತಿನಿಧಿಯನ್ನಾಗಿ ನಿಶ್ಚಯಿಸಿರುತ್ತೇವೆ. ಆದ್ದರಿಂದ ನೀವು ಜನರ ನಡುವೆ ನ್ಯಾಯದೊಂದಿಗೆ ತೀರ್ಪು ನೀಡಿರಿ ಹಾಗೂ ಸ್ವೇಚ್ಛೆಯನ್ನು ಅನುಸರಿಸದಿರಿ. ಇಲ್ಲ ವಾದಲ್ಲಿ ಅದು ನಿಮ್ಮನ್ನು ಅಲ್ಲಾಹನ ಮಾರ್ಗದಿಂದ ತಪ್ಪಿಸಿ ಬಿಡುವುದು. ನಿಜವಾಗಿಯು ಯಾರು ಅಲ್ಲಾಹನ ಮಾರ್ಗದಿಂದ ತಪ್ಪಿ ಹೋಗುತ್ತಾರೋ ಅವರಿಗೆ ಅತ್ಯುಗ್ರ ಶಿಕ್ಷೆಯಿರುವುದು. ಇದು ಅವರು ವಿಚಾರಣಾ ದಿನವನ್ನು ಮರೆತು ಬಿಟ್ಟಿದ್ದುದರ ನಿಮಿತ್ತವಾಗಿದೆ.
የአረብኛ ቁርኣን ማብራሪያ:
 
የይዘት ትርጉም ምዕራፍ: ሷድ
የምዕራፎች ማውጫ የገፅ ቁጥር
 
የቅዱስ ቁርዓን ይዘት ትርጉም - የካናድኛ ትርጉም - በሺር ሜሶሪ - የትርጉሞች ማዉጫ

ተርጓሚ ሸይኽ በሺር መይሶሪ ፤ በሩዋድ የትርጉም ማዕከል ተቆጣጣሪነት ማሻሻያ ተደርጎበታል።

መዝጋት