Check out the new design

የቅዱስ ቁርዓን ይዘት ትርጉም - የካናድኛ ትርጉም - በሺር ሜሶሪ * - የትርጉሞች ማዉጫ


የይዘት ትርጉም ምዕራፍ: ኣሊ-ኢምራን   አንቀጽ:
اِنَّ الَّذِیْنَ كَفَرُوْا لَنْ تُغْنِیَ عَنْهُمْ اَمْوَالُهُمْ وَلَاۤ اَوْلَادُهُمْ مِّنَ اللّٰهِ شَیْـًٔا ؕ— وَاُولٰٓىِٕكَ هُمْ وَقُوْدُ النَّارِ ۟ۙ
ಖಂಡಿತವಾಗಿಯು ಸತ್ಯ ನಿಷೇಧಿಗಳಿಗೆ ಅವರ ಸಂಪತ್ತಾಗಲೀ ಮತ್ತು ಸಂತಾನವಾಗಲೀ ಅಲ್ಲಾಹನ ವಿರುದ್ಧ ಯಾವ ಪ್ರಯೋಜನವನ್ನು ನೀಡಲಾರದು. ಅವರೇ ನರಕದ ಇಂಧನವಾಗಿದ್ದಾರೆ.
የአረብኛ ቁርኣን ማብራሪያ:
كَدَاْبِ اٰلِ فِرْعَوْنَ ۙ— وَالَّذِیْنَ مِنْ قَبْلِهِمْ ؕ— كَذَّبُوْا بِاٰیٰتِنَا ۚ— فَاَخَذَهُمُ اللّٰهُ بِذُنُوْبِهِمْ ؕ— وَاللّٰهُ شَدِیْدُ الْعِقَابِ ۟
ಅವರ ಅವಸ್ಥೆಯು ಫಿರ್‌ಔನನ ಅನುಯಾಯಿಗಳ ಮತ್ತು ಅವರ ಮುಂಚಿನವರ ಅವಸ್ಥೆಯಂತಾಗಿದೆ. ಅವರು ನಮ್ಮ ದೃಷ್ಟಾಂತಗಳನ್ನು ಸುಳ್ಳಾಗಿಸಿದರು. ಅನಂತರ ಅಲ್ಲಾಹನು ಅವರ ಪಾಪಗಳ ನಿಮಿತ್ತ ಅವರನ್ನು ಹಿಡಿದುಬಿಟ್ಟನು ಮತ್ತು ಅಲ್ಲಾಹನು ಕಠಿಣವಾಗಿ ಶಿಕ್ಷಿಸುವನಾಗಿದ್ದಾನೆ.
የአረብኛ ቁርኣን ማብራሪያ:
قُلْ لِّلَّذِیْنَ كَفَرُوْا سَتُغْلَبُوْنَ وَتُحْشَرُوْنَ اِلٰی جَهَنَّمَ ؕ— وَبِئْسَ الْمِهَادُ ۟
ಓ ಪ್ರವಾದಿ ನೀವು ಸತ್ಯನಿಷೇಧಿಗಳಿಗೆ ಹೇಳಿರಿ; ನೀವು ಸಧ್ಯದಲ್ಲಿಯೇ ಸೋಲಿಸಲಾಗುವಿರಿ ಮತ್ತು ನರಕದೆಡೆಗೆ ಅಟ್ಟಲು ಒಟ್ಟು ಗೂಡಿಸಲಾಗುವಿರಿ. ಅದು ಬಹಳ ಕೆಟ್ಟ ಸ್ಥಳವಾಗಿದೆ.
የአረብኛ ቁርኣን ማብራሪያ:
قَدْ كَانَ لَكُمْ اٰیَةٌ فِیْ فِئَتَیْنِ الْتَقَتَا ؕ— فِئَةٌ تُقَاتِلُ فِیْ سَبِیْلِ اللّٰهِ وَاُخْرٰی كَافِرَةٌ یَّرَوْنَهُمْ مِّثْلَیْهِمْ رَاْیَ الْعَیْنِ ؕ— وَاللّٰهُ یُؤَیِّدُ بِنَصْرِهٖ مَنْ یَّشَآءُ ؕ— اِنَّ فِیْ ذٰلِكَ لَعِبْرَةً لِّاُولِی الْاَبْصَارِ ۟
ನಿಶ್ಚಯವಾಗಿಯು (ಬದರ್ ಯುದ್ಧದಲ್ಲಿ) ಪರಸ್ಪರ ಎದುರುಗೊಂಡ ಎರಡು ಬಣಗಳಲ್ಲಿ ನಿಮಗೆ ದೃಷ್ಟಾಂತವಿದೆ. ಒಂದು ಬಣವು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುತ್ತಿತ್ತು ಮತ್ತು ಇನ್ನೊಂದು ಬಣವು ಸತ್ಯನಿಷೇಧಿಗಳದ್ದಾಗಿತ್ತು. ಅವರು ತಮ್ಮ ಭಾಹ್ಯ ದೃಷ್ಟಿಯಲ್ಲಿ ಅವರನ್ನು (ಮುಸ್ಲಿಮರನ್ನು) ತಮಗಿಂತ ಇಮ್ಮಡಿ ಇರುವುದಾಗಿ ಕಂಡಿದ್ದರು. ಅಲ್ಲಾಹನು ತಾನಿಚ್ಛಿಸುವವರಿಗೆ ತನ್ನ ಸಹಾಯದಿಂದ ಬೆಂಬಲವನ್ನು ನೀಡುತ್ತಾನೆ. ಖಂಡಿತವಾಗಿಯು ಅಂತಃರ್ದೃಷ್ಟಿಯುಳ್ಳವರಿಗೆ ಇದರಲ್ಲಿ ಪಾಠವಿದೆ.
የአረብኛ ቁርኣን ማብራሪያ:
زُیِّنَ لِلنَّاسِ حُبُّ الشَّهَوٰتِ مِنَ النِّسَآءِ وَالْبَنِیْنَ وَالْقَنَاطِیْرِ الْمُقَنْطَرَةِ مِنَ الذَّهَبِ وَالْفِضَّةِ وَالْخَیْلِ الْمُسَوَّمَةِ وَالْاَنْعَامِ وَالْحَرْثِ ؕ— ذٰلِكَ مَتَاعُ الْحَیٰوةِ الدُّنْیَا ۚ— وَاللّٰهُ عِنْدَهٗ حُسْنُ الْمَاٰبِ ۟
ಜನÀÀರಿಗೆ ಇಂದ್ರಿಯಾಸಕ್ತಿಗಳಾದ ಸ್ತಿçÃಯರು, ಪುತ್ರರು, ರಾಶಿ ಹಾಕಲಾದ ಚಿನ್ನ ಮತ್ತು ಬೆಳ್ಳಿಗಳ ನಿಧಿಗಳು ಉತ್ಕೃಷ್ಟ ಜಾತಿಯ ಕುದುರೆಗಳು, ಜಾನುವಾರುಗಳು ಮತ್ತು ಕೃಷಿ ಭೂಮಿ ಮುಂತಾದ ಮನಮೋಹಕ ವಸ್ತುಗಳ ಪ್ರೀತಿಯನ್ನು ಅಲಂಕೃತಗೊಳಿಸಲಾಗಿದೆ. ಇವೆಲ್ಲವೂ ಐಹಿಕ ಜೀವನದ ಸುಖಭೋಗ ಸವಲತ್ತುಗಳಷ್ಟೆ ಮತ್ತು ಮರಳಿ ತಲುಪಲಿರುವ ಉತ್ತಮ ಸ್ಥಳವು ಅಲ್ಲಾಹನ ಬಳಿಯೇ ಇದೆ.
የአረብኛ ቁርኣን ማብራሪያ:
قُلْ اَؤُنَبِّئُكُمْ بِخَیْرٍ مِّنْ ذٰلِكُمْ ؕ— لِلَّذِیْنَ اتَّقَوْا عِنْدَ رَبِّهِمْ جَنّٰتٌ تَجْرِیْ مِنْ تَحْتِهَا الْاَنْهٰرُ خٰلِدِیْنَ فِیْهَا وَاَزْوَاجٌ مُّطَهَّرَةٌ وَّرِضْوَانٌ مِّنَ اللّٰهِ ؕ— وَاللّٰهُ بَصِیْرٌ بِالْعِبَادِ ۟ۚ
ಓ ಪೈಗಂಬರರೇ ಹೇಳಿರಿ; ನಾನು ನಿಮಗೆ ಅದಕ್ಕಿಂತಲೂ ಉತ್ತಮವಾಗಿರುವುದನ್ನು ತಿಳಿಸಿಕೊಡಲೇ? ಭಯಭಕ್ತಿ ಪಾಲಿಸಿದವರಿಗೆ ತಮ್ಮ ಪ್ರಭುವಿನ ಬಳಿ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಿವೆ. ಅದರಲ್ಲಿ ಅವರು ಶಾಶ್ವತವಾಗಿರುವರು ಮತ್ತು ಪರಿಶುದ್ಧರಾದ ಪತ್ನಿಯರು ಮತ್ತು ಅದಕ್ಕಿಂತ ಮಹತ್ತರವಾದುದು ಅಲ್ಲಾಹನ ಸಂಪ್ರೀತಿಯಿರುವುದು ಅಲ್ಲಾಹನು ತನ್ನ ದಾಸರನ್ನು ವೀಕ್ಷಿಸುತ್ತಿದ್ದಾನೆ.
የአረብኛ ቁርኣን ማብራሪያ:
 
የይዘት ትርጉም ምዕራፍ: ኣሊ-ኢምራን
የምዕራፎች ማውጫ የገፅ ቁጥር
 
የቅዱስ ቁርዓን ይዘት ትርጉም - የካናድኛ ትርጉም - በሺር ሜሶሪ - የትርጉሞች ማዉጫ

ተርጓሚ ሸይኽ በሺር መይሶሪ ፤ በሩዋድ የትርጉም ማዕከል ተቆጣጣሪነት ማሻሻያ ተደርጎበታል።

መዝጋት