Check out the new design

የቅዱስ ቁርዓን ይዘት ትርጉም - የካናድኛ ትርጉም - በሺር ሜሶሪ * - የትርጉሞች ማዉጫ


የይዘት ትርጉም ምዕራፍ: አን ነምል   አንቀጽ:
فَلَمَّا جَآءَ سُلَیْمٰنَ قَالَ اَتُمِدُّوْنَنِ بِمَالٍ ؗ— فَمَاۤ اٰتٰىنِ اللّٰهُ خَیْرٌ مِّمَّاۤ اٰتٰىكُمْ ۚ— بَلْ اَنْتُمْ بِهَدِیَّتِكُمْ تَفْرَحُوْنَ ۟
(ರಾಣಿಯ) ದೂತರು ಪೈಗಂಬರ್ ಸುಲೈಮಾನರ ಬಳಿ ತಲುಪಿದಾಗ ಅವರು ಹೇಳಿದರು: ನೀವು ಧನದ ಮೂಲಕ ನನಗೆ ನೆರವು ನೀಡಬಯಸುವಿರಾ? ನನಗೆ ಅಲ್ಲಾಹನು ನಿಮಗೆ ನೀಡಿರುವುದಕ್ಕತಿಂತಲೂ ಅತ್ಯುತ್ತಮವಾದುದನ್ನು ನೀಡಿರುತ್ತಾನೆ. ನೀವೇ ನಿಮ್ಮ ಉಡುಗೊರೆಯ ಕುರಿತು ಸಂತುಷ್ಟರಾಗಿರಿ.
የአረብኛ ቁርኣን ማብራሪያ:
اِرْجِعْ اِلَیْهِمْ فَلَنَاْتِیَنَّهُمْ بِجُنُوْدٍ لَّا قِبَلَ لَهُمْ بِهَا وَلَنُخْرِجَنَّهُمْ مِّنْهَاۤ اَذِلَّةً وَّهُمْ صٰغِرُوْنَ ۟
ನೀನು ಅವರ ಬಳಿಗೆ ಮರಳು, ನಾವು ಖಂಡಿತ ಅವರು ಎದುರಿಸಲಾಗದಂತಹ ಸೈನ್ಯವನ್ನು ತರುವೆವು. ಹಾಗೂ ನಿಶ್ಚಯವಾಗಿಯೂ ನಾವು ಅವರನ್ನು ನಿಂದ್ಯರು ಮತ್ತು ಅಪಮಾನಿತರನ್ನಾಗಿಸಿ ಅಲ್ಲಿಂದ ಹೊರಗಟ್ಟುವೆವು.
የአረብኛ ቁርኣን ማብራሪያ:
قَالَ یٰۤاَیُّهَا الْمَلَؤُا اَیُّكُمْ یَاْتِیْنِیْ بِعَرْشِهَا قَبْلَ اَنْ یَّاْتُوْنِیْ مُسْلِمِیْنَ ۟
ಅವರು (ಸುಲೈಮಾನರು): ಓ ನಾಯಕರೇ, ಅವರು ಶರಣಾಗತರಾಗಿ ನನ್ನಲ್ಲಿಗೆ ಬರುವ ಮೊದಲೇ ನಿಮ್ಮಲ್ಲಿ ಅವಳ ಸಿಂಹಾಸನವನ್ನು ನನ್ನ ಬಳಿಗೆ ತರುವವರು ಯಾರಿದ್ದಾರೆ? ಎಂದು ಕೇಳಿದರು.
የአረብኛ ቁርኣን ማብራሪያ:
قَالَ عِفْرِیْتٌ مِّنَ الْجِنِّ اَنَا اٰتِیْكَ بِهٖ قَبْلَ اَنْ تَقُوْمَ مِنْ مَّقَامِكَ ۚ— وَاِنِّیْ عَلَیْهِ لَقَوِیٌّ اَمِیْنٌ ۟
ಯಕ್ಷಗಳ ಪೈಕಿ ಒಬ್ಬ ಬಲಾಢ್ಯನಾದ ಜಿನ್ನ್ ಹೇಳಿದನು: ನೀವು ತಮ್ಮ ಈ ಸಭೆಯಿಂದ ಎದ್ದೇಳುವುದಕ್ಕೂ ಮುನ್ನ ನಾನು ಅದನ್ನು ನಿಮ್ಮ ಬಳಿಗೆ ತರುತ್ತೇನೆ. ನಿಜವಾಗಿಯೂ ನಾನು ಇದಕ್ಕೆ ಶಕ್ತನೂ ಮತ್ತು ನಂಬಿಗಸ್ಥನೂ ಆಗಿದ್ದೇನೆ.
የአረብኛ ቁርኣን ማብራሪያ:
قَالَ الَّذِیْ عِنْدَهٗ عِلْمٌ مِّنَ الْكِتٰبِ اَنَا اٰتِیْكَ بِهٖ قَبْلَ اَنْ یَّرْتَدَّ اِلَیْكَ طَرْفُكَ ؕ— فَلَمَّا رَاٰهُ مُسْتَقِرًّا عِنْدَهٗ قَالَ هٰذَا مِنْ فَضْلِ رَبِّیْ ۫— لِیَبْلُوَنِیْۤ ءَاَشْكُرُ اَمْ اَكْفُرُ ؕ— وَمَنْ شَكَرَ فَاِنَّمَا یَشْكُرُ لِنَفْسِهٖ ۚ— وَمَنْ كَفَرَ فَاِنَّ رَبِّیْ غَنِیٌّ كَرِیْمٌ ۟
ಗ್ರಂಥದ ಜ್ಞಾನ ಪಡೆದ ಓರ್ವನು ಹೇಳಿದನು: ನಾನದನ್ನು ನಿಮ್ಮ ಬಳಿಗೆ ನೀವು ತಮ್ಮ ಕಣ್ಣರೆಪ್ಪೆಗಳನ್ನು ಮಿಟುಕಿಸುವುದಕ್ಕೂ ಮುನ್ನ ತಂದು ಕೊಡಬಲ್ಲೆನು. ಅವರು ಅದನ್ನು ತನ್ನ ಬಳಿಯಿರುವುದಾಗಿ ಕಂಡಾಗ ಹೇಳಿದರು: ಇದು ನನ್ನ ಪ್ರಭುವಿನ ಅನುಗ್ರಹವಾಗಿದೆ. ನಾನು ಕೃತಜ್ಞತೆ ಸಲ್ಲಿಸುವೆನೋ ಅಥವಾ ಕೃತಘ್ನತೆ ತೋರುವೆನೋ ಎಂದು ನನ್ನನ್ನು ಪರೀಕ್ಷಿಸಲೆಂದಾಗಿದೆ ಮತ್ತು ಯಾರು ಕೃತಜ್ಞತೆ ಸಲ್ಲಿಸುತ್ತಾನೋ ಅವನು ತನ್ನದೇ ಪ್ರಯೋಜನಕ್ಕೋಸ್ಕರ ಕೃತಜ್ಞತೆ ಸಲ್ಲಿಸುತ್ತಾನೆ ಮತ್ತು ಯಾರು ಕೃತಘ್ನತೆ ತೋರುತ್ತಾನೋ ನನ್ನ ಪ್ರಭುವು ನಿರಪೇಕ್ಷನೂ ಉದಾರಿಯೂ ಆಗಿದ್ದಾನೆ.
የአረብኛ ቁርኣን ማብራሪያ:
قَالَ نَكِّرُوْا لَهَا عَرْشَهَا نَنْظُرْ اَتَهْتَدِیْۤ اَمْ تَكُوْنُ مِنَ الَّذِیْنَ لَا یَهْتَدُوْنَ ۟
ಸುಲೈಮಾನರು ಸೇವಕರಿಗೆ ಹೇಳಿದರು: ನೀವು ಅವಳ ಸಿಂಹಾಸನವನ್ನು ರೂಪ ಬದಲಾವಣೆ ಮಾಡಿರಿ. ಅವಳು ದಾರಿ ಪಡೆಯುತ್ತಾಳೋ ಅಥವಾ ಪಥಭ್ರಷ್ಟರಲ್ಲಿ ಸೆರುತ್ತಾಳೋ ಎಂಬುದನ್ನು ನೋಡೋಣ.
የአረብኛ ቁርኣን ማብራሪያ:
فَلَمَّا جَآءَتْ قِیْلَ اَهٰكَذَا عَرْشُكِ ؕ— قَالَتْ كَاَنَّهٗ هُوَ ۚ— وَاُوْتِیْنَا الْعِلْمَ مِنْ قَبْلِهَا وَكُنَّا مُسْلِمِیْنَ ۟
ಅನಂತರ ಆಕೆ ಬಂದಾಗ ನಿನ್ನ ಸಿಂಹಾಸನ ಹೀಗೆ ಇದೆಯೇ? ಎಂದು ಕೇಳಲಾಯಿತು. ಅವಳು ಹೇಳಿದಳು: ಇದು ಅದುವೇ ಎಂಬAತಿದೆ. ನಮಗೆ ಇದಕ್ಕೂ ಮೊದಲೇ ಜ್ಞಾನವನ್ನು ನೀಡಲಾಗಿದೆ ಮತ್ತು ನಾವು ವಿಧೇಯರಾಗಿದ್ದೇವು.
የአረብኛ ቁርኣን ማብራሪያ:
وَصَدَّهَا مَا كَانَتْ تَّعْبُدُ مِنْ دُوْنِ اللّٰهِ ؕ— اِنَّهَا كَانَتْ مِنْ قَوْمٍ كٰفِرِیْنَ ۟
ಅವಳು ಅಲ್ಲಾಹನ ಹೊರತು ಆರಾಧಿಸುತ್ತಿದ್ದ ವಸ್ತುಗಳು ಅವಳನ್ನು (ಸತ್ಯವಿಶ್ವಾಸದಿಂದ) ತಡೆದಿದ್ದವು. ನಿಜವಾಗಿಯು ಅವಳು ಸತ್ಯನಿಷೇಧಿ ಜನರಲ್ಲಿ ಸೇರಿದವಳಾಗಿದ್ದಾದಳು.
የአረብኛ ቁርኣን ማብራሪያ:
قِیْلَ لَهَا ادْخُلِی الصَّرْحَ ۚ— فَلَمَّا رَاَتْهُ حَسِبَتْهُ لُجَّةً وَّكَشَفَتْ عَنْ سَاقَیْهَا ؕ— قَالَ اِنَّهٗ صَرْحٌ مُّمَرَّدٌ مِّنْ قَوَارِیْرَ ؕ۬— قَالَتْ رَبِّ اِنِّیْ ظَلَمْتُ نَفْسِیْ وَاَسْلَمْتُ مَعَ سُلَیْمٰنَ لِلّٰهِ رَبِّ الْعٰلَمِیْنَ ۟۠
ಅವಳಿಗೆ ಹೇಳಲಾಯಿತು: ನೀನು ಅರಮನೆಯನ್ನು ಪ್ರವೇಶಿಸು. ಅವಳು ಅದನ್ನು ಕಂಡಾಗ ಸರೋವರವೆಂದೇ ಭಾವಿಸಿಕೊಂಡು ತನ್ನ ಕುಣ ಕಾಲುಗಳವರೆಗೆ ಬಟ್ಟೆಗಳನ್ನು ಮೇಲೇರಿಸಿದಳು. ಅವರು ಹೇಳಿದರು: ಇದಂತು ಗಾಜಿನಿಂದ ನುಣುಪಾಗಿ ಹಾಸಲ್ಪಟ್ಟ ಅರಮನೆಯಾಗಿದೆ. ಅವಳು ಹೇಳಿದಳು: ನನ್ನ ಪ್ರಭುವೇ ನಿಜವಾಗಿಯೂ, ನಾನು ನನ್ನ ಮೇಲೆ ಅಕ್ರಮ ಮಾಡಿರುವೆನು. ಇನ್ನು ನಾನು ಸುಲೈಮಾನನ ಜೊತೆ ಸರ್ವಲೋಕಗಳ ಪ್ರಭುವಿಗೆ ವಿಧೇಯಳಾಗಿದ್ದೇನೆ.
የአረብኛ ቁርኣን ማብራሪያ:
 
የይዘት ትርጉም ምዕራፍ: አን ነምል
የምዕራፎች ማውጫ የገፅ ቁጥር
 
የቅዱስ ቁርዓን ይዘት ትርጉም - የካናድኛ ትርጉም - በሺር ሜሶሪ - የትርጉሞች ማዉጫ

ተርጓሚ ሸይኽ በሺር መይሶሪ ፤ በሩዋድ የትርጉም ማዕከል ተቆጣጣሪነት ማሻሻያ ተደርጎበታል።

መዝጋት