Check out the new design

የቅዱስ ቁርዓን ይዘት ትርጉም - የካናድኛ ትርጉም - በሺር ሜሶሪ * - የትርጉሞች ማዉጫ


የይዘት ትርጉም ምዕራፍ: አል-በቀራህ   አንቀጽ:
اَوَلَا یَعْلَمُوْنَ اَنَّ اللّٰهَ یَعْلَمُ مَا یُسِرُّوْنَ وَمَا یُعْلِنُوْنَ ۟
ಖಂಡಿತವಾಗಿಯು ಅಲ್ಲಾಹನು ಅವರು ರಹಸ್ಯವಾಗಿಡುವುದನ್ನೂ, ಬಹಿರಂಗಗೊಳಿಸುವುದನ್ನೂ ಅರಿಯುತ್ತಾನೆಂಬವುದನ್ನು ಅವರು ತಿಳಿಯುವುದಿಲ್ಲವೇ
የአረብኛ ቁርኣን ማብራሪያ:
وَمِنْهُمْ اُمِّیُّوْنَ لَا یَعْلَمُوْنَ الْكِتٰبَ اِلَّاۤ اَمَانِیَّ وَاِنْ هُمْ اِلَّا یَظُنُّوْنَ ۟
ಮತ್ತು ಅವರ ಪೈಕಿ ಕೆಲವರು ನಿರಕ್ಷರಿಗಳಿದ್ದಾರೆ. ಅವರು ಗ್ರಂಥದ ಬಾಹ್ಯ ವಾಕ್ಯಗಳನ್ನು ಮಾತ್ರ ಅರಿಯುತ್ತಾರೆ. ಮತ್ತು ಕೇವಲ ಊಹೆಯನ್ನು ಅನುಸರಿಸುತ್ತಾರೆ.
የአረብኛ ቁርኣን ማብራሪያ:
فَوَیْلٌ لِّلَّذِیْنَ یَكْتُبُوْنَ الْكِتٰبَ بِاَیْدِیْهِمْ ۗ— ثُمَّ یَقُوْلُوْنَ هٰذَا مِنْ عِنْدِ اللّٰهِ لِیَشْتَرُوْا بِهٖ ثَمَنًا قَلِیْلًا ؕ— فَوَیْلٌ لَّهُمْ مِّمَّا كَتَبَتْ اَیْدِیْهِمْ وَوَیْلٌ لَّهُمْ مِّمَّا یَكْسِبُوْنَ ۟
ಸ್ವತಃ ತಮ್ಮ ಕೈಗಳಿಂದ ಗ್ರಂಥವನ್ನು ಬರೆದು ಅದರಿಂದ ತುಚ್ಛ ಬೆಲೆ ಪಡೆಯಲು ಇದು ಅಲ್ಲಾಹನ ವತಿಯಿಂದ ಬಂದಿದೆ ಎಂದು ಹೇಳುವವರಿಗೆ 'ವೈಲ್'(ಮಹಾನಾಶ)ಇದೆ. ಅವರು ತಮ್ಮ ಕೈಗಳಿಂದ ಬರೆದುದರ ನಿಮಿತ್ತ ಹಾಗೂ (ಗ್ರಂಥದ ಮೂಲಕ) ಸಂಪಾದಿಸಿದುದರ ನಿಮಿತ್ತ ಅವರಿಗೆ ಮಹಾನಾಶವಿದೆ.
የአረብኛ ቁርኣን ማብራሪያ:
وَقَالُوْا لَنْ تَمَسَّنَا النَّارُ اِلَّاۤ اَیَّامًا مَّعْدُوْدَةً ؕ— قُلْ اَتَّخَذْتُمْ عِنْدَ اللّٰهِ عَهْدًا فَلَنْ یُّخْلِفَ اللّٰهُ عَهْدَهٗۤ اَمْ تَقُوْلُوْنَ عَلَی اللّٰهِ مَا لَا تَعْلَمُوْنَ ۟
ಮತ್ತು (ಆ ಯಹೂದಿಗಳು) ಹೇಳುವರು ನರಕಾಗ್ನಿಯು ನಮ್ಮನ್ನು ಸ್ವಲ್ಪವೂ ಸ್ಪರ್ಷಿಸಲಾರದು, ಒಂದು ವೇಳೆ ಸ್ಪರ್ಷಿಸಿದರೂ ಕೆಲವೇ ದಿನಗಳು ಮಾತ್ರ. ಅವರಿಗೆ ಕೇಳಿರಿ; ನೀವು ಅಲ್ಲಾಹನ ಬಳಿ ಉಲ್ಲಂಘಿಸಲಾಗದAತಹಾ ಒಪ್ಪಂದವೇನಾದರೂ ಪಡೆದುಕೊಂಡಿದ್ದೀರಾ? ಹಾಗಿದ್ದರೆ ಖಂಡಿತವಾಗಿಯು ಅಲ್ಲಾಹ್ ತನ್ನ ಒಪ್ಪಂದವನ್ನು ಎಂದೂ ಉಲ್ಲಂಘಿಸುವುದಿಲ್ಲ. ಅಥವಾ ನಿಮಗೆ ಅರಿವಿಲ್ಲದನ್ನು ಅಲ್ಲಾಹನ ಮೇಲೆ ಆರೋಪಿಸುತ್ತಿರುವಿರಾ?
የአረብኛ ቁርኣን ማብራሪያ:
بَلٰی مَنْ كَسَبَ سَیِّئَةً وَّاَحَاطَتْ بِهٖ خَطِیْٓـَٔتُهٗ فَاُولٰٓىِٕكَ اَصْحٰبُ النَّارِ ۚ— هُمْ فِیْهَا خٰلِدُوْنَ ۟
ಹಾಗಲ್ಲ (ನರಕಾಗ್ನಿ ನಿಮಗೆ ಯಾಕೆ ಸ್ಪರ್ಷಿಸುವುದಿಲ್ಲ?) ಯಾರು ದುಷ್ಕರ್ಮ ವೆಸಗುತ್ತಾನೋ ಮತ್ತು ಅವನ ಪಾಪಗಳು ಅವನನ್ನು ಆವರಿಸಿ ಬಿಟ್ಟಿರುತ್ತದೋ ಅವರೇ ನರಕವಾಸಿಗಳು ಮತ್ತು ಅವರು ಅದರಲ್ಲಿ ಶಾಶ್ವತವಾಗಿರುವರು.
የአረብኛ ቁርኣን ማብራሪያ:
وَالَّذِیْنَ اٰمَنُوْا وَعَمِلُوا الصّٰلِحٰتِ اُولٰٓىِٕكَ اَصْحٰبُ الْجَنَّةِ ۚ— هُمْ فِیْهَا خٰلِدُوْنَ ۟۠
ಮತ್ತು ಯಾರು ಸತ್ಯ ವಿಶ್ವಾಸವಿರಿಸಿ, ಸತ್ಕರ್ಮಗಳನ್ನು ಕೈಗೊಳ್ಳುವರೋ ಅವರೇ ಸ್ವರ್ಗವಾಸಿಗಳು ಅವರು ಅದರಲ್ಲಿ ಶಾಶ್ವತವಾಗಿರುವರು.
የአረብኛ ቁርኣን ማብራሪያ:
وَاِذْ اَخَذْنَا مِیْثَاقَ بَنِیْۤ اِسْرَآءِیْلَ لَا تَعْبُدُوْنَ اِلَّا اللّٰهَ ۫— وَبِالْوَالِدَیْنِ اِحْسَانًا وَّذِی الْقُرْبٰی وَالْیَتٰمٰی وَالْمَسٰكِیْنِ وَقُوْلُوْا لِلنَّاسِ حُسْنًا وَّاَقِیْمُوا الصَّلٰوةَ وَاٰتُوا الزَّكٰوةَ ؕ— ثُمَّ تَوَلَّیْتُمْ اِلَّا قَلِیْلًا مِّنْكُمْ وَاَنْتُمْ مُّعْرِضُوْنَ ۟
ಅಲ್ಲಾಹನ ಹೊರತು ಇನ್ನಾರನ್ನೂ ಆರಾಧಿಸಬೇಡಿರಿ ಮತ್ತು ಮಾತಾಪಿತರೊಂದಿಗೆ ಆಪ್ತ ಸಂಬಂಧಿಕರೊಂದಿಗೆ, ನಿರ್ಗತಿಕರೊಂದಿಗೆ, ಒಳಿತನ್ನು ಮಾಡಿರಿ ಮತ್ತು ಜನರೊಂದಿಗೆ ಒಳ್ಳೆಯ ಮಾತನ್ನಾಡಿರಿ, ನಮಾಜನ್ನು ಸಂಸ್ಥಾಪಿಸಿರಿ ಹಾಗೂ ಝಕಾತ್ ಪಾವತಿಸಿರಿ ಎಂದು ನಾವು ಇಸ್ರಾಯೀಲ್ ಸಂತತಿಗಳೊಂದಿಗೆ ಸದೃಢ ಕರಾರನ್ನು ಪಡೆದುಕೊಂಡ ಸಂದರ್ಭವನ್ನು ಸ್ಮರಿಸಿರಿ. ಆದರೆ ನಿಮ್ಮ ಪೈಕಿ ಅತ್ಯಲ್ಪ ಜನರ ಹೊರತು ನೀವೆಲ್ಲರೂ (ಈ ಒಪ್ಪಂದದಿಂದ) ವಿಮುಖರಾಗಿ ಬಿಟ್ಟಿರಿ ಹಾಗೂ (ಸತ್ಯದಿಂದ) ಅಲಕ್ಷ್ಯತನ ತೋರಿದಿರಿ.
የአረብኛ ቁርኣን ማብራሪያ:
 
የይዘት ትርጉም ምዕራፍ: አል-በቀራህ
የምዕራፎች ማውጫ የገፅ ቁጥር
 
የቅዱስ ቁርዓን ይዘት ትርጉም - የካናድኛ ትርጉም - በሺር ሜሶሪ - የትርጉሞች ማዉጫ

ተርጓሚ ሸይኽ በሺር መይሶሪ ፤ በሩዋድ የትርጉም ማዕከል ተቆጣጣሪነት ማሻሻያ ተደርጎበታል።

መዝጋት