Check out the new design

የቅዱስ ቁርዓን ይዘት ትርጉም - የካናድኛ ትርጉም - በሺር ሜሶሪ * - የትርጉሞች ማዉጫ


የይዘት ትርጉም ምዕራፍ: አል ኢስራዕ   አንቀጽ:
ذٰلِكَ مِمَّاۤ اَوْحٰۤی اِلَیْكَ رَبُّكَ مِنَ الْحِكْمَةِ ؕ— وَلَا تَجْعَلْ مَعَ اللّٰهِ اِلٰهًا اٰخَرَ فَتُلْقٰی فِیْ جَهَنَّمَ مَلُوْمًا مَّدْحُوْرًا ۟
(ಓ ಪೈಗಂಬರರೇ) ಇದು ನಿಮ್ಮ ಪ್ರಭುವು ನಿಮ್ಮೆಡೆಗೆ ಅವತೀರ್ಣಗೊಳಿಸಿದ ಸುಜ್ಞಾನದಲ್ಲೊಂದಾಗಿದೆ. ನೀವು ಅಲ್ಲಾಹನೊಂದಿಗೆ ಇತರ ಯಾರನ್ನು ಆರಾಧ್ಯರನ್ನಾಗಿ ನಿಶ್ಚಯಿಸದಿರಿ. ಅನ್ಯಥಾ ನೀವು ನರಕದೊಳಗೆ ನಿಂದಿಸಲ್ಪಟ್ಟವರಾಗಿ ಮತ್ತು ತಿರಸ್ಕರಿಸಲ್ಪಟ್ಟವರಾಗಿ ಎಸೆಯಲ್ಪಡುವಿರಿ.
የአረብኛ ቁርኣን ማብራሪያ:
اَفَاَصْفٰىكُمْ رَبُّكُمْ بِالْبَنِیْنَ وَاتَّخَذَ مِنَ الْمَلٰٓىِٕكَةِ اِنَاثًا ؕ— اِنَّكُمْ لَتَقُوْلُوْنَ قَوْلًا عَظِیْمًا ۟۠
(ಓ ಸತ್ಯನಿಷೇಧಿಗಳೇ) ಏನು ನಿಮ್ಮ ಪ್ರಭು ನಿಮ್ಮನ್ನು ಪುತ್ರರಿಗೋಸ್ಕರ ಆರಿಸಿಕೊಂಡಿರುವನೇ ಮತ್ತು ಸ್ವತಃ ತನಗಾಗಿ ದೇವಚರರನ್ನು ಪುತ್ರಿಯರನ್ನಾಗಿ ಮಾಡಿಕೊಂಡಿರುವನೇ? ನಿಸ್ಸಂಶಯವಾಗಿಯೂ ನೀವು ಘೋರವಾದ ಮಾತನ್ನು ಆಡುತ್ತಿರುವಿರಿ!.
የአረብኛ ቁርኣን ማብራሪያ:
وَلَقَدْ صَرَّفْنَا فِیْ هٰذَا الْقُرْاٰنِ لِیَذَّكَّرُوْا ؕ— وَمَا یَزِیْدُهُمْ اِلَّا نُفُوْرًا ۟
ನಾವು (ಖಂಡಿತವಾಗಿಯೂ) ಈ ಕುರ್‌ಆನಿನಲ್ಲಿ ಅವರು ವಿವೇಚಿಸಿಕೊಳ್ಳಲೆಂದು ವಿವಿಧ ಶೈಲಿಯಲ್ಲಿ ವಿವರಿಸಿಕೊಟ್ಟಿದ್ದೇವೆ. ಆದರೆ ಇದು ಅವರ ಬೇಸರವನ್ನೆ ಹೆಚ್ಚಿಸುತ್ತದೆ.
የአረብኛ ቁርኣን ማብራሪያ:
قُلْ لَّوْ كَانَ مَعَهٗۤ اٰلِهَةٌ كَمَا یَقُوْلُوْنَ اِذًا لَّابْتَغَوْا اِلٰی ذِی الْعَرْشِ سَبِیْلًا ۟
ಹೇಳಿರಿ: ಅವರು ಹೇಳುತ್ತಿರುವಂತೆ ಅಲ್ಲಾಹನೊಂದಿಗೆ ಇತರ ಆರಾಧ್ಯರಿರುತ್ತಿದ್ದರೆ ಖಂಡಿತ ಅವರು ಸಿಂಹಾಸನದ ಒಡೆಯನೆಡೆಗೆ ಮಾರ್ಗವನ್ನು ಹುಡುಕಿಕೊಳ್ಳುತ್ತಿದ್ದರು.
የአረብኛ ቁርኣን ማብራሪያ:
سُبْحٰنَهٗ وَتَعٰلٰی عَمَّا یَقُوْلُوْنَ عُلُوًّا كَبِیْرًا ۟
ಅವನು ಪರಮ ಪಾವನನು, ಮಹೋನ್ನತನು ಮತ್ತು ಅವರು ಹೇಳುತ್ತಿರುವ ಮಾತುಗಳಿಂದ ಅವನು ಉನ್ನತನೂ, ಮಹಾನನು ಆಗಿದ್ದಾನೆ.
የአረብኛ ቁርኣን ማብራሪያ:
تُسَبِّحُ لَهُ السَّمٰوٰتُ السَّبْعُ وَالْاَرْضُ وَمَنْ فِیْهِنَّ ؕ— وَاِنْ مِّنْ شَیْءٍ اِلَّا یُسَبِّحُ بِحَمْدِهٖ وَلٰكِنْ لَّا تَفْقَهُوْنَ تَسْبِیْحَهُمْ ؕ— اِنَّهٗ كَانَ حَلِیْمًا غَفُوْرًا ۟
ಎಳು ಆಕಾಶಗಳು ಮತ್ತು ಭೂಮಿಯೂ ಹಾಗೂ ಅವುಗಳಲ್ಲಿರುವ ಸಕಲವೂ ಅವನ ಪಾವಿತ್ರö್ಯವನ್ನು ಕೊಂಡಾಡುತ್ತಿವೆ. ಮತ್ತು ಅವನ ಸ್ತುತಿಯೊಂದಿಗೆ ಅವನ ಕೀರ್ತನೆ ಮಾಡದ ಯಾವ ವಸ್ತುವೂ ಇಲ್ಲ. ಅದರೆ ಅವುಗಳ ಕೀರ್ತನೆಯನ್ನು ನೀವು ಗ್ರಹಿಸಿಕೊಳ್ಳಲಾರಿರಿ. ವಾಸ್ತವದಲ್ಲಿ ಅವನು ಸಹನಾಶೀಲನು ಕ್ಷಮಾಶೀಲನು ಆಗಿದ್ದಾನೆ.
የአረብኛ ቁርኣን ማብራሪያ:
وَاِذَا قَرَاْتَ الْقُرْاٰنَ جَعَلْنَا بَیْنَكَ وَبَیْنَ الَّذِیْنَ لَا یُؤْمِنُوْنَ بِالْاٰخِرَةِ حِجَابًا مَّسْتُوْرًا ۟ۙ
(ಓ ಪೈಗಂಬರರೇ) ನೀವು ಕುರ್‌ಆನನ್ನು ಪಠಿಸಿದಾಗ ನಿಮ್ಮ ಮತ್ತು ಪರಲೋಕದ ಮೇಲೆ ವಿಶ್ವಾಸವಿಡದವರ ಮಧ್ಯೆ ನಾವು ಅದೃಶ್ಯವಾಗಿರುವ ತೆರೆಯೊಂದನ್ನು ಹಾಕಿಬಿಡುತ್ತೇವೆ.
የአረብኛ ቁርኣን ማብራሪያ:
وَّجَعَلْنَا عَلٰی قُلُوْبِهِمْ اَكِنَّةً اَنْ یَّفْقَهُوْهُ وَفِیْۤ اٰذَانِهِمْ وَقْرًا ؕ— وَاِذَا ذَكَرْتَ رَبَّكَ فِی الْقُرْاٰنِ وَحْدَهٗ وَلَّوْا عَلٰۤی اَدْبَارِهِمْ نُفُوْرًا ۟
ಮತ್ತು ನಾವು ಅವರ (ಸತ್ಯನಿಷೇಧಿಗಳ) ಹೃದಯಗಳಲ್ಲಿ ಅದನ್ನು ಗ್ರಹಿಸಿಕೊಳ್ಳದಿರುವಂತೆ ಪರದೆಗಳನ್ನು ಹಾಗೂ ಅವರ ಕಿವಿಗಳಲ್ಲಿ ಕಿವುಡುತನವನ್ನು ಹಾಕಿ ಬಿಟ್ಟಿರುತ್ತೇವೆ. ನೀವು ಕುರ್‌ಆನಿನಲ್ಲಿ ನಿಮ್ಮ ಏಕೈಕ ಪ್ರಭುವಿನ ಪ್ರಸ್ತಾಪವನ್ನು ಮಾಡಿದಾಗ ಅವರು ಅಸಹ್ಯಪಡುತ್ತಾ ತಮ್ಮ ಬೆನ್ನು ತಿರುಗಿಸಿ ಹೋಗ ತೊಡಗುತ್ತಾರೆ.
የአረብኛ ቁርኣን ማብራሪያ:
نَحْنُ اَعْلَمُ بِمَا یَسْتَمِعُوْنَ بِهٖۤ اِذْ یَسْتَمِعُوْنَ اِلَیْكَ وَاِذْ هُمْ نَجْوٰۤی اِذْ یَقُوْلُ الظّٰلِمُوْنَ اِنْ تَتَّبِعُوْنَ اِلَّا رَجُلًا مَّسْحُوْرًا ۟
ಅವರು ನಿಮ್ಮೆಡೆಗೆ ಕಿವಿಗೊಟ್ಟು ಆಲಿಸುತ್ತಿರುವಾಗ ಅವರು ಯಾವ ಉದ್ದೇಶದಿಂದ ಆಲಿಸುತ್ತಿದ್ದಾರೆಂಬುದನ್ನೂ, (ನಾವು ಚೆನ್ನಾಗಿ ತಿಳಿದಿದ್ದೇವೆ) ಅವರು ಪರಸ್ಪರ ರಹಸ್ಯವಾಗಿ ಮಾತುಕತೆಯಲ್ಲಿರುವುದೂ (ಅದೂ ನಮಗೆ ಚೆನ್ನಾಗಿ ಗೊತ್ತು, ಅವರು ತಮ್ಮ ಬುಡಕಟ್ಟಿನ ಮುಸ್ಲಿಮರಿಗೆ) ನೀವು ಅನುಸರಿಸುತ್ತಿರುವ ವ್ಯಕ್ತಿಯು ಮಾಟಬಾಧಿತನಾಗಿದ್ದಾನೆ ಎಂದು ಈ ಅಕ್ರಮಿಗಳು ಹೇಳುತ್ತಿರುವುದನ್ನು ನಾವು ಚೆನ್ನಾಗಿ ಅರಿತಿದ್ದೇವೆ.
የአረብኛ ቁርኣን ማብራሪያ:
اُنْظُرْ كَیْفَ ضَرَبُوْا لَكَ الْاَمْثَالَ فَضَلُّوْا فَلَا یَسْتَطِیْعُوْنَ سَبِیْلًا ۟
ಅವರು ನಿಮಗೆ ಹೇಗೆ ಉಪಮೆಗಳನ್ನು ಕೊಡುತ್ತಿದ್ದಾರೆಂಬುದನ್ನು ನೋಡಿರಿ. ಹೀಗೆ ಅವರು ಮಾರ್ಗ ಭ್ರಷ್ಟರಾದರು. ಇನ್ನು ಮಾರ್ಗ ಪಡೆಯುವುದು ಅವರ ಸಾಮರ್ಥ್ಯದಲ್ಲಿಲ್ಲ.
የአረብኛ ቁርኣን ማብራሪያ:
وَقَالُوْۤا ءَاِذَا كُنَّا عِظَامًا وَّرُفَاتًا ءَاِنَّا لَمَبْعُوْثُوْنَ خَلْقًا جَدِیْدًا ۟
ಅವರು ಹೇಳುತ್ತಾರೆ(ಸತ್ಯನಿಷೇಧಿಗಳು): ನಾವು ಎಲುಬುಗಳಾಗಿ ಚೂರು ಚೂರಾದ (ಮಣ್ಣಾದ) ಬಳಿಕವೂ ಹೊಸ ಸೃಷ್ಠಿಯಾಗಿ ಎಬ್ಬಿಸಲ್ಪಡುತ್ತೇವೆಯೇ?
የአረብኛ ቁርኣን ማብራሪያ:
 
የይዘት ትርጉም ምዕራፍ: አል ኢስራዕ
የምዕራፎች ማውጫ የገፅ ቁጥር
 
የቅዱስ ቁርዓን ይዘት ትርጉም - የካናድኛ ትርጉም - በሺር ሜሶሪ - የትርጉሞች ማዉጫ

ተርጓሚ ሸይኽ በሺር መይሶሪ ፤ በሩዋድ የትርጉም ማዕከል ተቆጣጣሪነት ማሻሻያ ተደርጎበታል።

መዝጋት